ಗುರುಕೃಪಾಯೋಗ

ಅ.ಅರ್ಥ

ಕೃಪೆ ಶಬ್ದವು ‘ಕೃಪ್’ ಧಾತುವಿನಿಂದ ನಿರ್ಮಾಣವಾಗಿದೆ. ‘ಕೃಪ್’ ಎಂದರೆ ದಯೆ ತೋರಿಸುವುದು ಮತ್ತು ಕೃಪೆ ಎಂದರೆ ದಯೆ, ಕರುಣೆ, ಅನುಗ್ರಹ ಅಥವಾ ಪ್ರಸಾದ. ಗುರುಕೃಪೆಯ ಮಾಧ್ಯಮದಿಂದ ಜೀವವು ಶಿವನೊಂದಿಗೆ ಏಕರೂಪವಾಗುವುದಕ್ಕೆ, ಅಂದರೆ ಜೀವಕ್ಕೆ ಈಶ್ವರಪ್ರಾಪ್ತಿಯಾಗುವುದಕ್ಕೆ ‘ಗುರುಕೃಪಾಯೋಗ’ ಎಂದು ಹೇಳುತ್ತಾರೆ.

ಆ.ಮಹತ್ವ

ಬೇರೆಬೇರೆ ಯೋಗಮಾರ್ಗಗಳಿಂದ ಸಾಧನೆ ಮಾಡುವುದರಲ್ಲಿ ಅನೇಕ ವರ್ಷಗಳನ್ನು ವ್ಯರ್ಥಗೊಳಿಸದೇ, ಅಂದರೆ ಈ ಎಲ್ಲಾ ಮಾರ್ಗಗಳನ್ನು ಬದಿಗಿರಿಸಿ, ಗುರುಕೃಪೆಯನ್ನು ಬೇಗನೇ ಹೇಗೆ ಪಡೆಯುವುದು ಎಂಬುದನ್ನು ಗುರುಕೃಪಾಯೋಗವು ಕಲಿಸುತ್ತದೆ. ಆದುದರಿಂದ ಸಹಜವಾಗಿಯೇ ಈ ಮಾರ್ಗದಿಂದ ಆಧ್ಯಾತ್ಮಿಕ ಉನ್ನತಿಯು ಶೀಘ್ರಗತಿಯಲ್ಲಿ ಆಗುತ್ತದೆ.

ಇ.ವೈಶಿಷ್ಟ್ಯ

ಗುರುಕೃಪಾಯೋಗಾನುಸಾರ ಸಾಧನೆ ಮಾಡುವಾಗ ಪ್ರತಿಭಾಶಕ್ತಿಯು (ಜ್ಞಾನ ಶಕ್ತಿ) ಬೇಗನೇ ಜಾಗೃತವಾಗುವುದು, ಅಂದರೆ ಯೋಗ್ಯ ಮತ್ತು ಅಯೋಗ್ಯದ ಬಗ್ಗೆ ಈಶ್ವರನು ಮಾರ್ಗದರ್ಶನ ಮಾಡುವುದು: ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡುವಾಗ ಯೋಗ್ಯ ಮಾರ್ಗಕ್ಕನುಸಾರ ಸಾಧನೆಯು ಪ್ರಾರಂಭವಾಗುವುದರಿಂದ ಸಾಧಕನಿಗೆ ಹೊಸ ಹೊಸ ವಿಷಯಗಳು ತೋಚುತ್ತವೆ, ಅಂದರೆ ಅವನ ಪ್ರತಿಭಾಶಕ್ತಿಯು ಜಾಗೃತವಾಗಲು ಆರಂಭವಾಗುತ್ತದೆ. ಇದರಿಂದ ಈಶ್ವರನು ಅವನಿಗೆ ಯೋಗ್ಯ ಮತ್ತು ಅಯೋಗ್ಯದ ಬಗ್ಗೆ ಮಾರ್ಗದರ್ಶನ ಮಾಡುತ್ತಾನೆ. ಕರ್ಮಯೋಗ, ಧ್ಯಾನಯೋಗ, ಜ್ಞಾನಯೋಗದಂತಹ ಸಾಧನಾಮಾರ್ಗಗಳಲ್ಲಿ ತುಂಬಾ ಸಾಧನೆಯಾದ ಮೇಲೆ ಪ್ರತಿಭೆಯು ಜಾಗೃತವಾಗುತ್ತದೆ. ಗುರುಕೃಪಾಯೋಗಾನುಸಾರ ಸಾಧನೆ ಮಾಡುವಾಗ ಜಾಗೃತವಾದ ಪ್ರತಿಭೆಯನ್ನು ಶಾಶ್ವತವಾಗಿ ಉಳಿಸಿಕೊಳ್ಳುವುದು, ಗುರುಕೃಪೆ ಮತ್ತು ತನ್ನ ಸಾಧನೆಯ ಪ್ರಯತ್ನಗಳ ಮೇಲೆ ಅವಲಂಬಿಸಿರುತ್ತದೆ.

ಈ. ಕರ್ಮಯೋಗ, ಧ್ಯಾನಯೋಗ, ಜ್ಞಾನಯೋಗ, ಭಕ್ತಿಯೋಗ ಮತ್ತು ಗುರುಕೃಪಾಯೋಗ

ಉ. ಸಾಧನೆಯಲ್ಲಿನ ತಪ್ಪುಗಳು

‘ವ್ಯಕ್ತಿಗಳಷ್ಟು ಪ್ರಕೃತಿಗಳು ಮತ್ತು ಪ್ರಕೃತಿಗಳಷ್ಟು ಸಾಧನಾಮಾರ್ಗಗಳು’ ಎಂಬ ಸಿದ್ಧಾಂತವು ತಿಳಿಯದೆ ಇರುವುದರಿಂದ, ಸಾಧನೆಯಲ್ಲಿ ಮುಖ್ಯವಾಗಿ ಮುಂದಿನ ನಾಲ್ಕು ರೀತಿಯ ತಪ್ಪುಗಳು ಆಗುವುದು ಗಮನಕ್ಕೆ ಬರುತ್ತದೆ.

ಅ. ಸ್ವಂತ ಮನಸ್ಸಿನಂತೆ ಸಾಧನೆಯನ್ನು ಮಾಡುವುದು
ಆ. ಸಾಂಪ್ರದಾಯಿಕತೆ : ಈ ಭೂಮಿಯ ಮೇಲೆ ೭೦೦ ಕೋಟಿಗಿಂತಲೂ ಹೆಚ್ಚು ಮನುಷ್ಯರಿದ್ದಾರೆ, ಅಂದರೆ ೭೦೦ ಕೋಟಿಗಿಂತಲೂ ಹೆಚ್ಚು ಸಾಧನೆಯ ಮಾರ್ಗಗಳಿವೆ; ಆದರೆ ಯಾವುದಾದರೊಂದು ಸಂಪ್ರದಾಯದ ಅನುಯಾಯಿಗೆ ಯಾವುದಾದರೊಂದು ಸಾಧನೆಯ ಮಾರ್ಗದ ಬಗ್ಗೆ ತಿಳಿದಿರುತ್ತದೆ. ಅವರು ಅದೇ ಪ್ರಕಾರ ಸಾಧನೆ ಮಾಡುತ್ತಾರೆ. ಸಾಧನೆಯ ಬೇರೆ ಮಾರ್ಗಗಳ ಬಗ್ಗೆ ಅವರಿಗೆ ಅರಿವಿರುವುದಿಲ್ಲ.
ಇ. ಗುರು ‘ಮಾಡಿಕೊಳ್ಳುವುದು’ : ನಾವು ಗುರುವನ್ನು ಮಾಡಿಕೊಳ್ಳುವುದು ಅಥವಾ ಆರಿಸುವುದಿಲ್ಲ, ಗುರುಗಳು ನಮ್ಮನ್ನು ಶಿಷ್ಯರೆಂದು ಸ್ವೀಕರಿಸುವುದಿರುತ್ತದೆ.
ಈ. ತಾನೊಬ್ಬ ‘ಸಾಧಕ’ ಎಂಬ ವಿಚಾರ ಇರುವುದು.

ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡುವಾಗ ಸಾಧಕನಿಂದ ಈ ತಪ್ಪುಗಳು ಆಗದ ಹಾಗೆ ಗುರುಗಳು ಕಾಳಜಿ ವಹಿಸುತ್ತಾರೆ, ಅಥವಾ ಆದರೂ ಕೂಡಲೇ ತಿದ್ದಿ ಹೇಳುತ್ತಾರೆ. ಹಾಗಾಗಿ ಸಾಧಕನ ಸಾಧನೆಯಲ್ಲಿ ಹಾನಿ ಆಗುವುದಿಲ್ಲ.

ಆಧಾರ : ಸನಾತನ ನಿರ್ಮಿಸಿದ ‘ಗುರುಕೃಪಾಯೋಗಾನುಸಾರ ಸಾಧನೆ’ ಗ್ರಂಥ

Leave a Comment