ಅಹಂನ ಲಕ್ಷಣಗಳು

೧. ಅಪೇಕ್ಷೆ ಮಾಡುವುದು

ಅ. ‘ನನ್ನಿಂದ ಒಂದೂ ತಪ್ಪಾಗಬಾರದು ಎಂಬುದು ಅತಿಯಾದ ಅಪೇಕ್ಷೆಯಾಯಿತು : ಕೇವಲ ಈಶ್ವರನೇ ಪರಿಪೂರ್ಣನಾಗಿದ್ದಾನೆ; ಮನುಷ್ಯರಲ್ಲ. ಆದ್ದರಿಂದ ಮನುಷ್ಯರಿಂದ ತಪ್ಪುಗಳಾಗುವುದು ಸ್ವಾಭಾವಿಕವಾಗಿದೆ. ಕೆಲವರು ‘ನನ್ನಿಂದ ಒಂದೂ ತಪ್ಪಾಗಬಾರದು ಎಂಬ ಅತಿಯಾದ ಅಪೇಕ್ಷೆಯಿನ್ನಿಟ್ಟುಕೊಳ್ಳುತ್ತಾರೆ ಮತ್ತು ತಪ್ಪುಗಳಾದರೆ ನಿರಾಶರಾಗುತ್ತಾರೆ.

ಆ. ನನಗೆ ಎಲ್ಲವೂ ಸಾಧ್ಯವಾಗಬೇಕು ಅಥವಾ ಎಲ್ಲವೂ ಗೊತ್ತಿರಬೇಕು ಎಂಬ ಅಪೇಕ್ಷೆ ಇರುವುದು

ಇ. ನನಗೆ ಮಹತ್ವ ಸಿಗಬೇಕು ಎಂದೆನಿಸುವುದು

ಈ. ನನಗೆ ಗೌರವ ಸಿಗಬೇಕು ಎಂದು ಅನಿಸುವುದು

ಉ. ಎಲ್ಲವೂ ನನ್ನ ಇಚ್ಛೆಯಂತೆ ಆಗಬೇಕು ಎಂದು ಅನಿಸುವುದು

ಊ. ಇತರರು ಯಾವುದಾದರೊಂದು ಕೃತಿಯನ್ನು ಮಾಡಲೇ ಬೇಕು ಎಂದೆನಿಸುವುದು ಅಥವಾ ಇತರರು ನಾನು ಹೇಳಿದ್ದನ್ನು ಕೇಳಬೇಕು ಎಂದು ಅನಿಸುವುದು

ಅಪೇಕ್ಷೆಯಿಂದಾಗುವ ದುಷ್ಪರಿಣಾಮಗಳು

೧. ನಕಾರಾತ್ಮಕ ವಿಚಾರಗಳು ಹೆಚ್ಚಾಗುವುದು : ಅಪೇಕ್ಷೆಗಳು ಪೂರ್ಣವಾಗದಿದ್ದರೆ ನಮ್ಮ ಮನಸ್ಸಿನಲ್ಲಿನ ನಕಾರಾತ್ಮಕ ವಿಚಾರಗಳು ಹೆಚ್ಚಾಗಿ ನಾವು ಆ ವಿಚಾರಗಳಲ್ಲಿಯೇ ಸಿಕ್ಕಿಕೊಳ್ಳುತ್ತೇವೆ.

೨. ಮನಸ್ಸಿನ ಅಸ್ವಸ್ಥತೆ ಹೆಚ್ಚಾಗುವುದು ಅಥವಾ ಮನಸ್ಸಿನ ಮೇಲೆ ಒತ್ತಡ ಬರುವುದು : ನಮ್ಮಿಂದ ಅಪೇಕ್ಷೆಗಳು ಹೆಚ್ಚಾದ ನಂತರ ಒಂದು ವೇಳೆ ನಮ್ಮಿಂದ ಅದರಂತೆ ಪ್ರಯತ್ನಗಳಾಗದಿದ್ದರೆ ನಮ್ಮ ಮನಸ್ಸು ಅಸ್ವಸ್ಥವಾಗುತ್ತದೆ ಅಥವಾ ಮನಸ್ಸಿನ ಮೇಲೆ ಒತ್ತಡ ಬರುತ್ತದೆ.

೨. ಕರ್ತೃತ್ವವನ್ನಿಟ್ಟುಕೊಳ್ಳುವುದು

೧. ‘ನಾನೇ ಎಲ್ಲವನ್ನು ಮಾಡುತ್ತೇನೆ’ ಅಥವಾ ‘ನನ್ನಿಂದಲೇ ಎಲ್ಲವೂ ಆಗುತ್ತದೆ’ ಎಂದು ಅನಿಸುವುದು ಕರ್ತೃತ್ವದ ಲಕ್ಷಣವಾಗಿದೆ.

೨. ‘ಎಲ್ಲವನ್ನೂ ನನಗೇ ಮಾಡಬೇಕಾಗುತ್ತದೆ ಅಥವಾ ಸಂಭಾಳಿಸಿಕೊಳ್ಳಬೇಕಾಗುತ್ತದೆ’ ಎಂಬ ವಿಚಾರವೂ ಕರ್ತೃತ್ವದ್ದಾಗಿದೆ.

ಕರ್ತೃತ್ವವನ್ನಿಟ್ಟುಕೊಳ್ಳುವುದರ ದುಷ್ಪರಿಣಾಮ

೧. ದುಃಖಿ ಮತ್ತು ನಿರಾಶರಾಗುವುದು ಮತ್ತು ಇತರರಿಗೆ ದೋಷವನ್ನು ಕೊಡುವುದು : ನಮ್ಮಲ್ಲಿ ಕರ್ತೃತ್ವದ ಅರಿವು ತೀವ್ರವಾಗಿದ್ದರೆ ನಾವು ಬೇಗನೇ ದುಃಖಿಯಾಗುತ್ತೇವೆ. ನಮಗೆ ಬೇಗನೇ ನಿರಾಶೆ ಬರುತ್ತದೆ ಮತ್ತು ನಾವು ದೋಷಗಳನ್ನು ಇತರರ ಮೇಲೆ ಹಾಕುತ್ತೇವೆ.

೨.  ಸಮಸ್ಯೆಯ ಮೇಲೆ ಯೋಗ್ಯ ಪರಿಹಾರೋಪಾಯವನ್ನು ಹುಡುಕುವುದಕ್ಕೆ ಮಿತಿ ಬರುತ್ತದೆ : ಕರ್ತೃತ್ವವನ್ನಿಟ್ಟುಕೊಳ್ಳುವುದು ಎಂಬ ಅಹಂನ ಲಕ್ಷಣದಿಂದಾಗಿ ಇತರರನ್ನು ವಿಚಾರಿಸಿ ಮಾಡುವ ಮತ್ತು ಇತರರಿಂದ ಕಲಿಯುವ ಭಾಗ ಆಗುವುದಿಲ್ಲ. ಇದರಿಂದ ಕೆಲವೊಮ್ಮೆ ಸಮಸ್ಯೆಗೆ ಯೋಗ್ಯ ಉಪಾಯವನ್ನು ಹುಡುಕಲು ಮಿತಿಬರುತ್ತದೆ.

೩. ಪ್ರತಿಷ್ಠೆಯನ್ನು ಕಾಪಾಡುವುದು

೧. ಸ್ವಪ್ರಶಂಸೆಯ ವಿಚಾರವು ಅಹಂನ ಲಕ್ಷಣವಾಗಿದ್ದು ಪ್ರತಿಷ್ಠೆಯನ್ನು ಕಾಪಾಡಿಕೊಳ್ಳುವ ಅಹಂಗೆ ಸಂಬಂಧಿಸಿದೆ.

೨. ಇತರರಿಂದಾಗಿ ನನ್ನಿಂದ ತಪ್ಪಾಯಿತು ಎಂದು ಅನಿಸುವುದೆಂದರೆ ತಮ್ಮನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುವುದು.

೩. ನಾಲ್ಕಾರು ಜನರ ಎದುರು ಯಾರೂ ತನಗೆ ಅಯೋಗ್ಯ ಮಾತನಾಡಬಾರದು ಅಥವಾ ದೋಷಗಳನ್ನು ತೋರಿಸಬಾರದು ಎಂದೆನಿಸುವುದು

೪. ನಮಗೆ ತಿಳಿಯದಿದ್ದರೂ ‘ತಿಳಿಯಿತು ಎಂದು ಹೇಳುವುದರ ಹಿಂದೆ ನಮ್ಮಲ್ಲಿ ‘ಪ್ರತಿಷ್ಠೆಯನ್ನು ಕಾಪಾಡಿಕೊಳ್ಳುವುದು ಎಂಬ ಅಹಂನ ಲಕ್ಷಣವು ಕಾರ್ಯನಿರತವಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು.

ಪ್ರತಿಷ್ಠೆಯನ್ನು ಕಾಪಾಡುವುದರ ದುಷ್ಪರಿಣಾಮ

೧. ನಾವು ಇತರರ ಮುಂದೆ ನಮ್ಮ ಒಂದು ಪ್ರತಿಷ್ಠೆಯನ್ನು ನಿರ್ಮಾಣ ಮಾಡಿಟ್ಟಿರುತ್ತೇವೆ. ಯಾವಾಗ ನಮಗೆ ಆ ಪ್ರತಿಷ್ಠೆಯನ್ನು ಕಾಪಾಡಲು ಸಾಧ್ಯವಾಗುವುದಿಲ್ಲವೋ, ಆಗ ನಮಗೆ ಬೇಸರವಾಗುತ್ತದೆ ಅಥವಾ ನಿರಾಶೆ ಬರುತ್ತದೆ.

೨. ನಮ್ಮ ಮನಸ್ಸಿನಲ್ಲಿ ಪ್ರತಿಷ್ಠೆಯ ವಿಚಾರಗಳು ತೀವ್ರವಾಗಿದ್ದರೆ, ನಮ್ಮ ಮನಸ್ಸಿನ ಮೇಲೆ ತಪ್ಪುಗಳ ಬಗ್ಗೆ ತುಂಬಾ ಒತ್ತಡವಿರುತ್ತದೆ.

೪. ನನಗೆ ಹೆಚ್ಚು ತಿಳಿಯುತ್ತದೆ ಎಂದು ಅನಿಸುವುದು

‘ನನಗೆ ಎಲ್ಲವೂ ಗೊತ್ತಿದೆ ಅಥವಾ ತಿಳಿಯುತ್ತದೆ ಎಂಬ ಅಹಂನ ಲಕ್ಷಣ ತೀವ್ರವಾಗಿರುವ ಇಬ್ಬರು ವ್ಯಕ್ತಿಗಳು ಒಟ್ಟಿಗೆ ಬಂದರೆ ಆ ಇಬ್ಬರೂ ವ್ಯಕ್ತಿಗಳು ತಮ್ಮ ತಮ್ಮ ಅಭಿಪ್ರಾಯಕ್ಕೆ ಬದ್ಧರಾಗಿರುತ್ತಾರೆ. ‘ನನಗೆ ಎಲ್ಲವೂ ಗೊತ್ತಿದೆ ಅಥವಾ ತಿಳಿಯುತ್ತದೆ ಎಂಬ ವಿಚಾರದ ಹಿಂದೆ ಅವರಿಗೆ ‘ನನಗೆ ಇತರರಿಗಿಂತ ಹೆಚ್ಚು ಅನುಭವವಿದೆ, ನನ್ನ ಅಧ್ಯಯನ ಇತರರಿಗಿಂತ ಹೆಚ್ಚಿದೆ, ನಾನು ಎಲ್ಲರ ಹಿತದ ವಿಚಾರ ಮಾಡುತ್ತೇನೆ ಇತ್ಯಾದಿ ಅನಿಸುತ್ತಿರುತ್ತದೆ.

ದುಷ್ಪರಿಣಾಮಗಳು

೧. ‘ನನಗೆ ಹೆಚ್ಚು ಗೊತ್ತಿದೆ ಎಂಬ ಅಹಂನ ಲಕ್ಷಣದಿಂದಾಗಿ ನಾವು ‘ನನ್ನಿಂದ ತಪ್ಪು ಗಳಾಗುವುದಿಲ್ಲ’ ಎಂಬ ಭ್ರಮೆಯಲ್ಲಿ ಇರುತ್ತೇವೆ.

೨. ‘ನನಗೆ ಇತರರಿಗಿಂತ ಹೆಚ್ಚು ಗೊತ್ತಿದೆ ಎಂದು ನಮಗೆ ಅನಿಸುತ್ತಿದ್ದರೆ ‘ಹೀಗೆಯೇ ಆಗಬೇಕು ಎಂದು ನಮಗೆ ಅನಿಸುತ್ತದೆ. ಅದೊಂದು ರೀತಿಯ ಆಗ್ರಹದ ಭೂಮಿಕೆಯೇ ಆಗಿರುತ್ತದೆ.

೫. ತಮ್ಮ ಅಭಿಪ್ರಾಯಕ್ಕೆ ಬದ್ಧವಾಗಿರುವುದು

ನನಗೆ ಏನು ತಿಳಿಯುತ್ತದೆಯೋ ಅದೇ ಯೋಗ್ಯವಾಗಿದೆ ಎಂದು ನಮಗೆ ಅನಿಸುವುದರಿಂದ ನಾವು ನಮ್ಮ ಅಭಿಪ್ರಾಯಕ್ಕೆ ಬದ್ಧವಾಗಿರುತ್ತೇವೆ. ಇದರ ಹಿಂದೆ ‘ನನಗೆ ಹೆಚ್ಚು ಅನುಭವವಿದೆ, ಹೆಚ್ಚು ಅಧ್ಯಯನವಿದೆ, ನಾನು ಎಲ್ಲರ ಹಿತದ ವಿಚಾರ ಮಾಡುತ್ತೇನೆ’ ಎಂದು ನಮಗೆ ಅನಿಸುತ್ತಿರುತ್ತದೆ.

ದುಷ್ಪರಿಣಾಮ

ನಾವು ನಮ್ಮ ಅಭಿಪ್ರಾಯಕ್ಕೆ ಬದ್ಧರಾಗಿದ್ದರೆ, ನಮ್ಮಿಂದ ಕಲಿಯುವ ಭಾಗ ಆಗುವುದಿಲ್ಲ ಮತ್ತು ನಾವು ಇತರರು ಹೇಳಿದ ಅಂಶಗಳನ್ನು ಸ್ವೀಕರಿಸುವುದಿಲ್ಲ. ನಾವು ಇತರರು ಹೇಳಿದ ಅಂಶಗಳನ್ನು ಸ್ವಿಕರಿಸದಿದ್ದರೆ ಮುಂದೆ ಮುಂದೆ ನಮಗೆ ಯಾರೂ ಏನೂ ಹೇಳುವುದಿಲ್ಲ.

೬. ತಮ್ಮ ಮನಸ್ಸಿನಂತೆ ಮಾಡುವುದು

ನಾವು ನಮಗೇನು ಮಾಡಬೇಕೆನಿಸುತ್ತದೆಯೋ, ಅದನ್ನೇ ಮಾಡುತ್ತಿದ್ದರೆ ‘ನಮ್ಮಲ್ಲಿ ಕಲಿಯುವ ವೃತ್ತಿ ಕಡಿಮೆ ಮತ್ತು ತಮ್ಮ ಮನಸ್ಸಿನಂತೆ ಮಾಡುವ ಭಾಗ ಹೆಚ್ಚಿದೆ’ ಎಂದು ತಿಳಿದುಕೊಳ್ಳಬೇಕು.

೭. ಸ್ವಾರ್ಥ

ನಮ್ಮಲ್ಲಿರುವ ಸ್ವಾರ್ಥದಿಂದಾಗಿ ನಾವು ನಮ್ಮನ್ನು ಸಂಭಾಳಿಸಿಕೊಳ್ಳುತ್ತಿರುತ್ತೇವೆ. ಇದರಿಂದಾಗಿ ನಮ್ಮಿಂದಾದ ತಪ್ಪುಗಳಿಗೆ ನಾವು ಪ್ರಾಯಶ್ಚಿತ್ತವನ್ನು ತೆಗೆದು ಕೊಳ್ಳುವುದಿಲ್ಲ ಅಥವಾ ಪ್ರಾಯಶ್ಚಿತ್ತ ತೆಗೆದುಕೊಳ್ಳದಿರಲು ಕಾರಣಗಳನ್ನು ಹುಡುಕುತ್ತೇವೆ.

೮. ತಮ್ಮನ್ನು ಶ್ರೇಷ್ಠವೆಂದು ತಿಳಿದುಕೊಳ್ಳುವುದು 

ನಾವು ನಮ್ಮನ್ನು ಇತರರೊಂದಿಗೆ ತುಲನೆ ಮಾಡುವಾಗ ನಮ್ಮನ್ನು ಶ್ರೇಷ್ಠವೆಂದು ತಿಳಿದುಕೊಳ್ಳುತ್ತೇವೆಯೇ ಎಂದು ನೋಡಬೇಕು.

ಅಹಂನ ಇತರ ಕೆಲವು ಲಕ್ಷಣಗಳೆಂದರೆ ‘ಇತರರೊಂದಿಗೆ ತುಲನೆ ಮಾಡುವುದು’, ‘ಇತರರಿಗೆ ಕಲಿಸುವ ಭೂಮಿಕೆಯಲ್ಲಿರುವುದು’, ‘ನಮ್ಮ ವಿಚಾರಗಳನ್ನು ಇತರರ ಮೇಲೆ ಹೊರಿಸುವುದು’, ಇತ್ಯಾದಿ. ಇವುಗಳ ಮತ್ತು ಇನ್ನಷ್ಟು ಲಕ್ಷಣಗಳ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ಕೆಳಗೆ ಉಲ್ಲೇಖಿಸಿದ ಗ್ರಂಥದಿಂದ ಪಡೆಯಬಹುದು.

(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ಸ್ವಭಾವದೋಷ ಮತ್ತು ಅಹಂ ಇವುಗಳ ವಿವಿಧ ಲಕ್ಷಣಗಳ ವಿಶ್ಲೇಷಣೆ’ ಗ್ರಂಥ)

Leave a Comment