ಕುಂಭದರ್ಶನ : ಅನ್ನಪೂರ್ಣಮಾತೆಯ ವರದಹಸ್ತ ಲಭಿಸಿರುವ ಅನ್ನಛತ್ರಗಳ ಜಾತ್ರೆ !

ಹಿಂದೂ ಧರ್ಮದ ವೈವಿಧ್ಯತೆ, ವಿಶಾಲತೆ, ಸರ್ಮಸಮಾವೇಶಕ, ಐಕ್ಯತೆ ಮತ್ತು ಅಖಂಡತ್ವ ಇವುಗಳ ಸರ್ವಸುಂದರ ದರ್ಶನವಾಗಿರುವ ಜಗತ್ತಿನ ಏಕೈಕ ‘ಕುಂಭಮೇಳ’ದ ನಿಮಿತ್ತ ‘ಕುಂಭದರ್ಶನ’ ಈ ವಿಶೇಷ ಲೇಖನಮಾಲೆ !

ಈ ಲೇಖನಮಾಲೆಯ ಮಾಧ್ಯಮದಿಂದ ನಮ್ಮ ವಾಚಕರಿಗೆ ಪ್ರಯಾಗರಾಜದ ಸ್ಥಾನದರ್ಶನ, ಕುಂಭಮೇಳದಲ್ಲಿ ವಿವಿಧ ಸಮುದಾಯಗಳು, ಅವುಗಳ ಪೇಶವೆಯವರ ಮೆರವಣಿಗೆ (ಶೋಭಾಯಾತ್ರೆ), ಸಂತ-ಮಹಂತರ ದರ್ಶನ, ತ್ರಿವೇಣಿ ಸಂಗಮದಲ್ಲಿ ಭಕ್ತಿಭಾವದಿಂದ ಸ್ನಾನ ಮಾಡಲು ಬಂದ ಹಿಂದೂಗಳ ಮುಖದ ಮೇಲಿನ ಉತ್ಕಟ ಭಾವ, ಹಿಂದೂ ಧರ್ಮದ ಖ್ಯಾತಿಯನ್ನು ಕೇಳಿ ಸಪ್ತಸಮುದ್ರಗಳಾಚೆಯಿಂದ ಬರುವ ವಿದೇಶಿ ಜನರ ಸಹಭಾಗ ಮುಂತಾದ ಛಾಯಾಚಿತ್ರ ಮತ್ತು ವೈಶಿಷ್ಟ್ಯಪೂರ್ಣ ಮಾಹಿತಿ ನೀಡುವ ನಮ್ಮ ಪ್ರಯತ್ನವಾಗಿದೆ. ಇದರಿಂದ ವಾಚಕರಿಗೆ ಹಿಂದೂ ಧರ್ಮದ ಅಸಾಧಾರಣ ಮಹತ್ವ ಮತ್ತು ಸಾಧನೆ ಮಾಡುವುದು ಏಕೆ ಆವಶ್ಯಕವಿದೆ, ಎಂದು ತಿಳಿಯುವುದು. ಈ ಲೇಖನಮಾಲೆಯಿಂದ ನಮಗೆ ಮನೆಯಲ್ಲಿ ಕುಳಿತೇ ಭಕ್ತಿಭಾವದ ಸ್ವಲ್ಪವಾದರೂ ಅನುಭವ ಬರುವುದು. ಹಾಗಾಗಿ ಈ ಕುಂಭಮೇಳದ ಪವಿತ್ರ ಕಾಲದಲ್ಲಿ ಹಿಂದೂಗಳು ಸಾಧನೆಯನ್ನು ಮಾಡುವ ಸಂಕಲ್ಪ ಮಾಡಬೇಕು; ಏಕೆಂದರೆ ಮುಂಬರುವ ಆಪತ್ಕಾಲದಲ್ಲಿ ಈ ಸಾಧನೆಯೇ ನಮ್ಮನ್ನು ಪಾರುಮಾಡಲಿದೆ, ಎಂಬುದು ಖಚಿತ !

ಅನ್ನಪೂರ್ಣಮಾತೆಯ ವರದಹಸ್ತ ಲಭಿಸಿರುವ ಅನ್ನಛತ್ರಗಳ ಜಾತ್ರೆ !


ಕುಂಭಮೇಳದಲ್ಲಿ ಅನ್ನಛತ್ರದಲ್ಲಿ ಆಹಾರವನ್ನು ಸೇವಿಸುತ್ತಿರುವ ಸಾಧು-ಸಂತರು

ಶ್ರೀ. ಆನಂದ ಜಾಖೋಟಿಯಾ, ಕುಂಭಮೇಳ ವಿಶೇಷ ಪ್ರತಿನಿಧಿ, ಸನಾತನ ಪ್ರಭಾತ

೧. ಕುಂಭಕ್ಷೇತ್ರದಲ್ಲಿ ೧೦ ಸಾವಿರಕ್ಕಿಂತ ಅಧಿಕ ಚಿಕ್ಕದೊಡ್ಡ ಅನ್ನಛತ್ರಗಳು ಅವ್ಯಾಹತವಾಗಿ ಕಾರ್ಯನಿರತವಾಗಿವೆ !

ಜನವರಿ ೧೫ ಮಕರಸಂಕ್ರಾಂತಿಗೆ ಕುಂಭಮೇಳದ ಪ್ರಥಮ ರಾಜಯೋಗಿ ಸ್ನಾನವಾಯಿತು. ಸ್ನಾನಕ್ಕಾಗಿ ಪ್ರಯಾಗರಾಜ ಗಂಗಾತೀರವು ಭಕ್ತಜನ ಜಂಗುಳಿಯಿಂದ ತುಂಬಿ ತುಳುಕುತ್ತಿತ್ತು. ಸ್ನಾನಕ್ಕಾಗಿ ಮಧ್ಯಾಹ್ನದಿಂದಲೇ ತಲೆಯ ಮೇಲೆ ತಮ್ಮ ತಮ್ಮ ಸಾಮಾನುಗಳನ್ನು ಹೊತ್ತು ಗ್ರಾಮೀಣ ಪ್ರದೇಶದಿಂದಲೂ ಭಕ್ತರು ಗುಂಪು ಗುಂಪಾಗಿ ಡೇರೆಗಳು ದಾಖಲಾಗತೊಡಗಿದವು. ಇಷ್ಟು ದೊಡ್ಡ ಜನಸಮುದಾಯಕ್ಕೆ ಕುಂಭಕ್ಷೇತ್ರಕ್ಕೆ ಬರುವಾಗ ಅನ್ನ-ನೀರಿನ ಚಿಂತೆ ಮಾಡಬೇಕಾಗುವುದಿಲ್ಲ; ಏಕೆಂದರೆ ಇಲ್ಲಿ ವಿವಿಧ ಸಾಧು-ಸಂತರಿಂದ ಅವ್ಯಾಹತವಾಗಿ ಮತ್ತು ನಿಃಸ್ವಾರ್ಥವಾಗಿ ನಡೆಯುವ ಅನ್ನಛತ್ರಗಳು.  ಸರಿಸುಮಾರು ೧೦ ಸಾವಿರಕ್ಕೂ ಹೆಚ್ಚು ಚಿಕ್ಕ-ದೊಡ್ಡ ಅನ್ನಛತ್ರಗಳು ಇಲ್ಲಿ ಪ್ರಾರಂಭವಾಗಿವೆ. ಬೆಳಗ್ಗೆಯಿಂದ ಚಹಾ, ತಿಂಡಿ, ಮಧ್ಯಾಹ್ನದ ಊಟ, ಸಾಯಂಕಾಲ ಮಿಠಾಯಿ ಮತ್ತು ಹಾಲು ಹಾಗೂ ರಾತ್ರಿ ಪುನಃ ಊಟಗಳಂತಹ ಆಹಾರಪದಾರ್ಥಗಳ ವಿತರಣೆ ಅಲ್ಪಸ್ವಲ್ಪ ವ್ಯತ್ಯಾಸಗಳೊಂದಿಗೆ ಪ್ರತಿಯೊಂದು ಅನ್ನ ಛತ್ರಗಳ ಹೊರಗೆ ಅವ್ಯಾಹತವಾಗಿ ನಡೆದಿರುತ್ತದೆ. ಈ ಅನ್ನಛತ್ರಗಳನ್ನು ನೋಡುವಾಗ, ಸಾಕ್ಷಾತ್ ಅನ್ನಪೂರ್ಣಾ ಮಾತೆಯೇ ಎಲ್ಲ ಭಕ್ತರ ಕಾಳಜಿಯನ್ನು ತೆಗೆದುಕೊಳ್ಳುತ್ತಿರುವಂತೆ ಅನಿಸುತ್ತದೆ. ಈ ಕಾರಣದಿಂದಲೇ ಕೋಟಿಗಟ್ಟಲೆ ನಾಗರಿಕರು ಬರುತ್ತಿದ್ದರೂ ಕುಂಭಕ್ಷೇತ್ರದಲ್ಲಿ ಚಹಾ ಸ್ಟಾಲ್‌ಗಳನ್ನು ಬಿಟ್ಟರೆ, ಹೊಟೇಲ್ ಮತ್ತು ರೆಸ್ಟೊರೆಂಟ್‌ಗಳ ಸಂಖ್ಯೆ ಕೈಬೆರಳೆಣಿಕೆಯಷ್ಟಿವೆ. ನಿಜಹೇಳಬೇಕೆಂದರೆ ಪ್ರತಿಯೊಬ್ಬರೂ ಒಲೆಯನ್ನು ಹೊತ್ತಿಸಬೇಕೆಂದರೆ, ಇಷ್ಟು ದೊಡ್ಡ ವ್ಯವಸ್ಥೆಯನ್ನು ಪೂರೈಸುವುದು ಕಠಿಣವಾಗುತ್ತಿತ್ತು; ಆದರೆ ಅನ್ನಛತ್ರಗಳು ಇದನ್ನು ಸುಲಭಗೊಳಿಸಿವೆ.

೨. ಕುಂಭಕ್ಷೇತ್ರದಲ್ಲಿರುವ ‘ಭಾವಮಯ ಅನ್ನಛತ್ರಗಳೆಂದರೆ ಸೇವಾಭಕ್ತಿಗಳ ಭಂಡಾರ !

ಈ ಅನ್ನಛತ್ರಗಳು ಕೇವಲ ಭಕ್ತರಿಗಷ್ಟೇ ಅಲ್ಲ, ಅಕ್ಕಪಕ್ಕದ ಬಡಬಗ್ಗರು, ಚಿಕ್ಕಪುಟ್ಟ ವ್ಯಾಪಾರಸ್ತರು, ಕರ್ತವ್ಯದ ಮೇಲಿರುವ ಪೊಲೀಸರು ಮತ್ತು ಸೈನಿಕರು ಇವರೆಲ್ಲರ ಉದರ ನಿರ್ವಹಣೆಯ ವ್ಯವಸ್ಥೆಯನ್ನು ಮಾಡುತ್ತವೆ. ಅನೇಕ ಸ್ಥಳಗಳಲ್ಲಿ ಆಯಾ ಸಂತರೊಂದಿಗೆ ಸಂಬಂಧಿಸಿದ ಭಕ್ತ ಮಂಡಳಿಯೇ ತರಕಾರಿ ಕತ್ತರಿಸುವುದು, ಅಡುಗೆ ಸಿದ್ಧಪಡಿಸುವುದು, ಭಕ್ತರಿಗೆ ಊಟಕ್ಕೆ ಬಡಿಸುವುದು ಮತ್ತು ಪಾತ್ರೆ ತೊಳೆಯುವುದು ಈ ಸೇವೆಗಳನ್ನು ಆನಂದದಿಂದ ಮಾಡುತ್ತಾರೆ. ಭಕ್ತಿ ಮತ್ತು ಶ್ರದ್ಧೆಯಿಂದ ಹಾಗೂ ಸಂಘಟಿತಭಾವದಿಂದ ನಡೆಯುವ ಈ ಸೇವೆಯಿಂದ ಇಲ್ಲಿ ಯಾವುದೇ ‘ಇವೆಂಟ್ ಮ್ಯಾನೇಜರ್’ (ಕಾರ್ಯಕ್ರಮ ವ್ಯವಸ್ಥಾಪಕ) ಬೇಕಾಗುವುದಿಲ್ಲ. ಈ ಸಂತರ್ಪಣೆಯ ರೂಪದಲ್ಲಿ ಎಲ್ಲರೂ ಎಲ್ಲ ಸೇವೆಯನ್ನು ಮಾಡುತ್ತಾರೆ. ಚಿಕ್ಕ-ದೊಡ್ಡ, ಬಡವ-ಶ್ರೀಮಂತ ಈ ಭೇದವನ್ನು ಎಲ್ಲರೂ ಮರೆಯುತ್ತಾರೆ. ನಾವು ಗುರುಗಳ ಶಿಷ್ಯರಾಗಿದ್ದೇವೆ, ಇದೊಂದೇ ಸೇವಾಭಾವ ಪ್ರತಿಯೊಬ್ಬರ ಮನಸ್ಸಿನಲ್ಲಿರುತ್ತದೆ. ಎಲ್ಲರೂ ಒಬ್ಬರಿಗೊಬ್ಬರು ಮಂಡಿಗೆ ಮಂಡಿ ಅಂಟಿಕೊಂಡು ಊಟದ ಪಂಕ್ತಿಯಲ್ಲಿ ಕುಳಿತುಕೊಳ್ಳುತ್ತಾರೆ. ಒಂದು ರೀತಿಯಲ್ಲಿ ಎಲ್ಲ ಭೇದಭಾವವನ್ನು ಮರೆತು ಪ್ರತಿಯೊಬ್ಬರಲ್ಲಿ ಪರಮೇಶ್ವರನನ್ನು ನೋಡಲು ಈ ಅನ್ನಛತ್ರಗಳು ಕಲಿಸುತ್ತವೆ. ಊಟವನ್ನು ಬಡಿಸುವಾಗಲೂ ಉಪ್ಪಿಗೆ ‘ರಾಮರಸ’, ತೊವ್ವೆಗೆ ‘ದಾಲರಾಮ’, ಅನ್ನಕ್ಕೆ ‘ಚಾವಲರಾಮ’ ಎಂದು ಸಂಬೋಧಿಸಿ ಪ್ರತಿಯೊಬ್ಬನೂ ‘ಇದು ಅನ್ನಪೂರ್ಣೆಯ ಪ್ರಸಾದವಾಗಿದೆ’ ಎನ್ನುವ ಭಾವವನ್ನು ನಿರಂತರವಾಗಿ ಇರುವಂತೆ ಪ್ರಯತ್ನಿಸುತ್ತಾರೆ.

೩. ಎಲ್ಲಿ ಮತಾಂತರದ ರಾಕ್ಷಸಿ ಆಕಾಂಕ್ಷೆಯುಳ್ಳ ಮಿಷನರಿ ಸೇವಾಕಾರ್ಯಗಳು ಮತ್ತು ಎಲ್ಲಿ ನಿಜವಾದ ಮಾನವೀಯತೆ ಮತ್ತು ದಾನಶೂರತೆಯನ್ನು ಕಲಿಸುವ ಕುಂಭಮೇಳದ ಅನ್ನಛತ್ರಗಳು !

ಒಳ್ಳೆಯ ಕರ್ಮವನ್ನು ಮಾಡಿದಲ್ಲಿ ಪುಣ್ಯ ಸಿಗುತ್ತದೆ ಮತ್ತು ಕೆಟ್ಟ ಕರ್ಮವನ್ನು ಮಾಡಿದರೆ ಪಾಪ ತಟ್ಟುತ್ತದೆ ಎಂದು ಕರ್ಮಯೋಗವು ಹೇಳುತ್ತದೆ. ಧರ್ಮದ ಈ ಶಿಕ್ಷಣದಿಂದ ಕಲಿಯುಗದಲ್ಲಿಯೂ ಮನುಷ್ಯನು ಪುಣ್ಯಪ್ರಾಪ್ತಿಗಾಗಿಯಾದರೂ ಅನ್ನಛತ್ರಗಳ ರೂಪದಲ್ಲಿ ದಾನಧರ್ಮಗಳನ್ನು ಮಾಡುತ್ತಿದ್ದಾರೆ. ‘ಧರ್ಮವು ಅಮಲಿನ ಗುಳಿಗೆಯಾಗಿದೆ’ ಎಂದು ಹೇಳುವವರು ಧರ್ಮದ ಪ್ರೇರಣೆಯಿಂದ ನಡೆಯುವ ಇಷ್ಟು ದೊಡ್ಡ ಸೇವಾಕಾರ್ಯದ ಕುರಿತು ಏನು ಹೇಳುತ್ತಾರೆ? ‘ಕುಂಭಮೇಳಕ್ಕಾಗಿ ಸರಕಾರಿ ನಿಧಿಯ ಅಪವ್ಯಯವೇಕೆ? ಅದನ್ನು ಬಡವರಿಗೆ ಹಂಚಿರಿ’ ಎಂದು ಅಸಂಬದ್ಧ ಪ್ರಶ್ನೆಗಳನ್ನು ಕೇಳುವ ಪ್ರಗತಿಪರರಿಗೂ ಈ ಸೇವಾಕಾರ್ಯ ಚಾಟಿಯೇಟು ಬೀಸಿದೆ. ಇತ್ತೀಚೆಗೆ ಯಾರು ಎಷ್ಟೇ ಮಾನವೀಯತೆಯ ಭಾಷಣಗಳನ್ನು ಬಿಗಿದರೂ, ಇಷ್ಟು ದೊಡ್ಡ ಪ್ರಮಾಣದಲ್ಲಿ ಅನ್ನದಾನದ ಉದಾಹರಣೆ ಯಾವುದೇ ಪಂಥಗಳಲ್ಲಿ ಅಥವಾ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ. ಮತಾಂತರಕ್ಕಾಗಿ ಸೇವಾಕಾರ್ಯ ಮಾಡುವುದು ಮತ್ತು ಅದರ ಮೇಲೆ ಮಾನವೀಯತೆಯ ಭಾಷಣ ಬಿಗಿಯುವ ಠಕ್ಕತನ ಇಲ್ಲಿ ಇರುವುದಿಲ್ಲ.

೪. ಅನ್ನಪೂರ್ಣಾ ಭಗವತಿಗೆ ಪ್ರಾರ್ಥನೆ

ಈ ವೈಭವ ಎಷ್ಟೇ ಇದ್ದರೂ, ಕುಂಭದ ನಿಜವಾದ ಲಾಭವನ್ನು ಪಡೆದುಕೊಳ್ಳಲು ಬಂದಿರುವ ಪ್ರತಿಯೊಬ್ಬ ಭಕ್ತನು ಶಂಕರಾಚಾರ್ಯರು ಬರೆದಿರುವ ಮಾತಾ ಅನ್ನಪೂರ್ಣೆಯ ಸ್ತುತಿಯನ್ನು ನೆನಪಿಸುತ್ತಾನೆ. ಶಂಕರಾಚಾರ್ಯರ ಸ್ತುತಿಯಲ್ಲಿ

ಅನ್ನಪೂರ್ಣೇ ಸದಾಪೂರ್ಣೇ ಶಂಕರಪ್ರಾಣವಲ್ಲಭೇ |
ಜ್ಞಾನವೈರಾಗ್ಯಸಿದ್ಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತಿ ||

– ಆದಿಶಂಕರಾಚಾರ್ಯಕೃತ ಅನ್ನಪೂರ್ಣಾಸ್ತೋತ್ರ, ಶ್ಲೋಕ ೧೧

ಅರ್ಥ : ಅನ್ನದಿಂದ ಸಮೃದ್ಧವಾಗಿರುವ, ಯಾವತ್ತೂ ಪರಿಪೂರ್ಣವಾಗಿರುವ, ಶಂಕರನಿಗೆ ಪ್ರಾಣದಂತೆ ಪ್ರಿಯವಾಗಿರುವ ಹೇ ಪಾರ್ವತಿದೇವಿ, ನಮ್ಮ ಜ್ಞಾನ ಮತ್ತು ವೈರಾಗ್ಯಗಳ ಸಿದ್ಧಿಗಾಗಿ ನೀನು ನಮಗೆ ಭಿಕ್ಷೆಯನ್ನು ನೀಡು

ನಡೆಯಿರಿ ನಾವೆಲ್ಲರೂ ಈ ಭಗವತಿಯಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಜ್ಞಾನ ಮತ್ತು ವೈರಾಗ್ಯಗಳ ಭಿಕ್ಷೆ ಬೇಡೋಣ ಮತ್ತು ಹಿಂದೂ ರಾಷ್ಟ್ರದ ಮುಂದಿನ ಕುಂಭಪರ್ವದ ಸಿದ್ಧತೆ ಮಾಡೋಣ.’

(ಶ್ರೀ. ಆನಂದ ಜಾಖೋಟಿಯಾ ಇವರು ಹಿಂದೂ ಜನಜಾಗೃತಿ ಸಮಿತಿಯ ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ಸಮನ್ವಯಕರೂ ಆಗಿದ್ದಾರೆ.)

ಕೃಪೆ : ಸಾಪ್ತಾಹಿಕ ಸನಾತನ ಪ್ರಭಾತ್ ಪತ್ರಿಕೆ

Leave a Comment