ಅ. ಅಹಂಭಾವ ನಿರ್ಮಾಣವಾಗುವುದರ ತಾತ್ತ್ವಿಕ ವಿಶ್ಲೇಷಣೆ
ಮನಸ್ಸು, ಚಿತ್ತ, ಬುದ್ಧಿ ಮತ್ತು ಅಹಂ ಈ ಅಂತಃಕರಣದ ಘಟಕಗಳು ಬೇರೆ ಬೇರೆಯಾಗಿಲ್ಲ. ಇವು ಕಾರ್ಯಕ್ಕನುಸಾರ ಅಹಂಭಾವದ ಹೆಸರುಗಳೇ ಆಗಿವೆ. ‘ನಾನು ಬ್ರಹ್ಮನಾಗಿದ್ದೇನೆ, ಎಲ್ಲೆಡೆಯಲ್ಲಿಯೂ ನಾನೇ ಇದ್ದೇನೆ, ಬೇರೆ ಮತ್ತೇನೂ ಇಲ್ಲ’ ಹೀಗೆ ಚೇತನಕ್ಕೆ ಪ್ರಥಮಬಾರಿ ಹೊಳೆಯುವುದೆಂದರೆ ನನ್ನತನದ ಪ್ರಥಮ ಅರಿವು. ಇದು ನಿರ್ಗುಣ ಬ್ರಹ್ಮದ ಸ್ವಭಾವವಾಗಿದೆ. ಯಾವಾಗ ‘ಅಹಂಭಾವ’ಕ್ಕೆ ವಿಕಲ್ಪ ಬರುತ್ತದೆಯೋ, ಎಂದರೆ ‘ನಾನು ದೇಹವಾಗಿದ್ದೇನೆ’ ಎಂದೆನಿಸುತ್ತದೆಯೋ ಅದನ್ನು ಮನಸ್ಸು ಎನ್ನುತ್ತಾರೆ. ನಾನು ‘ಆತ್ಮ’ನಾಗಿದ್ದೇನೆ ಎನ್ನುವುದರ ಅರಿವು ಅಪರೂಪವಾಗಿ ಬಂದಾಗ, ಅಂದರೆ ಅಪರೂಪವಾಗಿ ಚೈತನ್ಯದ ಅರಿವಾದಾಗ ಆ ಅಹಂಭಾವವನ್ನೇ ಚಿತ್ತ ಎನ್ನುತ್ತಾರೆ. ಯಾವಾಗ ನಾನು ‘ಆತ್ಮ’ನಾಗಿದ್ದೇನೆ ಎನ್ನುವುದರ ಅನುಭೂತಿಯು ಆಗಾಗ ಬರುತ್ತದೆಯೋ ಅದನ್ನೇ ಶುದ್ಧ ಅಹಂ ಎನ್ನುತ್ತಾರೆ. ಅಹಂಭಾವದ ಈ ಪ್ರತಿಯೊಂದು ಅವಸ್ಥೆಯಲ್ಲಿಯೂ ಬುದ್ಧಿಯು ಕಾರ್ಯನಿರತವಾಗಿರುತ್ತದೆ ಮತ್ತು ಅದು ಅನುಕ್ರಮವಾಗಿ ತಮೋಗುಣಪ್ರಧಾನ (ಮನಸ್ಸು), ರಜೋಗುಣಪ್ರಧಾನ (ಚಿತ್ತ) ಮತ್ತು ಸತ್ತ್ವಗುಣಪ್ರಧಾನ ಬುದ್ಧಿ (ಶುದ್ಧ ಅಹಂ) ಆಗಿರುತ್ತದೆ. ಈ ವಿಷಯವನ್ನು ಮುಂದಿನ ಕೋಷ್ಟಕದಲ್ಲಿ ಸ್ಪಷ್ಟಪಡಿಸಲಾಗಿದೆ.
ವಿಚಾರ ಮತ್ತು / ಅನುಭೂತಿ | ಈ ಮಟ್ಟಕ್ಕೆ ಇನ್ನೊಂದು ಹೆಸರು | ವೃತ್ತಿ / ಬುದ್ಧಿ | ಬುದ್ಧಿ ಮತ್ತು ಅಹಂ ಇದರಲ್ಲಿನ ಪ್ರಮುಖ ಗುಣ | ಮಾರ್ಗ |
೧. ಸತತವಾಗಿ ‘ನಾನು ಬ್ರಹ್ಮನಾಗಿದ್ದೇನೆ’ ಎಂಬ ಅನುಭೂತಿ ಬರುವುದು | ಆತ್ಮಾನುಭೂತಿಯಲ್ಲಿ ಮಗ್ನ | ಬ್ರಹ್ಮವೃತ್ತಿ | ತ್ರಿಗುಣಾತೀತ | – |
೨. ಆಗಾಗ್ಗೆ ‘ನಾನು ದೇಹವಾಗಿದ್ದೇನೆ’ ಎಂದೆನಿಸುವುದು ಮತ್ತು ಆಗಾಗ್ಗೆ ‘ನಾನು ಆತ್ಮನಾಗಿದ್ದೇನೆ’ ಎನ್ನುವ ಅನುಭೂತಿ ಬರುವುದು | ಶುದ್ಧ ಅಹಂ | ಆತ್ಮ ಬುದ್ಧಿ | ಸತ್ತ್ವ | ನಿವೃತ್ತಿ ಮಾರ್ಗಿ |
೩. ‘ನಾನು ದೇಹವಾಗಿದ್ದೇನೆ’ ಎಂದು ಹೆಚ್ಚು ಕಾಲ ಅನಿಸುವುದು ಮತ್ತು ಕೆಲವೊಮ್ಮೆ ‘ನಾನು ಆತ್ಮನಾಗಿದ್ದೇನೆ’ ಎಂಬ ಅನುಭೂತಿ ಬರುವುದು | ಚಿತ್ತ | ಜೀವ ಬುದ್ಧಿ | ರಜ | ನಿವೃತ್ತಿಮಾರ್ಗಿ ಎಂದು ತಿಳಿದುಕೊಂಡಿರುವ ಪ್ರವೃತ್ತಿ ಮಾರ್ಗಿ |
೪. ‘ನಾನು ದೇಹವಾಗಿದ್ದೇನೆ’ ಎಂದು ಸತತ ಅನಿಸುವುದು ಮತ್ತು ‘ನಾನು ಆತ್ಮನಾಗಿದ್ದೇನೆ’ ಎಂದು ಯಾವತ್ತೂ ಅನಿಸದಿರುವುದು | ಮನಸ್ಸು | ದೇಹ ಬುದ್ಧಿ (ಪಶು) | ತಮ | ಪ್ರವೃತ್ತಿ ಮಾರ್ಗಿ |
– ಪ.ಪೂ. ಕಾಣೇ ಮಹಾರಾಜರು, ನಾರಾಯಣಗಾಂವ, ಪುಣೆ ಜಿಲ್ಲೆ, ಮಹಾರಾಷ್ಟ್ರ.
ಆ. ಅಹಂಭಾವ ನಿರ್ಮಾಣವಾಗುವುದರ ಕಾರಣಗಳು
ಈ ಭೂಮಿಯ ಮೇಲಿರುವ ಪ್ರತಿಯೊಬ್ಬನಿಗೂ ಒಂದಲ್ಲ ಒಂದು ಕಾರಣಕ್ಕಾಗಿ, ಉದಾ. ತನ್ನ ಕಾರ್ಯ, ಜ್ಞಾನ, ಯಶಸ್ಸು, ರೂಪ, ಪ್ರಸಿದ್ಧಿ, ತಾನು ತೋರಿಸುತ್ತಿರುವ ಸಹಾನುಭೂತಿ, ತನ್ನ ಕುಟುಂಬ, ತನ್ನ ಜಾತಿ, ತನ್ನ ಪಂಥ, ತನ್ನ ದೇಶ, ದೇವರು, ಸಾಧನೆ, ಅಂದರೆ ಯಾವುದು ತನಗೆ ಸಂಬಂಧಪಟ್ಟಿದೆಯೋ ಅದರ ಬಗ್ಗೆ ಅಹಂಭಾವವಿರುತ್ತದೆ. ಯಾವುದರಿಂದ ಅಹಂಭಾವ ನಿರ್ಮಾಣವಾಗುತ್ತದೆ ಎನ್ನುವುದನ್ನು ತಿಳಿದುಕೊಂಡರೆ ಅದನ್ನು ಕಡಿಮೆ ಮಾಡಲು ಪ್ರಯತ್ನ ಮಾಡುವುದು ಸುಲಭವಾಗುತ್ತದೆ. ವ್ಯಾವಹಾರಿಕ ಹಾಗೂ ಆಧ್ಯಾತ್ಮಿಕ ಜೀವನದಲ್ಲಿ ಸಾಮಾನ್ಯವಾಗಿ ಯಾವ ಕಾರಣಗಳಿಂದ ಅಹಂ ನಿರ್ಮಾಣವಾಗುತ್ತದೆ ಎನ್ನುವುದನ್ನು ಈ ಅಂಶದಲ್ಲಿ ಕೊಡಲಾಗಿದೆ.
ಆ ೧. ವ್ಯಾವಹಾರಿಕ ಜೀವನ
ಆ ೧ ಅ. ಜನನದಿಂದಲೇ ಪ್ರಾರಂಭ : ಪ್ರತಿಯೊಬ್ಬನೂ ಹೆಸರಿಲ್ಲದೇ ಜನ್ಮಕ್ಕೆ ಬರುತ್ತಾನೆ, ಆತನಿಗೆ ಯಾವುದಾದರೊಂದು ಹೆಸರನ್ನಿಡುವುದರಿಂದ ಆತನು ಆ ಹೆಸರಿನಿಂದ ಗುರುತಿಸಿ ಕೊಳ್ಳತೊಡಗುತ್ತಾನೆ ಹಾಗೂ ‘ನಾನು ಬ್ರಹ್ಮ’ನಾಗಿದ್ದೇನೆ ಎನ್ನುವುದನ್ನು ಮರೆಯುತ್ತಾನೆ.
ಆ ೧ ಆ. ಚಿತ್ತದಲ್ಲಿನ ಸಂಸ್ಕಾರಗಳಿಂದಾಗಿ : ಚಿತ್ತದಲ್ಲಿನ ಸ್ವಭಾವ, ವಾಸನೆಗಳು, ಇಷ್ಟಾನಿಷ್ಟ ಗಳು ಇವೇ ಮುಂತಾದ ಸಂಸ್ಕಾರಗಳಿಂದಾಗಿ ಅಹಂ ನಿರ್ಮಾಣವಾಗುತ್ತದೆ; ಉದಾ. ವ್ಯಕ್ತಿಯೊಬ್ಬನು ‘ನನಗೆ ಸಿಹಿ ತಿನಿಸುಗಳು ಇಷ್ಟ’ ಎಂದು ಹೇಳಿದಾಗ ಅವನು ನಿಜವಾದ ‘ಸ್ವ’ ದಿಂದ ಬಹಳ ದೂರ ಹೋಗಿರುತ್ತಾನೆ. ವಾಸನೆ ಪದವನ್ನು ಈ ರೀತಿ ವಿಂಗಡಿಸಬಹುದು- ‘ವಾಸ’ ಎಂದರೆ ಈಶ್ವರನ ಅಸ್ತಿತ್ವ ಮತ್ತು ‘ನಾ’ ಎಂದರೆ ಇಲ್ಲ. ಎಲ್ಲಿ ಈಶ್ವರನ ಅಸ್ತಿತ್ವವಿಲ್ಲವೋ ಅದು ‘ವಾಸನೆ’.
ಆ ೧ ಇ. ಹಣ ಮತ್ತು ಪ್ರಸಿದ್ಧಿಗಳಿಂದಾಗಿ : ಸಂಪತ್ತು, ಪದವಿ, ಅಧಿಕಾರ, ರಾಜ್ಯ ಇತ್ಯಾದಿಗಳ ಪ್ರಾಪ್ತಿಯಾದಾಗ ಅಹಂ ಹೆಚ್ಚಾಗುತ್ತದೆ; ಉದಾ. ಹಿರಣ್ಯಕಶಿಪು ಮತ್ತು ರಾವಣರು ರಾಜ್ಯಪ್ರಾಪ್ತಿ ಯಾದ ನಂತರ ಮದೋನ್ಮತ್ತರಾದರು. ಹಾಗೆಯೇ ಫಲದ ಅಪೇಕ್ಷೆ ಬಂತೆಂದರೆ ಅಹಂ ಬರುತ್ತದೆ.
ಆ ೧ ಈ. ಕೌಟುಂಬಿಕ ಅಹಂ : ತನ್ನ ಮಕ್ಕಳು, ತನ್ನ ಆಪ್ತೇಷ್ಟರು, ತನ್ನ ಮನೆ ಇತ್ಯಾದಿಗಳ ಬಗ್ಗೆ ಮಮಕಾರವೆನಿಸುವುದು ಸಹ ಒಂದು ರೀತಿಯ ಅಹಂಭಾವವಾಗಿದೆ. ಕೆಲವರಿಗೆ ನಾವು ತಂದೆ-ತಾಯಿಗಳಾಗಿದ್ದೇವೆ ಎನ್ನುವ ಅಹಂ ಕೂಡ ಇರುತ್ತದೆ.
ಆ ೧ ಉ. ಬುದ್ಧಿಯ ಅಹಂ
೧. ಚಿಕ್ಕ ಮಗುವಿಗೆ ದೇಹಬುದ್ಧಿ (ಬುದ್ಧಿ) ಇಲ್ಲದಿರುವುದರಿಂದ ಅದು ಕರ್ತೃತ್ವವನ್ನು ತೆಗೆದುಕೊಳ್ಳುವುದಿಲ್ಲ; ಆದುದರಿಂದ ಬಹಳಷ್ಟು ಸಲ ಚಿಕ್ಕ ಮಕ್ಕಳು ‘ಇಂತಹ ಒಂದು ಸಂಗತಿಯನ್ನು ನಾನು ಮಾಡಿಲ್ಲ’ ಎಂದು ಹೇಳುತ್ತಾರೆ. ಮುಂದೆ ವಯಸ್ಸು ಹೆಚ್ಚಾದಂತೆ ದೇಹಬುದ್ಧಿ ಹೆಚ್ಚಾಗುತ್ತದೆ ಮತ್ತು ಅದರಿಂದಾಗಿ ಅಹಂಭಾವ ಹೆಚ್ಚುತ್ತಾ ಹೋಗುತ್ತದೆ.
೩. ಅಧ್ಯಾತ್ಮದ ಬಗ್ಗೆ ಅಜ್ಞಾನ ಮತ್ತು ಬುದ್ಧಿಪ್ರಾಮಾಣ್ಯವಾದಿಗಳು : ಅಧ್ಯಾತ್ಮ, ದೇವರು, ಸಾಧನೆ, ಭೂತ-ಪ್ರೇತಗಳು ಇತ್ಯಾದಿ ಸುಳ್ಳಾಗಿವೆ ಎಂದು ಬುದ್ಧಿಪ್ರಾಮಾಣ್ಯವಾದಿಗಳು ಅಪಪ್ರಚಾರ ಮಾಡುತ್ತಾರೆ. ಯಾವುದಾದರೊಂದು ಸಂಗತಿಯನ್ನು ತಿಳಿದುಕೊಳ್ಳದೇ ಅಥವಾ ಅದರ ಅನುಭವವನ್ನು ಪಡೆಯದೇ, ಅದು ತನಗೆ ಒಪ್ಪಿಗೆಯಾಗುವುದಿಲ್ಲ ಎನ್ನುವ ಕಾರಣಕ್ಕಾಗಿ ಅದು ಸುಳ್ಳಾಗಿದೆ ಎಂದು ಹೇಳುತ್ತಾರೆ !
ಆ ೨. ಆಧ್ಯಾತ್ಮಿಕ ಜೀವನದ ಅಹಂ
ಆಧ್ಯಾತ್ಮಿಕ ಜೀವನವನ್ನು ನಡೆಸುವವರಲ್ಲಿ ಕಂಡುಬರುವ ಅಹಂನ ಕೆಲವು ಪ್ರಕಾರಗಳು.
ಆ ೨ ಅ. ಬುದ್ಧಿಯ ಅಹಂ
ಆ ೨ ಆ. ಪಾಂಡಿತ್ಯದ ಅಹಂ
ಆ ೨ ಇ. ಪಂಥದ ಅಹಂ
ಆ ೨ ಈ. ಸಂಪ್ರದಾಯದ ಅಹಂ
ಆ ೨ ಉ. ಸಾಧನೆಯ ಅಹಂ
ಆ ೨ ಊ. ಗುರುಗಳು ಇದ್ದಾರೆ ಎನ್ನುವುದರ ಅಹಂ
ಆ ೨ ಎ. ಸಿದ್ಧಿಗಳ ಅಹಂ
ಆ ೨ ಐ. ಸಂತರು ಇತರರ ತೊಂದರೆಗಳನ್ನು ತೆಗೆದುಕೊಳ್ಳುವುದು
ಆ ೨ ಒ. ನನ್ನಲ್ಲಿ ಅಹಂಭಾವವಿಲ್ಲ ಎಂಬ ಅಹಂಭಾವವಾಗಬಹುದು
(ಆಧಾರ : ಸನಾತನ ನಿರ್ಮಿತ ‘ಅಹಂ ನಿರ್ಮೂಲನೆಗಾಗಿ ಸಾಧನೆ’ ಗ್ರಂಥ)