ಸಾಧುಗಳ ಹತ್ತಿರದಿಂದ ಪರಿಚಯ ಮಾಡಿಕೊಡುವ ಕುಂಭ !
ಸಾಧುಸಂತರು ! ಸದ್ಯ ಇದು ಅನೇಕರ ಅಪಹಾಸ್ಯದ ಮತ್ತು ಟೀಕೆಯ ಶಬ್ದವಾಗಿದ್ದರೂ, ಕೋಟ್ಯವಧಿ ಹಿಂದೂಗಳಿಗಾಗಿ ಇದು ಶ್ರದ್ಧೆಯ ಭಾಗವೂ ಆಗಿದೆ. ಮಾಧ್ಯಮಗಳ ಅಪಪ್ರಚಾರದಿಂದಾಗಿ ಇರಬಹುದು ಅಥವಾ ಧರ್ಮವಿಷಯದ ಅಜ್ಞಾನದಿಂದಾಗಿ ಇರಬಹುದು, ಇಂದು ಸಾಧುಸಂತರಿಂದ ದೂರವಿರುವವರ ಸಂಖ್ಯೆ ಹೆಚ್ಚಿದೆ; ಆದರೆ ಇಂದು ಸಂತರ ಮಾರ್ಗದರ್ಶನದಂತೆ ತಮ್ಮ ಜೀವನವನ್ನು ಸಾಕಾರ ಮಾಡಿಕೊಳ್ಳುತ್ತಿರುವ ಅನೇಕ ಜನರೂ ಇದ್ದಾರೆ.
ಇಂದು ಎಲ್ಲ ಕ್ಷೇತ್ರಗಳ ಹಾಗೆ ಧಾರ್ಮಿಕ ಕ್ಷೇತ್ರದಲ್ಲಿಯೂ ಡಾಂಭಿಕತೆ ಕಂಡುಬರುತ್ತದೆ; ಆದರೆ ಅದಕ್ಕಾಗಿ ಎಲ್ಲ ಸಾಧೂಸಂತರನ್ನು ಒಂದೇ ದೃಷ್ಟಿಯಿಂದ ನೋಡುವುದು ತಪ್ಪಾಗಿದೆ. ಕುಂಭಮೇಳದಲ್ಲಿ ಸಂಪರ್ಕ ಮಾಡುವಾಗ ವಿವಿಧ ಸಾಧುಸಂತರ ಬಗ್ಗೆ ಉತ್ತಮ-ಕಟುವಾದ ಅನುಭವಿಸಲು ಸಾಧ್ಯವಾಯಿತು.
ಸಮವಿಚಾರಿ ಸಂತರ ಶೋಧ ಅಭಿಯಾನ !
ಹಿಂದೂ ರಾಷ್ಟ್ರದ ಕಾರ್ಯದೊಂದಿಗೆ ಸಮವಿಚಾರಿ ಸಂತರನ್ನು ಜೋಡಿಸುವುದು ಮತ್ತು ಅವರ ಆಶೀರ್ವಾದ ಪಡೆಯುವುದು, ಇವುಗಳಿಗಾಗಿ ಕುಂಭಕ್ಷೇತ್ರದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಸಂಪರ್ಕ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಪ್ರತಿದಿನ ಒಂದೊಂದು ಪೆಂಡಾಲಿಗೆ ಹೋಗಿ ಅಲ್ಲಿನ ಸಂತರನ್ನು ಸಂಪರ್ಕಿಸುವ ನಮ್ಮ ದಿನಕ್ರಮವಾಗಿತ್ತು. ಸಂತರ ಸಂಪರ್ಕದಲ್ಲಿ ಪ್ರತಿದಿನ ಹೊಸಹೊಸ ಅನುಭವವು ಬಂದವು. ಮೊದಲಿಗೆ ಸಂತರ ಪೆಂಡಾಲಿನಲ್ಲಿ ಪ್ರಮುಖ ಸಂತರನ್ನು ಹುಡುಕುವುದು, ಇದು ದೊಡ್ಡ ಕೆಲಸವಾಗಿತ್ತು; ಏಕೆಂದರೆ ಹೊರಗಡೆ ಫಲಕದ ಮೇಲೆ ಎಷ್ಟು ಸಂತರ ಛಾಯಾಚಿತ್ರಗಳಿರುತ್ತಿದ್ದವೆಂದರೆ ಆ ಛಾಯಾಚಿತ್ರಗಳಿಂದ ಉಪಸ್ಥಿತ ಸಂತರ ಪೈಕಿ ಮುಖ್ಯ ಸಂತರನ್ನು ಗುರುತಿಸುವುದು ಕಸರತ್ತಾಗಿತ್ತು. ಏಕೆಂದರೆ ಅನೇಕರ ಮುಖವು ಒಂದೇ ರೀತಿ ಕಾಣಿಸುತ್ತಿತ್ತು. ಕೆಲವರು ಇಷ್ಟು ಸರಳವಾಗಿ ಇರುತ್ತಿದ್ದರೆಂದರೆ, ಕೇವಲ ನೋಡುವುದರಿಂದ ಅವರು ಮುಖ್ಯ ಮಹಂತರಿದ್ದಾರೆ’, ಎಂದು ಗುರುತಿಸುವುದು ಕಠಿಣವಾಗಿದೆ. ಒಂದು ಪೆಂಡಾಲಿನಲ್ಲಿ ಬಾಗಿಲಲ್ಲಿರುವ ಓರ್ವ ಶಿಷ್ಯನಿಗೆ, ಮಹಾರಾಜರು ಎಲ್ಲಿದ್ದಾರೆ ?’ ಎಂದು ಕೇಳಿದಾಗ, ಅವರು, “ಪ್ರತಿಯೊಂದು ಮಾತಿಗೆ ಸಿಟ್ಟು ಮಾಡಿಕೊಳ್ಳುವ ಆ ನಮ್ಮ ನರಸಿಂಹ ನೋಡಿರಿ ಅಲ್ಲಿ ಕುಳಿತಿದ್ದಾರೆ !” ಎಂದು ಹೇಳಿದರು. ಆ ಸಂತರ ಕಡೆಗೆ ನೋಡಿದಾಗ ಅವರು ಸಿಟ್ಟಿನವರು ಎನಿಸುತ್ತಿದ್ದರು; ಪ್ರತ್ಯಕ್ಷದಲ್ಲಿ ಮಾತ್ರ ನಮಗೆ ಅವರಿಂದ ಬಹಳ ಪ್ರೀತಿ ಸಿಕ್ಕಿತು. ಪ್ರತಿಯೊಬ್ಬ ಸಂತರು ಅತ್ಯಂತ ಪ್ರೀತಿಯಿಂದ ಮಾತನಾಡುತ್ತಿದ್ದರು. ಚಹಾ-ನೀರು, ಪ್ರಸಾದ ತೆಗೆದುಕೊಳ್ಳುವ ತನಕ ಯಾರೂ ಬಿಡುತ್ತಿರಲಿಲ್ಲ.
ಭಕ್ತರ ತವರುಮನೆಯಾಗಿರುವ ಸಂತರ ಪೆಂಡಾಲ !
ಅನೇಕ ಸಂತರ ಪ್ರೀತಿಯನ್ನೂ ಅನುಭವಿಸಲು ಸಾಧ್ಯವಾಯಿತು. ಕುಂಭವು ಸನ್ಯಾಸಿ ಜನರಿಗಾಗಿ ಉತ್ಸವದ ಕಾಲವಾಗಿದ್ದರೂ, ಗೃಹಸ್ಥರಿಗಾಗಿಯೂ ಇದು ಒಂದು ಉತ್ಸವವಾಗಿದೆ. ಉತ್ಸವ ಏಕೆಂದರೆ, ಸುಖ-ದುಃಖವನ್ನು ಎದುರಿಸುತ್ತಾ ಸಂಸಾರದ ನೌಕೆಯನ್ನು ಸಾಗಿಸುವ ಸಂಸಾರಿ ಜನರಿಗೆ ಇಲ್ಲಿ ಆನಂದದ ಅನುಭವ ಪಡೆಯಲು ಸಾಧ್ಯವಾಗುತ್ತದೆ. ಯಾವ ಆನಂದವು ಪರಿಸ್ಥಿತಿಯ ಮೇಲೆ ಅವಲಂಬಿಸಿಲ್ಲವೋ, ಅನುಕೂಲತೆ ಅಥವಾ ಪ್ರತಿಕೂಲತೆಯ ಮೇಲೆ ಅವಲಂಬಿಸಿಲ್ಲವೋ, ಇಂತಹ ಈ ಆನಂದ ಅವರಿಗೆ ಕೇವಲ ಭಾರತದ ಸರ್ವಶ್ರೇಷ್ಠ ವೈಶಿಷ್ಟ್ಯವಾಗಿರುವ ಗುರು-ಶಿಷ್ಯ ಪರಂಪರೆಯಿಂದಾಗಿ ಪಡೆಯಲು ಬರುತ್ತದೆ. ದೂರದೂರದಿಂದ ಕೋಟ್ಯವಧಿ ಭಕ್ತರು ಯಾರು ಭಾರತದ ನಾಲ್ಕೂ ದಿಕ್ಕುಗಳಿಂದ ಇಲ್ಲಿ ಒಟ್ಟಾಗುತ್ತಾರೆಯೋ, ಅವರು ಕೇವಲ ಸರಕಾರದ ಭರವಸೆಯ ಮೇಲೆ ಅಲ್ಲ, ಅವರು ಆಯಾ ಪ್ರಾಂತದಲ್ಲಿನ ಆಖಾಡಾ, ರಾಜ್ಯ, ಸಂಪ್ರದಾಯ ಇವುಗಳಲ್ಲಿನ ಸಾಧೂಸಂತರ ಭರವಸೆಯ ಮೇಲೆ ! ಉದಾಹರಣೆಯನ್ನು ನೋಡಿದರೆ, ಸರಕಾರವು ೪೦ ಕ್ಕಿಂತ ಹೆಚ್ಚು ರೈನ ಬಸೆರಾ’ ಅಂದರೆ ದೊಡ್ಡ ಪೆಂಡಾಲಿನಲ್ಲಿರಲು ಅತಿ ಕಡಿಮೆ ದರದಲ್ಲಿ ಕಾಟ್’ನ ವ್ಯವಸ್ಥೆ ಮಾಡಿದೆ; ಆದರೆ ಅಲ್ಲಿ ಹೊದಿಕೆಯೇ ಇಲ್ಲ. ಸರಕಾರದಿಂದ ಇಂತಹ ನಿಷ್ಕಾಳಜಿತನ ನಡೆಯುತ್ತಿದ್ದರೂ, ಭಕ್ತರ ಕಾಳಜಿಯನ್ನು ಸಂತರು ವಹಿಸಿರುವುದನ್ನು ನಾವು ನೋಡಿದೆವು. ತವರಿಗೆ ಹೋದ ಮಗಳ ಮೇಲೆ ಯಾವ ಪ್ರೀತಿಯನ್ನು ತವರಿನವರ ಕಡೆಯವರು ಮಾಡುವರೋ, ಅದೇ ಪ್ರೇಮ ಸಾಧೂಸಂತರಿಂದ ಅವರ ಭಕ್ತಕುಟುಂಬಕ್ಕೆ ಸಿಗುತ್ತಿರುತ್ತದೆ. ರೈಲು ನಿಲ್ದಾಣದಿಂದ ಭಕ್ತರನ್ನು ತರುವುದು-ಬಿಡುವುದು, ಕುಂಭಕಾಲದಲ್ಲಿ ಭಕ್ತರಿಗೆ ಯಜ್ಞ, ವಿವಿಧ ಅನುಷ್ಠಾನ, ನಾಮಜಪ ಇವುಗಳಲ್ಲಿ ಸಹಭಾಗ ಮಾಡಿಕೊಂಡು ಅವರಿಂದ ಸಾಧನೆ ಮಾಡಿಸಿಕೊಳ್ಳುವುದು, ಅವರ ತಿನ್ನುವ, ಕುಡಿಯುವ ವಿಚಾರ ಮಾಡುವುದು, ಮುಂತಾದ ಎಲ್ಲವುಗಳಲ್ಲಿ ಹೇಗೆ ಮನೆಯಲ್ಲಿನ ಹಿರಿಯರು ಗಮನ ಕೊಡುವರೋ, ಅದೇ ರೀತಿ ಈ ಸಾಧೂಸಂತರು ಮಾಡುತ್ತಿರುತ್ತಾರೆ. ಈ ಪ್ರೀತಿಯು ನಿರಪೇಕ್ಷವಿರುತ್ತದೆ. ಅವರ ಈ ಪ್ರೀತಿಯಿಂದಾಗಿ ಮನೆಯಲ್ಲಿನ ವೃದ್ಧರಿಂದ ಹಿಡಿದು ಮಕ್ಕಳವರೆಗೆ ಎಲ್ಲರಿಗೂ ಈ ಕುಂಭಕ್ಷೇತ್ರಕ್ಕೆ ಬಂದು ತಮ್ಮ ಮನೆಯಲ್ಲಿರುವಂತೆ ಇರಲು ಬರುತ್ತದೆ ಮತ್ತು ಸೇವೆ ಸಾಧನೆ ಮಾಡಲು ಬರುತ್ತದೆ. ವೃದ್ಧರ ತೀರ್ಥದರ್ಶನದ ಅಪೇಕ್ಷೆ ಪೂರ್ಣವಾಗುತ್ತದೆ ಮತ್ತು ಈ ವಾತಾವರಣದಲ್ಲಿ ಹೊಸ ಪೀಳಿಗೆಯ ಮೇಲೆ ಧರ್ಮದ ಸಂಸ್ಕಾರವಾಗುತ್ತದೆ. ಗಂಗೆಯಲ್ಲಿ ಸ್ನಾನ ಮಾಡಿದ ನಂತರ ಪಾಪಶುದ್ಧಿಯಾದ ಮೇಲೆ ಅನೇಕ ಜನರು ಜೀವನದಲ್ಲಿ ಒಂದಲ್ಲೊಂದು ಹೊಸ ಸಂಕಲ್ಪವನ್ನು ತೆಗೆದುಕೊಳ್ಳಲು ವಿಚಾರ ಮಾಡುತ್ತಾರೆ. ಆಗ ಅದರ ಪ್ರೇರಣೆಯಿಂದಾಗಿ ಅವರಿಗೆ ಸಂತರ ಸತ್ಸಂಗ-ಪ್ರವಚನವು ಇವುಗಳಿಂದ ಸಿಗುತ್ತದೆ. ಇಂದು ಆಧುನಿಕತೆಯಿಂದಾಗಿ ಪೆಂಡಾಲದಲ್ಲಿನ ದೃಶ್ಯವೂ ಬದಲಾಗುತ್ತಿದೆ. ಭೋಜನದಿಂದ ಹಿಡಿದು ಅನೇಕ ವಿಷಯಗಳ ಗುತ್ತಿಗೆ ಕೊಡಲಾಗುತ್ತಿದೆ. ಭಕ್ತರ ವ್ಯವಸ್ಥೆಯಾಗುತ್ತಿದ್ದರೂ, ಅದರಲ್ಲಿನ ಪ್ರೋಫೆಶನಲ್ ವ್ಯವಸ್ಥೆಯಿಂದಾಗಿ ಪ್ರೀತಿಯು ಕಡಿಮೆಯಾಗಿದೆಯೆಂದು ಹೇಳಲು ಬರುವುದಿಲ್ಲ. ಪ್ರೀತಿಯು ಆರ್ದ್ರತೆ ಅಲ್ಲಿ ಇಂದಿಗೂ ಕಂಡು ಬರುತ್ತದೆ.
ಸಂತರ ಸಮಾಜ ಮತ್ತು ಪರಸ್ಪರರೊಳಗಿನ ಆತ್ಮೀಯತೆ !
ಓರ್ವ ಸಂತರ ಸಂಪರ್ಕಕ್ಕಾಗಿ ಹೋದಾಗ ಅವರು ಮಲಗಿದ್ದರು. ನಂತರ ಅವರು ದಿವ್ಯಾಂಗರಿದ್ದಾರೆ ಎಂದು ಗಮನಕ್ಕೆ ಬಂದಿತು. ಇಬ್ಬರು ಯುವಕರು ಅತ್ಯಂತ ತತ್ಪರತೆಯಿಂದ ಅವರ ಸೇವೆಯನ್ನು ಮಾಡುತ್ತಿದ್ದರು. ನಾವು ಹೋದ ಕೂಡಲೇ ಅವರು ಖರ್ಜುರವನ್ನು ಕೊಡಲು ಹೇಳಿದರು. ನಂತರ ಎರಡು ಆಖಾಡಗಳಲ್ಲಿನ ಇಬ್ಬರು ಸಾಧೂಗಳು ಅವರನ್ನು ಭೇಟಿ ಮಾಡಲು ಬಂದರು. ಅವರ ಯೋಗಕ್ಷೇಮವನ್ನು ವಿಚಾರಿಸಿ ಅವರು ಭಕ್ತರು ತಮಗಾಗಿ ತಂದ ಚವನಪ್ರಾಶದ ಬಾಟಲಿಯನ್ನು ಆ ಸಾಧೂಗಳಿಗೆ ಕೊಡಲು ಹೇಳಿದರು. ಓರ್ವ ಸಾಧೂಗಳು ಮಾತನಾಡುವಾಗ, ಸಾಧೂಸಂತರೇ ನಮ್ಮ ಸಮಾಜವಾಗಿದೆ. ಆದುದರಿಂದ ನಾವು ಪರಸ್ಪರರ ಕಾಳಜಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಕುಂಭದ ಕಾಲದಲ್ಲಿ ಆಖಾಡದಲ್ಲಿನ ಎಲ್ಲ ಸಾಧೂಗಳಿಗೆ ಭೋಜನವಿರುತ್ತದೆ. ಆಗ ಸಾಧುಗಳು ಪರಸ್ಪರರ ಆಖಾಡಾಕ್ಕೆ ಹೋಗುತ್ತಾರೆ. ಪ್ರತಿಯೊಬ್ಬರಿಗೆ ಅವರ ಸ್ಥಾನಕ್ಕನುಸಾರ ೧೦೦ ರಿಂದ ೨೦೦೦ ರೂಪಾಯಿಗಳವರೆಗೆ ದಕ್ಷಿಣೆಯನ್ನು ನೀಡಲಾಗುತ್ತದೆ. ಇದರಿಂದ ಪರಸ್ಪರರೊಂದಿಗಿನ ಋಣಾನುಬಂಧ ಶಾಶ್ವತವಾಗಿ ಇಟ್ಟುಕೊಳ್ಳಲಾಗುತ್ತದೆ.
ಬಾಹ್ಯಜಗತ್ತಿನ ಹೊಸತಾದ ಮಾಹಿತಿಯನ್ನು ಇಟ್ಟುಕೊಳ್ಳುವ ಸಾಧೂಗಳು !
ಒಂದು ಪೆಂಡಾಲದಲ್ಲಿ ಒಳಗೆ ಹೋದನಂತರ ಒಂದು ತಗಡಿನ ಕೆಳಗೆ ೪-೫ ಸಾಧೂಗಳು ಮಧ್ಯಭಾಗದಲ್ಲಿ ಬೆಂಕಿ ಹೊತ್ತಿಸಿ ಕುಳಿತ್ತಿದ್ದರು. ಅವರೆಲ್ಲರೂ ನಾಗಾ ಸಾಧೂಗಳ ಹಾಗೆ ಕಾಣಿಸುತ್ತಿದ್ದರು. ಮೊದಲಿಗೆ, ನಾವು ತಪ್ಪು ಸ್ಥಳಕ್ಕೆ ಬಂದೆವು ಎಂದೆನಿಸಿತು; ಆದರೆ ನಂತರ ಅದು ಒಂದು ಬೇರೆ ಅನುಭವವಾಗಿತ್ತೆಂದು ಗಮನಕ್ಕೆ ಬಂದಿತು. ಮೊದಲಿಗೆ ಅವರು ನಮಗೆ ಚಪ್ಪಲಿಗಳನ್ನು ಅವರ ಒಂದು ಸೀಮಾರೇಖೆಯ ಹೊರಗೆ ತೆಗೆಯಲು ಹೇಳಿದರು, ಅದರ ನಂತರ ಪ್ರೀತಿಯಿಂದ ಕೂಡಿಸಿ ಚಹಾ ತರಿಸಿದರು. ನಂತರ ಅವರು ಮಾತನಾಡಲು ಪ್ರಾರಂಭಿಸಿದಾಗ, ಅವರು ಮೊದಲಿಗೆ ಗೂಢಾಚಾರ ವಿಭಾಗದಲ್ಲಿದ್ದರೆಂದು ಗೊತ್ತಾಯಿತು. ಮುಂದೆ ನೌಕರಿ ಬಿಟ್ಟು ಅವರು ಸನ್ಯಾಸವನ್ನು ಸ್ವೀಕರಿಸಿದರು. ಅವರಿಗೆ ದೇಶದ ಇತಿಹಾಸ ಮತ್ತು ವರ್ತಮಾನ ಇವುಗಳ ಸಂಪೂರ್ಣ ಕಲ್ಪನೆ ಇತ್ತು. ಅವರನ್ನು ನೋಡಿ ಇವರು ಇಷ್ಟು ಅಪ್‌ಡೆಟೆಡ್ ಇರಬಹುದು ಎಂದು ಯಾರೂ ಅನ್ನುವಂತಿರಲಿಲ್ಲ. ಕಾಲಿನಿಂದ ವಿಕಲಾಂಗವಿದ್ದುದರಿಂದ ಎಲ್ಲಿಯೂ ಹೋಗುವುದಿಲ್ಲವೆಂದು ಅವರು ಹೇಳಿದರು. ಮಾತನಾಡುತ್ತಾ ಮಾತನಾಡುತ್ತಾ ಆಖಾಡಾದಲ್ಲಿನ ಪರಂಪರೆಯ ಬಗ್ಗೆ ಹೇಳಿದ ನಂತರ ಅವರಲ್ಲಿನ ಒಬ್ಬ ಸಾಧೂ ತನ್ನ ಚೀಲದ ಮೇಲಿನ ಹಿತ್ತಾಳೆಯ ಬಿಲ್ಲೆಯನ್ನು ತೋರಿಸಿದರು. ಬಸ್‌ನಲ್ಲಿನ ವಾಹಕನ ಗಣವೇಶದ ಮೇಲಿರುವಂತಹ ಆ ಚೀಲದ ಮೇಲೆ ಕೋತವಾಲ, ಆಖಾಡದ ಹೆಸರು ಮತ್ತು ರಾಜಮುದ್ರೆ ಇರುವ ಬಕ್ಕಲ ಇತ್ತು. ಇವು ಮತ್ತು ಇಂತಹ ಉದಾಹರಣೆಗಳಿಂದ ಆಖಾಡಾದ ಅಂತರ್ಗತ ರಚನೆಯೂ ಇರುವುದು ಗಮನಕ್ಕೆ ಬಂದಿತು.
ಸಂತ ಭಕ್ತರ ವೇಶದಲ್ಲಿ ಗುಪ್ತಚರ ?
ಇನ್ನೂ ಓರ್ವ ಸಂತರನ್ನು ಭೇಟಿಯಾಗಲು ಹೋದಾಗ ಹೊರಗೆ ಎರಡು-ಮೂರು ಭಕ್ತರು ಪತ್ರಿಕೆ ಓದುತ್ತಾ ಕುಳಿತ್ತಿದ್ದರು. ಮಹಾರಾಜರ ದಾರಿ ನೋಡುತ್ತಾ ನಾವು ಅವರೊಂದಿಗೆ ಮಾತನಾಡುತ್ತಿರುವಾಗ ಅವರಿಬ್ಬರೂ, ನಾವು ಗುಪ್ತಚರ ಶಾಖೆಯಲ್ಲಿ ಕಾರ್ಯ ಮಾಡುತ್ತಿದ್ದೆವು. ಈಗ ಗಂಗಾಸ್ನಾನಕ್ಕಾಗಿ ಬಂದಿದ್ದೇವೆ, ಎಂದು ಹೇಳಿದರು. ನಾಸಿಕ ಕುಂಭದ ಸಮಯಲ್ಲಿ ಭಿಕ್ಷುಕರು ಮತ್ತು ಸಾಧೂ ಇವರ ವೇಶದಲ್ಲಿ ಪ್ರಶಿಕ್ಷಿತ ಪೊಲೀಸರು ಕುಂಭಕ್ಷೇತ್ರದಲ್ಲಿ ತಿರುಗಾಡುತ್ತಿರುವ ಸಮಾಚಾರವಿತ್ತು. ಆದುದರಿಂದ ಈಗ ಇವರು ನಿಜವಾಗಿಯೂ ಗಂಗಾಸ್ನಾನಕ್ಕಾಗಿ ಬಂದಿದ್ದರೋ ಅಥವಾ ಅವರ ಸೇವೆಯಲ್ಲಿ ಕಾರ್ಯನಿರತರಿದ್ದರೋ ? ಇದು ಅವರಿಗೆ ಗೊತ್ತು; ಆದರೆ ಸಾಮಾನ್ಯವಾಗಿ ತಿಳಿದ ಮಾಹಿತಿಗನುಸಾರ ಪ್ರತ್ಯಕ್ಷ ಅನುಭವ ಪಡೆದುದರಿಂದ ನಮಗೆ ಆ ಬಗ್ಗೆ ಹೆಚ್ಚು ಆನಂದವಾಯಿತು.
ಸಾಧೂಗಳ ಆರ್ಥಿಕ ಲೆಕ್ಕಾಚಾರ !
ಇಂತಹ ಕೆಲವು ಒಳ್ಳೆಯ ಅನುಭವವಿದ್ದರೂ, ಕೆಲವು ಕಟು ಅನುಭವವನ್ನು ಕೇಳಿದೆವು. ಯಾವ ರೀತಿ ಅನೇಕ ಸಂತರು “ನೀವು ನಿಮ್ಮ ಯಾವುದೇ ಕಾರ್ಯಕ್ರಮಕ್ಕಾಗಿ ೧೦೦ ರಿಂದ ೧೦೦೦ ರೂಪಾಯಿಗಳವರೆಗೆ ದಕ್ಷಿಣೆಯನ್ನಿಡಿರಿ, ನೋಡಿರಿ ನಿಮ್ಮ ಕಡೆಗೆ ಹೇಗೆ ಗದ್ದಲವಾಗುತ್ತದೆಯೆಂದು ! ೧೦೦೦ ರೂಪಾಯಿಗಳಷ್ಟು ದಕ್ಷಿಣೆ ಕೊಡುವವರಿದ್ದರೆ, ಪ್ರಯಾಗದಿಂದ ಹೋದ ಸಾಧೂಗಳು ತಿರುಗಿ ಬರುವರು !” ಎಂದು ಹೇಳಿದರು. ಕೆಲವು ಕಾರ್ಯಕ್ರಮಗಳಲ್ಲಿ ಜನಸಂದಣಿ ಕಾಣಿಸಬೇಕೆಂದು ದಕ್ಷಿಣೆ ಮತ್ತು ಭೋಜನದ ಕರಾರಿನ ಮೇರೆಗೆ ಕಲ್ಪವಾಸಕ್ಕಾಗಿ ಬಂದ ಸಾಧೂಗಳು ಬರುತ್ತಿರುವರು ಎಂದು ಗೊತ್ತಾಯಿತು. ಅನೇಕ ಸಂತ-ಮಹಂತರು ಕುಂಭಕಾಲದಲ್ಲಿ ಕಲ್ಪವಾಸಿಗಳ ಇರುವ ವ್ಯವಸ್ಥೆ ಮಾಡುವ ಹೆಸರಿನಲ್ಲಿ ಬಹಳ ಹಣವನ್ನು ಗಳಿಸುತ್ತಾರೆ. ಅನೇಕರಿಂದ ಒಂದೇ ದಿನದ ಅನ್ನದಾನದ ಅರ್ಪಣೆ ಪಡೆದು ಒಂದೇ ಕಡೆಗೆ ಅನ್ನದಾನ ಮಾಡಲಾಗುತ್ತದೆ. ಪ್ರತಿಯೊಬ್ಬರಿಗೆ, ಇಂದು ನನ್ನ ವತಿಯಿಂದ ಅನ್ನದಾನವಾಗುತ್ತಿದೆ; ಎಂದೆನಿಸುತ್ತದೆ; ಆದರೆ ಸಂತಮಹಂತರಿಗೆ, ನಿರ್ದಿಷ್ಟವಾಗಿ ಎಷ್ಟು ಜನರು ಆ ದಿನಕ್ಕಾಗಿ ಅರ್ಪಣೆ ನೀಡಿದ್ದಾರೆಂದು ಗೊತ್ತಿರುತ್ತದೆ. ಕಲ್ಪವಾಸಿಗಳು ಹೋಗುವಾಗ ಬಹಳಷ್ಟು ವಿಷಯಗಳ ಅರ್ಪಣೆ ಮಾಡುತ್ತಾರೆ. ಈ ಕಡೆಗೆ ಒಂದು ದೊಡ್ಡ ಆದಾಯವೆಂದು ಅನೇಕ ಸಂತ-ಮಹಂತರ ಗಮನವಿರುತ್ತದೆ. ಹೀಗೆ ಅನೇಕ ಜನರು ಕಲ್ಪವಾಸಿಗಳ ವ್ಯವಸ್ಥೆ ಮಾಡುವಹೆಸರಿನಲ್ಲಿ ತಮ್ಮ ಸ್ವಾರ್ಥವನ್ನು ಸಾಧಿಸಿಕೊಳ್ಳುತ್ತಾರೆ.
ಧರ್ಮಕಾರ್ಯದ ಸಂದರ್ಭದಲ್ಲಿ ನಿರಾಶೆಯ ಕತ್ತಲೆಯಲ್ಲಿ ಹೋಗಿರುವ ಸಂತರು !
ರಾಷ್ಟ್ರ ಮತ್ತು ಧರ್ಮ ಇವುಗಳಿಗಾಗಿ ಕಾರ್ಯ ಮಾಡಿದ ಅನೇಕ ಸಂತರು ಭೇಟಿಯಾದರು. ಅವರ ಪೈಕಿ ಕೆಲವು ಜನರು ಈಗ ಏನು ಮಾಡುವ ಅಥವಾ ಕೇಳುವ ಸ್ಥಿತಿಯಲ್ಲಿರಲಿಲ್ಲ. ದೊಡ್ಡ ಹಿಂದುತ್ವನಿಷ್ಠ ಸಂಘಟನೆಗಳು ಅವರ ಉಪಯೋಗ ತೆಗೆದುಕೊಂಡು ಅವರಿಗೆ ಅಡಚಣೆಗಳ ಸಮಯದಲ್ಲಿ ಸಹಾಯ ಮಾಡದಿರುವುದರಿಂದ ಅಥವಾ ಅಡಚಣೆಯಲ್ಲಿ ಸಿಲುಕಿಸಿದುದರಿಂದ ಅವರ ಒಲವು ಈಗ ವ್ಯಷ್ಟಿ ಸಾಧನೆಯ ಕಡೆಗೆವಾಲಿದೆ. ಧರ್ಮ ಕಾರ್ಯ ಮಾಡದೇ ಕೊನೆಯಲ್ಲಿ ಅದರಲ್ಲಿ ರಾಜಕಾರಣ ತಂದುದರ ಬಗ್ಗೆಯೂ ಅನೇಕ ಸಾಧೂ ಸಂತರು ಬೇಸರಗೊಂಡಿದ್ದಾರೆ. ಅವರ ಈ ನಿರಾಶೆ ಪರಾಕೋಟಿಯದಾಗಿತ್ತು. ಎಲ್ಲರ “ಕಲಿಯಗವಿದೆ ಧರ್ಮಹಿತದ ಏನೂ ಸಾಧ್ಯವಾಗುವುದಿಲ್ಲ. ಏನೆಲ್ಲ ಮಾಡಬೇಕೋ, ಅದನ್ನು ದೇವರೇ ಈಗ ಮಾಡುವನು. ಯಾರ ಕಡೆಗೆ ವಾಹನ, ಹಣ ಮುಂತಾದ ವೈಭವಿದೆಯೋ ಮತ್ತು ರಾಜಕಾರಣಿಗಳೊಂದಿಗೆ ಹೊಂದಾಣಿಕೆ ಇದೆಯೋ, ಅವರಿಗೇನೆ ಇಂದು ಸಮಾಜದಲ್ಲಿ ಮಹತ್ವವಿದೆ ಎಂಬ ಮಾತಿನ ಅಭಿಪ್ರಾಯವಿತ್ತು.
ಸಾಧುಗಳ ಸಿಡಿಮಿಡಿಗೊಳ್ಳುವಿಕೆ !
ನಿರೂಪಣೆ ಮಾಡುವ ಓರ್ವ ಮಹಂತರಿಗೆ ನಾವು ಧರ್ಮಶಿಕ್ಷಣ ಫಲಕದ ಪ್ರದರ್ಶನಕ್ಕೆ ಭೇಟಿ ನೀಡಲು ಪ್ರಾರ್ಥಿಸಿದೆವು. ಅಲ್ಲಿ ಬರುವವರೆಗೆ ಅವರು ಅತ್ಯಂತ ಉತ್ತಮ ರೀತಿಯಲ್ಲಿ ಮಾತನಾಡುತ್ತಿದ್ದರು. ಅವರೊಂದಿಗೆ ಇನ್ನೋರ್ವ ಸಾಧು ಬಂದಿದ್ದರು. ಪ್ರದರ್ಶನ ನೋಡುವುದನ್ನು ಪ್ರಾರಂಭಿಸುವ ಮೊದಲೇ ಪ್ರವೇಶ ಮಾಡುವಾಗಲೇ ಆ ಸಾಧುಗಳು ಒಮ್ಮಿಂದೊಮ್ಮೆ, ಇದೇನು ತೋರಿಸಲೆಂದು ನಮ್ಮನ್ನು ಕರೆದಿದ್ದೀರಿ. ಇದನ್ನು ನೋಡಿ ನಾವೇನು ಮಾಡಬೇಕು ? ಎಂದು ಸಿಡಿಮಿಡಿಗೊಂಡು ಹೇಳತೊಡಗಿದರು. ಮಹಂತರು ಶಾಂತ ರೀತಿಯಲ್ಲಿ ಪ್ರದರ್ಶನವನ್ನು ನೋಡುತ್ತಿದ್ದರು. ಎರಡನೇ ಸಾಧೂವು ಸಿಡಿಮಿಡಿಗೊಳ್ಳುವುದನ್ನು ನೋಡಿ ಅವರ ನಿಲುವು ಸಹ ತಕ್ಷಣ ಬದಲಾಯಿತು. ಅವರು ಪ್ರತಿಯೊಂದು ಫಲಕದಲ್ಲಿ ತಪ್ಪನ್ನೇ (ಇಲ್ಲದಿದ್ದದ್ದೂ !) ತೆಗೆಯಲು ಪ್ರಾರಂಭಿಸಿದರು. ಇಬ್ಬರೂ ಗುಟಖಾ ತಿಂದಿದ್ದರು. ಅವರಲ್ಲಿನ ಸಾಧೂಗಳ ಕಣ್ಣುಗಳು ಕೆಂಪಾಗಿದ್ದವು. ಅವರು ಏನನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ದೇವರ ಕೃಪೆಯಿಂದ ಹೇಗೋ ೫ ನಿಮಿಷಗಳ ನಂತರ ಅವರು ಹೋದರು. ಇದು ಶಿಷ್ಟಾಚಾರದ ಅಭಾವವಾಗಿತ್ತೋ ಅಥವಾ ಅನಿಷ್ಟ ಶಕ್ತಿಗಳ ತೊಂದರೆಯಾಗಿತ್ತೋ, ಅದು ದೇವರಿಗೆ ಗೊತ್ತು !
ಕುಂಭದ ಪ್ರಾರಂಭದಲ್ಲಿಯೇ ಸಾಧುಗಳ ರೌದ್ರರೂಪದ ದರ್ಶನ !
ಪ್ರಯಾಗರಾಜ ಅರ್ಧಕುಂಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಫಲಕದ ಪ್ರದರ್ಶನಕ್ಕಾಗಿ ರಸ್ತೆಯ ಮೇಲಿನ ಹೋರ್ಡಿಂಗ್ ಹಚ್ಚುವ ಸೇವೆ ನಮ್ಮಲ್ಲಿತ್ತು. ಈ ಸೇವೆಗಾಗಿ ಚೌಕದಲ್ಲಿ ಯೋಗ್ಯ ಸ್ಥಳವನ್ನು ನೋಡುತ್ತಿರುವಾಗ ಓರ್ವ ಸಂತರ ಫಲಕದ ಮೇಲಿನ ಖಾಲಿ ಜಾಗದಲ್ಲಿ ಫಲಕವನ್ನು ಹಚ್ಚಲು ನಾವು ಅಭ್ಯಾಸ ಮಾಡುತ್ತಿದ್ದೆವು; ಆದರೆ ಆ ಕಂಬವು ಹಾಳಾಗಿರುವ ಕಾರಣ ನಾವು ಅಕ್ಕಪಕ್ಕದಲ್ಲಿ ಇನ್ನೊಂದು ಜಾಗ ನೋಡತೊಡಗಿದೆವು. ಅಷ್ಟರಲ್ಲಿಯೇ ಒಂದು ಆಖಾಡದಲ್ಲಿನ ಓರ್ವ ತರುಣ ಸಾಧೂ ಅಲ್ಲಿಂದ ಹೋಗುತ್ತಿದ್ದರು. ಅವರಿಗೆ, ನಾವು ಅವರ ಗುರುಗಳ ಫಲಕವನ್ನು ತೆಗೆದು ನಮ್ಮದನ್ನು ಹಚ್ಚಲು ಜಾಗ ಮಾಡಿಕೊಂಡೆವು ಎಂದೆನಿಸಿತು. ನಾವು ಅವರಿಗೆ ನಮ್ರವಾಗಿ ಆ ಫಲಕಕ್ಕೆ ಕೈಯನ್ನೂ ಹಚ್ಚಿಲ್ಲ, ಎಂದು ಹೇಳಿದರೂ ಅವರು ಕೇಳುವ ಸ್ಥಿತಿಯಲ್ಲಿರಲಿಲ್ಲ. ನಾವು ಅವರ ಸಮಾಧಾನಕ್ಕಾಗಿ ಆ ಫಲಕವನ್ನು ಮೇಲೆ ಹಚ್ಚುವ ಸಿದ್ಧತೆಯನ್ನು ತೋರಿಸಿದರೂ; ಅವರು ಅದನ್ನೂ ಕೇಳಲು ಸಿದ್ಧರಿರಲಿಲ್ಲ. ಜೋರು ಜೋರಾಗಿ ಜಗಳಾಡುತ್ತಿದ್ದರು. ಪೊಲೀಸರನ್ನು ಕರೆಯುತ್ತೇವೆ, ಎಂದು ಹೇಳತೊಡಗಿದರು. ಅದರ ನಂತರ ಅವರು ೩-೪ ಭಕ್ತರೊಂದಿಗೆ ಸೇರಿ ಬಡಿಗೆ ತಂದು ನಮ್ಮನ್ನ ಹೊಡೆಯಲು ಪ್ರಯತ್ನ ಮಾಡಿದರು. ಅಲ್ಲಿ ನಿಂತಿರುವ ಪೊಲೀಸನೂ ಸುಮ್ಮನೆ ನೋಡುತ್ತಿದ್ದನು. ಅದರ ನಂತರ ಭಕ್ತರಿಗೆ ನಮ್ಮ ಮೇಲೆ ನಿಗಾ ಇಡಲು ಹೇಳಿ ಅವರು ವಾಹನ ತೆಗೆದುಕೊಂಡು ಬಂದರು. ವಾಹನ ತಂದು ನನ್ನನ್ನು ಮತ್ತು ಓರ್ವ ಸಾಧಕನಿಗೆ ಕುತ್ತಿಗೆ ಹಿಡಿದು ದಬ್ಬಿ ವಾಹನದಲ್ಲಿ ಕೂಡಿಸಿ ಅವರು ನಮ್ಮನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗತೊಡಗಿದರು. ಪೊಲೀಸ್ ಠಾಣೆಗೆ ಹೋಗುವುದೇ, ಅವರ ಹಿಡಿತದಿಂದ ಸುರಕ್ಷಿತವಾಗಿ ಹೊರಗೆ ಬೀಳುವ ಮಾರ್ಗವಾಗಿತ್ತು. ಅಷ್ಟರಲ್ಲೇ ಅವರ ಇಬ್ಬರು ಗುರುಬಂಧೂಗಳು ಅಲ್ಲಿಗೆ ಬಂದರು. ಅವರು ವಾಹನದಲ್ಲಿ ಬಂದು ಜೋರು ಜೋರಾಗಿ ಕೂಗಾಡಲು ಪ್ರಾರಂಭಿಸಿದರು. ನಿಮ್ಮ ಸಂತರಿಗೆ ಫೋನ್ ಹಚ್ಚಿ ಕೊಡಿರಿ, ಎಂದು ಹೇಳಿದರು. ಸಂತರೊಂದಿಗೆ ಮಾತನಾಡಿದ ನಂತರ ಬೆದರಿಕೆ ಹಾಕಿ ನಮ್ಮನ್ನು ಬಿಟ್ಟರು. ಈ ಪ್ರಸಂಗ ನಡೆದಿರುವಾಗ ಓರ್ವ ಸಾಧಕನು ಇತರ ಸಾಧಕರಿಗೆ ಕಲ್ಪನೆಯನ್ನು ನೀಡಿದಾಗ ಸಂತರು ಮತ್ತು ಸಾಧಕರೂ ಘಟನಾಸ್ಥಳಕ್ಕೆ ಬಂದರು. ಅವರು ಸಹ ಅವರಿಗೆ ವಿನಂತಿಸಿಕೊಂಡರು. ಅದರ ನಂತರ ಅವರ ಹಿಡಿತದಿಂದ ಬಿಡುಗಡೆಯಾಯಿತು. ಈ ರೀತಿ ಕುಂಭ ಸೇವೆಯ ಪ್ರಾರಂಭದಲ್ಲಿಯೇ ಸಾಧುಗಳ ರೌದ್ರರೂಪದ ದರ್ಶನವಾಯಿತು. ಆ ಸಾಧುಗಳಲ್ಲಿ ಸೊಕ್ಕು ಇದ್ದರೂ, ಗುರುಗಳ ಕೃಪೆಯಿಂದ ಶಾಂತವಾಗಿ ಮತ್ತು ಹೆದರದೇ ಈ ಪ್ರಸಂಗವನ್ನು ಎದುರಿಸಲು ಸಾಧ್ಯವಾಯಿತು. ಅವರಲ್ಲಿ ಕ್ಷಮೆಯಾಚನೆ ಮಾಡಿದುದರಿಂದ ಪ್ರಸಂಗದ ತೀವ್ರತೆ ಹೆಚ್ಚಾಗಲಿಲ್ಲ. ನಂತರ, ಸನ್ಯಾಸಿಗಳು ಹೇಗೆ ಇರಲಿ; ಆದರೆ ಅವರ ಗುರುಭಕ್ತಿ ಕಲಿಯುವ ಹಾಗಿತ್ತು ಎಂದು ಅನಿಸಿತು.
ಇಂತಹ ವಿವಿಧ ಪ್ರಸಂಗಗಳಿಂದ ಗುರುದೇವರು ಬಹಳಷ್ಟು ಕಲಿಸಿದರು. ಸಂತರ ಭೇಟಿಯಲ್ಲಿ ಇವೆಲ್ಲವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದು, ಇದೇ ದೊಡ್ಡ ಗುರುಕೃಪೆಯಾಗಿದೆ. ಪ್ರತಿಯೊಂದು ಪ್ರಸಂಗದಲ್ಲಿ ಗುರುದೇವರು ನೀಡಿದ ಬೋಧನೆಯ ಬಗ್ಗೆ ಕೃತಜ್ಞತೆ ವ್ಯಕ್ತವಾಗುತ್ತಿತ್ತು. ಸಮಾಜದ ಸದ್ಯದ ಸ್ಥಿತಿಯಲ್ಲಿ ವಿವಿಧ ಗುಣಗಳಿಂದ ಯುಕ್ತ ಇಂತಹ (ಸನಾತನದ) ಅನೇಕ ಸಂತರ ನಿರ್ಮಿತಿ ಮಾಡುವ ಗುರುದೇವರ ಚರಣಗಳಲ್ಲಿ ಕೃತಜ್ಞತೆ ವ್ಯಕ್ತ ಮಾಡಿದಷ್ಟು ಕಡಿಮೆಯೇ ಇದೆ.
(ಶ್ರೀ. ಆನಂದ ಜಾಖೋಟಿಯಾ ಇವರು ರಾಜಸ್ಥಾನ ಮತ್ತು ಮಧ್ಯಪ್ರದೇಶ ಈ ರಾಜ್ಯಗಳ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಿದ್ದಾರೆ.)