ಹಂತ ೩. ಮನಸ್ಸಿಗೆ ಯೋಗ್ಯ ಪ್ರಶ್ನೆಗಳನ್ನು ಕೇಳಿ ಅಯೋಗ್ಯ ಕೃತಿ ಮತ್ತು ಅಯೋಗ್ಯ ಪ್ರತಿಕ್ರಿಯೆಗಳ ಮೂಲ ಕಾರಣವನ್ನು ಹುಡುಕುವುದು

ಹಂತ ೩. ಮನಸ್ಸಿಗೆ ಯೋಗ್ಯ ಪ್ರಶ್ನೆಗಳನ್ನು ಕೇಳಿ ಪ್ರಸಂಗಗಳಿಗನುಸಾರ ಅಯೋಗ್ಯ ಕೃತಿ ಮತ್ತು ಅಯೋಗ್ಯ ಪ್ರತಿಕ್ರಿಯೆಗಳ ವಿಶ್ಲೇಷಣೆಯನ್ನು ಮಾಡಿ ಮೂಲ ಸ್ವಭಾವದೋಷವನ್ನು ಕಂಡುಹಿಡಿಯುವುದು

೧.  ಅಯೋಗ್ಯ ಕೃತಿ ಮತ್ತು ಅಯೋಗ್ಯ ಪ್ರತಿಕ್ರಿಯೆಗಳ ಮೂಲ ಕಾರಣವನ್ನು ಹುಡುಕುವಾಗ ಗಮನದಲ್ಲಿಡಬೇಕಾದ ಅಂಶಗಳು

ನಮ್ಮ ‘ಮನಸ್ಸಿನಲ್ಲಿ ಅಯೋಗ್ಯ ವಿಚಾರಗಳಿದ್ದರೂ ನಮ್ಮಿಂದ ಅಯೋಗ್ಯ ಕೃತಿಗಳಾಗುವುದಿಲ್ಲ, ಆದುದರಿಂದ ಸ್ವಯಂಸೂಚನೆಗಳನ್ನು ನೀಡುವ ಅವಶ್ಯಕತೆಯಿಲ್ಲ’ ಎಂದು ಕೆಲವರಿಗೆ ಅನಿಸುತ್ತದೆ. ಕೇವಲ ಯೋಗ್ಯಕೃತಿ ಮಾಡುವುದು ನಮ್ಮ ಉದ್ದೇಶವಾಗಿರದೇ ‘ನಮ್ಮ ವೃತ್ತಿಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುವುದು’ ನಮ್ಮ ಉದ್ದೇಶವಾಗಿದೆ ಎನ್ನುವುದನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು.

ಉದಾ. ಒಬ್ಬ ವ್ಯಕ್ತಿಯಲ್ಲಿ ‘ಕೋಪ ಬರುವುದು’ ಎಂಬ ಸ್ವಭಾವದೋಷವಿದೆ; ಕೋಪದ ಭರದಲ್ಲಿ ಅವನು ಎದುರಿನಲ್ಲಿರುವ ವ್ಯಕ್ತಿಗೆ ಬಾಯಿಗೆ ಬಂದಂತೆ ಮಾತನಾಡುತ್ತಾನೆ. ಇನ್ನೊಬ್ಬ ವ್ಯಕ್ತಿಯಲ್ಲಿಯೂ ‘ಕೋಪ ಬರುವ’ ಸ್ವಭಾವದೋಷವಿದೆ, ಆದರೆ ಆ ವ್ಯಕ್ತಿಯು ತನ್ನ ಕೋಪವನ್ನು ಪ್ರತಿಕ್ರಿಯೆಯ ಮೂಲಕ ವ್ಯಕ್ತಪಡಿಸುವುದಿಲ್ಲ, ಮನಸ್ಸಿನಲ್ಲಿಯೇ ಬುಸುಗುಟ್ಟುತ್ತಿರುತ್ತಾನೆ. ಸ್ವಭಾವದೋಷ ನಿರ್ಮೂಲನೆಯಲ್ಲಿ ಮೊದಲನೆಯ ವ್ಯಕ್ತಿಯು ‘ಬಾಯಿಗೆ ಬಂದಂತೆ ಮಾತನಾಡುವ’ ಅಯೋಗ್ಯ ಪ್ರತಿಕ್ರಿಯೆಯು ವ್ಯಕ್ತವಾಗುವುದನ್ನು ಸುಧಾರಣೆ ಮಾಡಿಕೊಂಡು ‘ಕೋಪ ಬರುವುದು’ ಎಂಬ ಸ್ವಭಾವದೋಷವನ್ನು ನಿವಾರಿಸಿಕೊಳ್ಳಬೇಕು. ಎರಡನೆಯ ವ್ಯಕ್ತಿಯು ಅಯೋಗ್ಯ ಕೃತಿಯನ್ನು ಮಾಡದಿದ್ದರೂ ಅವನ ಮನಸ್ಸಿನಲ್ಲಿ ಕೋಪದ ಪ್ರತಿಕ್ರಿಯೆಯು ಬರಬಾರದೆಂದು ‘ಕೋಪ’ ಎಂಬ ಸ್ವಭಾವದೋಷವನ್ನು ದೂರಗೊಳಿಸಿಕೊಳ್ಳಬೇಕು.

೨. ಅಯೋಗ್ಯ ಕೃತಿಯ ಅಧ್ಯಯನ ಮಾಡಿ ಸ್ವಭಾವದೋಷವನ್ನು ಹುಡುಕುವ ಪದ್ಧತಿ

ಅಯೋಗ್ಯ ಕೃತಿ : ಗ್ಯಾಸ್ ಒಲೆಯ ಮೇಲೆ ಹಾಲನ್ನು ಬಿಸಿ ಮಾಡಲು ಇಟ್ಟಿದ್ದೆ, ಹಾಲು ಬಿಸಿಯಾದದ್ದು ಗಮನಕ್ಕೆ ಬರದಿರುವುದರಿಂದ ಅದು ಉಕ್ಕಿ ಹೋಯಿತು.

ಪ್ರಶ್ನೆ ೧ : ಹಾಲು ಕಾಯಿಸುವಾಗ ಬೇರೇನಾದರೂ ಮಾಡುತ್ತಿದ್ದೀರೇನು ?

ಉತ್ತರ : ಇಲ್ಲ. ಆ ಸಮಯದಲ್ಲಿ ಅಲ್ಲಿಯೇ ನಿಂತಿದ್ದೆ.

ಪ್ರಶ್ನೆ ೨ : ಹಾಲು ಬಿಸಿಯಾಗಿರುವುದು ಏಕೆ ಗಮನಕ್ಕೆ ಬರಲಿಲ್ಲ ?

ಉತ್ತರ : ಆ ಸಮಯದಲ್ಲಿ ವಿಚಾರಗಳಲ್ಲಿ ಮುಳುಗಿದ್ದೆ.

ಪ್ರಶ್ನೆ ೩ : ಯಾವ ವಿಚಾರಗಳನ್ನು ಮಾಡುತ್ತಿದ್ದಿರಿ ?

ಉತ್ತರ ೧ : ಆ ಸಮಯದಲ್ಲಿ, ‘ನಿನ್ನೆ ನಾನು ಕಾರ್ಯಾಲಯದಲ್ಲಿ ಮಾಡಿದ ಕೆಲಸವು ಉತ್ತಮವಾಗಿದೆ’, ಆದುದರಿಂದ ಮೇಲಿನ ಅಧಿಕಾರಿಗಳು ಸಂತುಷ್ಟರಾಗಬಹುದು, ನನಗೆ ನೌಕರಿಯಲ್ಲಿ ಭಡ್ತಿ ಸಿಗಬಹುದು. ನನ್ನ ಸಂಬಳ ಹೆಚ್ಚಾಗಬಹುದು. ಅದರಿಂದ ನಾನು ಕೆಲವೊಂದು

ವಸ್ತುಗಳನ್ನು ಖರೀದಿಸಬಹುದು…’ ಇಂತಹ ವಿಚಾರಗಳು ಮನಸ್ಸಿನಲ್ಲಿ ಬರುತ್ತಿದ್ದವು.

ನಿಷ್ಕರ್ಷ ೧ : ಮೇಲಿನ ವಿಚಾರದಿಂದ ಸೌ. ಮಾಲಿನಿಯಲ್ಲಿ ವಸ್ತುಸ್ಥಿತಿಗೆ ಸಂಬಂಧವಿಲ್ಲದ ವಿಚಾರಗಳನ್ನು ಮಾಡುವ, ಅಂದರೆ ‘ಮನೋರಾಜ್ಯದಲ್ಲಿ ವಿಹರಿಸುವ’ ಸ್ವಭಾವದೋಷ ವಿರುವುದು ಗಮನಕ್ಕೆ ಬರುತ್ತದೆ.

ಉತ್ತರ ೨ : ಆ ಸಮಯದಲ್ಲಿ, ‘ನಾಳೆ ಮನೆಗೆ ತುಂಬಾ ಜನ ಅತಿಥಿಗಳು ಬರುವವರಿ ದ್ದಾರೆ. ನನಗೆ ೧೫-೨೦ ಜನರಿಗೆ ಅಡುಗೆಯನ್ನು ಮಾಡಬೇಕಾಗಬಹುದು. ನಾನು ಇಷ್ಟ ರವರೆಗೆ ಇಷ್ಟೊಂದು ಮಂದಿಗೆ ಅಡುಗೆಯನ್ನು ಮಾಡಿಲ್ಲ. ಒಂದು ವೇಳೆ ಏನಾದರೂ ಹೆಚ್ಚು ಕಮ್ಮಿಯಾದರೆ ಅತಿಥಿಗಳು ಏನೆನ್ನಬಹುದು…’, ಎಂಬಂತಹ ವಿಚಾರಗಳು ನನ್ನ ಮನಸ್ಸಿ ನಲ್ಲಿ ಬರುತ್ತಿದ್ದವು.

ನಿಷ್ಕರ್ಷ ೨ : ಇದರಿಂದ ಸೌ. ಮಾಲಿನಿಯಲ್ಲಿ ‘ಹೆದರಿಕೆ’ ಎಂಬ ಸ್ವಭಾವದೋಷವಿರುವುದು ಗಮನಕ್ಕೆ ಬರುತ್ತದೆ.

೩.  ಅಯೋಗ್ಯ ಪ್ರತಿಕ್ರಿಯೆಗಳ ಅಧ್ಯಯನವನ್ನು ಮಾಡಿ ಸ್ವಭಾವದೋಷಗಳನ್ನು ಹುಡುಕುವ ಪದ್ಧತಿ

 ಉದಾಹರಣೆ

ಪ್ರಸಂಗ: ಸೌ.ಮಾಲಾರವರು ಸಾಯಂಕಾಲ ೬ ಗಂಟೆಗೆ ಒಂದು ಕಾರ್ಯಕ್ರಮಕ್ಕೆ ಹೋಗಲು ಸಿದ್ಧತೆಯನ್ನು ಮಾಡುತ್ತಿದ್ದರು. ಆಗ ಅವರ ಅತ್ತೆಯವರು ಅವರಿಗೆ ಪಾತ್ರೆಗಳನ್ನು ತೊಳೆಯಲು ಹೇಳಿದರು, ಕೂಡಲೇ ಸೌ.ಮಾಲಾರವರ ಮನಸ್ಸಿನಲ್ಲಿ, ‘ಇವರು ಇಷ್ಟೊಂದು ತಡವಾಗಿ ಮತ್ತು ಕೊನೆಯ ಗಳಿಗೆಯಲ್ಲಿ ಏಕೆ ಹೇಳುತ್ತಾರೆ.’ ಈಗ ಈ ಪಾತ್ರೆಗಳಿಲ್ಲದಿದ್ದರೆ ಏನೂ ನಡೆಯುವುದೇ ಇಲ್ಲವೇನು ?’ ಎಂಬ ಪ್ರತಿಕ್ರಿಯೆಯು ಬಂದಿತು.

ಅಧ್ಯಯನ

ಪ್ರಶ್ನೆ ೧ : ಈ ಪ್ರತಿಕ್ರಿಯೆಯು ಮನಸ್ಸಿನಲ್ಲಿ ಏಕೆ ಬಂದಿತು ?

ಉತ್ತರ : ಕಾರ್ಯಕ್ರಮಕ್ಕೆ ಹೊರಟಿದ್ದೆ, ಹೋಗುವ ಸಮಯದಲ್ಲಿ ಮತ್ತು ತಡಮಾಡಿ ಪಾತ್ರೆಗಳನ್ನು ತೊಳೆಯಲು ಹೇಳಿದ್ದರಿಂದ ನನಗೆ ಅತ್ತೆಯವರ ಮೇಲೆ ಕೋಪ ಬಂದಿತು; ಇದರಿಂದ ಮನಸ್ಸಿನಲ್ಲಿ ಪ್ರತಿಕ್ರಿಯೆ ಬಂದಿತು.

ನಿಷ್ಕರ್ಷ ೧ : ಇದರಿಂದ ಹೊರಡುವ ಸಮಯದಲ್ಲಿ ಹೇಳಿದರು, ತಡವಾಗಿ ಹೇಳಿದರು, ಪಾತ್ರೆಗಳನ್ನು ತೊಳೆಯಲು ಹೇಳಿದರು ಮತ್ತು ಕೋಪ ಬರುವುದು ಎಂಬ ನಾಲ್ಕು ಕಾರಣಗಳಿಂದ ಮನಸ್ಸಿನಲ್ಲಿ ಪ್ರತಿಕ್ರಿಯೆ ಬಂದಿತು.

ಪ್ರಶ್ನೆ ೨ : ಕಾರ್ಯಕ್ರಮಕ್ಕೆ ಹೊರಡುವ ಹಿಂದಿನ ದಿನ ಪಾತ್ರೆಗಳನ್ನು ತೊಳೆಯಲು ಹೇಳಿದ್ದರೆ, ಮನಸ್ಸಿನಲ್ಲಿ ಈ ಪ್ರತಿಕ್ರಿಯೆಯು ಬರುತ್ತಿತ್ತೇನು ?

ಉತ್ತರ : ಹಿಂದಿನ ದಿನ ಹೇಳಿದ್ದರೂ ಮನಸ್ಸಿನಲ್ಲಿ ಈ ಪ್ರತಿಕ್ರಿಯೆಯೇ ಬರುತ್ತಿತ್ತು.

ನಿಷ್ಕರ್ಷ ೨ : ಮೇಲಿನ ಉತ್ತರದಿಂದ ಪಾತ್ರೆಗಳನ್ನು ತೊಳೆಯಲು ಹೇಳಿದ್ದರಿಂದ ಮತ್ತು ಕೋಪ ಬಂದಿದ್ದರಿಂದ ಮನಸ್ಸಿನಲ್ಲಿ ಪ್ರತಿಕ್ರಿಯೆಯು ಬಂದಿತು.

ಪ್ರಶ್ನೆ ೩ : ಅತ್ತೆಯವರು ಇದಕ್ಕಿಂತ ಮೊದಲೂ ಹೀಗೇನಾದರು ಮಾಡಲು ಹೇಳಿದ್ದರೇನು ?

ಉತ್ತರ : ಈ ಹಿಂದೆಯೂ ಒಂದು ಸಲ ಅವರು ಹೀಗೆಯೇ ನಾನು ಹೊರಡುತ್ತಿರುವಾಗ ಒಂದು ತಿಂಡಿಯನ್ನು ಮಾಡಿಕೊಡಲು ಹೇಳಿದ್ದರು.

ಪ್ರಶ್ನೆ ೪ : ಆಗ ಇಂತಹ ಪ್ರತಿಕ್ರಿಯೆ ಮನಸ್ಸಿನಲ್ಲಿ ಬಂದಿತ್ತೇನು ?

ಉತ್ತರ : ಇಲ್ಲ.

ಪ್ರಶ್ನೆ ೫ : ಆಗ ಇಂತಹ ಪ್ರತಿಕ್ರಿಯೆ ಮನಸ್ಸಿನಲ್ಲಿ ಏಕೆ ಬರಲಿಲ್ಲ ?

ಉತ್ತರ : ಏಕೆಂದರೆ ಹೊಸಹೊಸ ತಿಂಡಿಗಳನ್ನು ತಯಾರಿಸಿ ಮನೆಯಲ್ಲಿರುವವರೆಲ್ಲರಿಗೂ ಬಡಿಸುವುದೆಂದರೆ ನನಗೆ ಬಹಳ ಇಷ್ಟವಾಗುತ್ತದೆ; ಆದುದರಿಂದ ನನಗೆ ಆನಂದವಾಗಿತ್ತು.

ನಿಷ್ಕರ್ಷ ೩ : ಇದರಿಂದ ‘ಪಾತ್ರೆಗಳನ್ನು ತೊಳೆಯಲು ಇಷ್ಟವಾಗುವುದಿಲ್ಲ’, ಎಂಬುದು ಈ ಪ್ರತಿಕ್ರಿಯೆಗೆ ಕಾರಣವಾಗಿದೆ ಮತ್ತು ‘ಕೋಪ ಬರುವುದು’ ಮೂಲಸ್ವಭಾವದೋಷವಾಗಿದೆ ಎಂಬುದು ಗಮನಕ್ಕೆ ಬರುತ್ತದೆ.

೪.  ಪ್ರಸಂಗಗಳ ಅಧ್ಯಯನವನ್ನು ಮಾಡಿ ಮನಸ್ಸಿಗೆ ವಿವಿಧ ಪ್ರಶ್ನೆಗಳನ್ನು ಕೇಳುವಾಗ ಗಮನದಲ್ಲಿಡಬೇಕಾದ ಅಂಶಗಳು

೪ ಅ. ಪ್ರಸಂಗಗಳ ವಸ್ತುನಿಷ್ಠ ಅಧ್ಯಯನ ಮಾಡಬೇಕು : ನಮ್ಮ ವೃತ್ತಿಯು ಬಹಿರ್ಮುಖವಾಗಿರುತ್ತದೆ; ಆದುದರಿಂದ ಪ್ರಸಂಗದ ಅಧ್ಯಯನವನ್ನು ಮಾಡುವಾಗ ‘ನಮ್ಮಿಂದಾಗಿರುವ ಅಯೋಗ್ಯ ಕೃತಿ, ಹಾಗೆಯೇ ನಮ್ಮಿಂದ ವ್ಯಕ್ತವಾಗಿರುವ ಅಥವಾ ಮನಸ್ಸಿನಲ್ಲಿ ಉಂಟಾದ ಅಯೋಗ್ಯ ಪ್ರತಿಕ್ರಿಯೆ ನಮ್ಮ ಸ್ವಭಾವದೋಷದಿಂದಾಗಿಲ್ಲ, ಅದು ಆ ಸಮಯದ ಪರಿಸ್ಥಿತಿ ಮತ್ತು ಆ ಘಟನೆಗೆ ಸಂಬಂಧಿಸಿದ ಇತರ ವ್ಯಕ್ತಿಗಳ ಸ್ವಭಾವದೋಷದಿಂದಾಗಿ ಘಟಿಸಿದೆ ಅಥವಾ ವ್ಯಕ್ತವಾಗಿದೆ ಅಥವಾ ಮನಸ್ಸಿನಲ್ಲಿ ಉಂಟಾಗಿದೆ ಎಂದು ನಮ್ಮ ಮನಸ್ಸು ನಮ್ಮನ್ನು ಭ್ರಮೆಗೆ ಸಿಕ್ಕಿಸಲು ಪ್ರಯತ್ನಿಸುತ್ತದೆ. ಇದರ ಉದಾಹರಣೆ ಮುಂದೆ ಕೊಡಲಾಗಿದೆ.

ಅಯೋಗ್ಯ ಕೃತಿಗಳ ಉದಾಹರಣೆ

ಪ್ರಸಂಗ : ಶ್ರೀ.ರಾಜೇಶರು ಚಹಾ ಕುಡಿದಾದ ನಂತರ ಲೋಟವನ್ನು ತೊಳೆಯಲಿಲ್ಲ.

ಪ್ರಸಂಗವನ್ನು ಬರೆಯುವ ಅಯೋಗ್ಯ ಪದ್ಧತಿ : ಬೆಳಗ್ಗೆ ನನಗೆ (ಶ್ರೀ.ರಾಜೇಶರಿಗೆ) ಅವಸರದ ಕೆಲಸವಿದ್ದುದರಿಂದ ಕಾರ್ಯಾಲಯಕ್ಕೆ ಬೇಗನೇ ತಲುಪಬೇಕಾಗಿತ್ತು, ಆದುದರಿಂದ ಚಹಾ ಕುಡಿದ ಬಳಿಕ ನಾನು ಲೋಟವನ್ನು ತೊಳೆದಿಡಲಿಲ್ಲ.

ಅಧ್ಯಯನ : ಮೇಲಿನ ಉದಾಹರಣೆಯಲ್ಲಿ ಶ್ರೀ.ರಾಜೇಶರು ತಾವು ಮಾಡಿದ ತಪ್ಪು ಕೃತಿಯನ್ನು ಪರೋಕ್ಷವಾಗಿ ಸಮರ್ಥಿಸುತ್ತಿದ್ದಾರೆ ಎಂಬುದು ಗಮನಕ್ಕೆ ಬರುತ್ತದೆ.

೪ ಆ. ಪ್ರಸಂಗಗಳ ಅಧ್ಯಯನವನ್ನು ಮಾಡುವಾಗ ಮೂರನೆಯ ವ್ಯಕ್ತಿಯ (ತಟಸ್ಥ) ದೃಷ್ಟಿಕೋನವನ್ನು ಇಟ್ಟುಕೊಳ್ಳಬೇಕು

೪ ಇ. ಸ್ವಭಾವದೋಷಗಳನ್ನು ಅರಿತುಕೊಳ್ಳಲು ಇತರರ ಸಹಾಯವನ್ನು ತೆಗೆದುಕೊಳ್ಳುವುದು

೪ ಈ. ನಮ್ಮ ದೋಷಗಳನ್ನು ಪ್ರಾಮಾಣಿಕವಾಗಿ ಸ್ವೀಕರಿಸುವುದು

Leave a Comment