ಹನ್ನೊಂದನೇ ಸಂಸ್ಕಾರದಿಂದ ಪ್ರಾರಂಭಿಸಿ ಹದಿನಾಲ್ಕನೇ ಸಂಸ್ಕಾರದವರೆಗಿನ ನಾಲ್ಕು ಸಂಸ್ಕಾರಗಳನ್ನು ಚತುರ್ವೇದವ್ರತ ಎನ್ನುತ್ತಾರೆ. ಈ ಸಂಸ್ಕಾರಗಳನ್ನು ಬ್ರಹ್ಮಚರ್ಯಾಶ್ರಮದಲ್ಲಿ ಆಚಾರ್ಯರು (ಗುರುಗಳು) ಮಾಡುತ್ತಾರೆ.
ಮಹಾನಾಮ್ನೀವ್ರತ
ಎಂಟನೆಯ ವರ್ಷದಲ್ಲಿ ಉಪನಯನವಾದ ಮೇಲೆ, ಮುಂದಿನ ಐದು ವರ್ಷ ಗುರುಕುಲ ದಲ್ಲಿ ಅಧ್ಯಯನ ಮಾಡಿದ ಮೇಲೆ, ಆರಣ್ಯಕಗಳನ್ನು ಹೇಳುವ ಅಧಿಕಾರವು ಪ್ರಾಪ್ತವಾಗಲು ಮೊದಲು ಯಾವ ವಿಧಿಯನ್ನು ಮಾಡಲಾಗುತ್ತದೆಯೋ ಆ ವಿಧಿಗೆ ‘ಮಹಾನಾಮ್ನೀವ್ರತ, ಮಹಾವ್ರತ, ಉಪನಿಷದವ್ರತ’ ಎನ್ನುತ್ತಾರೆ. ಪ್ರತಿಯೊಂದು ವ್ರತದ ಅಧ್ಯಯನವು ಒಂದು ವರ್ಷಕ್ಕೆ ಒಂದು, ಹೀಗೆ ಮೂರು ವರ್ಷಗಳಲ್ಲಿ ಮೂರು ವ್ರತಗಳ ಅಧ್ಯಯನ ಮುಗಿದ ನಂತರ ಗುರುಗಳಿಗೆ ಆರಣ್ಯಕದ ಅಧ್ಯಯನದ ಬಗ್ಗೆ ಒಂದು ಹಸು ಮತ್ತು ಒಂದು ಎತ್ತನ್ನು ದಕ್ಷಿಣೆ ಎಂದು ನೀಡುವುದಿರುತ್ತದೆ. ಹಸುವನ್ನು ನೀಡುವ ವಿಧಿಗೆ ‘ಗೋದಾನವ್ರತ’ ಎನ್ನುತ್ತಾರೆ.
ಮೊದಲನೆಯ ಆರಣ್ಯಕವನ್ನು ಕಲಿಯುವಾಗ ಈ ಸಂಸ್ಕಾರವನ್ನು ಮಾಡುತ್ತಾರೆ.
ಮಹಾವ್ರತ
ಆರಣ್ಯಕಗಳನ್ನು ಕಲಿಯುವಾಗ ಈ ಸಂಸ್ಕಾರವನ್ನು ಮಾಡುತ್ತಾರೆ.
ಉಪನಿಷದ್‌ವ್ರತ
ಅ. ಆರಣ್ಯಕಗಳನ್ನು ಕಲಿಯುವಾಗ ಈ ಸಂಸ್ಕಾರವನ್ನು ಮಾಡುತ್ತಾರೆ.
ಆ. ಗುರುಕುಲದಲ್ಲಿ ಉಪನಿಷತ್ತು ಮತ್ತು ವೇದ ಇವುಗಳಂತಹ ಆಧ್ಯಾತ್ಮಿಕ ಗ್ರಂಥಗಳ ಪಠಣ ಮತ್ತು ಮನನವನ್ನು ಮಾಡಲಾಗುತ್ತದೆ. ಈ ವ್ರತದಲ್ಲಿ ‘ವ್ಯಾಕರಣ, ಶಬ್ದದ-ಉತ್ಪತ್ತಿ ಮತ್ತು ಉಚ್ಚಾರಗಳ’ ವಿಚಾರವನ್ನು ಮಾಡಿ ವೇದಘೋಷ ಮಾಡಲಾಗುತ್ತದೆ. – ಪರಾತ್ಪರ ಗುರು ಪರಶರಾಮ ಮಾಧವ ಪಾಂಡೆ ಮಹಾರಾಜ
ಗೋದಾನವ್ರತ (ಕೇಶಾಂತ ಸಂಸ್ಕಾರ)
ಈ ಸಂಸ್ಕಾರದಲ್ಲಿ ಬ್ರಹ್ಮಚಾರಿಯ ಗಡ್ಡಮೀಸೆಗಳನ್ನು ಮೊದಲ ಬಾರಿಗೆ ಕ್ಷೌರ ಮಾಡಲಾಗು ತ್ತಿತ್ತು. ಈ ಸಂಸ್ಕಾರವನ್ನು ಹದಿನಾರನೆಯ ವಯಸ್ಸಿನಲ್ಲಿ ಮಾಡಲಾಗುತ್ತಿತ್ತು. ಅದು ಬ್ರಹ್ಮಚಾರಿಯು ಯೌವ್ವನಕ್ಕೆ ಪಾದಾರ್ಪಣೆ ಮಾಡಿರುವುದರ ಸೂಚಕವಾಗಿರುತ್ತಿತ್ತು. ಈ ವಯಸ್ಸಿನಲ್ಲಿ ಬ್ರಹ್ಮಚಾರಿಯ ಮುಖದಲ್ಲಿ ಗಡ್ಡಮೀಸೆ ಕಾಣಿಸುತ್ತಿದ್ದವು. ಅವನ ಅಂತರಂಗದಲ್ಲಿ ಪೌರುಷದ ಚೇತನವೂ ಇದೇ ಕಾಲದಲ್ಲಿ ಉದಯಿಸುತ್ತಿತ್ತು. ಇಂತಹ ಸಮಯದಲ್ಲಿ ಅವನ ಯೌವ್ವನವು ಅಪವಿತ್ರವಾಗಬಾರದೆಂದು ಈ ವ್ರತ ಅಥವಾ ಸಂಸ್ಕಾರವನ್ನು ಮಾಡಲಾಗುತ್ತಿತ್ತು. ಈ ಸಂಸ್ಕಾರದ ನಿಮಿತ್ತದಿಂದ ಬ್ರಹ್ಮಚಾರಿಗೆ ಮತ್ತೊಮ್ಮೆ ಬ್ರಹ್ಮಚಾರಿ ವ್ರತದ ಸ್ಮರಣೆಯನ್ನು ಮಾಡಿಕೊಡಲಾಗುತ್ತಿತ್ತು. ಮುಂದೆ ಕಡಿಮೆಪಕ್ಷ ಒಂದು ವರ್ಷವಾದರೂ ಬ್ರಹ್ಮಚಾರಿಯು ಕಠೋರ ಸಂಯಮದಿಂದ ವರ್ತಿಸ ಬೇಕು ಎಂದು ಗುರುಜನರ ಅಪೇಕ್ಷೆಯಿರುತ್ತಿತ್ತು. ಒಂದು ವರ್ಷ ಹೀಗೆ ಸಂಯಮದಿಂದ ವರ್ತಿಸಿ ದರೆ ಮುಂದಿನ ಯೌವ್ವನದ ಕಾಲದಲ್ಲಿ ಅವನ ಕೈಯಿಂದ ಯಾವುದೇ ಪ್ರಮಾದವಾಗುವುದಿಲ್ಲ ಎಂಬ ಕಲ್ಪನೆಯಿತ್ತು.
ಈ ಸಂಸ್ಕಾರದಲ್ಲಿ ಬ್ರಹ್ಮರಂಧ್ರವಿರುವ ಜಾಗದಲ್ಲಿ ಹಸುವಿನ ಗೊರಸಿನ ಆಕಾರದಷ್ಟು ಕೂದಲನ್ನಿಡುತ್ತಾರೆ. ಈ ಸಂಸ್ಕಾರದಲ್ಲಿ ಆಚಾರ್ಯರಿಗೆ ಹಸುವನ್ನು ದಾನವಾಗಿ ಕೊಡುತ್ತಾರೆ.
(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ಹದಿನಾರು ಸಂಸ್ಕಾರಗಳು’ ಗ್ರಂಥ)