ಪ.ಪೂ. ಭಕ್ತರಾಜ ಮಹಾರಾಜರ ಆಧ್ಯಾತ್ಮಿಕ ಚರಿತ್ರೆಯೊಂದಿಗೆ ಪ.ಪೂ. ರಾಮಾನಂದ ಮಹಾರಾಜರ (ಅಂದಿನ ರಾಮಜೀದಾದಾ) ಆಧ್ಯಾತ್ಮಿಕ ಚರಿತ್ರೆಯು ಎಷ್ಟು ಹೊಂದಾಣಿಕೆಯಾಗುತ್ತದೆಯೆಂದರೆ ಬಾಬಾರವರ ಚರಿತ್ರೆಯೇ ದಾದಾರವರ ಚರಿತ್ರೆಯಲ್ಲಿ ಸಮಾವೇಶವಾಗಿದೆಯೆಂದು ಎಂದು ಹೇಳಿದರೆ, ತಪ್ಪಾಗದು. ಆದ್ದರಿಂದಲೇ ಪ.ಪೂ. ರಾಮಾನಂದ ಮಹಾರಾಜರ ವಿಷಯದಲ್ಲಿ ಬೇರೆ ಏನೂ ಬರೆಯದೆ ಮಹತ್ವದ ಕೆಲವು ವಿಷಯಗಳನ್ನು ಮಾತ್ರ ಇಲ್ಲಿ ಹೇಳಲಾಗಿದೆ.
ಪ.ಪೂ. ಭಕ್ತರಾಜ ಮಹಾರಾಜರ (ಪ.ಪೂ.ಬಾಬಾ) ನಂತರ ಅವರ ಉತ್ತರಾಧಿಕಾರಿ ಪ.ಪೂ. ರಾಮಾನಂದ ಮಹಾರಾಜರು ಪ.ಪೂ. ಬಾಬಾರವರ ಹಾಗೆಯೇ ಸನಾತನಕ್ಕೆ ಕೃಪಾಛತ್ರ ನೀಡಿದರು. ಸನಾತನದ ಕಠಿಣ ಕಾಲದಲ್ಲಿ ಅವರಂತಹ ಸಂತರ ಆಶೀರ್ವಾದದಿಂದಲೇ ನಾವು ಆ ಸಂಕಟವನ್ನು ಎದುರಿಸಲು ಸಾಧ್ಯವಾತು. ಪ.ಪೂ. ರಾಮಾನಂದ ಮಹಾರಾಜರು ಆಗಾಗ ಸನಾತನದ ಆಶ್ರಮಗಳಿಗೆ ಭೇಟಿ ನೀಡಿ ಪ.ಪೂ. ಬಾಬಾರವರ ಚೈತನ್ಯವನ್ನು ಅನುಗ್ರಹಿಸುತ್ತಿದ್ದರು. ಪ.ಪೂ. ರಾಮಾನಂದ ಮಹಾರಾಜರು ಅತ್ಯಂತ ನಿಷ್ಠೆಯಿಂದ ಪ.ಪೂ. ಬಾಬಾರವರ ಸೇವೆ ಮಾಡಿ ಗುರುಕೃಪೆಯನ್ನು ಸಂಪಾದಿಸಿದರು. ಅಂತಹ ಪ್ರಯತ್ನವನ್ನು ನಮ್ಮೆಲ್ಲ ಸಾಧಕರಿಂದಲೂ ಮಾಡಿಸಿಕೊಳ್ಳಬೇಕೆಂದು ಪ.ಪೂ. ಬಾಬಾರವರ ಚರಣಗಳಲ್ಲಿ ಪ್ರಾರ್ಥನೆ !
ಪ.ಪೂ. ರಾಮಾನಂದ ಮಹಾರಾಜರ ಪಾದುಕೆಗಳು
ಅ. ೧೯೫೬ ರಿಂದ ೧೯೯೫ ರ ವರೆಗೆ ಸತತ ೪೦ ವರ್ಷಗಳು ಪ.ಪೂ. ರಾಮಾನಂದ ಮಹಾರಾಜರು ನೆರಳಿನಂತೆ ಬಾಬಾರವರ ಜೊತೆಗಿದ್ದರು. ಕಾಯಿಲೆಯಿದ್ದರೂ ದಾದಾರವರು ಬಾಬಾರವರ ಜೊತೆಗಿರುತ್ತಿದ್ದರು.
ಆ. ತನು-ಮನ-ಧನ ಇವೆಲ್ಲವನ್ನೂ ಶಿಷ್ಯನು ಹೇಗೆ ತ್ಯಾಗ ಮಾಡಬೇಕು ಎಂಬುದರ ಸಾಕಾರರೂಪವೆಂದರೆ, ಪ.ಪೂ. ರಾಮಾನಂದ ಮಹಾರಾಜರು !
ಇ. ಬಾಬಾರವರಿಗೆ ಯಾರಾದರೂ ಏನಾದರೂ ಅರ್ಪಣೆ ಮಾಡಿದರೆ, ಆಗ ಅನೇಕ ಜನರು ದಾದಾರವರಿಗೂ ಅರ್ಪಣೆ ಕೊಡುತ್ತಿದ್ದರು. ದಾದಾ ಆ ವಸ್ತು, ಹಣ ಇತ್ಯಾದಿಗಳನ್ನು ಬಾಬಾರವರಿಗೇ ಕೊಡುತ್ತಿದ್ದರು.
ಈ. ದಾದಾರವರ ಜೀವನದಲ್ಲಿ ‘ಬಾಬಾರವರ ಸೇವೆಯೊಂದೇ’ ಧ್ಯೇಯವಿದ್ದ ಕಾರಣ ಬಾಬಾರವರ ಜೊತೆಗೆ ಊರಿಂದೂರಿಗೆ ತಿರುಗಾಡುವಾಗ ಮಕ್ಕಳಿಗಾಗಿ ಯಾವುದಾದರೂ ಆಟಿಕೆ ಅಥವಾ ತಿಂಡಿ ತೆಗೆದುಕೊಳ್ಳುವುದು ಇತ್ಯಾದಿ ದಾದಾ ಯಾವತ್ತೂ ಮಾಡಿಲ್ಲ. ಆದ್ದರಿಂದ ಸೌ. ಅಕ್ಕನವರಿಗಾಗಿ (ಪ.ಪೂ.ರಾಮಾನಂದ ಮಹಾರಾಜರ ಪತ್ನಿಗಾಗಿ) ಏನಾದರೂ ತರುವ ಪ್ರಶ್ನೆಯೆ ಇರಲಿಲ್ಲ !
ಉ. ಪ.ಪೂ. ಬಾಬಾರವರ ಶಬ್ದವನ್ನು ಆಜ್ಞೆಯೆಂದೇ ತಿಳಿದು ಶಾಂತ ಚಿತ್ತದಿಂದ ಪಾಲಿಸುವುದು, ಏನನ್ನೂ ದೂರದೇ, ಪ್ರತಿಕ್ರಿಯೆ ಇಲ್ಲದೆ ಆಜ್ಞೆಯ ಪಾಲನೆ ಹೇಗೆ ಮಾಡಬೇಕು ಎಂಬುದರ ಆದರ್ಶ ಮಾದರಿಯೆಂದರೆ ದಾದಾ.
ಮೋರಟಕ್ಕಾ ಆಶ್ರಮದಲ್ಲಿರುವ ಶ್ರೀಗುರುಮಂದಿರ ಮತ್ತು ರಾಮಜಿ (ಪ.ಪೂ.ರಾಮಾನಂದ ಮಹಾರಾಜರ)ಯ ಮೆಟ್ಟಿಲುಗಳು
ಊ. ಮಗಳಿಗೆ ತೀವ್ರ ಆನಾರೋಗ್ಯವಿದೆ ಎಂದು ಸಂದೇಶ ಸಿಕ್ಕಿದಾಗ ಕೂಡ ಗುರುಸೇವೆಗೆ ಪ್ರಾಧಾನ್ಯತೆ ನೀಡುವುದು : ಕೆಲವು ವರ್ಷಗಳ ಹಿಂದಿನ ಘಟನೆಯನ್ನು ಉಲೇಖಿಸುತ್ತಿದ್ದೇನೆ. ಒಮ್ಮೆ ಪ.ಪೂ. ಬಾಬಾರವರ ಜೊತೆಗೆ ದಾದಾ ಇಂದೂರಿನ ಹೊರಗೆ ಹೋಗಿದ್ದರು. ಅಲ್ಲಿ ಅವರಿಗೆ ಮಗಳಾದ ಸೌ. ಚಿತ್ರಾಗೆ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾಳೆ, ಎಂದು ಸಂದೇಶ ಬಂತು. ಪ.ಪೂ. ಬಾಬಾರವರು ತಕ್ಷಣ ದಾದಾರವರನ್ನು ವಾಹನದಲ್ಲಿ ಇಂದೂರಿಗೆ ಕಳುಹಿಸಿದರು. ೧೦-೧೨ ಗಂಟೆಗಳ ಪ್ರವಾಸ ಮಾಡಿ ಅವರು ಇಂದೂರಿಗೆ ತಲುಪಿದಾಗ ಮೊದಲು ಆಸ್ಪತ್ರೆಗೆ ಹೋಗದೆ ನೇರವಾಗಿ ಆಶ್ರಮಕ್ಕೆ ಹೋಗಿ ಅಲ್ಲಿ ಏನಾದರೂ ಅಡಚಣೆ ಇದೆಯೇ ಎಂದು ನೋಡಿಕೊಂಡು ನಂತರವೇ ಮಗಳನ್ನು ನೋಡಲು ಆಸ್ಪತ್ರೆಗೆ ಹೋದರು. ಅರ್ಜುನನಿಗೆ ಹೇಗೆ ಕೇವಲ ಪಕ್ಷಿಯ ಕಣ್ಣೇ ಕಾಣಿಸುತ್ತಿತ್ತೋ, ಹಾಗೆಯೇ ಪ.ಪೂ. ರಾಮಾನಂದ ಮಹಾರಾಜರಿಗೆ ಕೇವಲ ‘ಬಾಬಾರವರ ಸೇವೆ’ಯೊಂದೇ ಕಾಣಿಸುತ್ತಿತ್ತು. (೧೯೯೫)
– ಡಾ. ವಿಠ್ಠಲ ಮಾಧವ ಪಾಗೆ, ಉಜ್ಜೈನ್, ಮಧ್ಯಪ್ರದೇಶ