ಹಿಂದೂ ಧರ್ಮದ ಅದ್ವಿತೀಯ ಕೊಡುಗೆ ಆಯುರ್ವೇದ

ಶ್ರೀ. ನಿಷಾದ ದೇಶಮುಖ

ಮಹತ್ವ

ಆಯುರ್ವೇದವು ಜೀವಕ್ಕೆ ಕಾಲಾನುಸಾರ ಮತ್ತು ಪ್ರಕೃತಿಗನುಸಾರ ಯಮ-ನಿಯಮ ಬಂಧನಗಳ ಆಚರಣೆಯನ್ನು ಕಲಿಸಿ ಆಧ್ಯಾತ್ಮಿಕ ಉನ್ನತಿಯಲ್ಲಿ ಸಹಾಯಮಾಡುವ ಉಪಾಸನಾ ಪದ್ಧತಿಯಾಗಿದೆ. ಆದುದರಿಂದ ಪ್ರಾರಬ್ಧದಲ್ಲಿ ಅನಾರೋಗ್ಯವಿದ್ದರೂ ಆಯುರ್ವೇದದಲ್ಲಿ ಹೇಳಿದಂತೆ ಆಚರಣೆ ಮಾಡಿದ್ದರಿಂದ ಜೀವಕ್ಕೆ ಅದನ್ನು ಭೋಗಿಸಲು ಸುಲಭವಾಗಿ ಕೆಟ್ಟ ಶಕ್ತಿಗಳ ತೊಂದರೆಯಾಗದೇ ಆಧ್ಯಾತ್ಮಿಕ ಉನ್ನತಿಯಾಗಲು ಸಾಧ್ಯವಾಗುತ್ತದೆ.

೧. ಆಯುರ್ವೇದದ ಉಪಚಾರಪದ್ಧತಿಯು ಸಾಧನಾಪದ್ಧತಿಯ ವಿಧವಾಗಿರುವುದು !

ಸರ್ವೋಚ್ಚ ಸುಖ (ಆನಂದ)ವು ಸಾಧನೆಯಿಂದಲೇ ಸಿಗುತ್ತದೆ, ಈ ಸತ್ಯವನ್ನು ಪ್ರಾಚೀನ ಋಷಿಮುನಿಗಳಿಗೆ ತಿಳಿದಿರುವುದರಿಂದ ಅವರು ಸಾಧನೆಯ ದೃಷ್ಟಿಯಿಂದ ವಿವಿಧ ಪದ್ಧತಿ ಮತ್ತು ಶಾಸ್ತ್ರಗಳನ್ನು ನಿರ್ಮಾಣ ಮಾಡಿದರು. ಆಯುರ್ವೇದ ಉಪಾಯ ಪದ್ಧತಿಯೂ ಇದಕ್ಕೆ ಹೊರತಾಗಿಲ್ಲ. ಆದುದರಿಂದ ಸಾಮಾನ್ಯ ಉಪಾಸನಾ ಪದ್ಧತಿಯಲ್ಲಿ ಒಳಗೊಂಡಿರುವ ಗುಣವೈಶಿಷ್ಟ್ಯಗಳು ಆಯುರ್ವೇದದಲ್ಲಿಯೂ ಕಂಡು ಬರುತ್ತವೆ. ಇದರ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

೧ ಅ. ಆಯುರ್ವೇದಿಂದ ಕಾಲಾನುಸಾರ ಮತ್ತು ಪ್ರಕೃತಿಗನುಸಾರವಾಗಿ ಮಾರ್ಗದರ್ಶನ ಮಾಡಲಾಗುತ್ತದೆ : ಆಯುರ್ವೇದದಲ್ಲಿ ಜೀವಕ್ಕೆ ಕಾಲಾನುಸಾರ ಮತ್ತು ಪ್ರಕೃತಿಗನುಸಾರ ಆಚರಣೆ ಮಾಡುವ ಮತ್ತು ಪಾಲಿಸುವ ಪಥ್ಯಗಳ ಕುರಿತು ಮಾರ್ಗದರ್ಶನ ಮಾಡಲಾಗುತ್ತದೆ, ಉದಾ. ಯಾವ ಋತುಗಳಲ್ಲಿ ಯಾವ ಆಹಾರ ಪದಾರ್ಥವು ಮುಖ್ಯವಾಗಿ ಮತ್ತು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು, ವೃದ್ಧಾಪ್ಯದ ದೃಷ್ಟಿಯಿಂದ ಏನೆಲ್ಲ ಕಾಳಜಿ ವಹಿಸಬೇಕು ಮುಂತಾದವುಗಳು. ಈ ರೀತಿ ಜೀವವು ಕಾಲಾನುಸಾರ ಮತ್ತು ಪ್ರಕೃತಿಗನುಸಾರ ನಡೆದುಕೊಂಡರೆ ಅವನಿಗೆ ಆವಶ್ಯಕ ಶಕ್ತಿ ದೊರೆತು ಅವನ ಸಾಧನೆಯು ಶಾರೀರಿಕ, ಮಾನಸಿಕ ಮತ್ತು ಇತರ ರೋಗನಿವಾರಣೆಯಾಗಲು ಉಪಯೋಗವಾಗದೇ ಆಧ್ಯಾತ್ಮಿಕ ಉನ್ನತಿಗಾಗಿ ಉಪಯೋಗಿಸಲ್ಪಡುತ್ತದೆ.

೧ ಆ. ಆಯುರ್ವೇದದಲ್ಲಿ ಯಮ-ನಿಯಮಗಳನ್ನು ಪಾಲಿಸುವುದರಿಂದ ಜೀವದ ಮನೋಲಯವಾಗಲು ಸಹಾಯವಾಗುವುದು : ಆಯುರ್ವೇದದಲ್ಲಿ ಔಷಧೋಪಚಾರಗಳೊಂದಿಗೆ ಪಥ್ಯ ಪಾಲಿಸಲು ಎಲ್ಲಕ್ಕಿಂತ ಹೆಚ್ಚು ಮಹತ್ವ ನೀಡಲಾಗಿದೆ. ಆದುದರಿಂದ ದೇಹಕ್ಕೆ ಔಷಧಿಗಳೊಂದಿಗೆ ವಿವಿಧ ಯಮ-ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಔಷಧಿಗಳ ಬಗ್ಗೆ ಯಮ-ನಿಯಮಗಳನ್ನು ಪಾಲಿಸುವುದರಿಂದ ದೇಹಕ್ಕೆ ಮನಸ್ಸಿಗೆ ಬಂದಂತೆ ವರ್ತಿಸುವುದು ಕಡಿಮೆಯಾಗಿ ಸ್ವಲ್ಪ ಪ್ರಮಾಣದಲ್ಲಿ ಮನೋಲಯವಾಗಲು ಸಹಾಯವಾಗುತ್ತದೆ.

೧ ಇ. ಶಾರೀರಿಕ ಮಟ್ಟದೊಂದಿಗೆ ಮಾನಸಿಕ ಮತ್ತು ಆಧ್ಯಾತ್ಮಿಕ ಮಟ್ಟದಲ್ಲಿಯೂ ತೊಂದರೆ ಕಡಿಮೆಯಾಗಲು ಸಹಾಯ ಮಾಡುವುದು : ಪ್ರಾಚೀನ ಕಾಲದಲ್ಲಿ ವೈದ್ಯರಿಗೆ ದೇಹಕ್ಕಾಗುತ್ತಿರುವ ರೋಗಗಳ ಮೂಲ ಕಾರಣಗಳನ್ನು ತಿಳಿದುಕೊಳ್ಳುವ ಕ್ಷಮತೆ ಇತ್ತು. ಆದುದರಿಂದ ಅವರು ವಿವಿಧ ಮಂತ್ರಗಳಿಂದ ಕೂಡಿದ ಔಷಧಿಗಳನ್ನು ದೇಹಕ್ಕೆ ಕೊಡುತ್ತಿದ್ದರು. ಆದುದರಿಂದ ಜೀವಕ್ಕೆ ಶರೀರದೊಂದಿಗೆ ಮಾನಸಿಕ ಮತ್ತು ಆಧ್ಯಾತ್ಮಿಕ ಮಟ್ಟದಲ್ಲಾಗುವ ತೊಂದರೆ ಕಡಿಮೆಯಾಗಲು ಸಹಾಯವಾಗುತ್ತಿತ್ತು. ಇದೇ ರೀತಿ ಯಾವ ಕೃತಿಗಳಿಂದ ಮನಸ್ಸಿಗೆ ತೊಂದರೆಯಾಗುತ್ತದೆ ಅದನ್ನು ಆಗದಿರಲು ಅದರ ಬಗ್ಗೆ ಆಯರ್ವೇದದಲ್ಲಿ ಮಾರ್ಗದರ್ಶನವನ್ನು ನೀಡಲಾಗುತ್ತದೆ, ಉದಾ. ಸಂಭೋಗ ಯಾವ ಋತುಗಳಲ್ಲಿ ಮಾಡಬೇಕು ಮತ್ತು ಯಾವಾಗ ಮಾಡಬಾರದು ? ಇತ್ಯಾದಿ. ಒಟ್ಟು ಆಯರ್ವೇದದ ಉಪಚಾರಗಳಿಂದ ಶಾರೀರಿಕ ಮಟ್ಟದೊಂದಿಗೆ ಮಾನಸಿಕ ಮತ್ತು ಆಧ್ಯಾತ್ಮಿಕ ಮಟ್ಟದಲ್ಲಿ ತೊಂದರೆ ಕಡಿಮೆಯಾಗುತ್ತವೆ.

೧ ಈ. ದೇಹದಲ್ಲಿ ಕಡಿಮೆಯಾದ ತತ್ತ್ವಗಳನ್ನು ದೊರಕಿಸುವ ಸಾಧನೆಯ ಮಾರ್ಗದರ್ಶನ : ಅನೇಕ ಯೋಗಮಾರ್ಗಗಳು ಈಶ್ವರನೊಂದಿಗೆ ಏಕರೂಪವಾಗಲು ಅವಶ್ಯಕವಿರುವ ತತ್ತ್ವಗಳನ್ನು ದೊರಕಿಸಿ ಕೊಡಲು ಸಾಧನೆಯನ್ನು ಹೇಳುತ್ತಾರೆ. ಅದೇ ಕಾರ್ಯ ಸ್ವಲ್ಪ ಪ್ರಮಾಣದಲ್ಲಿ ಆಯರ್ವೇದವೂ ಮಾಡುತ್ತದೆ. ಪಂಚತತ್ತ್ವವು ಭಗವಂತನ ಪರಾಶಕ್ತಿಯಾಗಿದೆ. ದೇಹದಲ್ಲಿರುವ ಪಂಚತ್ತ್ವಗಳ ಸಮೀಕರಣದಲ್ಲಿ ಬದಲಾವಣೆಯಾದ ಮೇಲೆ ದೇಹಕ್ಕೆ ಕಫ, ವಾತ, ಮತ್ತು ಪಿತ್ತ ಇವುಗಳ ಪ್ರಮಾಣ ಹೆಚ್ಚಾಗಿ ಅವನಿಗೆ ವಿವಿಧ ರೋಗಗಳಾಗುತ್ತವೆ. ಆಯುರ್ವೇದವು ಈ ಮೂರನ್ನು ಸಮತೋಲನದಲ್ಲಿಡಲು ಕಲಿಸುತ್ತದೆ. ಅಂದರೆ ಪಂಚತತ್ತ್ವಗಳಲ್ಲಿ ಕಡಿಮೆಯಿರುವ ತತ್ತ್ವದ ಪ್ರಮಾಣ ಹೆಚ್ಚು ಮಾಡುವುದು. ಅದೇ ರೀತಿ ಆಯುರ್ವೇದದಲ್ಲಿನ ಅಷ್ಟತಂತ್ರಗಳಲ್ಲಿ ‘ಭೂತವಿದ್ಯಾ’ ಒಂದು ತಂತ್ರವಿದೆ. ಈ ತಂತ್ರದಲ್ಲಿ ದೇವರು ಮತ್ತು ಗ್ರಹ ಮುಂತಾದವುಗಳಿಂದ ನಿರ್ಮಾಣವಾದ ರೋಗಗಳು, ಅಂದರೆ ದೈವಿಶಕ್ತಿ ಕಡಿಮೆ ಬೀಳುವುದರಿಂದ ನಿರ್ಮಾಣವಾದ ರೋಗಗಳು ಮತ್ತು ಅವುಗಳ ಉಪಚಾರಗಳನ್ನು ಒಳಗೊಂಡಿದೆ.

೨. ಪ್ರಾರಬ್ಧದಿಂದ ರೋಗಗಳು ಆಗುತ್ತಿದ್ದರೂ ಆಯುರ್ವೇದವನ್ನು ನಿರ್ಮಾಣ ಮಾಡುವುದರ ಕಾರಣ

ದೇಹದಲ್ಲಿ ಆಗುವ ಎಲ್ಲ ರೋಗಗಳು ಪ್ರಾರಬ್ಧದಿಂದ ಆಗಿರದೇ ಕೆಲವು ರೋಗಗಳು ಅಯೋಗ್ಯ ಕ್ರಿಯಮಾಣಗಳಿಂದಲೂ ಉದ್ಭವಿಸುತ್ತವೆ. ಪ್ರಾರಬ್ಧ ಮತ್ತು ಕ್ರಿಯಮಾಣ ಇವೆರಡರಿಂದ ನಿರ್ಮಾಣವಾದ ರೋಗಗಳನ್ನು ಯೋಗ್ಯ ರೀತಿಯಿಂದ ಅನುಭವಿಸಲು ಆಯರ್ವೇದದ ಜ್ಞಾನವನ್ನು ಭಗವಂತನು ಸಮಷ್ಟಿಗೆ ನೀಡಿರುವನು.

೩. ಪ್ರಾರಬ್ಧದಿಂದಾಗುತ್ತಿರುವ ರೋಗಗಳಿಗೆ ಆಯುರ್ವೇದ ಉಪಚಾರಪದ್ಧತಿಯ ಲಾಭಗಳು

೩ ಅ. ಆಯುರ್ವೇದ ಉಪಚಾರ ಪದ್ಧತಿಯಿಂದ ಜೀವಕ್ಕೆ ಸಾಧನೆಯ ಹಾನಿಯಾಗದಿರುವುದು : ಜೀವವು ರೋಗದಿಂದ ಪೀಡಿತವಾದಾಗ ಅವನ ದೇಹದಲ್ಲಿ ಕಾರ್ಯನಿರತವಿರುವ ಪ್ರಾಣಶಕ್ತಿಯು ಮೊದಲು ರೋಗ ಕಡಿಮೆಯಾಗಲು ಕಾರ್ಯನಿರತವಾಗಿರುತ್ತದೆ. ರೋಗಗಳಲ್ಲಿನ ಜಂತುಗಳು ಪ್ರಭಾವಶಾಲಿಯಾಗಿದ್ದರೆ ಪ್ರಾಣಶಕ್ತಿಗೆ ಅವುಗಳನ್ನು ಸೋಲಿಸಲು ಸಾಧ್ಯವಾಗದಿರುವುರಿಂದ ರೋಗ ಹೆಚ್ಚಾಗುತ್ತದೆ. ರೋಗಿಯು ಸಾಧನೆ ಮಾಡುವವನಿದ್ದರೆ ಅವನ ಮನಃಶಾಂತಿ ಜಾಗೃತವಾಗಿರುತ್ತದೆ. ಹೆಚ್ಚಾಗಿ ರೋಗಿಗಳಿಗೆ ಕಾಯಿಲೆಯಿಂದ ನಿರ್ಮಾಣವಾದ ಸ್ಥಿತಿಯನ್ನು ಸ್ವೀಕರಿಸಲು ಆಗುವುದಿಲ್ಲ ಮತ್ತು ಪ್ರಾರಬ್ಧವನ್ನು ಅನುಭವಿಸಿ ತೀರಿಸಲು ಸಾಧನೆಯ ದೃಷ್ಟಿಯಿಂದ ಹೆಚ್ಚು ಯೋಗ್ಯವಾಗಿದೆ ಎಂಬುದು ಅವರಿಗೆ ತಿಳಿದಿರುವುದಿಲ್ಲ. ಆದುದರಿಂದ ಮಂದ ಪ್ರಾರಬ್ಧದಿಂದ ನಿರ್ಮಾಣವಾದ ರೋಗವು ಮನಃಶಕ್ತಿಯ ಆಧಾರದಿಂದ ದೂರ ಮಾಡಬಹುದು. ಆದುದರಿಂದ ಅವನಲ್ಲಿರುವ ಜನ್ಮಜನ್ಮದಲ್ಲಿರುವ ಸಾಧನಾರೂಪಿ ಶಕ್ತಿ ಖರ್ಚಾಗುತ್ತದೆ. ಈ ರೀತಿ ರೋಗಗಳು ಇತ್ಯಾದಿಗಳ ಕಾರಣಗಳಿಂದ ಸಾಧನೆ ಖರ್ಚು ಮಾಡಿದರೆ ಜೀವದ ಆಧ್ಯಾತ್ಮಿಕ ಪ್ರಗತಿಯಾಗುವುದಿಲ್ಲ ಮತ್ತು ಅನೇಕ ಬಾರಿ ಆಧ್ಯಾತ್ಮಿಕ ಅಧೋಗತಿಯೂ ಆಗುತ್ತದೆ. ಶೇ. ೭೧ ಆಧ್ಯಾತ್ಮಿಕ ಮಟ್ಟಕ್ಕಿಂತ ಹೆಚ್ಚು ಇರುವವರಿಗೆ ರೋಗಗಳು ‘ಪ್ರಾರಬ್ಧದಿಂದಾಗಿದೆಯೋ ಅಥವಾ ಕ್ರಿಯಮಾಣದಿಂದ ಆಗಿದೆಯೋ’ ಎಂದು ಸಹಜವಾಗಿ ತಿಳಿಯುತ್ತದೆ. ಹಾಗೆಯೇ ಆ ಮಟ್ಟದ ಜೀವಕ್ಕೆ ಮನೋಲಯವಾಗಿರುವುದರಿಂದ ಮತ್ತು ಅವನು ರೋಗದೆಡೆಗೆ ಸಾಕ್ಷೀಭಾವದಿಂದ ನೋಡುತ್ತಿರುವುದರಿಂದ ಅವನ ಮನಸ್ಸಿನಲ್ಲಿ ಪ್ರಾರಬ್ಧದಿಂದಾದ ರೋಗವು ಗುಣವಾಗುವ ವಿಚಾರ ಬರುವುದಿಲ್ಲ. ಶೇ. ೭೧ ಆಧ್ಯಾತ್ಮಿಕ ಮಟ್ಟ ಕಡಿಮೆಯಿರುವ ಜೀವಗಳಿಗೆ ರೋಗವಾದಾಗ ಅವರ ಸಾಧನೆಯಲ್ಲಿ ಹಾನಿಯಾಗಬಾರದೆಂದು, ಆಯುರ್ವೇದ ರೂಪಿಸಲಾಗಿದೆ. ಆಯುರ್ವೇದವು ಸಾಧನಾಪದ್ಧತಿಯ ಒಂದು ವಿಧವೇ ಆಗಿರುವುದರಿಂದ ಅದನ್ನು ಪಾಲಿಸುವುದರಿಂದ ನಿರ್ಮಾಣವಾಗುವ ಶಕ್ತಿ ರೋಗವನ್ನು ಕಡಿಮೆ ಮಾಡಲು ಉಪಯೋಗಿಸಲಾಗುತ್ತದೆ ಮತ್ತು ಜೀವ ಮಾಡುತ್ತಿರುವ ಸಾಧನೆಯಿಂದ ರೋಗ ಗುಣವಾಗಲು ಉಪಯೋಗವಾಗದೆ ಜೀವದ ಆಧ್ಯಾತ್ಮಿಕ ಉನ್ನತಿಗಾಗಿ ಉಪಯೋಗಿಸಲಾಗುತ್ತದೆ. ಆದುದರಿಂದ ಆಯುರ್ವೇದ ಉಪಚಾರಪದ್ಧತಿಯಿಂದ ಮಂದ ಪ್ರಾರಬ್ಧದಿಂದಾದ ರೋಗವು ಕಡಿಮೆಯಾಗುತ್ತವೆ, ಮಧ್ಯಮ ಪ್ರಾರಬ್ಧದಿಂದಾದ ರೋಗಗಳ ತೀವ್ರತೆ ಕಡಿಮೆಯಾಗುತ್ತದೆ, ಆದರೆ ತೀವ್ರ ಪ್ರಾರಬ್ಧದಿಂದಾಗುವ ರೋಗಗಳನ್ನು ಸಹಿಸುವ ಶಕ್ತಿ ದೊರೆತು ಸಾಧನೆಯ ಹಾನಿಯಾಗುವುದಿಲ್ಲ.

೩ ಆ. ಆಯುರ್ವೇದ ಉಪಚಾರ ಪದ್ಧತಿಯಿಂದ ದೇಹಕ್ಕೆ ಕೆಟ್ಟ ಶಕ್ತಿಗಳ (ಸೂಕ್ಷ್ಮದಲ್ಲಿನ) ಆಕ್ರಮಣ ಕಡಿಮೆ ಪ್ರಮಾಣದಲ್ಲಿ ಆಗುವುದು : ಜೀವಕ್ಕೆ ಅನಾರೋಗ್ಯವಾದಾಗ ಅವನ ರಜ-ತಮ ಗುಣಗಳ ಪ್ರಮಾಣವು ಹೆಚ್ಚಾಗುತ್ತದೆ. ಹಾಗೆಯೇ ಕೆಟ್ಟ ಶಕ್ತಿಗಳನ್ನು ಎದುರಿಸುವ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಕ್ಷಮತೆಯು ಕಡಿಮೆಯಾಗುತ್ತದೆ. ಕೆಟ್ಟ ಶಕ್ತಿ ಇದರ ಲಾಭ ಪಡೆದು ದೇಹದ ಮೇಲೆ ಆಕ್ರಮಣ ಮಾಡಿ ಅವನ ಮೇಲೆ ನಿಯಂತ್ರಣ ಪಡೆಯುತ್ತವೆ ಮತ್ತು ಮುಂದಿನ ಅನೇಕ ವರ್ಷಗಳು ಅವನಿಗೆ ಹಿಂಸೆ ಕೊಡುತ್ತಿರುತ್ತವೆ. ಮೃತ್ಯು ಸಮಯದಲ್ಲಿಯೂ ಜೀವದ ಸ್ಥಿತಿ ದುರ್ಬಲವಾಗಿರುತ್ತದೆ. ವರ್ತಮಾನ ಕಾಲದಲ್ಲಿ ಆಧುನಿಕ ಚಿಕಿತ್ಸೆ ಮತ್ತು ತಂತ್ರಜ್ಞಾನ ಪದ್ಧತಿಗಳಿಂದ ಜೀವದ ಪ್ರಾಣಶಕ್ತಿಯು ಹೆಚ್ಚಿನ ಪ್ರಮಾಣದಲ್ಲಿ ಅಧೋಗತಿಯಾಗುತ್ತದೆ. ಪ್ರಾಣಶಕ್ತಿಯು ಹೆಚ್ಚಿನ ಪ್ರಮಾಣದಲ್ಲಿ ಅಧೋಗತಿಯಾದ ಮೇಲೆ ದೇಹದಲ್ಲಿ ವಿವಿಧ ನಿರುಪಯುಕ್ತ ವಾಯುಗಳು ನಿರ್ಮಾಣವಾಗಿ ಪ್ರಾಣಶಕ್ತಿಯ ಪ್ರಮಾಣ ಕಡಿಮೆಯಾಗಿ ಪ್ರಾಣಶಕ್ತಿವಹನ ಸಂಸ್ಥೆಯಲ್ಲಿನ ವಿವಿಧ ತೊಂದರೆಗಳು ನಿರ್ಮಾಣವಾಗುತ್ತವೆ. ಆದುದರಿಂದ ಲಿಂಗದೇಹಕ್ಕೆ ಪ್ರಾಣಬಿಟ್ಟು ಹೋಗಲು ಕಠಿಣವೆನಿಸುತ್ತದೆ, ಹಾಗೆಯೇ ಕೆಟ್ಟ ಶಕ್ತಿಗಳಿಗೆ ಲಿಂಗದೇಹದ ಮೇಲೆ ನಿಯಂತ್ರಣ ಪಡೆದು ಅವನಿಗೆ ಲಕ್ಷಗಟ್ಟಲೆ ವರ್ಷ ಗುಲಾಮನಂತೆ ಇಡಲು ಸಾಧ್ಯವಾಗುತ್ತದೆ. ತದ್ವಿರುದ್ಧ ಆಯುರ್ವೇದ ಚಿಕಿತ್ಸೆಯಿಂದ ಜೀವದ ಪ್ರಾಣಶಕ್ತಿ ಹೆಚ್ಚು ಪ್ರಮಾಣದಲ್ಲಿ ಊರ್ಧ್ವಗಾಮಿಯಾಗುತ್ತದೆ. ಪ್ರಾಣಶಕ್ತಿ ಊರ್ಧ್ವಗಾಮಿಯಾದ ನಂತರ ಪ್ರಾಣಶಕ್ತಿವಹನ ಸಂಸ್ಥೆಯಲ್ಲಿ ಪ್ರಾಣಶಕ್ತಿಯ ಪ್ರವಾಹ ಕಾರ್ಯನಿರತವಾಗಿರುವುದರಿಂದ ತೊಂದರೆ ನಿರ್ಮಾಣವಾಗುವುದಿಲ್ಲ. ಆದುದರಿಂದ ಮೃತ್ಯು ಸಮಯದಲ್ಲಿ ಪ್ರಾಣಶಕ್ತಿಯ ಬಲದಿಂದ ಲಿಂಗದೇಹಕ್ಕೆ ದೇಹ ಬಿಡಲು ಸುಲಭವಾಗಿ ಅವನಿಗೆ ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗುತ್ತದೆ.

೩ ಇ. ಆಯುರ್ವೇದ ಉಪಚಾರ ಪದ್ಧತಿಯಿಂದ ಜೀವದ ದೇಹಬುದ್ಧಿ ಕಡಿಮೆಯಾಗಿರುವುದರಿಂದ ಅವನಿಗೆ ಮುಂದಿನ ಗತಿ ಸುಲಭವಾಗಿ ಸಿಗುವುದು : ವರ್ತಮಾನ ಆಧುನಿಕ ಚಿಕಿತ್ಸೆ ಮತ್ತು ತಂತ್ರಜ್ಞಾನ ಪದ್ಧತಿಯಿಂದ ಜೀವದ ದೇಹಭಾವವು ಜಾಗೃತವಾಗುತ್ತದೆ. ಆದುದರಿಂದ ಅವನಿಗೆ ಮೃತ್ಯು ಸಮಯದಲ್ಲಿ ದೇಹ ಮತ್ತು ಅವನಿಗೆ ಸಂಬಂಧಪಟ್ಟ ಆಸಕ್ತಿಗಳ ತ್ಯಾಗ ಮಾಡುವುದು ಕಠಿಣವೆನಿಸುತ್ತದೆ. ತದ್ವಿರುದ್ಧ ಆಯುರ್ವೇದ ಉಪಚಾರ ಪದ್ಧತಿಯಲ್ಲಿನ ಪ್ರಾರ್ಥನೆ, ಮಂತ್ರ, ಪಥ್ಯ ಇಂತಹ ಉಪಚಾರ ಪದ್ಧತಿಗಳ ಜೀವದ ಮನಸ್ಸಿನಲ್ಲಿ ಪರಿಣಾಮವಾಗಿ ಅವನು ಭಗವಂತನ ಅನುಸಂಧಾನದಲ್ಲಿ ರಮಿಸುವುದರಿಂದ ದೇಹಕ್ಕೆ ‘ನಾನು ಮತ್ತು ದೇಹ ಬೇರೆ’ ಎಂಬ ಭಾವನೆ ನಿರ್ಮಾಣವಾಗಿ ದೇಹಬುದ್ಧಿ ಕಡಿಮೆಯಾಗಲು ಸಹಾಯವಾಗುತ್ತದೆ. ಆದುದರಿಂದ ಜೀವಕ್ಕೆ ಮೃತ್ಯುವಿನ ಸಮಯದಲ್ಲಿ ದೇಹದಲ್ಲಿ ಸಿಲುಕಿಕೊಳ್ಳದೇ ಮುಂದಿನ ಗತಿ ದೊರಕಲು ಸುಲಭವಾಗಿ (ಸಹಜವಾಗಿ) ಸಾಧ್ಯವಾಗುತ್ತದೆ.

೩ ಈ. ಆಯುರ್ವೇದ ಉಪಚಾರ ಪದ್ಧತಿಯು ಜೀವದ ಆಧ್ಯಾತ್ಮಿಕ ಉನ್ನತಿಗೆ ಸಹಾಯವಾಗುವುದು : ಆಯುರ್ವೇದ ಉಪಚಾರ ಪದ್ಧತಿಯಿಂದಾಗಿ ರೋಗಪೀಡಿತ ಭಾಗದಲ್ಲೂ ಪ್ರಾಣಶಕ್ತಿಯ ಸಂಚಾರವಾಗುತ್ತದೆ. ಆದುದರಿಂದ ಪ್ರಾರಬ್ಧದಿಂದ ದೇಹವು ಅನಾರೋಗ್ಯದಲ್ಲಿದ್ದರೂ, ಕೆಟ್ಟ ಶಕ್ತಿಗಳಿಗೆ ರೋಗಪೀಡಿತ ಭಾಗದಲ್ಲಿ ಆಕ್ರಮಣ ಮಾಡಿ ಸ್ಥಾನ ನಿರ್ಮಾಣ ಮಾಡಲು ಆಗುವುದಿಲ್ಲ. ಆಯುರ್ವೇದ ಉಪಚಾರ ಪದ್ಧತಿಯಿಂದ ದೇಹದಲ್ಲಿ ಪ್ರಾಣಶಕ್ತಿಯ ಅವಶ್ಯಕ ವಿರುವಷ್ಟು ಊರ್ಧ್ವ ಮತ್ತು ಅಧೋ ಹೀಗೆ ಎರಡೂ ಪ್ರಕಾರಗಳು ಸಂಚಾರವಾಗುತ್ತಿರುತ್ತವೆ. ಊರ್ಧ್ವಗಾಮಿ ಪ್ರಾಣಶಕ್ತಿಯ ಪ್ರವಾಹದಿಂದ ಕುಂಡಲಿನಿ ಚಕ್ರವು ಸಂವೇದನಶೀಲವಾಗುತ್ತವೆ. ಆದುದರಿಂದ ಜೀವಕ್ಕೆ ಅನಾರೋಗ್ಯವಿದ್ದರೂ ಮಾಡುತ್ತಿರುವ ಸಾಧನೆಯ ಪರಿಣಾಮ ಸಂಬಂಧಪಟ್ಟ ಕುಂಡಲಿನಿಚಕ್ರದ ಮೇಲಾಗುವುದರಿಂದ ಆ ಚಕ್ರದ ಜಾಗೃತಿಯಾಗಿ ಜೀವಕ್ಕೆ ಆಧ್ಯಾತ್ಮಿಕ ಉನ್ನತಿಯಾಗಲು ಸಾಧ್ಯವಾಗುತ್ತದೆ. ಇದರೊಂದಿಗೆ ಅಧೋಗಾಮಿ ಪ್ರಾಣಶಕ್ತಿಯ ಪ್ರವಾಹದಿಂದ ವಿವಿಧ ವಾಯುಗಳ ನಿರ್ಮಿತಿಯಾಗಿ ದೇಹದ ಕಾರ್ಯವು ಸುಲಭವಾಗಿ ನಡೆಯಲು ಸಹಾಯವಾಗುತ್ತದೆ. ಒಟ್ಟಿನಲ್ಲಿ ಆಯುರ್ವೇದ ಉಪಚಾರ ಪದ್ಧತಿಯಿಂದ ಜೀವದ ಆಧ್ಯಾತ್ಮಿಕ ಉನ್ನತಿಯಾಗಲು ಸಹಾಯವಾಗುತ್ತದೆ.

೩ ಉ. ನಿಷ್ಕರ್ಷ : ಅನಾರೋಗ್ಯದಂತಹ ಕಠಿಣ ಪ್ರಾರಬ್ಧದಲ್ಲಿಯೂ ಜೀವಕ್ಕೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಮೂರು ಮಟ್ಟದಲ್ಲಿ ಆಧಾರ ಪಡೆದು ಅವನ ಸಾಧನೆ ಖರ್ಚಾಗದೇ ಅವನಿಗೆ ಅನಾರೋಗ್ಯದಲ್ಲಿಯೂ ಸಾಧನೆ ಮಾಡಿಸಿ ಆಧ್ಯಾತ್ಮಿಕ ಉನ್ನತಿ ಮಾಡಲು ಭಗವಂತನು ಆಯುರ್ವೇದದ ಜ್ಞಾನವನ್ನು ಸಮಷ್ಟಿಗೆ ನೀಡಿರುವನು.

– ಶ್ರೀ. ನಿಷಾದ ದೇಶಮುಖ (ಸೂಕ್ಷ್ಮದಲ್ಲಿನ ಪ್ರಾಪ್ತವಾದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (೨೨.೮.೨೦೧೮)

Leave a Comment