ಮೂರ್ತಿಯ ವಿಸರ್ಜನೆಯನ್ನು ಕುಲಾಚಾರಕ್ಕನುಸಾರ ಯೋಗ್ಯ ದಿನ / ಸಮಯಕ್ಕೆ ಮಾಡಬೇಕು. ಆ ದಿನ ಗಂಧ, ಹೂವುಗಳು, ಧೂಪ, ದೀಪ ಮತ್ತು ನೈವೇದ್ಯಕ್ಕೆ ಮೊಸರು, ಅನ್ನ, ಮೋದಕ ಇತ್ಯಾದಿ ಪದಾರ್ಥಗಳನ್ನು ಪೂಜೆಯಲ್ಲಿ ಬಳಸಬೇಕು. ಉತ್ತರ ಪೂಜೆಯನ್ನು ಪ್ರಾರಂಭಿಸುವ ಮೊದಲು ಪೂಜಕನು ತನಗೆ ಕುಂಕುಮದ ತಿಲಕವನ್ನು ಹಚ್ಚಿಕೊಳ್ಳಬೇಕು. ಆನಂತರ ಆಚಮನ ಮಾಡಿ, ಕೈಯಲ್ಲಿ ಅಕ್ಷತೆಯನ್ನು ಹಿಡಿದು ಮುಂದಿನ ಸಂಕಲ್ಪವನ್ನು ಮಾಡಬೇಕು.
ಶ್ರೀ ಸಿದ್ಧಿವಿನಾಯಕ ದೇವತಾ ಪ್ರೀತ್ಯರ್ಥಂ ಉತ್ತರಾರಾಧನಂ ಕರಿಷ್ಯೆ |
ತದಂಗತ್ವೇನ ಗಂಧಾದಿಪಂಚೋಪಚಾರಪೂಜನಮಹಂ ಕರಿಷ್ಯೆ |
ಶ್ರೀ ಸಿದ್ಧಿವಿನಾಯಕಾಯ ನಮಃ | ಧ್ಯಾಯಾಮಿ |
(ಈಗ ಶ್ರೀ ಸಿದ್ಧಿವಿನಾಯಕ ದೇವರಿಗೆ ನಮಸ್ಕರಿಸಿ ಧ್ಯಾನ ಮಾಡುತ್ತೇನೆ)
ಗಂಧ (ಚಂದನ)
ಶ್ರೀ ಸಿದ್ಧಿವಿನಾಯಕಾಯ ನಮಃ | ವಿಲೇಪನಾರ್ಥೇ ಚಂದನಂ ಸಮರ್ಪಯಾಮಿ ||
(ಚಂದನವನ್ನು ಅರ್ಪಿಸುತ್ತೇನೆ)
ಶ್ರೀ ಋದ್ಧಿಸಿದ್ಧಿಭ್ಯಾಮ್ ನಮಃ | ಹರಿದ್ರಾಂ ಕುಂಕುಮಂ ಸಮರ್ಪಯಾಮಿ || (ಋದ್ಧಿಸಿದ್ಧಿಯನ್ನು ನಮಸ್ಕರಿಸಿ ಶ್ರೀ ಸಿದ್ಧಿವಿನಾಯಕನ ಚರಣಗಳಲ್ಲಿ ಅರಿಶಿನ ಕುಂಕುಮವನ್ನು ಅರ್ಪಿಸಬೇಕು.)
ಹೂವು, ಪತ್ರೆ (ಎಲೆ)
ಶ್ರೀ ಸಿದ್ಧಿವಿನಾಯಕಾಯ ನಮಃ | ಋತುಕಾಲೋದ್ಭವಪುಷ್ಪಾಣಿ ಸಮರ್ಪಯಾಮಿ ||
ಈ ಋತುವಿನಲ್ಲಿ ಲಭ್ಯವಿರುವ ವಿವಿಧ ರೀತಿಯ ಹೂವುಗಳನ್ನು ಮತ್ತು ಪತ್ರೆಗಳನ್ನು ಅರ್ಪಿಸಬೇಕು.
ಧೂಪ (ಊದುಬತ್ತಿ)
ಶ್ರೀ ಸಿದ್ಧಿವಿನಾಯಕಾಯ ನಮಃ | ಧೂಪಂ ಸಮರ್ಪಯಾಮಿ ||
ಊದುಬತ್ತಿಯಿಂದ ಬೆಳಗಬೇಕು ಅಥವಾ ಧೂಪವನ್ನು ತೋರಿಸಬೇಕು.
ದೀಪ
ಶ್ರೀ ಸಿದ್ಧಿವಿನಾಯಕಾಯ ನಮಃ | ದೀಪಂ ಸಮರ್ಪಯಾಮಿ ||
ನೀಲಾಂಜನದಿಂದ ಬೆಳಗಬೇಕು.
ನೈವೇದ್ಯ
ಶ್ರೀ ಸಿದ್ಧಿವಿನಾಯಕಾಯ ನಮಃ | ನೈವೇದ್ಯಂ ಸಮರ್ಪಯಾಮಿ ||
ನೈವೇದ್ಯವನ್ನು ಅರ್ಪಿಸಬೇಕು.
ಮೇಲೆ ನೀಡಿರುವ ಉಪಚಾರಗಳನ್ನು ಹೇಗೆ ಮಾಡಬೇಕೆಂದು ಪೂಜೆಯಲ್ಲಿ ನೀಡಲಾಗಿದೆ.
ಅನೇನ ಕೃತಪೂಜನೇನ ಶ್ರೀ ಸಿದ್ಧಿವಿನಾಯಕಃ ಪ್ರೀಯತಾಂ |
ಅರ್ಥ : ಈ ಪೂಜೆಯಿಂದ ಶ್ರೀ ಸಿದ್ಧಿವಿನಾಯಕನು ಪ್ರಸನ್ನನಾಗಲಿ. (ಪ್ರೀಯತಾಂ ಉಚ್ಚರಿಸುವಾಗ ಬಲಗೈಯಿಂದ ಹರಿವಾಣದಲ್ಲಿ ನೀರನ್ನು ಬಿಡಬೇಕು)
ಆನಂತರ ಮುಂದಿನ ಮಂತ್ರವನ್ನು ಹೇಳಬೇಕು.
ಪ್ರೀತೋ ಭವತು | ತತ್ಸತ್ ಬ್ರಹ್ಮಾರ್ಪಣಮಸ್ತು |
ಅರ್ಥ : ದೇವರು ನನ್ನ ಮೇಲೆ ಪ್ರಸನ್ನರಾಗಲಿ. ಈ ಪೂಜೆಯ ಫಲವನ್ನು ನಾನು ಬ್ರಹ್ಮ ದೇವರಿಗೆ ಅರ್ಪಿಸುತ್ತೇನೆ.
ಮೂರ್ತಿ ವಿಸರ್ಜನೆ ಮಂತ್ರ
ಬಲಗೈಯಲ್ಲಿ ಅಕ್ಷತೆ ತೆಗೆದುಕೊಂಡು ಮುಂದಿನ ಮಂತ್ರವನ್ನು ಹೇಳಬೇಕು.
ಯಾಂತು ದೇವಗಣಾಃ ಸರ್ವೇ ಪೂಜಾಮಾದಾಯ ಪಾರ್ಥಿವಾತ್ |
ಇಷ್ಟಕಾಮಪ್ರಸಿದ್ಧ್ಯರ್ಥಂ ಪುನರಾಗಮನಾಯ ಚ ||
ಅರ್ಥ : ಇಲ್ಲಿಯ ವರೆಗೆ ನಾನು ಮಾಡಿದ ಮಣ್ಣಿನ ಮೂರ್ತಿಯ ಪೂಜೆಯನ್ನು ಎಲ್ಲ ದೇವಗಣರು ಸ್ವೀಕರಿಸಲಿ ಮತ್ತು ಇಚ್ಛಿತ ಕಾರ್ಯದ ಸಿದ್ಧಿಗಾಗಿ ಮತ್ತು ಪುನಃ ಬರಲು ಈಗ ಪ್ರಸ್ಥಾನ ಮಾಡಲಿ.
ನಂತರ ಆ ಅಭಿಮಂತ್ರಿತ ಅಕ್ಷತೆಗಳನ್ನು ಶ್ರೀ ಮಹಾ ಗಣಪತಿ ಪೂಜೆಯನ್ನು ಮಾಡಿದ ತೆಂಗಿನಕಾಯಿಯ ಮೇಲೆ, ಹಾಗೆಯೇ ಶ್ರೀ ಸಿದ್ಧಿವಿನಾಯಕನ ಮೂರ್ತಿಯ ಮೇಲೆ ಅರ್ಪಿಸಬೇಕು. ನಂತರ ಮೂರ್ತಿಯನ್ನು ಸ್ಥಳದಿಂದ ಸ್ವಲ್ಪ ಸರಿಸಬೇಕು ಮತ್ತು ಅದನ್ನು ಕುಲಾಚಾರದಂತೆ ನೈಸರ್ಗಿಕ ಜಲಮೂಲದಲ್ಲಿ ವಿಸರ್ಜಿಸಬೇಕು.
ಆಧಾರ : ಸನಾತನ ಸಂಸ್ಥೆ ಪ್ರಕಾಶಿಸಿದ ಗ್ರಂಥ ‘ಗಣೇಶ ಪೂಜಾವಿಧಿ’
ತುಂಬಾ ಮಹತ್ವದ ಮಾಹಿತಿ ದನ್ಯವಾದಗಳು
ತುಂಬಾ ಉಪಯುಕ್ತವಾದ ಮಾಹಿತಿಯಾಗಿದೆ. ಇದನ್ನು ಓದಿಯೇ ನಾನು ಪೂಜೆ ನೆರೆವೆರಿಸಿದೆ. ಧನ್ಯವಾದಗಳು
nice