ಅ. ವ್ಯಕ್ತಿಯು ಸ್ವಭಾವದೋಷಗಳ ಅಭಿವ್ಯಕ್ತಿಗಳ ಮೇಲೆ ವಿಜಯವನ್ನು ಸಾಧಿಸಲು ಸ್ವಂತಕ್ಕೆ ಕೆಳಗಿನ ಪದ್ಧತಿಯಂತೆ ಮುಂದೆ ನೀಡಲಾದ ತತ್ತ್ವಗಳ ಆಧಾರದಲ್ಲಿ ಸೂಚನೆಗಳನ್ನು ನೀಡಬೇಕು ಮತ್ತು ಅ೧, ಅ೨, ಅ೩, ಆ೧ ಮತ್ತು / ಅಥವಾ ಆ೨, ಪದ್ಧತಿಗಳನ್ನು ಉಪಯೋಗಿಸಬೇಕು.
ಆ. ಉಪಾಯದ ಪ್ರತಿಯೊಂದು ಸೂಚನಾಸತ್ರವು ಸಾಮಾನ್ಯವಾಗಿ ೮ ನಿಮಿಷದ್ದಾಗಿರಬೇಕು, ಇದು ಸಾಮಾನ್ಯ ನಿಯಮವಾಗಿದೆ. ಈ ಸಮಯವನ್ನು ಮುಂದಿನಂತೆ ಉಪಯೋಗಿಸಬೇಕು.
ನಿಮಿಷ:ಸೆಕೆಂಡು | |
೧. ವೈಯಕ್ತಿಕ ನಾಮಜಪ ಮಾಡಿ ಮನಸ್ಸನ್ನು ಏಕಾಗ್ರಗೊಳಿಸುವುದು (ಟಿಪ್ಪಣಿ ೧) | 2:30 |
೨. ಪ್ರಗತಿಯ ಬಗ್ಗೆ ಸೂಚನೆಯನ್ನು ನೀಡುವುದು (ಪ್ರಗತಿಯಾದಾಗ) (ಟಿಪ್ಪಣಿ ೨) | 0:15 |
೩. ಕೆಳಗಿನ ಯಾವುದಾದರೂ ಎರಡು ಪದ್ಧತಿಗಳಿಗನುಸಾರ ಸೂಚನೆ ಗಳನ್ನು ನೀಡಬೇಕು – ಅ೧, ಅ೨, ಆ೧ ಮತ್ತು ಆ೨ (ಪ್ರತಿಯೊಂದು ಸೂಚನೆಯನ್ನು ಪದೇಪದೇ ಐದು ಬಾರಿ ನೀಡಬೇಕು) (ಟಿಪ್ಪಣಿ ೩) | 1:30 |
೪. ಅ೩ ರ (ಟಿಪ್ಪಣಿ ೪) ಮೇಲಾಧಾರಿತ ಸೂಚನೆ | 3:30 |
೫. ಮನಸ್ಸಿನ ಏಕಾಗ್ರತೆಯಿಂದ ಹೊರಗೆ ಬರುವುದು | 0:15 |
ಸೂಚನೆಗಳ ಒಂದು ಸತ್ರಕ್ಕಾಗಿ ತಗಲುವ ಒಟ್ಟು ಕಾಲಾವಧಿ | 8:00 |
ಟಿಪ್ಪಣಿ ೧ – ಮನಸ್ಸನ್ನು ಏಕಾಗ್ರಗೊಳಿಸಲು ಇತರ ಉಪಾಯಗಳ ತುಲನೆಯಲ್ಲಿ ಸುಲಭವಾಗಿರುವ ‘ನಾಮಜಪಿಸುವ’ ಪದ್ಧತಿಯನ್ನು ಇಲ್ಲಿ ಉಪಯೋಗಿಸಲಾಗಿದೆ.
ಟಿಪ್ಪಣಿ ೨ – ಪ್ರಗತಿಯ ಸೂಚನೆಯನ್ನು ತಯಾರಿಸುವ ಪದ್ಧತಿಯ ವಿಷಯದಲ್ಲಿನ ಸವಿಸ್ತಾರವಾದ ಮಾಹಿತಿಯನ್ನು ‘ಸ್ವತಃ ಹಾಗೂ ಇತರರಿಂದ ಪ್ರಗತಿಯ ವರದಿಯನ್ನು ಪಡೆದುಕೊಂಡು ಪ್ರಗತಿಯ ವಿಷಯದಲ್ಲಿ ಸೂಚನೆಯನ್ನು ನೀಡುವುದು’ ಎಂಬ ಅಂಶದಲ್ಲಿ ಕೊಡಲಾಗಿದೆ.
ಟಿಪ್ಪಣಿ ೩ – ವ್ಯಕ್ತಿತ್ವದಲ್ಲಿರುವ ಸ್ವಭಾವದೋಷಗಳ ಯಾವುದಾದರೂ ಎರಡು ಅಥವಾ ಮೂರು ಅಭಿವ್ಯಕ್ತಿಗಳನ್ನು ತೆಗೆದುಕೊಂಡು ಅ೧, ಅ೨, ಆ೧ ಅಥವಾ ಆ೨ ಈ ಉಪಾಯ ಪದ್ಧತಿಗಳನ್ನು ಉಪಯೋಗಿಸಿ ಸೂಚನಾಸತ್ರಗಳನ್ನು ಮಾಡಬೇಕು. ಪ್ರತಿಯೊಂದು ಸೂಚನೆಯನ್ನು ಮೇಲಿನ ಪದ್ಧತಿಗನುಸಾರ ೫ ಸಲ ಪುನಃ ಪುನಃ ನೀಡಬೇಕು.
ಟಿಪ್ಪಣಿ ೪ – ‘ಅ ೩’ ಉಪಾಯಪದ್ಧತಿಯ ಮೇಲಾಧಾರಿತ ಸ್ವಯಂಸೂಚನೆಯನ್ನು ನೀಡಲು ಹೆಚ್ಚು ಸಮಯ (೩-೪ ನಿಮಿಷ) ತಗಲುವುದರಿಂದ ಪ್ರತಿಯೊಂದು ಸೂಚನಾ ಸತ್ರದಲ್ಲಿ ಈ ಉಪಾಯಪದ್ಧತಿಯ ಮೇಲಾಧಾರಿತ ಸ್ವಯಂಸೂಚನೆಯಿರುವ ಒಂದೇ ಸ್ವಭಾವದೋಷವನ್ನು ಅಥವಾ ಸ್ವಭಾವದೋಷದ ಒಂದೇ ಅಭಿವ್ಯಕ್ತಿಯನ್ನು ಆರಿಸಬೇಕು ಮತ್ತು ಈ ಸೂಚನೆಯನ್ನು ಪ್ರತಿಯೊಂದು ಸೂಚನಾಸತ್ರದಲ್ಲಿ ಒಂದೇ ಸಲ ನೀಡಬೇಕು.
ಸೂಚನಾಸತ್ರಗಳನ್ನು ಮಾಡುವಾಗ ಗಮನದಲ್ಲಿಡಬೇಕಾದ ಅಂಶಗಳು
೧. ಸೂಚನಾಸತ್ರಗಳನ್ನು ಮಾಡುವಾಗ ಸಮ್ಮೋಹನಾವಸ್ಥೆಗೆ ಕೇವಲ ಶೇ. ೧೦ ರಷ್ಟೇ ಮಹತ್ವವಿರುತ್ತದೆ ಮತ್ತು ಸ್ವಯಂಸೂಚನೆಗಳನ್ನು ನೀಡುವುದಕ್ಕೆ ಶೇ. ೯೦ ರಷ್ಟು ಮಹತ್ವವಿರುತ್ತದೆ. ಸಮ್ಮೋಹನಾವಸ್ಥೆಯು ಕೇವಲ ಉಪಾಯದ ಅವಧಿಯನ್ನು ಕಡಿಮೆ ಮಾಡುತ್ತದೆ, ಉಪಾಯದ ಸೂಚನೆಗಳು ವ್ಯಕ್ತಿಯ ಸ್ವಭಾವದೋಷಗಳನ್ನು ದೂರಗೊಳಿಸುತ್ತವೆ.
೨. ನಾಮಜಪ ಮಾಡುವ ಮೊದಲು ಉಪಾಸ್ಯದೇವತೆಗೆ ಪ್ರಾರ್ಥನೆ ಮಾಡಬೇಕು.
೩. ಸೂಚನಾಸತ್ರದಲ್ಲಿ ೮ ನಿಮಿಷಗಳ ಕಾಲಾವಧಿಯು ಹೆಚ್ಚು-ಕಡಿಮೆಯಾದಲ್ಲಿ ವಿಶೇಷ ವ್ಯತ್ಯಾಸವಾಗುವುದಿಲ್ಲ. ಸೂಚನಾಸತ್ರದಲ್ಲಿ ಕಾಲಾವಧಿಗಿಂತ ಸ್ವಯಂಸೂಚನೆಗಳನ್ನು ಪ್ರಭಾವಶಾಲಿಯಾಗಿ ನೀಡುವುದಕ್ಕೆ ಹೆಚ್ಚು ಮಹತ್ವವಿದೆ.
೪. ಮೂರು ಬೇರೆಬೇರೆ ಸ್ವಭಾವದೋಷಗಳ ಅಭಿವ್ಯಕ್ತಿಗಳಿಗೆ ಕಡಿಮೆಪಕ್ಷ ಒಂದುವಾರ ಸೂಚನೆಗಳನ್ನು ನೀಡುವುದು ಅವಶ್ಯಕವಾಗಿದೆ. ‘ಅ೩’ ಉಪಾಯಪದ್ಧತಿಯ ಮೇಲಾಧಾರಿತ ಸ್ವಯಂಸೂಚನೆಯಿದ್ದರೆ, ಅ೧, ಅ೨, ಆ೧, ಅಥವಾ ಆ೨ ಈ ಉಪಾಯಪದ್ಧತಿಗಳ ಮೇಲಾಧಾರಿತ ೨ ಸ್ವಭಾವದೋಷಗಳ ಅಭಿವ್ಯಕ್ತಿಗಳಿಗೆ ಮತ್ತು ೧ ನಾಮಜಪಕ್ಕೆ ಸ್ವಯಂಸೂಚನೆಯನ್ನು ನೀಡಬೇಕು. ಅ೩ ಉಪಾಯಪದ್ಧತಿಯ ಮೇಲಾಧಾರಿತ ಸ್ವಯಂಸೂಚನೆಯಿಲ್ಲದಿದ್ದರೆ, ಅ೧, ಅ೨, ಆ೧ ಮತ್ತು ಆ೨ರ ಉಪಾಯಪದ್ಧತಿಯ ಮೇಲಾಧಾರಿತ ೩ ಸ್ವಭಾವದೋಷಗಳ ಅಭಿವ್ಯಕ್ತಿಗಳಿಗೆ ಮತ್ತು ೧ ನಾಮಜಪಕ್ಕೆ ಸ್ವಯಂಸೂಚನೆಯನ್ನು ನೀಡಬೇಕು.
೫. ಪ್ರಗತಿಯ ಸೂಚನೆಯನ್ನು ಪ್ರತಿಯೊಂದು ಸೂಚನಾಸತ್ರದ ಪ್ರಾರಂಭದಲ್ಲಿ ಒಂದು ಸಲ ಮಾತ್ರ ನೀಡಬೇಕು.
೬. ಸೂಚನಾಸತ್ರಗಳನ್ನು ಮಾಡುವಾಗ ಚಿತ್ತವು ಏಕಾಗ್ರವಾಗದಿದ್ದರೆ ಅಥವಾ ಸೂಚನೆಯಲ್ಲಿನ ಶಬ್ದಗಳು ನೆನಪಾಗದಿದ್ದರೆ (ಮರೆತು ಹೋದರೆ), ಸೂಚನೆಗಳನ್ನು ಕಾಗದದ ಮೇಲೆ ಬರೆದು ಅದರಲ್ಲಿನ ಪ್ರತಿಯೊಂದನ್ನು ೫ ರಿಂದ ೧೦ ಸಲ ಓದಬೇಕು, ಅದರಂತೆಯೇ ಅವುಗಳನ್ನು ನೋಡಿ ಅಥವಾ ನೋಡದೇ ೫ ರಿಂದ ೧೦ ಸಲ ಬರೆಯಬೇಕು. ಏಕಾಗ್ರತೆಯನ್ನು ಸಾಧಿಸಲು ಓದುವುದಕ್ಕಿಂತ ಬರೆಯುವ ಕೃತಿಯು ಹೆಚ್ಚು ಸಹಾಯಕವಾಗಿದೆ.
೭. ದಿನದಲ್ಲಿ ಕಡಿಮೆಪಕ್ಷ ಮೂರು ಸೂಚನಾಸತ್ರಗಳನ್ನು ಮಾಡಬೇಕು ಮತ್ತು ಹೆಚ್ಚೆಂದರೆ ಆರು ಸತ್ರಗಳನ್ನು ಮಾಡಬೇಕು. ವ್ಯಕ್ತಿಯು ಎಷ್ಟು ಹೆಚ್ಚು ಸೂಚನಾಸತ್ರಗಳನ್ನು ಮಾಡುತ್ತಾನೆಯೋ ಅವನಿಗೆ ಅಷ್ಟು ಬೇಗನೇ ಮತ್ತು ಹೆಚ್ಚು ಲಾಭವಾಗುತ್ತದೆ.
೮. ಯಾವುದಾದರೊಂದು ಸ್ವಭಾವದೋಷದ ತೀವ್ರತೆಯು ಹೆಚ್ಚಿದ್ದರೆ, ಆ ಸ್ವಭಾವದೋಷಕ್ಕೆ ಸೂಚನೆಗಳನ್ನು ನೀಡಲು ಪ್ರಾರಂಭಿಸಿದ ನಂತರ ಸುಧಾರಣೆಯು ಕಂಡುಬರಲು ಎರಡು ಅಥವಾ ಅದಕ್ಕಿಂತ ಹೆಚ್ಚು ವಾರಗಳು ತಗಲುತ್ತವೆ; ಆದರೆ ಸೂಚನಾಸತ್ರಗಳನ್ನು ಹಾಗೆಯೇ ಮುಂದುವರಿಸಿದರೆ ಕೆಲವು ದಿನಗಳ ನಂತರ ಆ ಸ್ವಭಾವದೋಷದಲ್ಲಿ ಬಹಳಷ್ಟು ಬದಲಾವಣೆಯಾಗಿರುವುದು ಕಂಡುಬರುತ್ತದೆ.
೯. ಒಂದು ವಾರ ಸೂಚನೆಗಳನ್ನು ನೀಡಿಯೂ ಯಾವುದಾದರೊಂದು ಸ್ವಭಾವದೋಷದಲ್ಲಿ ಯಾವುದೇ ವ್ಯತ್ಯಾಸವು ಕಂಡುಬರದಿದ್ದರೆ ಅದೇ ಸೂಚನೆಯನ್ನು ೩ ರಿಂದ ೪ ವಾರಗಳ ತನಕ ಮತ್ತೆ ನೀಡಬೇಕು. ಆಗಲೂ ಏನೂ ಸುಧಾರಣೆ ಕಂಡು ಬರದಿದ್ದಲ್ಲಿ ‘ಆ ಸೂಚನೆಯನ್ನು ಗ್ರಹಿಸಲು ತೀವ್ರ ಮಾನಸಿಕ ವಿರೋಧವಿದೆ’ ಎಂದು ತಿಳಿದುಕೊಳ್ಳಬೇಕು. ಆಗ ಅದನ್ನು ಅಲ್ಲಿಯೇ ನಿಲ್ಲಿಸಿ ಬೇರೆ ಸ್ವಭಾವದೋಷವನ್ನು ಆರಿಸಿ ಸೂಚನೆಗಳನ್ನು ನೀಡಬೇಕು.
೧೦. ಕೆಲವು ವಾರಗಳ ನಂತರ ಮತ್ತೆ ತೀವ್ರ ಮಾನಸಿಕ ವಿರೋಧವಿದ್ದ ಹಿಂದಿನ ಸ್ವಭಾವ ದೋಷಕ್ಕೆ ಸೂಚನೆಗಳನ್ನು ಕೊಡಬಹುದು. ಆ ಸೂಚನೆಗಳು ಈಗ ಪರಿಣಾಮಕಾರಿಯಾಗಿರುತ್ತವೆ. ಏಕೆಂದರೆ, ಅಲ್ಲಿಯವರೆಗೆ ಮನಸ್ಸಿನ ಮೇಲಿನ ಒತ್ತಡವು ಕೆಲವೊಂದು ಪ್ರಮಾಣದಲ್ಲಿ ಕಡಿಮೆಯಾಗಿರುವುದರಿಂದ ಉಳಿತಾಯವಾಗಿರುವ ಮನಸ್ಸಿನ ಹೆಚ್ಚಿನ ಶಕ್ತಿಯು ಆ ಸ್ವಭಾವದೋಷವನ್ನು ದೂರಗೊಳಿಸಲು ಸಿಗುತ್ತದೆ.
ಸ್ವಯಂಸೂಚನೆಗಳ ಸೂಚನಾಸತ್ರಗಳನ್ನು ಮಾಡಲು ಪ್ರಾರಂಭಿಸಿದ ನಂತರವೂ ಪ್ರತಿದಿನ ನಿಯಮಿತವಾಗಿ ‘ಸ್ವಭಾವದೋಷ ನಿರ್ಮೂಲನ ತಖ್ತೆಯನ್ನು’ ಬರೆಯಬೇಕು.
(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ಸ್ವಯಂಸೂಚನೆಗಳ ಮೂಲಕ ಸ್ವಭಾವದೋಷ ನಿರ್ಮೂಲನೆ’ ಗ್ರಂಥ)