ಪ್ರಸ್ತುತ ಆಪತ್ಕಾಲದ ತೀವ್ರತೆ ಹೆಚ್ಚಾಗಿದ್ದು ಸಾಧಕರ ಆಧ್ಯಾತ್ಮಿಕ ತೊಂದರೆಗಳೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹೆಚ್ಚಿನ ಸಾಧಕಿಯರಿಗೆ ಮಾಸಿಕ ಸರದಿಗೆ ಸಂಬಂಧಿಸಿದ ತೊಂದರೆಯಾಗುತ್ತಿದೆ. ಇದರಲ್ಲಿ ರಜಸ್ರಾವ ಹೆಚ್ಚು ಪ್ರಮಾಣದಲ್ಲಾಗುವುದು, ರಜಸ್ರಾವ ಪ್ರತಿ ತಿಂಗಳು ಆಗದೇ ಅನಿಯಮಿತವಾಗಿ ಆಗುವುದು, ೨೦ನೇ ದಿನ ರಜಸ್ರಾವ ಆರಂಭವಾಗಿ ಅದು ೧೫ ದಿನ ಇರುವುದು, ಇಂತಹ ತೊಂದರೆಗಳಾಗುತ್ತಿವೆ. ‘ಯಾವ ಸೇವೆಯನ್ನು ಮೈಲಿಗೆ-ಸೂತಕವನ್ನು ಪಾಲಿಸಿ ಮಾಡಬೇಕಾಗುತ್ತದೋ, ಅಂತಹ ಸೇವೆಯನ್ನು ಮಾಡುವ ಸಾಧಕಿಯರಿಗೆ ಈ ತೊಂದರೆಯಾಗುವ ಪ್ರಮಾಣ ಹೆಚ್ಚಿದೆ’, ಎಂದು ಗಮನಕ್ಕೆ ಬಂದಿದೆ. ಈ ಕೆಟ್ಟ ಶಕ್ತಿಗಳು ಈ ಮಾಧ್ಯಮದಿಂದ ಸೇವೆಯಲ್ಲಿ ಅಡಚಣೆ ತರುತ್ತಿವೆ. ಆದುದರಿಂದ ಮಾಸಿಕ ಸರದಿಯ ಸಮಯದಲ್ಲಿ ತೊಂದರೆಯಾಗುತ್ತಿದ್ದಲ್ಲಿ ಸಾಧಕಿಯರು ಮುಂದಿನ ಆಧ್ಯಾತ್ಮಿಕ ಉಪಾಯ ಮಾಡಬೇಕು.
೧. ನಾಮಜಪದ ಮಂಡಲ ಹಾಕಿ ಅದರಲ್ಲಿ ಬರೆಯಬೇಕಾದ ಪ್ರಾರ್ಥನೆ
ಮಾಸಿಕ ಸರದಿ ಆರಂಭವಾಗುವ ೪ ದಿನಗಳ ಮೊದಲು ಕಾಗದದ ಮೇಲೆ ಶ್ರೀಕೃಷ್ಣನ ನಾಮಜಪದ ಮಂಡಲವನ್ನು ಬಿಡಿಸಬೇಕು ಮತ್ತು ಅದರಲ್ಲಿ ಮುಂದಿನ ಪ್ರಾರ್ಥನೆ ಬರೆಯಬೇಕು, ‘ಹೇ ಶ್ರೀಕೃಷ್ಣಾ, ……(ಇಲ್ಲಿ ತಮ್ಮ ಹೆಸರನ್ನು ಬರೆಯಬೇಕು.) ಇವಳಿಗೆ ಮಾಸಿಕ ಸರದಿಯ ಸಮಯದಲ್ಲಿ…….(ಯಾವ ತೊಂದರೆಯಾಗುತ್ತಿದೆಯೋ, ಅದನ್ನು ಇಲ್ಲಿ ಬರೆಯಬೇಕು.) ಈ ತೊಂದರೆಯಾಗುತ್ತಿದೆ. ಈ ತೊಂದರೆ ದೂರವಾಗಲಿ ಮತ್ತು ನನಗೆ ನೀಡಿದ ಸೇವೆ ಮತ್ತು ಸಾಧನೆ ಮಾಡಲು ಸಾಧ್ಯವಾಗಲಿ. ಅದರಲ್ಲಿ ಯಾವುದೇ ಅಡಚಣೆಗಳು ಬಾರದಿರಲಿ’.
ಈ ಸಮಯದಲ್ಲಿ ಮಾಡಬೇಕಾದ ಮುದ್ರೆ, ನ್ಯಾಸ ಮತ್ತು ನಾಮಜಪ
೨ ಅ. ಮುದ್ರೆ ಮತ್ತು ನ್ಯಾಸ : ಹೆಬ್ಬೆರಳಿನ ತುದಿಯನ್ನು ತರ್ಜನಿಯ ಮೂಲಕ್ಕೆ ತಾಗಿಸಿ ತಯಾರಾಗುವ ಮುದ್ರೆಯನ್ನು ಎರಡೂ ಕೈಗಳಿಂದ ಮಾಡಿ ಒಂದು ಕೈಯ ತರ್ಜನಿಯ ತುದಿಯಿಂದ ಸ್ವಾಧಿಷ್ಠಾನಚಕ್ರ ಮತ್ತು ಎರಡನೇ ಕೈಯ ತರ್ಜನಿಯ ತುದಿಯಿಂದ ಆಜ್ಞಾಚಕ್ರದ ಸ್ಥಳದಲ್ಲಿ ನ್ಯಾಸ ಮಾಡುವುದು
೨ ಆ. ನಾಮಜಪ : ಮೇಲಿನ ಮುದ್ರೆ ಮತ್ತು ನ್ಯಾಸ ಮಾಡಿ ಅದರೊಂದಿಗೆ ಓಂ ಓಂ ಶ್ರೀ ವಾಯುದೇವಾಯ ನಮಃ ಓಂ ಓಂ | ಈ ನಾಮಜಪವನ್ನು ತೊಂದರೆಯಾಗುತ್ತಿರುವಾಗ ಅಥವಾ ಮಾಸಿಕ ಸರದಿಯ ನಾಲ್ಕು ದಿನ ಮೊದಲಿನಿಂದ ಮಾಸಿಕ ಸರದಿಯ ೫ ದಿನಗಳ ಅವಧಿ ಪೂರ್ಣವಾಗುವವರೆಗೆ ಪ್ರತಿದಿನ ೨ ಗಂಟೆ ಮಾಡಬೇಕು.
೨ ಇ. ಈ ಉಪಾಯ ಮಾಡಿಯೂ ರಜಸ್ರಾವ ನಿಲ್ಲದಿದ್ದರೆ ಅಥವಾ ಅದರ ಪ್ರಮಾಣ ಹೆಚ್ಚಿದ್ದರೆ, ‘ಓಂ ಓಂ ಶ್ರೀ ಆಕಾಶ ದೇವಾಯ ನಮಃ ಓಂ ಓಂ |’ ಈ ನಾಮಜಪವನ್ನು ಮಾಡಬೇಕು ಹಾಗೂ ತರ್ಜನಿಯ ತುದಿಯನ್ನು ಹೆಬ್ಬೆರಳಿನ ಮೂಲಕ್ಕೆ ತಾಗಿಸಿ ತಯಾರಾಗುವ ಮುದ್ರೆಯನ್ನು ಎರಡೂ ಕೈಗಳಿಂದ ಮಾಡಿ ಒಂದು ಕೈಯ ಹೆಬ್ಬೆರಳಿನ ತುದಿಯಿಂದ ಸ್ವಾಧಿಷ್ಠಾನ ಚಕ್ರ ಮತ್ತು ಇನ್ನೊಂದು ಕೈಯ ಹೆಬ್ಬೆರಳಿನ ತುದಿಯಿಂದ ಆಜ್ಞಾಚಕ್ರದ ಸ್ಥಳದಲ್ಲಿ ನ್ಯಾಸ ಮಾಡಬೇಕು. ಮಾಸಿಕ ಸರದಿಯ ಸಮಯದಲ್ಲಿ ಇಂತಹ ತೊಂದರೆ ಯಾವಾಗಲೂ ಆಗುತ್ತಿದ್ದರೆ ಪ್ರತಿ ಬಾರಿ ಮೇಲಿನ ಉಪಾಯ ಮಾಡಬೇಕು.
– (ಪೂ.) ಡಾ. ಮುಕುಲ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೦.೫.೨೦೧೯)