ಪೂಜೆಯ ಸಂದರ್ಭದಲ್ಲಿ ಕೆಲವು ಸೂಚನೆಗಳು

ಅ. ಪೂಜೆಯ ಮೊದಲು ಮಡಿವಸ್ತ್ರ ಅಥವಾ ಧೋತರ ಮತ್ತು ಉತ್ತರೀಯವನ್ನು ಧರಿಸಿರಬೇಕು.

ಆ. ಪೂಜೆಯನ್ನು ಆರಂಭಿಸುವ ಮೊದಲು ಮನೆಯಲ್ಲಿನ ಹಿರಿಯರಿಗೆ ಮತ್ತು ಪುರೋಹಿತರಿಗೆ ನಮಸ್ಕಾರ ಮಾಡಿ ಅವರ ಆಶೀರ್ವಾದ ಪಡೆಯಬೇಕು.

ಇ. ಪೂಜೆಗಾಗಿ ಮಣೆಯ ಮೇಲೆ ಕುಳಿತುಕೊಳ್ಳುವ ಮೊದಲು ನಿಂತುಕೊಂಡು ಭೂಮಿ ಮತ್ತು ದೇವತೆಗಳಿಗೆ ‘ಈ ಆಸನದ ಸ್ಥಳದಲ್ಲಿ ತಮ್ಮ ಚೈತನ್ಯಮಯ ವಾಸ್ತವ್ಯವಿರಲಿ’ ಎಂದು ಪ್ರಾರ್ಥನೆ ಮಾಡಬೇಕು.

ಈ. ಪೂಜೆ ಮಾಡುವಾಗ ‘ದೇವತೆಯು ತಮ್ಮೆದುರಿಗೆ ಪ್ರತ್ಯಕ್ಷ ಪ್ರಕಟವಾಗಿ ಆಸೀನರಾಗಿದ್ದಾರೆ ಮತ್ತು ನಾವು ಅನನ್ಯ ಶರಣಾಗತ ಭಾವದಿಂದ ಮಾಡುತ್ತಿರುವ ಪೂಜೆಯನ್ನು ಅವರು ಸ್ವೀಕರಿಸುತ್ತಿದ್ದಾರೆ’, ಎಂಬ ಭಾವವನ್ನಿಡಬೇಕು ಮತ್ತು ಈ ಭಾವದಿಂದ ಪ್ರತಿಯೊಂದು ಉಪಚಾರವನ್ನು ದೇವತೆಯ ಚರಣಗಳಲ್ಲಿ ಅರ್ಪಿಸಬೇಕು.

ಉ. ಪ್ರತಿದಿನ ಬೆಳಗ್ಗೆ ಮೂರ್ತಿಯ ಮೇಲಿನ ನಿರ್ಮಾಲ್ಯ ವನ್ನು ತೆಗೆದು ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ಸಾಯಂಕಾಲ ಷೋಡಶೋಪಚಾರ ಪೂಜೆ ಅಥವಾ ಗಂಧಾ? ಪಂಚೋಪಚಾರ ಪೂಜೆ ಮಾಡಬೇಕು.

ಊ. ಪೂಜೆಯಲ್ಲಿನ ಶ್ಲೋಕ ಅಥವಾ ಮಂತ್ರವನ್ನು ಉಚ್ಚರಿ ಸಲು ಬರದವರು ಕೇವಲ ನಾಮಮಂತ್ರ ಉಚ್ಚರಿಸಿ ದೇವತೆಗೆ ಉಪಚಾರ ಸಮರ್ಪಿಸಬೇಕು, ಉದಾ. (ಆಸನಕ್ಕಾಗಿ ಅಕ್ಷತೆ ಅರ್ಪಿಸುವಾಗ) ‘ಶ್ರೀ ಸಿದ್ಧಿವಿನಾಯಕಾಯ ನಮಃ| ಆಸನಾರ್ಥೇ ಅಕ್ಷತಾನ್ ಸಮರ್ಪಯಾಮಿ||’, ಎಂದು ಹೇಳಬೇಕು.

ಋ. ಮಣ್ಣಿನ ವಿಗ್ರಹ ಇದ್ದಲ್ಲಿ ಪಾದ್ಯ, ಅರ್ಘ್ಯ, ಪಂಚಾಮೃತ ಇತ್ಯಾದಿ ಉಪಚಾರಗಳನ್ನು ಎರಡೆರಡು ದೂರ್ವೆಯಿಂದ ಪ್ರೋಕ್ಷಣೆ ಮಾಡಬೇಕು. ಒಂದು ಉಪಚಾರ ಮುಗಿದ ಮೇಲೆ ಕೈಯಲ್ಲಿರುವ ದೂರ್ವೆಯನ್ನಿ ತಟ್ಟೆಯಲ್ಲಿ ವಿಸರ್ಜಿಸಿ ಮುಂದಿನ ಉಪಚಾರಕ್ಕಾಗಿ ಹೊಸ ದೂರ್ವೆಯನ್ನು ತೆಗೆದುಕೊಳ್ಳಿ. ಧಾತುವಿನ ಮೂರ್ತಿಯಿದ್ದಲ್ಲಿ ಮೂರ್ತಿಯ ಮೇಲೆ ಉಪಚಾರಗಳನ್ನು ಮಾಡಬಹುದು.

ಎ. ‘ಪೂಜಾಸಮುಚ್ಚಯ’ ಗ್ರಂಥವನ್ನು ಪ್ರಮಾಣವೆಂದು ಪರಿಗಣಿಸಿ ಅದರಂತೆ ಇಲ್ಲಿ ಸಂಪೂರ್ಣ ಪೂಜೆಯನ್ನು ನೀಡಲಾಗಿದೆ.

Leave a Comment