‘ಫ್ಯುಜನ್ ಫ್ಯಾಶನ್ನ ಹೆಸರಿನಲ್ಲಿ ಚಿತ್ರವಿಚಿತ್ರ ತಮೋಗುಣಿ ಉಡುಪುಗಳನ್ನು ಹೆಚ್ಚು ಪ್ರಮಾಣದಲ್ಲಿ ಬಳಸುವುದು
ಪ್ರಸ್ತುತ ಕಾಲದಲ್ಲಿ ‘ಫ್ಯುಜನ್ ಫ್ಯಾಶನ್’ ಹೆಸರಿನಲ್ಲಿ (ಎರಡು ಬೇರೆ ಬೇರೆ ಸಂಸ್ಕೃತಿಯ ಉಡುಪುಗಳನ್ನು ಒಟ್ಟು ಮಾಡಿ ಒಂದು ಹೊಸ ಉಡುಪನ್ನು ತಯಾರಿಸುವುದು) ಭಾರತದಲ್ಲಿನ ಹಿಂದೂಗಳ ಸಾಂಸ್ಕೃತಿಕ ಬಟ್ಟೆಗಳೊಂದಿಗೆ ವಿದೇಶಿ ಬಟ್ಟೆಗಳ ಉಪಯೋಗ ಮಾಡುವ ಪದ್ಧತಿ ಪ್ರಚಲಿತವಾಗಿದೆ. ಉದಾ. ಭಾರತೀಯ ನಿಲುವಂಗಿ ಮತ್ತು ಜೀನ್ಸ್ ಪ್ಯಾಂಟ್ ಉಪಯೋಗಿಸುವುದು. ಮದುವೆಯ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮ, ಗಣೇಶೋತ್ಸವ ಮುಂತಾದ ಕಡೆಗಳಲ್ಲಿ, ಹಾಗೆಯೇ ಇತರ ಸಮಯದಲ್ಲಿಯೂ ಚಿಕ್ಕ ಮಕ್ಕಳು, ಯುವಕರು ಅಥವಾ ಹೆಚ್ಚು ವಯಸ್ಸಿನ ಪುರುಷರಲ್ಲಿ ನಿಲುವಂಗಿ ಮತ್ತು ಜೀನ್ಸ್ ಪ್ಯಾಂಟ್ ಈ ಉಡುಗೆ ತೊಡುಗೆಯು ಕಂಡು ಬರುತ್ತದೆ. ಜೀನ್ಸ್ ಪ್ಯಾಂಟ್‌ನಲ್ಲಿ ವಿವಿಧ ಪ್ರಕಾರಗಳೂ ಕಂಡು ಬರುತ್ತವೆ, ಉದಾ. ಫೆಡೆಡ್ ಜೀನ್ಸ್ (ಈ ಪ್ಯಾಂಟಿನ ಕೆಲವು ಭಾಗ ಗಾಢ ಬಣ್ಣದಲ್ಲಿ ಮತ್ತು ನಡುವಿನ ಕೆಲವು ಭಾಗ ತಿಳಿ ಬಣ್ಣದ, ಅಂದರೆ ಬಿಳಿ ಪಟ್ಟಿಗಳಂತಿರುತ್ತವೆ.)
ತಮೋಗುಣಿ ಉಡುಪಿನಿಂದಾಗಿ ವಾತಾವರಣದಲ್ಲಿನ ನಕಾರಾತ್ಮಕ ಶಕ್ತಿಯು ವ್ಯಕ್ತಿಯ ಕಡೆಗೆ ಆಕರ್ಷಿತವಾಗುತ್ತದೆ
ಚಿತ್ರವಿಚಿತ್ರ ಬಟ್ಟೆಗಳನ್ನು ಬಳಸಿದರೆ ವ್ಯಕ್ತಿಯಲ್ಲಿನ ರಜ-ತಮ ಗುಣವು ಬಹಳಷ್ಟು ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಜೀನ್ಸ್ ಪ್ಯಾಂಟ್ ತಮ-ರಜ ಪ್ರಧಾನವಾಗಿರುವುದರಿಂದ ವ್ಯಕ್ತಿಯ ದೇಹದ ಸುತ್ತಲೂ ತೊಂದರೆದಾಯಕ ಸ್ಪಂದನಗಳ ನಿರ್ಮಿತಿಯಾಗಿ ವಾತಾವರಣದಲ್ಲಿನ ನಕಾರಾತ್ಮಕ ಶಕ್ತಿಯು ಆ ವ್ಯಕ್ತಿಯ ಕಡೆಗೆ ಆಕರ್ಷಿತವಾಗುತ್ತದೆ. ಜೀನ್ಸ್ ಪ್ಯಾಂಟ್ ಸ್ವೇಚ್ಛಾಚಾರದ ದರ್ಶಕವಾಗಿದ್ದು ಅದರಿಂದ ವ್ಯಕ್ತಿಯ ಅಹಂಕಾರ ಹೆಚ್ಚಾಗುತ್ತದೆ ಮತ್ತು ಅವನಿಗೆ ಕೆಟ್ಟ ಶಕ್ತಿಗಳ ತೀವ್ರ ತೊಂದರೆಯಾಗುವ ಸಾಧ್ಯತೆಯೂ ಹೆಚ್ಚಾಗುತ್ತದೆ. ಜೀನ್ಸ್ ಪ್ಯಾಂಟ್‌ನಲ್ಲಿ ಈಶ್ವರನ ಚೈತನ್ಯವನ್ನು ಗ್ರಹಿಸುವ ಕ್ಷಮತೆ ನಗಣ್ಯವಾಗಿದೆ. ವಿವಿಧ ಪ್ರಕಾರದ ಫ್ಯಾಶನ್ನ ಹೆಸರಿನಲ್ಲಿ ಹರಿದ, ತೇಪೆಗಳನ್ನು ಹಚ್ಚಿದಂತಿರುವ, ಬಿಗಿಯಾದ ಅಥವಾ ಹೆಚ್ಚು ಉದ್ದದ ಜೀನ್ಸ್ ಪ್ಯಾಂಟನಿಂದಾಗಿ ತಾಮಸಿಕತೆಯು ಹೆಚ್ಚಾಗಿ ವ್ಯಕ್ತಿಗಾಗುವ ಆಧ್ಯಾತ್ಮಿಕ ತೊಂದರೆ ಹೆಚ್ಚಾಗುತ್ತದೆ. ಆದುದರಿಂದ ‘ಉಡುಪು ಆರಾಮದಾಯಕವಾಗಿದೆ’ ಎಂಬ ಮೇಲುಮೇಲಿನ ವಿಚಾರವನ್ನು ಮಾಡದೇ ಆ ಉಡುಪಿನಿಂದ ಸೂಕ್ಷ್ಮ ಸ್ತರದಲ್ಲಾಗುವ ಪರಿಣಾಮಗಳ ವಿಚಾರ ಮಾಡಬೇಕು. ಇಂತಹ ಬಟ್ಟೆಗಳನ್ನು ಧರಿಸುವ ಬದಲು ಸಾತ್ತ್ವಿಕ ಬಟ್ಟೆಗಳನ್ನು ಧರಿಸುವುದು ಹೆಚ್ಚು ಲಾಭದಾಯಕವಾಗಿದೆ.
ಹಿಂದೂ ಸಂಸ್ಕೃತಿಗನುಸಾರ ನಿಲುವಂಗಿ (ಶರ್ಟ) ಮತ್ತು ಧೋತರ ಇವು ಪುರುಷರ ಸಾತ್ತ್ವಿಕ ಉಡುಗೆಗಳಾಗಿವೆ !
ಜೀನ್ಸ್ ಪ್ಯಾಂಟ್ ಬದಲು ನಿಲುವಂಗಿ ಮತ್ತು ಪೈಜಾಮಾ ಬಳಸುವುದು ತುಲನೆಯಲ್ಲಿ ಹೆಚ್ಚು ಸಾತ್ತ್ವಿಕವಾಗಿದೆ. ಈ ಉಡುಪು ರಜ-ಸತ್ತ್ವಪ್ರಧಾನವಾಗಿದ್ದು ಅದು ಸಂಯಮ ಮತ್ತು ಧೈರ್ಯದ ದರ್ಶಕವಾಗಿದೆ. ಈ ಉಡುಪಿನಿಂದ ಅಹಂ ಕಡಿಮೆಯಾಗಿ ಕೆಟ್ಟ ಶಕ್ತಿಗಳ ತೊಂದರೆಯೂ ಕಡಿಮೆಯಾಗುತ್ತದೆ ಮತ್ತು ಈಶ್ವರನ ಚೈತನ್ಯವನ್ನು ಹೆಚ್ಚು ಪ್ರಮಾಣದಲ್ಲಿ ಗ್ರಹಿಸಲು ಸಾಧ್ಯವಾಗುತ್ತದೆ. ಹಿಂದೂ ಸಂಸ್ಕೃತಿಗನುಸಾರ ನಿಲುವಂಗಿ ಮತ್ತು ಧೋತರ ಇವು ಪುರುಷರ ಸಾತ್ತ್ವಿಕ ಉಡುಗೆತೊಡುಗೆಯಾಗಿವೆ. ಅವು ನಿರ್ಮಲತೆಯ ದರ್ಶಕವಾಗಿದ್ದು ಅವುಗಳಿಂದಾಗಿ ಅಹಂ ಕಡಿಮೆಯಾಗುತ್ತದೆ, ಹಾಗೆಯೇ ಕೆಟ್ಟ ಶಕ್ತಿಗಳ ತೊಂದರೆಯೂ ಬಹಳ ಕಡಿಮೆಯಾಗುತ್ತದೆ. ಆದುದರಿಂದ ಚಿಕ್ಕ ಮಕ್ಕಳು ಮತ್ತು ಪುರುಷರು ಅಸಾತ್ತ್ವಿಕ ಉಡುಗೆತೊಡುಗೆಗಳನ್ನು ತ್ಯಜಿಸಿ ನಿಲುವಂಗಿ ಮತ್ತು ಧೋತರವನ್ನು ಧರಿಸಬೇಕು. ಅದು ಸಾಧ್ಯವಿಲ್ಲದಿದ್ದರೆ ಕನಿಷ್ಠ ಪಕ್ಷ ನಿಲುವಂಗಿ (ಶರ್ಟ) ಮತ್ತು ಪೈಜಾಮಾವನ್ನು ಬಳಸಬೇಕು.
– (ಪರಾತ್ಪರ ಗುರು) ಡಾ. ಆಠವಲೆ
ಜೀನ್ಸ್ ಪ್ಯಾಂಟಿನ ಸತತ ಬಳಕೆಯಿಂದಾಗುವ ಶಾರೀರಿಕ ದುಷ್ಪರಿಣಾಮಗಳು
ಅ. ಕೆಲವು ಜೀನ್ಸ್ ಪ್ಯಾಂಟಿನ ಬಟ್ಟೆಯು ಬಹಳ ದಪ್ಪಾಗಿರುತ್ತದೆ. ಇದರಿಂದ ಇಂತಹ ಬಟ್ಟೆಗಳಲ್ಲಿ ಸಹಜವಾಗಿ ಗಾಳಿ ಆಡುವುದಿಲ್ಲ, ಮತ್ತು ಉಷ್ಣತೆಯು ಬಟ್ಟೆಗಳ ಒಳಭಾಗದಲ್ಲಿಯೇ ಸಂಗ್ರಹವಾಗುತ್ತದೆ. ಇದರಿಂದ ಭಾರತದಂತಹ ಉಷ್ಣ ಪ್ರದೇಶದಲ್ಲಿನ ಜನರು ಯಾವಾಗಲೂ ಜೀನ್ಸ್ ಬಳಸುವುದು ತಪ್ಪಾಗಿದೆ.
ಆ. ಸಾಮಾನ್ಯವಾಗಿ ಸೊಂಟ, ಜನನೇಂದ್ರಿಯ ಮತ್ತು ತೊಡೆಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಬೆವರು ಬರುತ್ತದೆ. ಯಾವಾಗಲೂ ಜೀನ್ಸ್ ಬಳಸಿದರೆ ಆ ಜಾಗಗಳಲ್ಲಿ ಬೆವರು ಸಂಗ್ರಹವಾಗುತ್ತದೆ ಮತ್ತು ಮುಗ್ಗಲು (fungal infection) ಹಿಡಿಯುವಂತಹ ಚರ್ಮರೋಗಗಳು ನಿರ್ಮಾಣವಾಗುತ್ತದೆ.
ಇ. ಶರೀರಕ್ಕೆ ತೀರಾ ಅಂಟಿಕೊಂಡಿರುವ ಬಿಗಿಯಾದ ಜೀನ್ಸ್ ಪ್ಯಾಂಟನ್ನು ಧರಿಸುವ ಯುವತಿಯರಿಗೆ ಸೊಂಟನೋವು ಹಾಗೂ ಮೀನಖಂಡಗಳಲ್ಲಿ ತೀವ್ರ ವೇದನೆ (cramps)ಗಳಾಗುವುದು ಇಂತಹ ತೊಂದರೆಯಾಗಬಹುದು.
ಯುವತಿಯರೇ, ಆಧುನಿಕತೆಯ ಮತ್ತು ಹೊಸತನದ ಆಡಂಬರದಿಂದ ಅಸಾತ್ತ್ವಿಕ ಮತ್ತು ಶೋಭನೀಯವಲ್ಲದ ಉಡುಪುಗಳನ್ನು ಧರಿಸಬೇಡಿರಿ !
ಪ್ರಸ್ತುತ ಯುವತಿಯರು ಮತ್ತು ಮಧ್ಯಮವಯಸ್ಸಿನ ಸ್ತ್ರೀಯರು ಗಿಡ್ಡ ಮತ್ತು ಶರೀರಕ್ಕೆ ಬಿಗಿಯಾಗಿ ಅಂಟಿಕೊಳ್ಳುವ ಜೀನ್ಸ್ ಪ್ಯಾಂಟ್ ಮತ್ತು ಟಿ-ಶರ್ಟ ಧರಿಸುವುದು ಬಹಳಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ. ಈ ಅಸಾತ್ತ್ವಿಕ ಉಡುಪಿನಿಂದಾಗಿ ಸ್ತ್ರೀಯರಲ್ಲಿ ಮಾನಸಿಕ, ಹಾಗೆಯೇ ಆಧ್ಯಾತ್ಮಿಕ ತೊಂದರೆಗಳು ಹೆಚ್ಚಾಗಿದ್ದು ಕಂಡು ಬರುತ್ತದೆ. ನಿಜ ಹೇಳಬೇಕೆಂದರೆ ಸಾತ್ತ್ವಿಕ ಉಡುಪು, ಒಳ್ಳೆಯ ನಡತೆ ಮತ್ತು ವಿನಯಶೀಲ ವರ್ತನೆ ಇವೇ ಸ್ತ್ರೀಯರ ನಿಜವಾದ ಸೌಂದರ್ಯವಾಗಿವೆ. ಆದರೆ ಆಧುನಿಕತೆಯ ಮತ್ತು ಹೊಸತನದ ಅಟ್ಟಹಾಸದಿಂದಾಗಿ ಅಶೋಭನೀಯ ಉಡುಪುಗಳನ್ನು ಧರಿಸುವ ಸ್ಪರ್ಧೆಯೇ ಸ್ತ್ರೀಯರಲ್ಲಿ ನಡೆದಂತಿದೆ. ಚಿಕ್ಕ ಹುಡುಗಿಯರಿಗಾಗಿ ಪರಕರ-ಜಂಪರು, ಮತ್ತು ಸ್ತ್ರೀಯರು ಸಾತ್ತ್ವಿಕ ಉಡುಪುಗಳಾದ ಒಂಬತ್ತು ಗಜದ ಮತ್ತು ಆರು ಗಜದ ಸೀರೆಗಳನ್ನು ಬಳಸಬೇಕು.
– ಸೌ. ಸುಜಾತಾ ಕುಲಕರ್ಣಿ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೪.೨.೨೦೧೯)