೧. ಕೌಲಾಲಂಪುರಕ್ಕೆ ಹೋದ ನಂತರ ಮಳೆಗಾಲವಿಲ್ಲದಿದ್ದರೂ ಮಳೆ ಬೀಳುವುದು
೬.೩.೨೦೧೯ ರಂದು ನಾವು ಮಹರ್ಷಿಗಳು ಹೇಳಿದಂತೆ ಮಲೇಶಿಯಾದಲ್ಲಿನ ಸ್ಥಳಗಳ ದರ್ಶನ ಪಡೆಯಲು ಹೊರಟೆವು. ಕೌಲಾಲಂಪುರ ವಿಮಾನ ನಿಲ್ದಾಣದಿಂದ ಹೊರಡುವಾಗ ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲಿ ಮಳೆ ಬೀಳಲು ಪ್ರಾರಂಭವಾಯಿತು. ನಾವು ಅಲ್ಲಿಗೆ ಹೋಗಿದ್ದ ತಿಂಗಳು ಬೇಸಿಗೆಯ ಕಾಲವಿತ್ತು. ಸ್ಥಳೀಯ ಸಾಧಕರಾದ ಶ್ರೀ. ಟೋನಿ ಚಾಂಗ್ ಇವರು, “ಈ ಅವಧಿಯಲ್ಲಿ ಇಲ್ಲಿ ಎಂದಿಗೂ ಮಳೆ ಬೀಳುವುದಿಲ್ಲ”, ಎಂದು ಹೇಳಿದರು. ಅಲ್ಲಿನ ಸ್ಥಳೀಯರಿಗೂ ಮಳೆಯಾದ ಬಗ್ಗೆ ಆಶ್ಚರ್ಯಗೊಂಡರು.
೨. ಇದ್ದಕ್ಕಿದ್ದಂತೆ ಬೀಳುವ ಮಳೆಯೆಂದರೆ ಗುರುಗಳಿಗೆ ವ್ಯಕ್ತಪಡಿಸಿದ ಗೌರವ !
ನಾವು ನಾಡಿಪಟ್ಟಿವಾಚಕ ಪೂ. (ಡಾ.) ಓಂ ಉಲಗನಾಥನ್ ಇವರಿಗೆ ಮಳೆಯ ಬಗ್ಗೆ ತಿಳಿಸಿದೆವು. ಅವರ ಮೂಲಕ ಮಯನ ಮಹರ್ಷಿಗಳು, “ನೀವು ಬೇರೆ ಸಮಯದಲ್ಲಿ ಹೋಗುವ ಸ್ಥಳಗಳಲ್ಲಿ ಮಳೆ ಬಿದ್ದರೆ, ಅದು ಆಶೀರ್ವಾದ ಸ್ವರೂಪದ್ದಾಗಿರುತ್ತದೆ; ಆದರೆ ಈಗ ಪರಾತ್ಪರ ಗುರು ಡಾ.ಆಠವಲೆಯವರು ಅವರ ಅಧ್ಯಾತ್ಮಪ್ರಸಾರ ಕಾರ್ಯದ ಚುಕ್ಕಾಣಿಯನ್ನು ನಿಮ್ಮಿಬ್ಬರಿಗೆ, ಅಂದರೆ ಸದ್ಗುರು (ಸೌ.) ಅಂಜಲಿ ಗಾಡಗೀಳ ಮತ್ತು ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರ ಕೈಗೆ ಒಪ್ಪಿಸಿದ್ದಾರೆ ಮತ್ತು ಅವರು ನಿಮ್ಮನ್ನು ತಮ್ಮ ಉತ್ತರಾಧಿಕಾರಿಯೆಂದು ಘೋಷಿಸಿದ್ದಾರೆ. ಇದರ ಅರ್ಥ ಈಗ ನಿಮ್ಮ ಮೂವರಲ್ಲಿ ತತ್ತ್ವತಃ ಅದ್ವೈತವಿದೆ. ಆದುದರಿಂದ ಪರಾತ್ಪರ ಗುರು ಡಾ. ಆಠವಲೆಯವರೇ ಅಲ್ಲಿ ಆಗಮಿಸಿದ್ದಾರೆ ಮತ್ತು ಈ ಮಳೆ ಬೀಳುವುದೆಂದರೆ ಗುರುಗಳ ಬಗ್ಗೆ ಇರುವ ಗೌರವವಾಗಿದೆ” ಎಂದು ಹೇಳಿದರು.
೩. ಇದ್ದಕ್ಕಿದ್ದಂತೆ ಬೀಳುವ ಮಳೆ ಮತ್ತು ಅದರ ವಿಧಗಳ ಬಗ್ಗೆ ಗಮನಕ್ಕೆ ಬಂದ ಅಂಶಗಳು
೩ ಅ. ಸಾಮಾನ್ಯ ಮಳೆ : ಸಾಮಾನ್ಯವಾಗಿ ಬೀಳುವ ಮಳೆಯು ಎಲ್ಲೆಡೆ ಒಂದೇ ರೀತಿ ಬೀಳುತ್ತದೆ. ಅದು ತನ್ನ ಕಾರ್ಯಕ್ಕನುಸಾರ ಬೀಳುತ್ತದೆ ಮತ್ತು ನಿಲ್ಲುತ್ತದೆ. ಈ ವಿಧದ ಮಳೆಯಲ್ಲಿ ಅನಿಯಮಿತತೆ ಇರುತ್ತದೆ.
೩ ಆ. ಸ್ವಾಗತಕ್ಕಾಗಿ ಬೀಳುವ ಮಳೆ : ಇದರಲ್ಲಿ ಹನಿಹನಿಯಾಗಿ ಮಳೆ ಬೀಳುತ್ತದೆ. ಈ ಮಳೆ ಯಾವುದಾದರೊಂದು ಸ್ಥಳದಲ್ಲಿ ಹಿಮವೃಷ್ಟಿಯಂತೆ ಬೀಳುತ್ತದೆ. ಈ ಮಳೆಯ ಹನಿ ಅತ್ಯಂತ ಚಿಕ್ಕ ಮತ್ತು ಆರ್ದ್ರತೆ ಇರುವಂತಹದ್ದಾಗಿರುತ್ತದೆ.
೩ ಇ. ಕಾರ್ಯಪೂರ್ತಿ ಅಥವಾ ಕಾರ್ಯಕ್ಕೆ ಆಶೀರ್ವಾದ ನೀಡುವುದಕ್ಕಾಗಿ ಬೀಳುವ ಮಳೆ : ಮಹರ್ಷಿಗಳು ಹೇಳಿದಂತೆ ಆಶೀರ್ವಾದಕ್ಕಾಗಿ ಬೀಳುವ ಮಳೆಯು ಸಂಬಂಧಿತ ವ್ಯಕ್ತಿ, ಸ್ಥಳ ಅಥವಾ ವಾಸ್ತು ಇವುಗಳ ಪರಿಸರದಲ್ಲಿಯೇ ಬೀಳುತ್ತದೆ. ಅದು ಎಲ್ಲೆಡೆ ಬೀಳುವುದಿಲ್ಲ. ಕೆಲವೊಮ್ಮೆ ನಮ್ಮ ಮೈಮೇಲೆ ಕೆಲವು ಮಳೆ ಹನಿಗಳೇ ಬೀಳುತ್ತವೆ ಅಥವಾ ನಾವು ಪ್ರಯಾಣದಲ್ಲಿದ್ದಾಗ, ಮಳೆಯ ಕೆಲವೇ ಹನಿಗಳು ನಮ್ಮ ವಾಹನದ ಎದುರಿಗಿರುವ ಗಾಜಿನ ಮೇಲೆ ಬೀಳುತ್ತವೆ.
೩ ಈ. ಗೌರವಾರ್ಥವಾಗಿ ಬೀಳುವ ಮಳೆ : ಈ ಗೌರವಾರ್ಥವಾಗಿ ಬೀಳುವ ಮಳೆಯ ಅರಿವನ್ನು ನನಗೆ ಮಯನ ಮಹರ್ಷಿಗಳು ಮಾಡಿಕೊಟ್ಟರು. ಗುರುಗಳ ಬಗ್ಗೆ ಇರುವ ತನ್ನ ಗೌರವವನ್ನು ವ್ಯಕ್ತಪಡಿಸುವುದಕ್ಕಾಗಿ ಬೀಳುವ ಈ ಮಳೆಯ ವೈಶಿಷ್ಟ್ಯವೆಂದರೆ ಮಣ್ಣಿನ ಗಂಧ, ಅಂದರೆ ಪೃಥ್ವಿತತ್ತ್ವದ ಸುವಾಸನೆ ಎಲ್ಲಕಡೆಗೆ ಹರಡುತ್ತಿರುತ್ತದೆ. ಆಗ ಭೂದೇವಿಯೂ ಈ ಮಳೆಯ ಮೂಲಕ ಗುರುದೇವರ ಈ ಕ್ಷೇತ್ರದಲ್ಲಿ ಆಗಮನ ಆಗುವುದಕ್ಕಾಗಿ ಸಮ್ಮತಿ ವ್ಯಕ್ತಪಡಿಸುತ್ತಿರುತ್ತಾಳೆ ಮತ್ತು ಸಂಪೂರ್ಣ ನಿಸರ್ಗವೂ ಗುರುಗಳ ಆಗಮನವನ್ನು ಆನಂದದಿಂದ ಸ್ವೀಕರಿಸುತ್ತದೆ. ಆಗ ನಾವು ‘ನಮ್ಮ ಮನಸ್ಸಿನಿಂದ ಏನೂ ಮಾಡಲು ಸಾಧ್ಯವಿಲ್ಲ, ಎಲ್ಲ ಈಶ್ವರೇಚ್ಛೆಯಂತೆ ಆಗುತ್ತಿರುತ್ತವೆ’, ಎಂದು ಗಮನಕ್ಕೆ ಬರುತ್ತದೆ.
– (ಸದ್ಗುರು)ಸೌ. ಅಂಜಲಿ ಗಾಡಗೀಳ, ಜಯಪೂರ, ರಾಜಸ್ಥಾನ (೧೩.೪.೨೦೧೯)