ಘಟನೆಗಳ ಹಾಗೂ ಅಯೋಗ್ಯ ಕೃತಿ ಮತ್ತು ಅಯೋಗ್ಯ ಪ್ರತಿಕ್ರಿಯೆಗಳ ಅಧ್ಯಯನ ಮಾಡಿ ಆಯಾ ಪ್ರಸಂಗಗಳಿಗನುಸಾರ ಯೋಗ್ಯ ಕೃತಿ ಮತ್ತು ಯೋಗ್ಯ ಪ್ರತಿಕ್ರಿಯೆಗಳನ್ನು ನಿರ್ಧರಿಸುವುದು
೧. ಅಯೋಗ್ಯ ಕೃತಿಗಳ ಅಧ್ಯಯನ ಮಾಡಿ ಯೋಗ್ಯ ಕೃತಿಗಳನ್ನು ನಿರ್ಧರಿಸುವ ಪದ್ಧತಿ
ಅಯೋಗ್ಯ ಕೃತಿ : ಚಹಾ ಕುಡಿದ ನಂತರ ರಾಜೇಶ ಲೋಟವನ್ನು ತೊಳೆದಿಡಲಿಲ್ಲ.
ಅಧ್ಯಯನ : ಈ ಕೃತಿಯಲ್ಲಿ ಚಹಾದ ಲೋಟವನ್ನು ತೊಳೆಯಲು ಬೇಸರವಾಗುತ್ತದೆಯೋ, ಲೋಟವನ್ನು ತೊಳೆಯಲು ಮರೆಯುತ್ತದೆಯೋ ಅಥವಾ ಲೋಟವನ್ನು ತೊಳೆಯುವುದೆಂದರೆ ಅವಮಾನವೆನಿಸುತ್ತದೆಯೋ ಎಂಬುದರ ವಿಚಾರವನ್ನು ಮಾಡಬೇಕು.
ನಿಷ್ಕರ್ಷ : ಇದರಿಂದ ರಾಜೇಶನಲ್ಲಿ ಅನುಕ್ರಮವಾಗಿ ಆಲಸ್ಯ, ಮರೆವು ಅಥವಾ ಅಹಂ ಇವುಗಳಲ್ಲಿ ಯಾವುದಾದರೊಂದು ಅಥವಾ ಒಂದಕ್ಕಿಂತ ಹೆಚ್ಚು ಸ್ವಭಾವದೋಷಗಳಿರುವುದು ಗಮನಕ್ಕೆ ಬರುತ್ತದೆ.
ಯೋಗ್ಯ ಕೃತಿ : ಚಹಾ ಕುಡಿದ ನಂತರ ಲೋಟವನ್ನು ಸ್ವಚ್ಛವಾಗಿ ತೊಳೆದು ಅದನ್ನು ಯೋಗ್ಯ ಸ್ಥಳದಲ್ಲಿ ವ್ಯವಸ್ಥಿತವಾಗಿಡುವುದು.
೨. ಅಯೋಗ್ಯ ಪ್ರತಿಕ್ರಿಯೆಗಳ ಅಧ್ಯಯನವನ್ನು ಮಾಡಿ ಯೋಗ್ಯ ಪ್ರತಿಕ್ರಿಯೆಗಳನ್ನು ನಿರ್ಧರಿಸುವ ಪದ್ಧತಿ
ಪ್ರಸಂಗ : ತಂದೆ ಮನೆಗೆ ಬಂದಿರುವ ಅತಿಥಿಗಳೆದುರು ಅಧ್ಯಯನ ಮಾಡಲು ಹೇಳಿದಾಗ ಆದಿತ್ಯನಿಗೆ ಕೋಪ ಬಂದಿತು, ಆದುದರಿಂದ ಅವನು ಅಧ್ಯಯನ ಕೊಠಡಿಗೆ ಹೋಗಿ ಕೋಪದಿಂದ ಮೇಜಿನ ಮೇಲೆ ಪುಸ್ತಕಗಳನ್ನು ಎಸೆದನು.
ಅಧ್ಯಯನ : ತಂದೆಯವರು ‘ಅಧ್ಯಯನ ಮಾಡು’ ಎಂದು ಜೋರಾಗಿ ಹೇಳಿದರು; ಆದುದರಿಂದ ಆದಿತ್ಯನಿಗೆ ಕೋಪ ಬಂದಿತು. ‘ಕೆಲವೇ ದಿನಗಳಲ್ಲಿ ತನಗೆ ಪರೀಕ್ಷೆಯಿದೆ, ಹಾಗಾಗಿ ಈಗ ಅಧ್ಯಯನ ಮಾಡಿದರೆ ತನಗೆ ಒಳಿತಾಗುತ್ತದೆ’ ಎಂಬುದನ್ನು ಅವನು ಗಮನಕ್ಕೆ ತೆಗೆದುಕೊಳ್ಳಲಿಲ್ಲ. ಹಾಗಾಗಿ ಅಧ್ಯಯನ ಕೊಠಡಿಗೆ ಹೋಗಿ ಕೋಪದಿಂದ ಪುಸ್ತಕಗಳನ್ನು ಮೇಜಿನ ಮೇಲೆ ಎಸೆದನು.
ನಿಷ್ಕರ್ಷ : ಈ ಪ್ರಸಂಗದಿಂದ ಆದಿತ್ಯನಲ್ಲಿ ‘ಕೋಪ ಬರುವುದು’ ಮತ್ತು ‘ಉದ್ಧಟತನ’ ಎಂಬ ಸ್ವಭಾವದೋಷಗಳಿರುವುದು ಗಮನಕ್ಕೆ ಬರುತ್ತದೆ.
ಯೋಗ್ಯ ಪ್ರತಿಕ್ರಿಯೆ : ತಂದೆಯವರು ‘ಅಧ್ಯಯನ ಮಾಡು’ ಎಂದು ಹೇಳಿದಾಗ ‘ವಾರ್ಷಿಕ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಿ ಉತ್ತೀರ್ಣನಾಗಲು ಅಧ್ಯಯನ ಮಾಡುವುದು ಯೋಗ್ಯವಾಗಿದೆ; ಹಾಗಾಗಿ ತಂದೆಯವರು ನನಗೆ ಹೀಗೆ ಹೇಳುತ್ತಿದ್ದಾರೆ’ ಎಂಬ ವಿಚಾರ ಮಾಡಿ ಶಾಂತವಾಗಿ ಅಧ್ಯಯನ ಕೋಣೆಗೆ ಹೋಗಿ ಅಧ್ಯಯನ ಮಾಡಲು ಪ್ರಾರಂಭಿಸುವುದು.
೩. ಅಯೋಗ್ಯ ಕೃತಿ ಮತ್ತು ಅಯೋಗ್ಯ ಪ್ರತಿಕ್ರಿಯೆಗಳ ಅಧ್ಯಯನ ಮಾಡುವಾಗ ಗಮನದಲ್ಲಿಡಬೇಕಾದ ಅಂಶಗಳು
ಅ. ಪ್ರಸಂಗವು ಯಾವ ಪರಿಸ್ಥಿತಿಯಲ್ಲಿ ಘಟಿಸಿತು, ಆ ಪರಿಸ್ಥಿತಿಯ ಅಧ್ಯಯನ ಮಾಡಬೇಕು : ಇತರ ಸಮಯದಲ್ಲಿ ನಮಗೆ ಯಾವುದಾದರೊಂದು ಕೃತಿಯನ್ನು ಮಾಡಲು ಇಷ್ಟವಾಗುತ್ತದೆ ಅಥವಾ ಅದನ್ನು ಮಾಡುವಾಗ ಮನಸ್ಸಿನ ಮೇಲೆ ಒತ್ತಡವಾಗುವುದಿಲ್ಲ; ಆದರೆ ವಿಶಿಷ್ಟ ಪರಿಸ್ಥಿತಿಯಲ್ಲಿ ಅದೇ ಕೃತಿಯನ್ನು ಮಾಡಲು ಇಷ್ಟವಾಗುವುದಿಲ್ಲ ಮತ್ತು ಮನಸ್ಸಿನಲ್ಲಿ ಅಯೋಗ್ಯ ಪ್ರತಿಕ್ರಿಯೆಗಳು ಬರುತ್ತವೆ.
ಆ. ಪ್ರಸಂಗದಲ್ಲಿನ ವಿವಿಧ ಘಟಕಗಳು : ವ್ಯಕ್ತಿ, ಸ್ಥಳ, ಕಾಲ ಮತ್ತು ಸಮಯ ಹಾಗೂ ವ್ಯಕ್ತಿಯ ಮನಃಸ್ಥಿತಿ.
ಆ ೧. ವ್ಯಕ್ತಿ: ಯಾವುದಾದರೊಂದು ಪ್ರಸಂಗದ ಅಧ್ಯಯನವನ್ನು ಮಾಡುವಾಗ ಪ್ರತಿಕ್ರಿಯೆಯು ವ್ಯಕ್ತಿನಿಷ್ಠವಾಗಿದೆಯೇನು (ವಿಶಿಷ್ಟ ವ್ಯಕ್ತಿಯ ಸಂದರ್ಭದಲ್ಲಿ) ಎಂಬುದನ್ನು ಅವಲೋಕಿಸಬೇಕು.
ಆ ೨. ಸ್ಥಳ: ಬಹಳಷ್ಟು ಸಲ ನಮ್ಮ ಮನಸ್ಸಿನಲ್ಲಿ ಬರುವ ಅಯೋಗ್ಯ ಪ್ರತಿಕ್ರಿಯೆಗಳು ಸ್ಥಳದ (ಕಚೇರಿ, ಮನೆ, ಶಾಲೆ) ಮೇಲೆಯೂ ಅವಲಂಬಿಸಿರುತ್ತವೆ.
ಆ ೩. ಕಾಲ ಮತ್ತು ಸಮಯ: ನಮಗೆ ಬೇಡವೆನಿಸುವ ಯಾವುದಾದರೊಂದು ಕೃತಿ ಯನ್ನು ಮಾಡಬೇಕಾದರೆ ಅಥವಾ ಯಾವುದಾದರೊಂದು ಪ್ರಸಂಗದಿಂದ ಮಾನಸಿಕ ಒತ್ತಡವುಂಟಾದಾಗ, ನಮ್ಮ ಮನಸ್ಸಿನಲ್ಲಿ ಅನೇಕ ನಕಾರಾತ್ಮಕ ಪ್ರತಿಕ್ರಿಯೆಗಳು ಉಂಟಾಗುತ್ತವೆ ಅಥವಾ ನಮ್ಮಿಂದ ಅಯೋಗ್ಯ ಕೃತಿಗಳು ಘಟಿಸುತ್ತವೆ.
ಆ ೪. ವ್ಯಕ್ತಿಯ ಮನಃಸ್ಥಿತಿ : ದಿನವಿಡೀ ಘಟಿಸುವ ಅನೇಕ ಪ್ರಸಂಗಗಳಲ್ಲಿ ನಮ್ಮ ಮನಃಸ್ಥಿತಿಯು ವಿಭಿನ್ನವಾಗಿರುತ್ತದೆ. ಅದಕ್ಕನುಸಾರವಾಗಿ ನಮ್ಮ ಮನಸ್ಸಿನಲ್ಲಿ ಬರುವ ಪ್ರತಿಕ್ರಿಯೆಗಳ ತೀವ್ರತೆ ಮತ್ತು ಮರುಕಳಿಸುವಿಕೆಯು ಅವಲಂಬಿಸಿಕೊಂಡಿರುತ್ತದೆ.
(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ನಮ್ಮಲಿರುವ ಸ್ವಭಾವದೋಷಗಳನ್ನು ಹೇಗೆ ಹುಡುಕಬೇಕು ?’ ಗ್ರಂಥ)