ಅ. ದೈನಂದಿನ ಜೀವನ
ಪ್ರತಿದಿನ ಸ್ನಾನದ ಸಮಯದಲ್ಲಿನ ಸ್ಮರಣೆ : ಪ್ರತಿದಿನ ಸ್ನಾನ ಮಾಡುವಾಗ ಗಂಗೆಯೊಂದಿಗೆ ಪವಿತ್ರ ನದಿಗಳನ್ನು ಸ್ಮರಿಸಲಾಗುತ್ತದೆ. ಗಂಗೋದಕದಿಂದ ಸ್ನಾನ ಮಾಡಲು ಹೆಚ್ಚಿನವರಿಗೆ ಸಾಧ್ಯವಾಗದಿರುವುದರಿಂದ ಮೊದಲು ತಾಮ್ರದಿಂದ ಅಥವಾ ಹಿತ್ತಾಳೆಯಿಂದ ತಯಾರಿಸಿದ ಮತ್ತು ಅಗಲ ಬಾಯಿಯ ‘ಗಂಗಾಳ’ ಎಂಬ ಹೆಸರಿನ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಆ ನೀರಿನಿಂದ ಸ್ನಾನ ಮಾಡುತ್ತಿದ್ದರು.
ಆ. ಧಾರ್ಮಿಕ ಜೀವನ
ಆ ೧. ಆಯುಷ್ಯದಲ್ಲಿ ಒಮ್ಮೆಯಾದರೂ ಗಂಗಾಸ್ನಾನವಾಗಬೇಕು ಎಂಬುದು ಕೋಟಿಗಟ್ಟಲೆ ಹಿಂದೂಗಳ ಇಚ್ಛೆಯಾಗಿರುತ್ತದೆ.
ಆ ೨. ಯಾತ್ರಿಕರು ಹರಿದ್ವಾರ, ಪ್ರಯಾಗ ಮುಂತಾದ ತೀರ್ಥಗಳಿಂದ ಗಂಗಾಜಲವನ್ನು ಮನೆಗೆ ತಂದು ಅದನ್ನು ಪೂಜಿಸುತ್ತಾರೆ. ಹಾಗೆಯೇ ಆಪ್ತೇಷ್ಟರನ್ನು ಕರೆದು ಅವರಿಗೆ ಆ ತೀರ್ಥವನ್ನು ಕೊಡುತ್ತಾರೆ.
ಆ ೩. ಧಾರ್ಮಿಕ ರೂಢಿ ಪರಂಪರೆಗಳು
ಅ. ಸ್ಥಾನಶುದ್ಧಿಗಾಗಿ ಗಂಗಾಜಲವನ್ನು ಉಪಯೋಗಿಸುತ್ತಾರೆ. ಜಲಶುದ್ಧಿಗಾಗಿ ಹೊಸದಾಗಿ ತೋಡಿದ ಬಾವಿಯಲ್ಲಿ ಗಂಗಾಜಲ ಹಾಕುತ್ತಾರೆ.
ಆ. ಗಂಗಾಜಲವನ್ನು ಕೈಯಲ್ಲಿ ತೆಗೆದುಕೊಂಡು ಪ್ರತಿಜ್ಞೆ (ಸಂಕಲ್ಪ) ಮಾಡುತ್ತಾರೆ.
ಇ. ಹೊಸದಾಗಿ ಮದುವೆಯಾದ ನವದಂಪತಿಗಳಿಗೂ ಗಂಗಾಜಲದ ಅಭಿಷೇಕ ಮಾಡುತ್ತಾರೆ.
ಇ. ಮೃತ್ಯುವಿನ ಸಮಯದಲ್ಲಿ ಮತ್ತು ಮೃತ್ಯುವಿನ ನಂತರ ಮಾಡುವ ಕ್ರಿಯಾಕರ್ಮಗಳು
ಇ ೧. ಮೃತ್ಯುವಿನ ಸಮಯದಲ್ಲಿ ಬಾಯಿಗೆ ಗಂಗಾಜಲ ಹಾಕುವುದು : ಮೃತ್ಯುವಿನ ನಂತರ ಸದ್ಗತಿ ಸಿಗಬೇಕೆಂದು ಮೃತ್ಯುವಿನ ಸಮಯದಲ್ಲಿ ವ್ಯಕ್ತಿಯ ಬಾಯಿಯಲ್ಲಿ ಗಂಗಾಜಲವನ್ನು ಹಾಕುತ್ತಾರೆ. ಮೃತ್ಯುವಿನ ಸಮಯದಲ್ಲಿ ಗಂಗಾಜಲ ಹಾಕಲು ಸಾಧ್ಯವಾಗದಿದ್ದರೆ ಮೃತ್ಯುವಿನ ನಂತರ ಮೃತ ವ್ಯಕ್ತಿಯ ಬಾಯಿಯಲ್ಲಿ ಗಂಗಾಜಲವನ್ನು ಹಾಕುತ್ತಾರೆ; ಆದುದರಿಂದ ಮನೆಮನೆಗಳಲ್ಲಿ ಗಂಗಾಜಲವನ್ನಿಡುತ್ತಾರೆ. (ಗಂಗಾಜಲ ಇಲ್ಲದಿದ್ದರೆ ತುಳಸಿಯ ನೀರನ್ನು ಉಪಯೋಗಿಸುತ್ತಾರೆ.)
ಇ ೨. ಮೃತದೇಹಕ್ಕೆ ಅಗ್ನಿಸಂಸ್ಕಾರ ಮಾಡುವುದು : ಯಾವ ಮೃತವ್ಯಕ್ತಿಗಳ ದಹನವು ಗಂಗಾತೀರದಲ್ಲಿ ಆಗುತ್ತದೆಯೋ, ಆ ಮೃತಾತ್ಮಗಳು ಸ್ವರ್ಗಕ್ಕೆ ಹೋಗುತ್ತವೆ; ಆದುದರಿಂದ ಭಕ್ತಾದಿಗಳು ಬಹುದೂರದಿಂದ ಅಗ್ನಿದಹನಕ್ಕಾಗಿ ಮೃತ ವ್ಯಕ್ತಿಗಳನ್ನು ಇಲ್ಲಿಗೆ ತರುತ್ತಾರೆ.
ಇ ೩. ಅಸ್ಥಿ ವಿಸರ್ಜನೆ : ಗಂಗೆಯಲ್ಲಿ ಅಸ್ಥಿಗಳನ್ನು ವಿಸರ್ಜಿಸುವುದು ಒಂದು ಮಹತ್ವದ ಅಂತ್ಯವಿಧಿಯಾಗಿದೆ. ‘ಗಂಗೆಯಲ್ಲಿ ವಿಸರ್ಜಿಸಿದ ಅಸ್ಥಿಗಳು ಎಷ್ಟು ವರ್ಷಗಳ ಕಾಲ ಗಂಗೆಯಲ್ಲಿರುತ್ತವೆಯೋ, ಅಷ್ಟು ವರ್ಷ ಆ ಮೃತ ಆತ್ಮಕ್ಕೆ ಸ್ವರ್ಗದಲ್ಲಿ ವಾಸಿಸಲು ಸಾಧ್ಯವಾಗುತ್ತದೆ’ ಎಂದು ಪದ್ಮಪುರಾಣ, ನಾರದೀಯ ಪುರಾಣ, ಸ್ಕಂದಪುರಾಣ ಮತ್ತು ಅಗ್ನಿಪುರಾಣ ಹಾಗೆಯೇ ಮಹಾಭಾರತದಲ್ಲಿ ಹೇಳಲಾಗಿದೆ.
ಇ ೪. ಶ್ರಾದ್ಧ : ಪಿತೃಗಳ ಉದ್ಧಾರವಾಗಬೇಕು ಎಂಬುದಕ್ಕಾಗಿ ಅವರ ಶ್ರಾದ್ಧವನ್ನು ಗಂಗಾತೀರದಲ್ಲಿ ಮಾಡಲಾಗುತ್ತದೆ.
ಈ. ಗಂಗಾತೀರದಲ್ಲಿನ ತೀರ್ಥಕ್ಷೇತ್ರಗಳು
‘ಗಂಗೆಯ ಮೇಲೆ ಮೂರೂವರೆ ಕೋಟಿ ತೀರ್ಥಗಳಿವೆ.’ (ವಾಯುಪುರಾಣ)
(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ಗಂಗಾಮಹಾತ್ಮೆ’ ಗ್ರಂಥ)