ಸನಾತನ ಸಂಸ್ಥೆ ಹೇಗೆ ಸ್ಥಾಪನೆಯಾಯಿತು ? ನಿಮಗಿದು ನೆನಪಿದೆಯೇ ? ೧೯೯೧ ನೇ ಇಸವಿಯಲ್ಲಿ ಒಂದು ದಿನ ನನಗೆ ಡಾ. (ಸೌ.) ಕುಂದಾತಾಯಿ ಯವರ ಕರೆ ಬಂದಿತು, “ಬಾಬಾ (ಪ.ಪೂ. ಭಕ್ತರಾಜ ಮಹಾರಾಜ) ನಾಶಿಕಗೆ ಬಂದಿದ್ದಾರೆ. ನಾವು ಅವರನ್ನು ನಾಳೆ ಬೆಳಗ್ಗೆ ಭೇಟಿಯಾಗಲು ಹೋಗೋಣ” ಎಂದು ಅವರು ಹೇಳಿದರು. ಮಾರನೇ ದಿನ ನಾನು, (ಪರಾತ್ಪರ ಗುರು) ಡಾ. ಆಠವಲೆ ಹಾಗೂ ಸೌ. ಕುಂದಾತಾಯಿ ನಾಶಿಕಗೆ ಹೋದೆವು. ಆ ದಿನ ನಾವು ಪ.ಪೂ. ಬಾಬಾರವರ ಸನ್ನಿಧಿಯಲ್ಲಿ ಸಮಯ ಕಳೆದೆವು. ಆಗ ಪ.ಪೂ. ಬಾಬಾರವರ ನಿವಾಸ ಉಂಟವಾಡಿಯಲ್ಲಿರುವ ಶ್ರೀ. ಗಿರೀಶ ದೀಕ್ಷಿತ ಇವರ ಮನೆಯಲ್ಲಿತ್ತು. ನಾವು ಸಹ ರಾತ್ರಿ ಅಲ್ಲೇ ಉಳಿದುಕೊಂಡೆವು. ಮಾರನೇ ದಿನ ಬೆಳಗ್ಗೆ ಬಾಬಾರವರು ಮಂಚದ ಮೇಲೆ ಮಲಗಿದ್ದರು. ಅವರ ಎದುರು (ಪರಾತ್ಪರ ಗುರು) ಡಾ. ಆಠವಲೆಯವರು ಕುಳಿತಿದ್ದರು. ದಾದಾರವರು ಕೂಡ (ಪ.ಪೂ. ರಮಾನಂದ ಮಹಾರಾಜ) ಇದ್ದರು ಮತ್ತು ನಾವೆಲ್ಲರೂ ಪಕ್ಕದಲ್ಲಿ ಕುಳಿತಿದ್ದೆವು.
ಆಗ ಡಾಕ್ಟರ್ (ಪರಾತ್ಪರ ಗುರು ಡಾ. ಆಠವಲೆ) ಇವರು, ‘ನಾವು ಸನಾತನ ಧರ್ಮದ ಪ್ರಸಾರವನ್ನು ಮಾಡಲು ಒಂದು ಸಂಸ್ಥೆಯನ್ನು ಸ್ಥಾಪಿಸಬೇಕು !’ ಎಂದು ಹೇಳಿದರು. ಇದಕ್ಕೆ ಪ.ಪೂ. ಬಾಬಾ ಇವರು, ‘ತುಂಬಾ ಒಳ್ಳೆಯ ವಿಚಾರ!. ನೀವು ಆರಂಭಿಸಿ. ಅದಕ್ಕಾಗಿ ನೇತೃತ್ವ ವಹಿಸಿ ಇದನ್ನು ಮಾಡಿ ಎಂದು ಹೇಳಿದರು’. ಇದೆಲ್ಲ ಚರ್ಚೆಯಾದ ಮೇಲೆ, ಸಂಸ್ಥೆಗೆ ಏನು ಹೆಸರು ಇಡಬೇಕು ? ಎಂಬ ಪ್ರಶ್ನೆ ನಿರ್ಮಾಣವಾಯಿತು. ಅಷ್ಟರಲ್ಲೇ ಮಂಚದ ಮೇಲೆ ಮಲಗಿದ್ದ ಸ್ಥಿತಿಯಲ್ಲೇ ಪ.ಪೂ. ಬಾಬಾ ಇವರು, “ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ !” ಎಂದು ದೊಡ್ಡದಾಗಿ ಕೂಗಿ ಹೇಳಿದರು, ಅಂದಿನಿಂದ ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ ಹುಟ್ಟಿತು !
– ಶ್ರೀ. ಜಯಂತ ಬೋರಕರ, ವಿಕ್ರೋಳಿ, ಮುಂಬೈ. (೨೩.೨.೨೦೧೫)
ಸನಾತನವನ್ನು ನಾನು ನಡೆಸುವೆನು !
ಪ.ಪೂ. ಭಕ್ತರಾಜ ಮಹಾರಾಜ (ಪ.ಪೂ. ಬಾಬಾ) ಒಮ್ಮೆ ಮಂಚದ ಮೇಲೆ ಮಲಗಿದ್ದರು. ನಾನು ಅಲ್ಲಿಯೇ ನಿಂತಿದ್ದೆನು. ಮಧ್ಯದಲ್ಲಿಯೇ ಅವರು ಹಠಾತ್ತಾಗಿ ಎದ್ದರು ಹಾಗೂ ಬೆರಳು ಮುಂದೆ ಮಾಡಿ, ‘ಸನಾತನವನ್ನು ನಾನು ನಡೆಸುವೆನು !’ ಎಂದು ಹೇಳಿದರು. – ಶ್ರೀ. ಅನಿಲ ಜೋಗ, ಇಂದೂರ (೧೯೯೫)
ಪ್ರತ್ಯಕ್ಷದಲ್ಲಿಯೂ ೧.೮.೧೯೯೧ ರಂದು ಸಂತ ಭಕ್ತರಾಜ ಮಹಾರಾಜರ ಕೃಪಾಶೀರ್ವಾದದಿಂದ ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆಯ’ ಸ್ಥಾಪನೆಯಾಯಿತು ತದನಂತರ (ಪರಾತ್ಪರ ಗುರು) ಡಾಕ್ಟರರು ತೆಗೆದುಕೊಂಡ ಅಭ್ಯಾಸ ವರ್ಗ, ಆಯೋಜಿಸಲಾಗಿದ್ದ ಪ.ಪೂ. ಬಾಬಾರವರ ಗುರುಪೂರ್ಣಿಮಾ ಮಹೋತ್ಸವ, ಅದೇರೀತಿ ೧೯೯೬ ರಿಂದ ೧೯೯೮ ರ ಕಾಲಾವಧಿಯಲ್ಲಿ ಅವರು ತೆಗೆದುಕೊಂಡ ನೂರಾರು ಜಾಹೀರು ಸಭೆ ಇವುಗಳಿಂದಾಗಿ ಸಾವಿರಾರು ಜಿಜ್ಞಾಸುಗಳು ಹಾಗೂ ನೂರಾರು ಸಾಧಕರು ಸಂಸ್ಥೆಯೊಂದಿಗೆ ಜೋಡಿಸಲ್ಪಟ್ಟರು. ಮುಂದೆ ಅಧ್ಯಾತ್ಮಪ್ರಸಾರದ ವ್ಯಾಪ್ತಿ ಹೆಚ್ಚಾದನಂತರ ಪರಾತ್ಪರ ಗುರು ಡಾ. ಆಠವಲೆ ಇವರು ೨೨ ಮಾರ್ಚ ೧೯೯೯ ರಂದು ಸನಾತನ ಸಂಸ್ಥೆಯ ಸ್ಥಾಪನೆ ಮಾಡಿದರು. ಪ.ಪೂ. ಭಕ್ತರಾಜ ಮಹಾರಾಜರ ಸದಾ ಆಶೀರ್ವಾದ ಲಭಿಸಿದ ಈ ಸಂಸ್ಥೆಯ ಕಾರ್ಯದ ವಿಸ್ತಾರವು ಇಂದು ಅನೇಕ ಪಟ್ಟುಗಳಲ್ಲಿ ಹೆಚ್ಚಾಗಿದ್ದು ಸಾವಿರಾರು ಸಾಧಕರು ಸನಾತನದ ಮಾರ್ಗದರ್ಶನಕ್ಕನುಸಾರ ಸಾಧನೆಯನ್ನು ಮಾಡುತ್ತಿದ್ದಾರೆ. – ಸಂಪಾದಕರು