ಪ.ಪೂ. ಭಕ್ತರಾಜ ಮಹಾರಾಜರು ಭಕ್ತರಿಗೆ ಪ್ರವಚನ ಅಥವ ವ್ಯಾಖ್ಯಾನವನ್ನು ತೆಗೆದುಕೊಂಡು ಕಲಿಸಿಕೊಟ್ಟಿರುವ ಪ್ರಸಂಗಗಳು ತುಂಬಾ ವಿರಳ; ಆದರೆ ಪ.ಪೂ. ಬಾಬಾರವರ ಸಹವಾಸವೆಂದರೆ ಒಂದು ರೀತಿ ಅಧ್ಯಾತ್ಮದ ನಡೆದಾಡುವ ವಿಶ್ವವಿದ್ಯಾಲಯದಂತೆ. ಭಕ್ತರಿಗೆ ಕಲಿಸಿಕೊಡುವ ಪ್ರಮುಖ ಮಾಧ್ಯಮವೇ ಭಜನೆ. ಜೊತೆಗೆ ಪ.ಪೂ. ಬಾಬಾರವರ ಮಾತು, ಅವರ ತಮಾಷೆ, ಅವರ ಸಹವಾಸದಲ್ಲಿ ನಡೆದ ಪ್ರಸಂಗಗಳಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಕ್ತರಿಗೆ ಎಷ್ಟೋ ಕಲಿಯಲು ಸಿಗುತ್ತಿತ್ತು. ಅದರಲ್ಲಿ ಕೆಲವು ಮುಖ್ಯ ಪ್ರಸಂಗಗಳನ್ನು ಈ ಕೆಳಗೆ ನೀಡುತ್ತಿದ್ದೇವೆ.
೧. ನಾಮಸಂಕೀರ್ತನೆ
‘ನಾಮ’ ಇದು ಬಾಬಾರವರ ಜೀವ ಹಾಗೂ ಪ್ರಾಣವಾಗಿತ್ತು. ಗೀತೆಯ ವಿಷಯದಲ್ಲಿ ಬಾಬಾರವರು ಮಾತನಾಡುವಾಗ ಅವರು ಯಾವಾಗಲೂ, ಗೀತೆಯ ಸಾರವೆಂದರೆ ‘ಸರ್ವಧರ್ಮ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ |’ (ಅಧ್ಯಾಯ ೧೮, ಶ್ಲೋಕ ೬೬) ಅದೇ ರೀತಿ ಬಾಬಾರವರ ಬೋಧನೆಯ ಸಾರವೆಂದರೆ ನಾಮವಾಗಿರುವುದರಿಂದ ಈ ಅಂಶವು ವಿಶೇಷವಾಗಿ ಮಹತ್ವವಾಗಿದೆ. ಬಾಬಾರವರು ನಾಮದ ವಿಷಯದಲ್ಲಿ ಮಾತನಾಡುತ್ತಿರುವಾಗ ಅದು ಎಷ್ಟೋ ಸಲ ಪಶ್ಯಂತಿ ಅಥವ ಪರಾ ವಾಣಿಯಲ್ಲಿ ನಾಮದ ಸಂದರ್ಭದಲ್ಲಿ ಇರುತ್ತಿತ್ತು. ಬದಲಾಗಿ ಬಹುತೇಕ ಸಾಧಕರ ನಾಮಸ್ಮರಣೆಯು ಪ್ರಾರಂಭದಲ್ಲಿ ವೈಖರಿ ಹಾಗೂ ನಂತರ ಮಧ್ಯಮಾ ವಾಣಿಯಲ್ಲಿ ನಡೆಯುತ್ತಿತ್ತು; ಆದ್ದರಿಂದ ಸಾಧಕರು ಪ್ರಾರಂಭದಲ್ಲಿ ನಾಮದೊಂದಿಗೆ ಸೇವೆ, ತ್ಯಾಗ, ಬೇರೆಯವರ ಮೇಲೆ ಪ್ರೇಮ (ಪ್ರೀತಿ), ಸಾಧನೆಯಲ್ಲಿ ಈ ವಿಷಯಗಳ ಮೇಲೆ ಮಹತ್ವ ನೀಡುವುದು ಅಗತ್ಯವಾಗಿರುತ್ತದೆ. ಇದರಿಂದ ಅವನು ನಾಮದಲ್ಲಿ ಪ್ರಗತಿ ಮಾಡಿ ಪರಾ ವಾಣಿಯ ತನಕ ಬರಬಹುದು, ಅಂದರೆ ನಾಮದೊಂದಿಗೆ ಐಕ್ಯವಾಗಬಹುದು.
೧ ಅ. ಪ.ಪೂ. ಬಾಬಾರವರ `ಭಜನೆ ಹಾಗೂ ನಾಮಸ್ಮರಣೆ’ ಈ ವಿಷಯದಲ್ಲಿ ವಿಚಾರ
೧ ಅ ೧. ಭಜನೆ ಹಾಗೂ ನಾಮ ಇದು ನನ್ನ ಜನ್ಮಸಿದ್ಧ ಹಕ್ಕಾಗಿದೆ.
೧ ಅ ೨. ಈಗ ಭಜನೆ ಮಾಡಿ. ನಾಮಸ್ಮರಣೆ ಮಾಡಿ. ನಾಮಸ್ಮರಣೆ ಇದು ಭಜನೆಯಾಗಿದೆ. ಸತತವಾಗಿ ಮಾಡಿರಿ.
೧ ಆ. ಭಜನೆಗಳಿಂದ ಬೋಧನೆ : ನಾಮಸಾಧನೆ ಮಾಡಿರಿ !
(ಪರಾತ್ಪರ ಗುರು) ಡಾ. ಜಯಂತ ಆಠವಲೆ : ನಮ್ಮ ಗುರುಗಳು ಹೇಳುತ್ತಿದ್ದರು, ‘ಭಜನಹೀ ಸಬ್ ಕುಛ್ ಹೈ|’ ನಾವು ಮಾತ್ರ ಭಜನೆಯಲ್ಲಿ ಹಾಗೂ ಯಾವಾಗಲೂ ಮಾತನಾಡುವಾಗ ‘ಭಜನೆ ಹೇಳಿ’ ಎಂದು ಹೇಳದೆ ‘ನಾಮಜಪ ಮಾಡಿರಿ’ ಎಂದು ಹೇಳುತ್ತೀರಲ್ಲ, ಅದು ಹೇಗೆ?
ಬಾಬಾ : ನಮ್ಮ ಗುರುಗಳು ‘ನಾಮಸ್ಮರಣೆ ಮಾಡಿ’ ಎಂದೇ ಹೇಳಿದ್ದಾರೆ. ಅವರು ‘ಭಜನೆ ಮಾಡು’, ಆ ‘ಭಜನೆ’ಯಲ್ಲಿ ‘ಭಜ’ ಈ ಶಬ್ಧವೆಂದರೆ ‘ಸಾಧನೆ ಮಾಡಿ’ ಹಾಗೂ ‘ನ’ ಈ ಅಕ್ಷರ ‘ನಾಮ’ ಎಂಬ ಅರ್ಥದಲ್ಲಿದೆ, ಅಂದರೆ ಅವರು ನುಡಿದರು ‘ನಾಮಸಾಧನೆ ಮಾಡಿರಿ’ ಹಾಗೂ ಅದನ್ನೇ ನಾನು ಹೇಳುತ್ತಿದ್ದೇನೆ.
೧ ಇ. ಶ್ವಾಸ ಹಾಗೂ ನಾಮ
೧ ಇ ೧. ನಾಮವನ್ನು ಶ್ವಾಸಕ್ಕೆ ಸೇರಿಸುವುದು : ನಾವು ಶ್ವಾಸದಿಂದ ಜೀವಂತವಾಗಿದ್ದೇವೆ, ನಾಮದಿಂದ ಅಲ್ಲ; ಆದ್ದರಿಂದ ಶ್ವಾಸದ ಮೇಲೆ ಗಮನಕೊಡುವುದು ಮಹತ್ವವಾಗಿರುವುದು ಹಾಗೂ ಆದ್ದರಿಂದಲೇ ನಾಮವನ್ನು ಶ್ವಾಸಕ್ಕೆ ಸೇರಿಸ ಬೇಕಾಗುತ್ತದೆ. ಶ್ವಾಸವನ್ನು ನಾಮದೊಂದಿಗೆ ಸೇರಿಸಬಾರದು.
೧ಇ ೧ ಅ. ನಾಮವನ್ನು ಶ್ವಾಸಕ್ಕೆ ಜೋಡಿಸುವುದರಿಂದ ಆಗುವ ಲಾಭಗಳು
೧. ಅಯೋಗ್ಯ ವಿಚಾರಗಳು ಕಡಿಮೆಯಾಗುವುದು : ಈಗ (ಅಯೋಗ್ಯ ವಿಚಾರಗಳಿಂದ) ವಾಯಮಂಡಲವು ಕೆಟ್ಟು ಹೋಗುತ್ತಿರುವುದರಿಂದ ಶ್ವಾಸದೊಂದಿಗೆ ಕೆಟ್ಟುಹೋಗಿರುವ (ದೂಷಿತ) ವಿಚಾರಗಳೂ ಕೂಡ ಮನಸ್ಸಿಗೆ ಬರುತ್ತದೆ ಹಾಗೂ ಮನೋವಿಕಾರವಾಗುತ್ತದೆ. ಅದೇ ರೀತಿ ಇತರ ವಿಚಾರಗಳು ಕೂಡ ಮನಸ್ಸಿಗೆ ಬರುತ್ತದೆ. ಶ್ವಾಸದೊಂದಿಗೆ ನಾಮಸ್ಮರಣೆ ಮಾಡುವಾಗ ಅನ್ಯ ವಿಚಾರಗಳ ಪ್ರಮಾಣವು ಅಲ್ಪವಾಗುತ್ತದೆ ಹಾಗೂ ಆದ್ದರಿಂದ ವಿಶೇಷ ಪ್ರಕಾರದ ಅನುಭವ ಬಂದಂತೆ ಜೀವಕ್ಕೆ ಭಾಸವಾಗುತ್ತದೆ.
೨. ವರ್ತಮಾನಕಾಲದಲ್ಲಿರುವುದು : ಶ್ವಾಸದ ಮೇಲೆ ಗಮನವನ್ನು ಕೇಂದ್ರೀಕರಿಸುವುದು ಅಂದರೆ ವರ್ತಮಾನಕಾಲದಲ್ಲಿ ಆ ಕ್ಷಣವನ್ನು ಹಿಡಿದುಕೊಳ್ಳುವುದು. ಬದಲಾಗಿ ಇತರ ವಿಷಯಗಳ ಬಗ್ಗೆ ವಿಚಾರ ಮಾಡುವುದು, ಅಂದರೆ ಭೂತಕಾಲದಲ್ಲಿ ಅಥವಾ ಭವಿಷ್ಯಕಾಲದ ವಿಷಯದ ಮೇಲೆ ವಿಚಾರ ಮಾಡುವುದು. ಸಾಧಕರು ಸತತ ವರ್ತಮಾನಕಾಲದಲ್ಲಿರುವುದು ಅಗತ್ಯವಾಗಿರುವುದರಿಂದ ಶ್ವಾಸದ ಮೇಲೆ ಗಮನವನ್ನು ಕೇಂದ್ರೀಕರಿಸುವುದು ಮಹತ್ತರವಾಗಿದೆ.
೩. ಸತತ ನಾಮಸ್ಮರಣೆ : ಶ್ವಾಸೋಚ್ಛಾಸವು ಇಪ್ಪತ್ತುನಾಲ್ಕು ತಾಸು ನಡೆಯುತ್ತಿರುವುದರಿಂದ ನಾಮಸ್ಮರಣೆ ಸತತವಾಗಿ ನಡೆಯಲು ಸಹಾಯವಾಗುತ್ತದೆ.
೪. ಅದ್ವೈತದ ಕಡೆ ಮಾರ್ಗಕ್ರಮಣ : ಭಕ್ತಿಮಾರ್ಗದಲ್ಲಿ ನಾಮಸ್ಮರಣೆ ಮಾಡುತ್ತಿರುವಾಗ ಭಾವದಿಂದ ಬಾಹ್ಯದಲ್ಲಿ ದೇವರ ದರ್ಶನವಾದರೂ, ಕೂಡ ಅದು ದೈವತವಾಗಿರುತ್ತದೆ. ಬದಲಾಗಿ ಶ್ವಾಸದೊಂದಿಗೆ ಸೇರಿಸಿಕೊಂಡು ನಾಮಸ್ಮರಣೆ ಮಾಡುತ್ತಿದ್ದರೆ ನಾಮದ ಮೇಲಿನ ಭಕ್ತಿಯಿಂದ ಬಾಹ್ಯ ದೇವರ ದರ್ಶನವಾಗುವುದಿಲ್ಲ, ಬದಲಾಗಿ ನಾಮಧಾರಕ ಒಂದೇ ಸಲ ಅದ್ವೈತದ ದಾರಿಯಲ್ಲಿ ಸಾಗುತ್ತಾನೆ, ಅಂದರೆ ನಾಮದೊಂದಿಗೆ ಏಕರೂಪವಾಗುತ್ತಾನೆ.
೨. ನಡವಳಿಕೆಯಿಂದ (ಪರೋಕ್ಷವಾಗಿ) ಕಲಿಸುವುದು
೨ ಅ. ಸಂತರು ಪ್ರಸಾದ ನೀಡುವುದು ಹಾಗೂ ‘ತೆಗೆದುಕೋ’ ಎಂದು ಹೇಳುವುದು, ಎರಡೂ ಕೂಡ ಒಂದೇ
ಒಮ್ಮೆ ಬಾಬಾರವರು ತಮ್ಮ ಓರ್ವ ಶಿಷ್ಯರಿಗೆ, ‘ಡಬ್ಬದಲ್ಲಿರುವ ಪ್ರಸಾದ ತೆಗೆದುಕೋ ಹಾಗೂ ನಿನ್ನ ಕಾಯಿಲೆಯನ್ನು ತಾಯಿಗೆ ನೀಡು’. ಅದೇನೆಂದು ಅವರ ಗಮನಕ್ಕೆ ಬರಲಿಲ್ಲ, ಬಾಬಾರವರು ಪ್ರಸಾದ ‘ತೆಗೆದುಕೋ’ ಹಾಗೂ ‘ನೀಡು’ ಅದರಲ್ಲಿ ಆಶೀರ್ವಾದ ಸ್ವರೂಪದ ಶಕ್ತಿಯಂತೂ ಬಂತು; ಆದ್ದರಿಂದ ಅವರು ಬಾಬಾರವರಿಗೆ ಹೇಳಿದರು, ‘ಬಾಬಾ, ನೀವು ನಿಮ್ಮ ಕೈಯ್ಯಾರೆ ಪ್ರಸಾದ ನೀಡಿ’. ಆಗ ಅವರಿಗೆ ಕಲಿಸಲು ಬಾಬಾರವರು ಪ್ರಸಾದವನ್ನು ತಮ್ಮ ಕೈಯಲ್ಲಿ ತೆಗೆದುಕೊಂಡು, ಅದರ ಮೇಲೆ ಊದಿದರು ಹಾಗೂ ನಗುತ್ತಾ ನುಡಿದರು, ‘ಈಗ ನಾನು ಇದರಲ್ಲಿ ಶಕ್ತಿಯನ್ನು ಹಾಕಿದ್ದೇನೆ !’
೨ ಆ. ಮತ್ತೊಬ್ಬರ ಅನುಕೂಲವನ್ನು ನೋಡುವುದು
೨ ಆ ೧. ರಾತ್ರಿ ಮಧ್ಯರಾತ್ರಿ ಹೀಗೆ ಯಾರ ಮನೆಗೇನಾದರೂ ಸಮಯವಲ್ಲದ ಸಮಯಕ್ಕೆ ಹೋದರೆ, ಆಗ ಮನೆಯ ಘಂಟೆಯನ್ನು ಒತ್ತಿದ ಬಳಿಕ ಸ್ವಲ್ಪ ಹೊತ್ತು ಹೊರಗೆ ವಾಹನದಲ್ಲಿ ನಿಲ್ಲುತ್ತಿದ್ದರು. ಮನೆಯವರು ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ನೀಡಿದ ಬಳಿಕ ಒಳಗೆ ಪ್ರವೇಶಿಸುತ್ತಿದ್ದರು.
೨ ಆ ೨. ಬಾಬಾರವರು ಯಾರದ್ದಾದರೂ ಮನೆಗೆ ತಡವಾಗಿ ಹೋದಾಗ ಊಟ, ತರಕಾರಿ ಇತ್ಯಾದಿಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಿದ್ದರು.
೨ ಆ ೩. ಬಾಬಾರವರು ಯಾರ ಮನೆಗೆ ಹೋದಾಗಲೂ, ಅಲ್ಲಿ ಜನಜಂಗುಳಿಯಿರುತ್ತಿತ್ತು. ಬೆಳಿಗ್ಗೆ – ಸಾಯಂಕಾಲ ಭಂಡಾರ ನಡೆಯುತ್ತಿತ್ತು. ಬಾಬಾರವರು ಅಲ್ಲಿರುವ ತನಕ ಅವರ ಅಸ್ತಿತ್ವದ ಸಾಕಷ್ಟು ಶಕ್ತಿಯಿಂದ ಅಲ್ಲಿರುವವರೆಲ್ಲರೂ ಉತ್ಸಾಹದಿಂದ ಕೆಲಸ ಮಾಡಬಹುದು. ಬಾಬಾರವರು ಅಲ್ಲಿಂದ ಹೋದ ಬಳಿಕ ಬಹುತೇಕರಿಗೆ ಒಂದೆರಡು ದಿನ ಆಯಾಸವಾದಂತೆ ಆಗುತ್ತಿತ್ತು. ಯಾರಿಗೂ ಕೂಡ ಹೆಚ್ಚು ಆಯಾಸವಾಗಬಾರದು, ಎಂದು ಬಾಬಾರವರು ಯಾರ ಬಳಿಯಲ್ಲಿಯೂ ಸಾಧ್ಯವಾದಷ್ಟು ಒಂದೆರಡು ದಿನಗಳಿಗಿಂತ ಹೆಚ್ಚು ದಿನ ಇರುತ್ತಿರಲಿಲ್ಲ.
೨ ಇ. ಎಲ್ಲವನ್ನೂ ಉತ್ಕೃಷ್ಟವಾಗಿ ಮಾಡಬೇಕು
೨ ಇ ೧. ೧೯೯೨ರ ಶ್ರೀರಾಮನವಮಿ ಉತ್ಸವಕ್ಕೆಂದು ಮೊಟ್ಟಮೊದಲ ಬಾರಿಗೆ ಗೋವಾದಿಂದ ಶಿಷ್ಯರು ಹೋಗಿದ್ದರು. ಅನಾರೋಗ್ಯದ ಕಾರಣ ಮೂರು-ನಾಲ್ಕು (ತಿಂಗಳು) ಬಾಬಾರವರು ಭಜನೆ ಮಾಡಿರಲಿಲ್ಲ ಹಾಗೂ ಆ ದಿನ ರಾತ್ರಿ ಬಾಬಾರವರು ಭಜನೆ ಮಾಡುವವರಿದ್ದರು. ಅದಕ್ಕಾಗಿ ಸ್ವರ (ಧ್ವನಿ) ಬರಲಿ; ಎಂಬುದಕ್ಕಾಗಿ ಬಾಬಾರವರು ಮಧ್ಯಾಹ್ನ ಭಜನೆಯ ಅಭ್ಯಾಸ ಮಾಡಿದ್ದರು.
೨ ಇ ೨. ಭಂಡಾರದ ಸಮಯದಲ್ಲಿ ಬಾಬಾರವರೇ ಸ್ವತಃ ಅಡುಗೆ ಮನೆಯಲ್ಲಿ ಪ್ರತಿಯೊಂದು ಪದಾರ್ಥದ ರುಚಿ ನೋಡುತ್ತಿದ್ದರು. ಅದರಲ್ಲಿ ಹೆಚ್ಚು-ಕಡಿಮೆ ಏನಾದರೂ ಹಾಕಬೇಕಾಗಿದ್ದರೆ ಹಾಗೆ ಹೇಳುತ್ತಿದ್ದರು. ಅಡುಗೆ ಅವರ ಮನಸ್ಸಿಗೆ ಬಂದ ಹಾಗೆ ತಯಾರಾದ ಬಳಿಕವೇ ಅದನ್ನು ಬಡಿಸಲು ಹೇಳುತ್ತಿದ್ದರು. ‘ಯೋಗಃ ಕರ್ಮಸು ಕೌಶಲಮ್’ (ಶ್ರೀಮದ್ಭಗವದ್‌ಗೀತಾ, ಅಧ್ಯಾಯ ೨, ಶ್ಲೋಕ ೫೦) ಏನು ಮಾಡಿದರೂ ಕೂಡ ಅದನ್ನು ಕರಕುಶಲವಾಗಿ ಹಾಗೂ ಉತ್ಕೃಷ್ಟವಾಗಿಯೇ ಮಾಡಬೇಕು, ಎಂಬ ತತ್ವಜ್ಞಾನದಲ್ಲಿ ಬಾಬಾರವರು ಬಾಳುತ್ತಿದ್ದರು.
೨ ಇ ೩. ಸಂತದರ್ಶನ, ಸಂತಸೇವೆ ಹಾಗೂ ತೀರ್ಥಯಾತ್ರೆ : ಬಾಬಾರವರು ಯಾವಾಗಲೂ ಶಿಷ್ಯರನ್ನು ಕರೆದುಕೊಂಡು ಬೇರೆ ಬೇರೆ ಸಂತರನ್ನು ಭೇಟಿಯಾಗಲು ಹಾಗೂ ತೀರ್ಥಯಾತ್ರೆಗೆಂದು ಹೋಗುತ್ತಿದ್ದರು. ಶಿಷ್ಯರಿಗೆ ತೀರ್ಥಯಾತ್ರೆಯ ಮಹತ್ವ ತಿಳಿಯಲಿ, ಅವರಲ್ಲಿ ಸೇವಾವೃತ್ತಿ ಹಾಗೂ ಸಾಧನೆಯ ಬಗ್ಗೆ ಪ್ರೀತಿ ನಿರ್ಮಾಣವಾಗಲಿ, ಎಂಬ ಉದ್ದೇಶವಿರುತ್ತಿತ್ತು. ಸ್ವತಃ ಗುರುಪದವಿಗೆ ತಲುಪಿದ ಬಳಿಕ ಬಾಬಾರವರು ‘ಬಾಲ್ಯ, ವಾನಸ್ಪತ್ಯ, ಪೈಶಾಚಿಕ’ ಹೀಗೆ ವಿವಿಧ ಅವಸ್ಥೆಯಲ್ಲಿನ, ಹಾಗೂ ಕರ್ಮಕಾಂಡ, ಯೋಗಮಾರ್ಗ ಇತ್ಯಾದಿ ಮಾರ್ಗದಿಂದ ಸಂತರ ಸೇವೆಯನ್ನು ‘ಅವರು ನಮ್ಮ ಗುರುಗಳ ಒಂದು ಸ್ವರೂಪವಾಗಿದ್ದಾರೆ’, ಎಂದು ತಿಳಿದು ಮಾಡಿದರು.
೨ ಈ. ಕತೃತ್ವವನ್ನು ಭಗವಂತನಿಗೆ ಅರ್ಪಿಸುವುದು
ಬಾಬಾರವರ ಮಗ ರವೀಂದ್ರನ ವಿವಾಹವು ಸರಿಯಾಗಿ ಮಳೆಗಾಲದಲ್ಲಿ ಜೂನ್ ೧೮, ೧೯೯೪ರಂದು ಕಾಂದಳಿಯ ಆಶ್ರಮದಲ್ಲಿ ನಡೆಯಬೇಕಿತ್ತು. ವಿವಾಹಕ್ಕೆ ಬರುವ ಅಥಿತಿಗಳನ್ನು ಮಳೆಯಿಂದ ರಕ್ಷಿಸುವಷ್ಟು ಕಟ್ಟಡ ನಿರ್ಮಾಣ ವಾಗಿರಲಿಲ್ಲ; ಆದ್ದರಿಂದ ಕೆಲವರಿಗೆ ಬಾಬಾರವರು ಹೀಗೇಕೆ ಮಾಡಿದರು ಎಂದು ಅನಿಸಿತು. ಸ್ಥಳೀಯ ಭಕ್ತರು ನಾರಾಯಣಗಾವ್‌ನಲ್ಲಿ ವಿವಾಹಕ್ಕೆಂದು ಸಭಾಂಗಣವನ್ನು ಪಡೆದುಕೊಂಡು ಅಲ್ಲಿ ಉಳಿಯುವ ಸೌಕರ್ಯವನ್ನು ಮಾಡಿದ್ದರು. ನಾವು [(ಪರಾತ್ಪರ ಗುರು) ಡಾ. ಆಠವಲೆ ಹಾಗೂ ಇತರರು], ಮಳೆ ಬಂದರೆ ಓತೂರಿನಲ್ಲಿರುವ ಸ್ನೇಹಿತರ ಮನೆಯಲ್ಲಿ ಉಳಿಯಬೇಕೆಂದು ನಿರ್ಧರಿಸಿದೆವು ! ಯಾರಿಗೂ ಕೂಡ ಬಾಬಾರವರ ಕೃಪೆಯಿಂದ ಎಲ್ಲವೂ ಸರಿಯಾಗಿರುವುದು ಅಥವ ಮಳೆ ಬಂದರೆ ಅದರಲ್ಲಿ ನೆನೆದರೇನು, ಅದರಲ್ಲೇನು ಎಂದು ಅನಿಸಲಿಲ್ಲ. ವಿವಾಹದ ಮೊದಲು ಸತತ ಮೂರು ದಿನಗಳ ತನಕ ಜೋರಾದ ಮಳೆ ಸುರಿಯುತ್ತಿತ್ತು. ಆದರೆ ವಿವಾಹದ ಹಿಂದಿನ ದಿನ ಮಳೆ ಬರಲಿಲ್ಲ. ಆದ್ದರಿಂದ ನೆಲ ಕೂಡ ಸ್ವಲ್ಪ ಒಣಗಿತು. ರಾತ್ರಿ ಅಷ್ಟೂ ಜನರು ತೆರೆದ ಮಂಟಪದ ಕೆಳಗೆ ಮಲಗಿಕೊಳ್ಳಲು ಸಾಧ್ಯವಾಯಿತು. ಮರುದಿನ ಬೆಳಿಗ್ಗೆ ಬಾಬಾರವರು ನುಡಿದರು, ‘ಗುರುಗಳ ಕೃಪೆ ಹೇಗಿತ್ತು ! ರಾತ್ರಿ ಮಲಗಿಕೊಳ್ಳಲು ಅಡಚಣೆಯಾಗಲಿಲ್ಲ. ಈಗ ವಿವಾಹವಾದ ಬಳಿಕ ಸಾಕಷ್ಟು ಪಂಗತಿಗಳು ತೆಗೆದುಕೊಳ್ಳಿರಿ.’ ನಂತರ ನಿಜವಾಗಿಯೂ ವಿವಾಹಾಕ್ಷತೆಯಾದ ಬಳಿಕ ಮಳೆ ಪ್ರಾರಂಭವಾಯಿತು. ಬಾಬಾರವರಿಂದಾಗಿ ಮಳೆ ಬರಲಿಲ್ಲ; ಆದರೆ ಅವರು ಅದರ ಶ್ರೇಯಸ್ಸನ್ನು ತೆಗೆದುಕೊಳ್ಳಲಿಲ್ಲ.
(ಆಧಾರ : ಸನಾತನ-ನಿರ್ಮಿತ ‘ಸಂತ ಭಕ್ತರಾಜ ಮಹಾರಾಜರ ಬೋಧನೆ’ ಮಾಲಿಕೆಯಲ್ಲಿ ಖಂಡ ೩ ‘ನಾಮದ ಮಹತ್ವ ಹಾಗೂ ಬೋಧನೆಯ ವಿವಿಧ ಪದ್ಧತಿ’)