ಅ. ಹೇ ಬುದ್ಧಿದಾತಾ, ಶ್ರೀ ಗಣೇಶಾ, ನನಗೆ ಸದ್ಬುದ್ಧಿಯನ್ನು ಪ್ರದಾನಿಸು. ಹೇ ವಿಘ್ನಹರ್ತಾ, ನನ್ನ ಜೀವನದಲ್ಲಿ ಬರುವ ಸಂಕಟಗಳನ್ನು ನಿವಾರಿಸು.
ಆ. ಪ್ರಾಣಶಕ್ತಿಯನ್ನು ನೀಡುವ ಹೇ ಶ್ರೀ ಗಣಪತಿ, ದಿನವಿಡೀ ಉತ್ಸಾಹದಿಂದ ಕೆಲಸ-ಕಾರ್ಯಗಳನ್ನು ಮಾಡಲು ನನಗೆ ಅವಶ್ಯಕವಿದ್ದಷ್ಟು ಶಕ್ತಿಯನ್ನು ನೀಡು.
ಗಣೇಶ ಪೂಜೆಯನ್ನು ಆರಂಭಿಸುವಾಗ ಮಾಡಬೇಕಾದ ಪ್ರಾರ್ಥನೆ
ಅ. ಹೇ ಗಜಾನನಾ, ಈ ಪೂಜೆಯ ಮಾಧ್ಯಮದಿಂದ ನನ್ನ ಅಂತಃಕರಣದಲ್ಲಿ ನಿನ್ನ ಬಗ್ಗೆ ಭಕ್ತಿಭಾವ ಉತ್ಪನ್ನವಾಗಲಿ.
ಆ. ಈ ಪೂಜೆಯ ಮಾಧ್ಯಮದಿಂದ ಪ್ರಕ್ಷೇಪಿಸುವ ಚೈತನ್ಯವು ನಿನ್ನ ಕೃಪೆಯಿಂದ ನನ್ನಿಂದ ಹೆಚ್ಚು ಪ್ರಮಾಣದಲ್ಲಿ ಗ್ರಹಿಸುವಂತಾಗಲಿ.
ಗಣೇಶೋತ್ಸವದ ಸಮಯದಲ್ಲಿ ಮಾಡಬೇಕಾದ ಪ್ರಾರ್ಥನೆ
ಹೇ ಶ್ರೀ ಗಣೇಶಾ, ಗಣೇಶೋತ್ಸವದ ಸಮಯದಲ್ಲಿ ಎಂದಿಗಿಂತ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುವ ನಿನ್ನ ತತ್ತ್ವದ ಲಾಭವು ನನಗೆ ಹೆಚ್ಚಿನ ಪ್ರಮಾಣದಲ್ಲಿ ಗ್ರಹಿಸುವಂತಾಗಲಿ.