ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಅನುಸರಿಸಬೇಕಾದ ಮೂಲಭೂತ ತತ್ತ್ವಗಳು

ಗುರುಕೃಪಾಯೋಗಾನುಸಾರ ಸಾಧನೆಯ ಏಕಮೇವ ಸಿದ್ಧಾಂತ

ವ್ಯಕ್ತಿಗಳಷ್ಟು ಪ್ರಕೃತಿಗಳು ಮತ್ತು ಪ್ರಕೃತಿಗಳಷ್ಟು ಸಾಧನಾಮಾರ್ಗಗಳು

ಗುರುಕೃಪಾಯೋಗಾನುಸಾರ ಮಾಡಬೇಕಾದ ಸಾಧನೆಯಲ್ಲಿ ಒಂದೇ ಸಿದ್ಧಾಂತವಿದೆ. ಆ ಸಿದ್ಧಾಂತವೆಂದರೆ ‘ವ್ಯಕ್ತಿಗಳಷ್ಟು ಪ್ರಕೃತಿಗಳು ಮತ್ತು ಪ್ರಕೃತಿಗಳಷ್ಟು ಸಾಧನೆಯ ಮಾರ್ಗಗಳು’. ಪೃಥ್ವಿಯ ಮೇಲೆ ಏಳು ನೂರು ಕೋಟಿಗಿಂತಲೂ ಹೆಚ್ಚು ಜನಸಂಖ್ಯೆಯಿದೆ; ಆದುದರಿಂದ ಈಶ್ವರಪ್ರಾಪ್ತಿಗೆ ಏಳು ನೂರು ಕೋಟಿಗಳಿಗಿಂತ ಹೆಚ್ಚು ಮಾರ್ಗಗಳಿವೆ. ಏಳು ನೂರು ಕೋಟಿಗಿಂತಲೂ ಹೆಚ್ಚಿರುವ ಜನರಲ್ಲಿ ಇಬ್ಬರು ಮನುಷ್ಯರು ಒಂದೇ ರೀತಿ ಇರುವುದಿಲ್ಲಾ. ಪ್ರತಿಯೊಬ್ಬರ ಶರೀರ, ಮನಸ್ಸು, ಇಷ್ಟಾನಿಷ್ಟ, ಗುಣದೋಷ, ಆಸೆ ಆಕಾಂಕ್ಷೆ, ವಾಸನೆ ಎಲ್ಲಾವೂ ವಿಭಿನ್ನವಾಗಿರುತ್ತವೆ; ಪ್ರತಿಯೊಬ್ಬರ ಬುದ್ಧಿ ವಿಭಿನ್ನವಾಗಿದೆ; ಸಂಚಿತ, ಪ್ರಾರಬ್ಧ ವಿಭಿನ್ನವಾಗಿದೆ; ಪ್ರತಿಯೊಬ್ಬರಲ್ಲಿರುವ ಪೃಥ್ವಿ, ಆಪ, ತೇಜ, ವಾಯು, ಆಕಾಶ ಈ ತತ್ತ್ವಗಳು (ಮನುಷ್ಯನು ಈ ಪಂಚತತ್ತ್ವಗಳಿಂದ ನಿರ್ಮಾಣವಾಗಿದ್ದಾನೆ) ಮತ್ತು ಸತ್ತ್ವ, ರಜ ಮತ್ತು ತಮ ಈ ತ್ರಿಗುಣಗಳ ಪ್ರಮಾಣ ವಿಭಿನ್ನವಾಗಿದೆ. ಸ್ವಲ್ಪದರಲ್ಲಿ ಹೇಳುವುದಾದರೆ ಪ್ರತಿಯೊಬ್ಬರೂ ವಿಭಿನ್ನ ಪ್ರಕೃತಿಯ ಮತ್ತು ಕ್ಷಮತೆಯವರಾಗಿರುವುದರಿಂದ ಈಶ್ವರಪ್ರಾಪ್ತಿಗಾಗಿ ಅನೇಕ ಸಾಧನಾಮಾರ್ಗಗಳಿವೆ. ನಮ್ಮ ಪ್ರಕೃತಿ ಮತ್ತು ಕ್ಷಮತೆಗನುರೂಪವಾಗಿ ಸಾಧನೆ ಮಾಡಿದರೆ ಈಶ್ವರಪ್ರಾಪ್ತಿಯು ಬೇಗನೇ ಆಗಲು ಸಹಾಯವಾಗುತ್ತದೆ. ಇದಕ್ಕೆ ಬದಲಾಗಿ ಸಾಂಪ್ರದಾಯಿಕ ಮತ್ತು ಪಂಥದಲ್ಲಿನ ಸಾಧನೆಯು ಒಂದೇ ಆಗಿರುತ್ತದೆ.

ಸಾಧನೆಯ ೧೦ ಮೂಲಭೂತ ತತ್ತ್ವಗಳು

ಬಹಳಷ್ಟು ಜನರಿಗೆ ಸಾಧನೆಯ ಹಿಂದಿನ ತತ್ತ್ವಗಳು ತಿಳಿಯದಿರುವುದರಿಂದ ಅವರು ತಪ್ಪು ಸಾಧನೆ ಮಾಡುವುದರಲ್ಲಿ ತಮ್ಮ ಆಯುಷ್ಯವನ್ನು ವ್ಯರ್ಥಗೊಳಿಸುತ್ತಾರೆ. ಹಾಗಾಗಬಾರದೆಂದು; ಮುಂದಿನ ಮಾರ್ಗದರ್ಶಕ ತತ್ತ್ವಗಳನ್ನು ತಿಳಿದುಕೊಂಡು ಅವುಗಳಿಗನುಸಾರ ಸಾಧನೆಯನ್ನು ಮಾಡುವುದು ಆವಶ್ಯಕವಾಗಿರುತ್ತದೆ –

೧. ಅನೇಕದಿಂದ ಏಕಕ್ಕೆ ಬರುವುದು
೨. ಸ್ಥೂಲದಿಂದ ಸೂಕ್ಷ್ಮದ ಕಡೆಗೆ ಹೋಗುವುದು
೩. ಕ್ಷಮತೆಗನುಸಾರ ಸಾಧನೆ
೪. ಮಟ್ಟಕ್ಕನುಸಾರ ಸಾಧನೆ
೫. ಕಾಲಕ್ಕನುಸಾರ ಸಾಧನೆ
೬. ವರ್ಣಕ್ಕನುಸಾರ ಸಾಧನೆ
೭. ಆಶ್ರಮಕ್ಕನುಸಾರ ಸಾಧನೆ
೮. ಸಗುಣಕ್ಕಿಂತ ನಿರ್ಗುಣ ಶ್ರೇಷ್ಠ; ಆದರೆ ಸಾಧನೆಗಾಗಿ ನಿರ್ಗುಣ ಉಪಾಸನೆಗಿಂತ ಸಗುಣ ಉಪಾಸನೆ ಶ್ರೇಷ್ಠ
೯. ತತ್ತ್ವಕ್ಕನುಸಾರ ಸಾಧನೆ
೧೦. ವ್ಯಕ್ತಿನಿಷ್ಠತೆ ಬೇಡ, ತತ್ತ್ವನಿಷ್ಠತೆ ಬೇಕು!

ಈಶ್ವರನು ಒಬ್ಬನಾಗಿದ್ದಾನೆ ಮತ್ತು ಈ ಜಗತ್ತಿನಲ್ಲಿ ಏನಿರುವುದೋ, ಅದೆಲ್ಲಾ ಅನೇಕ ಅನೇಕ ಅನೇಕವಾಗಿದೆ. ಈ ಎಲ್ಲಾದರಿಂದ ನಮಗೆ ಒಬ್ಬ ಈಶ್ವರನೆಡೆಗೆ ಹೋಗಬೇಕಾಗಿದೆ ಎಂಬುದನ್ನು ಸತತವಾಗಿ ಗಮನದಲ್ಲಿಟ್ಟುಕೊಳ್ಳಬೇಕು. ಉದಾಹರೆಣೆಗೆ :
ಅನೇಕ ದೇವತೆಗಳ ನಾಮ ಜಪಿಸುವ ಬದಲು ಕುಲದೇವತೆಯ ಉಪಾಸನೆ ಮಾಡುವುದು. (ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಓದಿ ಕಲಿಯುಗದಲ್ಲಿ ಸುಲಭವಾಗಿ ಎಲ್ಲ ಸಮಯಗಳಲ್ಲೂ ಮಾಡಬಹುದಾದ ಉಪಾಸನೆ : ಕುಲದೇವತೆಯ ನಾಮಜಪ) ಇನ್ನೊಂದು ವಿಷಯವೆಂದರೆ ಅಧ್ಯಾತ್ಮದಲ್ಲಿ ನಮ್ಮ ಇಷ್ಟಾನಿಷ್ಟಗಳಿಗೆ ಮಹತ್ವವಿಲ್ಲಾ. ಇಷ್ಟಾನಿಷ್ಟದ ಮುಂದೆ ಹೋಗಿ ಶಾಸ್ತ್ರಕ್ಕನುಸಾರ ಸಾಧನೆ ಮಾಡಿದರೆ ಮಾತ್ರ ಬೇಗನೇ ಉನ್ನತಿಯಾಗುತ್ತದೆ.ದೇವರಕೋಣೆಯಲ್ಲಿ ಕುಲದೇವತೆ, ಶ್ರೀ ಗಣಪತಿ, ಕುಲಾಚಾರಕ್ಕನುಸಾರವಿರುವ ಬಾಲಕೃಷ್ಣ, ಮಾರುತಿ ಮತ್ತು ಶ್ರೀ ಅನ್ನಪೂರ್ಣಾದೇವಿ ಈ ದೇವತೆಗಳು ಮತ್ತು ಶಿವ, ಶ್ರೀ ದುರ್ಗಾ ಇಂತಹ ಉಚ್ಚದೇವತೆಯ ಉಪಾಸನೆಯನ್ನು ಮಾಡುತ್ತಿದ್ದರೆ ಆ ದೇವತೆ, ಇಷ್ಟು ಮಾತ್ರ ಇಡಬೇಕು. (ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಓದಿ ದೇವರ ಮಂಟಪದಲ್ಲಿ ದೇವರ ಜೋಡಣೆಯನ್ನು ಹೇಗೆ ಮಾಡಬೇಕು?)
ಭಜನೆ ಮಾಡುವುದು: ನಮ್ಮಲ್ಲಿ ಊರೂರುಗಳಲ್ಲಿ ಭಜನಾ ಮಂಡಳಿಗಳಿರುತ್ತವೆ. ಭಜನೆಗಳಲ್ಲಿ ನಾಮಸ್ಮರಣೆ ಮಾಡಿರಿ, ಸತ್ಸಂಗಕ್ಕೆ ಹೋಗಿರಿ, ಸತ್ಸೇವೆ ಮಾಡಿರಿ, ಈಶ್ವರಪ್ರಾಪ್ತಿಗಾಗಿ ಏನಾದರೂ ತ್ಯಾಗ ಮಾಡಿರಿ, ದೇವರ ಬಗ್ಗೆ ತಳಮಳವಿರಲಿ ಎಂದು ಹೇಳಿರುತ್ತದೆ; ಆದರೆ ಅದನ್ನು ಕೃತಿಯಲ್ಲಿ ತರುವ ಬದಲು ಎಲ್ಲರೂ ಕೇವಲ ದೊಡ್ಡ ಸ್ವರದಲ್ಲಿ ಭಜನೆಗಳನ್ನೇ ಮಾಡುತ್ತಾ ಕುಳಿತುಕೊಳ್ಳುತ್ತಾರೆ. ಅರ್ಥಾತ್ ಸಿನಿಮಾದ ಹಾಡುಗಳನ್ನು ಹೇಳುವ ಬದಲು ಭಜನೆ ಮಾಡುವುದು ಖಂಡಿತವಾಗಿಯೂ ಒಳ್ಳೆಯದು! ಅನೇಕ ಭಜನೆಗಳಿಗಿಂತ ನಿಮ್ಮ ಕುಲದೇವಿಯ ಭಜನೆಗಳನ್ನು ಮಾಡಬೇಕು.

ಆಧಾರ : ಸನಾತನ-ನಿರ್ಮಿತ ‘ಗುರುಕೃಪಾಯೋಗಾನುಸಾರ ಸಾಧನೆ’ ಗ್ರಂಥ

Leave a Comment