1. ರಾಜಾ ರಾಜೇಂದ್ರವರ್ಮನ್ (ಎರಡನೇ) ತನ್ನ 2 ಮಂತ್ರಿಗಳಿಗೆ ಭೂಮಿ ಕೊಡುವುದು, ನಂತರ ಆ ಮಂತ್ರಿಗಳು ಒಂದು ಸಣ್ಣ ನಗರವನ್ನು ನಿರ್ಮಾಣ ಮಾಡಿ ಅದರ ಮಧ್ಯಭಾಗದಲ್ಲಿ ಶಿವ-ಪಾರ್ವತಿ ದೇವಸ್ಥಾನವನ್ನು ಕಟ್ಟಿ ಅದಕ್ಕೆ ‘ತ್ರಿಭುವನ ಮಹೇಶ್ವರ’ ಎಂಬ ಹೆಸರು ಕೊಡುವುದು ಮತ್ತು ಇದನ್ನೇ ‘ಬಂತೆ ಸರಾಈ’ (Banteay Srei) ದೇವಸ್ಥಾನ ಎಂದು ಕರೆಯುವುದು
ಹತ್ತನೇ ಶತಮಾನದಲ್ಲಿ ರಾಜಾ ರಾಜೇಂದ್ರವರ್ಮನ್ (ಎರಡನೇ) ಯಶೋಧರಪುರದಲ್ಲಿ ರಾಜ್ಯವಾಳುತ್ತಿರುವಾಗ ತನ್ನ ದರಬಾರದ ವಿಷ್ಣುಕುಮಾರ ಮತ್ತು ಯಜ್ಞವರಾಹ ಎಂಬ ಮಂತ್ರಿಗಳಿಗೆ ಭೂಭಾಗವನ್ನುಕೊಟ್ಟನು. ಇವರಿಬ್ಬರು ಆ ಸ್ಥಳದಲ್ಲಿ ‘ಈಶ್ವರಪುರ’ ಎಂಬ ಹೆಸರಿನ ಒಂದು ಸಣ್ಣ ನಗರವನ್ನು ನಿರ್ಮಾಣ ಮಾಡಿದರು. ಈ ನಗರವೆಂದರೆ ಈಗಿನ ‘ನೋಮ ದೇಯಿ’ (Phnom Dei) ಗ್ರಾಮ. ವಿಷ್ಣುಕುಮಾರ ಮತ್ತು ಯಜ್ಞವರಾಹರು ಈಶ್ವರಪುರದ ಮಧ್ಯಭಾಗದಲ್ಲಿ ಭಗವಾನ ಶಿವ ಮತ್ತು ಶ್ರೀ ಪಾರ್ವತಿದೇವಿಯ ದೇವಸ್ಥಾನವನ್ನು ಕಟ್ಟಿದರು ಮತ್ತು ಆ ದೇವಸ್ಥಾನಕ್ಕೆ ‘ತ್ರಿಭುವನ ಮಹೇಶ್ವರ’, ಎಂಬ ಹೆಸರು ಕೊಟ್ಟರು. ಈ ದೇವಸ್ಥಾನವೆಂದರೆ ಈಗಿನ ‘ಬಂತೆ ಸರಾಈ’ ದೇವಸ್ಥಾನ ! (ಛಾಯಾಚಿತ್ರ ಕ್ರಮಾಂಕ 1 ನೋಡಿ.) ಕಲ್ಲುಗಳಿಂದ ಕಟ್ಟಿದ ಈ ದೇವಸ್ಥಾನವು ಅತ್ಯಂತ ಸುಂದರವಾಗಿದೆ ; ಆದರೆ ಈಗ ಅದು ಜೀರ್ಣವಾಗಿದೆ. ಅಲ್ಲಿನ ಶಿಲಾಲೇಖನದಲ್ಲಿ ‘ಈ ದೇವಸ್ಥಾನದ ಕಲಶಾರೋಹಣವು 22 ಎಪ್ರಿಲ್ 967 ರಂದು ಆಯಿತು’, ಎಂಬ ಉಲ್ಲೇಖ ಕಂಡುಬರುತ್ತದೆ.
ಅಂಕೊರ ವಾಟದಿಂದ ಮಹೇಂದ್ರ ಪರ್ವತವು 70 ಕಿ.ಮೀ. ಅಷ್ಟು ದೂರದಲ್ಲಿದೆ. ಮಹೇಂದ್ರ ಪರ್ವತದ ಮಾರ್ಗದಲ್ಲಿರುವ ‘ನೋಮ ದೇಯಿ’ ಗ್ರಾಮದಲ್ಲಿ ಒಂದು ಕಾಲದಲ್ಲಿ ಅನೇಕ ಕ್ಷತ್ರಿಯ ಮಹಿಳೆಯರು ನೆಲೆಸುತ್ತಿದ್ದರು. ‘ಬಂತೆ ಸರಾಈ’ ದೇವಸ್ಥಾನವೆಂದರೆ ಅವರ ಕೋಟೆ ಇರಬಹುದು’, ಎಂದು ಸ್ಥಳಿಯ ಜನರ ನಂಬಿಕೆ ಇದೆ. ‘ಬಂತೆ’ ಅಂದರೆ ಕೋಟೆ ಮತ್ತು ‘ಸರಾಈ’ ಈ ಶಬ್ದವು ‘ಸ್ತ್ರೀ’ ಎಂಬ ಶಬ್ದದ ಅಪಭ್ರಂಶವಿದೆ. ಅಂಕೋರ ಪರಿಸರದಲ್ಲಿನ ನೂರಾರು ದೇವಸ್ಥಾನಗಳಲ್ಲಿ ಇದು ಎಲ್ಲಕ್ಕಿಂತ ಸಣ್ಣ ದೇವಸ್ಥಾನವಾಗಿದ್ದು ಅದರಲ್ಲಿನ ಶಿಲ್ಪಕಲೆ ಮತ್ತು ಕೆತ್ತನೆ ಇತರ ಯಾವುದೇ ದೇವಸ್ಥಾನದಲ್ಲಿ ನೋಡಲು ಸಿಗುವುದಿಲ್ಲ.
2. ಶಿವ-ಪಾರ್ವತಿ ದೇವಸ್ಥಾನದ ಪರಿಸರದಲ್ಲಿ ಶ್ರೀವಿಷ್ಣು-ಮಹಾಲಕ್ಷ್ಮಿ ದೇವಸ್ಥಾನವಿರುವ ಸಾಕ್ಷಿಗಳಿರುವುದು, ಹಾಗೆಯೇ ಈ ದೇವಸ್ಥಾನದ ಗೋಡೆ ಮತ್ತು ಬಾಗಿಲುಗಳ ಮೇಲೆ ರಾಮಾಯಣದಲ್ಲಿನ ಮತ್ತು ದೇವತೆಗಳ ಅನೇಕ ಸುಂದರ ಶಿಲ್ಪಗಳನ್ನು ಕೆತ್ತಿರುವುದು
ದೇವಸ್ಥಾನದ ಒಂದು ಬಾಗಿಲ ಮೇಲಿರುವ ಶಿಲ್ಪಕಲೆಯಲ್ಲಿ ‘ನರಸಿಂಹಾವತಾರ ಹಿರಣ್ಯಕಶ್ಯಪೂವಿನ ವಧೆ ಮಾಡುವಾಗಿ’ನ ಪ್ರಸಂಗ ಕೆತ್ತಿರುವುದು (ವರ್ತುಳದಲ್ಲಿ ದೊಡ್ಡದಾಗಿ ತೋರಿಸಿದೆ.)
ಶಿವ-ಪಾರ್ವತಿ ದೇವಸ್ಥಾನದ ಪರಿಸರದಲ್ಲಿ ಶ್ರೀವಿಷ್ಣು-ಮಹಾಲಕ್ಷೀ ದೇವಸ್ಥಾನವಿರುವ ಸಾಕ್ಷಿಗಳಿವೆ. ಇದೇ ಈ ದೇವಸ್ಥಾನದ ವೈಶಿಷ್ಟ್ಯವಿದೆ. ಸದ್ಯ ಈ ಎರಡೂ ದೇವಸ್ಥಾನಗಳು ಭಗ್ನಾವಸ್ಥೆಯಲ್ಲಿರುತ್ತವೆ. ಈ ದೇವಸ್ಥಾನಗಳ ಗೋಡೆ ಮತ್ತು ಬಾಗಿಲುಗಳ ಮೇಲೆ ಅನೇಕ ಸುಂದರ ಶಿಲ್ಪಗಳನ್ನು ಕೆತ್ತಿರುತ್ತಾರೆ. ಇದರಲ್ಲಿ ಮುಖ್ಯವಾಗಿ ವಾಲಿ-ಸುಗ್ರೀವರ ಯುದ್ಧ, ಹಿರಣ್ಯಕಶ್ಯಪುನನ್ನ ವಧಿಸುತ್ತಿರುವ ನರಸಿಂಹ, (ಛಾಯಾಚಿತ್ರ ಕ್ರಮಾಂಕ 3 ನೋಡಿ.) ಅಪ್ಸರೆ ತಿಲೋತ್ತಮೆ ಇವಳನ್ನು ಪಡೆಯಲು ಪರಸ್ಪರರಲ್ಲಿ ಯುದ್ಧ ಮಾಡುವ ಸುಂದ-ಉಪಸುಂದ ಅಸುರರು, ಸೀತೆಯ ಅಪಹರಣ ಮಾಡುವ ರಾವಣ, ಕೈಲಾಸ ಪರ್ವತದ ಮೇಲೆ ಕುಳಿತಿರುವ ಭಗವಾನ ಶಿವ, ಕೈಲಾಸ ಪರ್ವತವನ್ನು ಎತ್ತುವ ರಾವಣ, ಖಾಂಡವ ವನವನ್ನು ಭಕ್ಷಿಸುತ್ತಿರುವ ಅಗ್ನಿದೇವ ಮತ್ತು ಅವನಿಗೆ ಸಹಾಯ ಮಾಡುವ ಶ್ರೀಕೃಷ್ಣಾರ್ಜುನ, ಭಗವಾನ ಶಿವನ ಮೇಲೆ ಬಾಣ ಬಿಡುವ ಕಾಮದೇವ ಮತ್ತು ಭಗವಾನ ಶಿವನು ಕಾಮದೇವನಿಗೆ ಮೂರನೇ ಕಣ್ಣಿನ ಮೂಲಕ ಭಸ್ಮ ಮಾಡಿದ ದೃಶ್ಯ ಮುಂತಾದ ಶಿಲ್ಪಗಳ ಸಮಾವೇಶವಿದೆ.
3. ಶಿವ-ಪಾರ್ವತಿ ದೇವಸ್ಥಾನದಲ್ಲಿನ ಬೇರೆ ಬೇರೆ ತೋರಣದ್ವಾರದ ಮೇಲೆ ಸುಂದರವಾದ ಕೆತ್ತನೆ ಕೆಲಸವಿರುವುದು, ಹಾಗೆಯೇ ಶಿವ-ಪಾರ್ವತಿ ದೇವಸ್ಥಾನ ಮತ್ತು ವಿಷ್ಣು-ಮಹಾಲಕ್ಷ್ಮಿ ದೇವಸ್ಥಾನಗಳ ತೋರಣದ್ವಾರದ ಮೇಲೆ ನಂದಿ ಮತ್ತು ಗರುಡ ಇವುಗಳ ಶಿಲ್ಪಗಳು ಕೆತ್ತಿರುವುದು
ಶಿವ-ಪಾರ್ವತಿ ದೇವಸ್ಥಾನದ ತೋರಣ ದ್ವಾರದ ಮೇಲೆ ಅತ್ಯಂತ ಸುಂದರ ವಿಧದಲ್ಲಿ ಮಾಡಿದ ಕೆತ್ತನೆಯ ಕೆಲಸ
ಶಿವ-ಪಾರ್ವತಿ ದೇವಸ್ಥಾನದ ಇನ್ನೊಂದು ವೈಶಿಷ್ಟ್ಯವೆಂದರೆ ದೇವಸ್ಥಾನದ ಬೇರೆಬೇರೆ ದಿಕ್ಕುಗಳಿಗೆ ತೋರಣದ್ವಾರವಿದ್ದು ಅವುಗಳ ಮೇಲೆ ಅತ್ಯಂತ ಸುಂದರ ಕೆತ್ತನೆ ಕೆಲಸ ಮಾಡಲಾಗಿದೆ. (ಛಾಯಾಚಿತ್ರ ಕ್ರಮಾಂಕ 2 ನೋಡಿ.) ಅವುಗಳ ಮೇಲೆ ಕೆತ್ತಿರುವ ಶಿಲ್ಪಗಳು ವಿಶ್ವದಲ್ಲಿ ಎಲ್ಲಿಯೂ ಇರಲಿಕ್ಕಿಲ್ಲ, ಅಷ್ಟೊಂದು ವೈಶಿಷ್ಟ್ಯಪೂರ್ಣವಾಗಿವೆ. ಶಿವ-ಪಾರ್ವತಿ ದೇವಸ್ಥಾನ ಮತ್ತು ವಿಷ್ಣು-ಮಹಾಲಕ್ಷ್ಮಿ ದೇವಸ್ಥಾನಗಳ ತೋರಣದ್ವಾರದ ಮೇಲೆ ಕ್ರಮವಾಗಿ ನಂದಿ ಮತ್ತು ಗರುಡ ಈ ಶಿಲ್ಪಗಳನ್ನೂ ಕೆತ್ತಲಾಗಿದೆ.
– ಶ್ರೀ. ವಿನಾಯಕ ಶಾನಬಾಗ, ಕಂಬೋಡಿಯಾ