ಪ.ಪೂ. ಭಕ್ತರಾಜ ಮಹಾರಾಜರು ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರ ಗುರುಗಳು. ಪರಾತ್ಪರ ಗುರು ಡಾ. ಆಠವಲೆಯವರು ಉನ್ನತ ವ್ಯಾಸಂಗ ಮಾಡಿದವರಾಗಿದ್ದರೂ, ಅವರು ಪ.ಪೂ.ಭಕ್ತರಾಜ ಮಹಾರಾಜರಿಗೆ ತನು-ಮನ-ಧನವನ್ನು ಅರ್ಪಿಸಿ ಪರಿಪೂರ್ಣ ಸೇವೆ ಮಾಡಿದರು. ಆದ್ದರಿಂದಲೇ ಪ.ಪೂ. ಭಕ್ತರಾಜ ಮಹಾರಾಜರು ಅವರಿಗೆ ‘ಡಾಕ್ಟರ್, ನಿಮಗೆ ಜ್ಞಾನ, ಭಕ್ತಿ ಮತ್ತು ವೈರಾಗ್ಯವನ್ನು ನೀಡಿದ್ದೇನೆ,’ ಎಂದು ಹೇಳಿದರು. ನಾವು ಅನುಭವಿಸಿದ ಅವರ ಶಿಷ್ಯರೂಪದ ಈ ವರ್ತನೆಯು ಎಲ್ಲ ಸಾಧಕರಿಗೆ ಮಾರ್ಗದರ್ಶಕ ವಾಗಲಿಯೆಂದು ಅದನ್ನು ಇಲ್ಲಿ ಕೊಡುತ್ತಿದ್ದೇವೆ. ಪ.ಪೂ.ಡಾಕ್ಟರ್ ಮುಂಬಯಿಯಲ್ಲಿದ್ದು ಗ್ರಂಥ ಬರವಣಿಗೆಯ ಕಾರ್ಯ, ಪ್ರಸಾರ-ಪ್ರಚಾರದ ಕಾರ್ಯದಂತಹ ವಿವಿಧ ಸೇವೆಗಳನ್ನು ಮಡುತ್ತಿದ್ದರು. ಆ ಸಮಯದಲ್ಲಿ ಪ್ರತಿಯೊಂದು ಭಂಡಾರಕ್ಕೆ ಪ.ಪೂ. ಡಾಕ್ಟರರು ಹೋಗುತ್ತಿದ್ದರು. ಅಷ್ಟು ಮಾತ್ರವಲ್ಲ, ದೀಪಾವಳಿ-ದಸರಾ ದಂತಹ ಹಬ್ಬಗಳಿಗೂ ಪ.ಪೂ.ಬಾಬಾ ಎಲ್ಲಿರುತ್ತಾರೊ, ಅಲ್ಲಿಗೆ ಪ.ಪೂ. ಡಾಕ್ಟರರನ್ನು ಕರೆಯುತ್ತಿದ್ದರು.
ಪರಾತ್ಪರ ಗುರು ಡಾ. ಆಠವಲೆಯವರು ಮಾಡಿದ ಪ.ಪೂ.ಬಾಬಾರವರ ಸಗುಣ ಸೇವೆ
ಅ. ಪ.ಪೂ.ಡಾಕ್ಟರರು ಪ.ಪೂ. ಬಾಬಾರವರ ಕಾಲು ಒತ್ತುತ್ತಿದ್ದರು. ಕಾಲುಗಳನ್ನು ಒತ್ತುವಾಗಲೂ ಪ್ರೇಮದಿಂದ ಹಾಗೂ ನಿಧಾನವಾಗಿ ಒತ್ತುವುದು.
ಆ. ಪ.ಪೂ. ಮಹಾರಾಜರ ಪ್ರತಿಯೊಂದು ಮಾತಿನ ಮೇಲೆ ಪ.ಪೂ. ಡಾಕ್ಟರರ ಗಮನವಿರುತ್ತಿತ್ತು.
ಇ. ಪ.ಪೂ. ಮಹಾರಾಜರು ಮೂತ್ರ ವಿಸರ್ಜನೆಗಾಗಿ ಎದ್ದರೆ, ಪ.ಪೂ.ಡಾಕ್ಟರರು ತಕ್ಷಣ ಅವರಿಗೆ ಬಾಗಿಲು ತೆರೆಯುತ್ತಿದ್ದರು. ಪ.ಪೂ. ಮಹಾರಾಜರು ಬರುವ ವರೆಗೆ ಅವರ ಹಾಸಿಗೆಯನ್ನು ಸರಿಪಡಿಸಿ ದಿಂಬಿನ ಹೊದಿಕೆಯನ್ನು ಸರಿಪಡಿಸಿ ಇಡುತ್ತಿದ್ದರು. ಕೈಯಲ್ಲಿ ಸಣ್ಣ ಟವೆಲ್ ಹಿಡಿದುಕೊಂಡು ಅವರ ದಾರಿ ಕಾಯುತ್ತಾ ನಿಲ್ಲುತ್ತಿದ್ದರು. ಮಹಾರಾಜರು ಬಂದನಂತರ ಅವರ ಕಾಲುಗಳನ್ನು ಒರೆಸಿ ಅವರು ಕುಳಿತ ನಂತರವೇ ಪ.ಪೂ. ಡಾಕ್ಟರರು ಕುಳಿತುಕೊಳ್ಳುತ್ತಿದ್ದರು.
ಈ. ಕೆಲವೊಮ್ಮೆ ವಿದ್ಯುತ್ ಇಲ್ಲದಿದ್ದರೆ ಪ.ಪೂ. ಡಾಕ್ಟರರೇ ದಿನವಿಡೀ ಸ್ವತಃ ಬೀಸಣಿಗೆಯಿಂದ ಗಾಳಿ ಹಾಕುತ್ತಾ ಕುಳಿತುಕೊಳ್ಳುತ್ತಿದ್ದರು.
ಉ. ಪ.ಪೂ. ಮಹಾರಾಜರು ಹೊರಗೆ ಹೋಗಲು ಎದ್ದ ತಕ್ಷಣ ಪ.ಪೂ.ಡಾಕ್ಟರರು ಅವರಿಗಿಂತ ಮೊದಲು ಎದ್ದು ಹೊರಗೆ ಬರುತ್ತಿದ್ದರು ಹಾಗೂ ಪ.ಪೂ. ಮಹಾರಾಜರಿಗೆ ಚಪ್ಪಲಿ ತಂದು ಕೊಡುತ್ತಿದ್ದರು.
ಊ. ರಾತ್ರಿ ಎಷ್ಟೇ ತಡವಾದರೂ ಪ.ಪೂ. ಮಹಾರಾಜರು ಹೋಗಲು ಹೇಳುವ ತನಕ ಪ.ಪೂ. ಡಾಕ್ಟರರು ಅಲ್ಲಿಂದ ಏಳುತ್ತಿರಲಿಲ್ಲ ಅಥವಾ ‘ಹೋಗಲೆ ?’ ಎಂದು ಕೇಳುತ್ತಿರಲೂ ಇಲ್ಲ. ಪ.ಪೂ.ಮಹಾರಾಜರು ‘ಹೋಗು’ ಎಂದು ಆಜ್ಞೆ ನೀಡಿದ ನಂತರವೇ ಪ.ಪೂ. ಡಾಕ್ಟರರು ಏಳುತ್ತಿದ್ದರು. – (ಸದ್ಗುರು) ಶ್ರೀ. ಸತ್ಯವಾನ ಕದಮ್
ಪ.ಪೂ. ಭಕ್ತರಾಜ ಮಹಾರಾಜರು ಪರಾತ್ಪರ ಗುರು ಡಾ. ಆಠವಲೆ ಇವರಿಗೆ ಆಶೀರ್ವಾದ ಸ್ವರೂಪದಲ್ಲಿ ನೀಡಿದ ವಸ್ತುಗಳು
ಅಮೃತ ಮಹೋತ್ಸವದ ಸಮಯದಲ್ಲಿ ಪ.ಪೂ. ಬಾಬಾರವರು ಪರಾತ್ಪರ ಗುರು ಡಾ. ಆಠವಲೆಯವರಿಗೆ ನೀಡಿದ ಬೆಳ್ಳಿಯ ಶ್ರೀ ಕೃಷ್ಣಾರ್ಜುನ ರಥ (೧೯೯೫)
೮ ಮತ್ತು ೯.೨.೧೯೯೫ ರಂದು ದುರ್ಲಭವಾದಂತಹ ಪ.ಪೂ. ಬಾಬಾ ಇವರ ಅಮೃತ ಮಹೋತ್ಸವ ಸಮಾರಂಭವು ನಡೆಯಿತು. ಅದಕ್ಕಾಗಿ ನಾವೆಲ್ಲರೂ ಬಹಳ ಪರಿಶ್ರಮ ಪಟ್ಟಿದ್ದೆವು. ಮಹೋತ್ಸವ ಮುಗಿದ ನಂತರ ಬಾಬಾ ಇವರು ನನ್ನನ್ನು ಕರೆದು ಶ್ರೀಕೃಷ್ಣ-ಅರ್ಜುನರ ಮಹತ್ವವನ್ನು ಹೇಳಿದರು. ತರುವಾಯ ನನ್ನ ಕೈಯಲ್ಲಿ ಶ್ರೀಕೃಷ್ಣ-ಅರ್ಜುನರಿರುವ ಒಂದು ಬೆಳ್ಳಿಯ ರಥವನ್ನು ಕೊಟ್ಟು, ‘ಗೋವಾದಲ್ಲಿ ನಮ್ಮ ಕಾರ್ಯಾಲಯವಾಗುವುದು, ಇದನ್ನು ಅಲ್ಲಿಡಿ !’ ಎಂದು ಹೇಳಿದರು. ಮುಂದೆ ನಾನು ಈ ವಿಷಯವನ್ನು ಮರೆತೆ. ಮುಂದೆ ಸನಾತನ ಸಂಸ್ಥೆಯ ಸಾರ್ವಜನಿಕ (ಜಾಹೀರು) ಸಭೆಗಳಿಗಾಗಿ ನಾವು ರಥದ ಮೇಲಿರುವ ಶ್ರೀಕೃಷ್ಣ-ಅರ್ಜುನರ ಚಿತ್ರವನ್ನು ವ್ಯಾಸಪೀಠದ ಮೇಲೆ ಹಾಕಲು ತಯಾರಿಸಿಕೊಂಡೆವು. ಆಗ ಇತರರು ನನಗೆ ಈ ಪ್ರಸಂಗವನ್ನು ನೆನಪು ಮಾಡಿಕೊಟ್ಟರು. ಸನಾತನ ಸಂಸ್ಥೆಯ ಮುಖ್ಯ ಕಾರ್ಯಾಲಯವು (ಆಶ್ರಮವು) ಈಗ ಗೋವಾದಲ್ಲಿಯೇ ಇದೆ.
೧೯೯೩ ರಲ್ಲಿ ‘ನನ್ನ ವಾಹನ ಹಳೆಯದಾಗಿದೆ ಮತ್ತು ಹೊಸ ವಾಹನವನ್ನು ಖರೀದಿಸಲು ಹಣ ಇಲ್ಲದಿರುವುದರಿಂದ ಪ್ರಸಾರಕ್ಕಾಗಿ ಎಲ್ಲ ಕಡೆಗಳಿಗೆ ಹೋಗುವುದು ನನಗೆ ಕಷ್ಟವಾಗುತ್ತಿದೆ’, ಎಂದು ಪ.ಪೂ. ಬಾಬಾರವರಿಗೆ ಹೇಳಿದ ಬಳಿಕ ಅವರು ತಮ್ಮ ಅಂಬಾಸಿಡರ್ ವಾಹನವನ್ನು ನನಗೆ ಕೊಟ್ಟರು. ಈ ಕಾರ್ಯಕ್ಕೆ ಆಶೀರ್ವಾದ ಎಂಬಂತೆ ಬಾಬಾ ೧೯೯೩ ರಲ್ಲಿ ತಮ್ಮ ವಾಹನದ ಧ್ವಜವನ್ನು ನನಗೆ ಕೊಟ್ಟು, ‘ಈ ಧ್ವಜವನ್ನು ಹಚ್ಚಿ ಧರ್ಮಪ್ರಚಾರಕ್ಕಾಗಿ ಎಲ್ಲ ಕಡೆಗೆ ತಿರುಗಾಡಿ’ ಎಂದು ಹೇಳಿದರು !
– (ಪರಾತ್ಪರ ಗುರು) ಡಾ. ಜಯಂತ ಆಠವಲೆ