ಸ್ನಾನದ ನೀರಿನಲ್ಲಿ ಒಂದು ಚಮಚ ಕಲ್ಲುಪ್ಪನ್ನು ಏಕೆ ಹಾಕಬೇಕು?

ಸ್ನಾನದ ನೀರಿನಲ್ಲಿ ಒಂದು ಚಮಚ ಕಲ್ಲುಪ್ಪನ್ನು ಹಾಕಬೇಕು ಮತ್ತು ನಾಮಜಪ ಮಾಡುತ್ತಾ ಸ್ನಾನ ಮಾಡಬೇಕು

ಕೃತಿ

ಅ. ಸ್ನಾನದ ಪ್ರಾರಂಭದಲ್ಲಿ ಇನ್ನೊಂದು ಚಿಕ್ಕ ಬಾಲ್ದಿಯಲ್ಲಿ ಎರಡು-ಮೂರು ತಂಬಿಗೆ ಬಿಸಿ ಅಥವಾ ತಣ್ಣೀರನ್ನು ತೆಗೆದುಕೊಂಡು ಆ ನೀರಿನಲ್ಲಿ ೨ ಚಮಚ (ಟೇಬಲ್ ಸ್ಪೂನ್) ಕಲ್ಲುಪ್ಪನ್ನು ಹಾಕಬೇಕು.
ಆ. ಉಪಾಸ್ಯ ದೇವತೆಗೆ ‘ನನ್ನ ಶರೀರದಲ್ಲಿನ ತೊಂದರೆದಾಯಕ ಶಕ್ತಿಯು ಉಪ್ಪುನೀರಿನಲ್ಲಿ ಸೆಳೆಯಲ್ಪಟ್ಟು ನಾಶವಾಗಲಿ’ ಎಂದು ಪ್ರಾರ್ಥನೆ ಮಾಡಬೇಕು.
ಇ. ನಾಮಜಪ ಮಾಡುತ್ತಾ ಆ ಕಲ್ಲುಪ್ಪಿನ ನೀರನ್ನು ತಂಬಿಗೆಯಿಂದ ಮೈಮೇಲೆ ಸುರಿಯಬೇಕು.
ಈ. ಅನಂತರ ನಿತ್ಯದಂತೆ ಸ್ನಾನ ಮಾಡಬೇಕು.

೧. ಸ್ನಾನದ ನೀರಿನಲ್ಲಿ ಉಪ್ಪು ಹಾಕುವುದರ ಶಾಸ್ತ್ರ:

ಉಪ್ಪಿನ ನೀರಿನಿಂದ ಸ್ನಾನವನ್ನು ಮಾಡುವುದರಿಂದ ಶರೀರದಲ್ಲಿರುವ ತ್ರಾಸದಾಯಕ ಶಕ್ತಿಯ ಸಂಗ್ರಹವು ಬಹಳಷ್ಟು ಪ್ರಮಾಣದಲ್ಲಿ ನಾಶವಾಗುತ್ತದೆ: ಉಪ್ಪಿನ ನೀರಿನಿಂದ ಸ್ನಾನ ಮಾಡುವುದರಿಂದ ಸಂಪೂರ್ಣ ಶರೀರದಲ್ಲಿರುವ ದೇಹಶುದ್ಧಿ ಮಾಡುವ ೧೦೬ ಚಕ್ರಗಳ ಮೇಲೆ ಬಂದಿರುವ ತ್ರಾಸದಾಯಕ ಶಕ್ತಿಯ ಸಂಗ್ರಹವು ನಾಶವಾಗಿ ದೇಹವನ್ನು ಶುದ್ಧಮಾಡುವ ಚಕ್ರಗಳು ಶೇ. ೨-೩ ರಷ್ಟು ಪ್ರಮಾಣದಲ್ಲಿ ಜಾಗೃತವಾಗಿ ತ್ರಾಸದಾಯಕ ಶಕ್ತಿಯು ಶರೀರದಿಂದ ಹೊರಬೀಳುತ್ತದೆ. ಹಾಗೆಯೇ ಉಪ್ಪಿನ ನೀರಿಗೆ ಆಪತತ್ತ್ವದಿಂದ ಶೇ.೧೦೦ರಷ್ಟು ಸಹಾಯವು ಸಿಗುವುದರಿಂದ ಶರೀರದಲ್ಲಿರುವ ತ್ರಾಸದಾಯಕ ಶಕ್ತಿಯ ಸಂಗ್ರಹವು ಬಹಳಷ್ಟು ಪ್ರಮಾಣದಲ್ಲಿ ನಾಶವಾಗುತ್ತದೆ.
– ಶ್ರೀಗುರುತತ್ತ್ವ (ಶ್ರೀ.ನಿಷಾದ ದೇಶಮುಖರ ಮಾಧ್ಯಮದಿಂದ, ೧೬.೪.೨೦೦೬, ರಾತ್ರಿ ೯.೩೩)

ಅನುಭೂತಿ

ಕೀರ್ತನೆಯಲ್ಲಿ (ಹರಿಕಥೆ) ಧರ್ಮದ ವಿಷಯದಲ್ಲಿ ಮಾತನಾಡಿದುದರಿಂದ ಆಧ್ಯಾತ್ಮಿಕ ತೊಂದರೆಯಾಗುವುದು ಮತ್ತು ಕಲ್ಲುಪ್ಪಿನ ನೀರಿನಿಂದ ಉಪಾಯ ಮಾಡಿದ ನಂತರ ಒಳ್ಳೆಯದೆನಿಸುವುದು : ನಾನು ಕೀರ್ತನೆಗಾಗಿ ಎದ್ದು ನಿಂತಾಗ ನನ್ನ ಶರೀರ ಜಡವಾಗುತ್ತಿತ್ತು ಮತ್ತು ನಿದ್ದೆ ಬರುತ್ತಿತ್ತು. ಬಹಳಷ್ಟು ಸಲ ನನಗೆ ಏನೂ ಹೊಳೆಯುತ್ತಿರಲಿಲ್ಲ. ನಿದ್ದೆಯನ್ನು ದೂರಗೊಳಿಸಲು ನಾನು ಸ್ವಲ್ಪ ಹೊತ್ತು ನಾಮಜಪ ಮಾಡಿದಾಗ ಸ್ವಲ್ಪ ಸಮಯದ ನಂತರ ನನಗೆ ಒಳ್ಳೆಯದೆನಿಸುತ್ತಿತ್ತು. ನಾನು ಕೀರ್ತನೆಗಳಿಂದ ಧರ್ಮದ ವಿಷಯದಲ್ಲಿ ಪ್ರಬೋಧನೆ ಮಾಡುತ್ತೇನೆಂದು ನನಗೆ ಕೆಟ್ಟ ಶಕ್ತಿಗಳ ತೊಂದರೆಯಾಗುತ್ತಿದೆ ಎಂಬ ಕಲ್ಪನೆಯೂ ನನಗೆ ಇರಲಿಲ್ಲ. ‘ತೊಂದರೆದಾಯಕ ಶಕ್ತಿ ಎಂದರೇನು’ ಎಂಬುದು ನನಗೆ ಗೊತ್ತಿರಲಿಲ್ಲ. ಆದರೆ ಬಹಳ ತೊಂದರೆಯಾಗುತ್ತಿತ್ತು. ಸನಾತನದ ಆಶ್ರಮಕ್ಕೆ ಬಂದ ನಂತರ ನನಗೆ ಕೆಟ್ಟ ಶಕ್ತಿಗಳ ವಿಷಯದಲ್ಲಿ ಸವಿಸ್ತಾರವಾದ ಮಾಹಿತಿಯು ದೊರಕಿತು. ಈಗ ನಾನು ಕಲ್ಲುಪ್ಪಿನ ನೀರಿನ ಉಪಾಯ ಮಾಡುತ್ತೇನೆ. ಅದರಿಂದ ನನಗೆ ಒಳ್ಳೆಯದೆನಿಸುತ್ತದೆ. – ಹ.ಭ.ಪ.ಆಂಧಳೆ ಮಹಾರಾಜರು, ಸಂಭಾಜಿನಗರ.

ಕಲ್ಲುಪ್ಪು ರಜ-ತಮಯುಕ್ತವಾಗಿದೆ. ಹೀಗಿರುವಾಗ ಉಪಾಯಕ್ಕಾಗಿ ನಾವು ಅದನ್ನೇಕೆ ಉಪಯೋಗಿಸುತ್ತೇವೆ?
ಉತ್ತರ : ಕೇವಲ ಕಲ್ಲುಪ್ಪಿನಿಂದ ಉಪಾಯವಾಗುವುದಿಲ್ಲ, ಕಲ್ಲುಪ್ಪು ನೀರಿನ ಸಂಪರ್ಕಕ್ಕೆ ಬರುವುದರಿಂದ ಉಪಾಯವಾಗುತ್ತದೆ. ಕಲ್ಲುಪ್ಪಿನಲ್ಲಿ ರಜ-ತಮಾತ್ಮಕ ಲಹರಿಗಳನ್ನು ಸೆಳೆದುಕೊಂಡು ಅವುಗಳನ್ನು ಘನೀಕೃತಗೊಳಿಸುವ ಕ್ಷಮತೆಯಿರುತ್ತದೆ. ಕಲ್ಲುಪ್ಪಿನ ಸುತ್ತಲಿರುವ ಆಪತತ್ತ್ವಾತ್ಮಕ ಸೂಕ್ಷ್ಮ ಕೋಶವು ಬಾಹ್ಯ ವಾತಾವರಣದಲ್ಲಿನ ರಜ-ತಮವನ್ನು ಸೆಳೆದುಕೊಳ್ಳುವಲ್ಲಿ ಅಗ್ರೇಸರವಾಗಿದೆ. ಉಪ್ಪುನ್ನು ನೀರಿನಲ್ಲಿ ಹಾಕುವುದರಿಂದ ಉಪ್ಪಿನ ಸಂಪರ್ಕದಿಂದ ದೇಹದಿಂದ ಸೆಳೆದುಕೊಂಡ ರಜ-ತಮಾತ್ಮಕ ಲಹರಿಗಳು ಕೂಡಲೇ ನೀರಿನಲ್ಲಿ ವಿಸರ್ಜನೆಯಾಗುತ್ತವೆ ಮತ್ತು ರಜ-ತಮಾತ್ಮಕ ಲಹರಿಗಳ ಕಾರ್ಯ ಮಾಡುವ ತೀವ್ರತೆಯು ಕೂಡಲೇ ಕಡಿಮೆಯಾಗುತ್ತದೆ. ನೀರಿನ ಸಂಪರ್ಕದಿಂದ ಉಪ್ಪಿನಲ್ಲಿರುವ ರಜ-ತಮವು ಕೂಡಲೇ ನೀರಿನಲ್ಲಿ ಸೇರಿಕೊಳ್ಳುತ್ತದೆ. ಇದರಿಂದ ಸ್ಥೂಲದೇಹದ ಶುದ್ಧಿಯಾಗುತ್ತದೆ. ಈ ಪ್ರಕ್ರಿಯೆಯಿಂದ ದೇಹದ ಜಡತ್ವವೂ ಕೂಡಲೇ ಕಡಿಮೆಯಾಗುತ್ತದೆ.

ನೀರು ಸರ್ವಸಮಾವೇಶಕವಾಗಿದೆ, ಅಂದರೆ ಅದು ಪುಣ್ಯದಾಯಕ ಫಲವನ್ನು ಎಲ್ಲೆಡೆ ತಲುಪಿಸುತ್ತದೆ, ಹಾಗೆಯೇ ಪಾಪವನ್ನು ವಿಸರ್ಜಿಸಿಕೊಳ್ಳುತ್ತದೆ; ಆದುದರಿಂದ ಉಪ್ಪಿನ ಗುಣಧರ್ಮವನ್ನು ಉಪಯೋಗಿಸಿಕೊಂಡು ದೇಹದಿಂದ ಸೆಳೆದುಕೊಂಡ ರಜ-ತಮವನ್ನು ಕೂಡಲೇ ನೀರು ತನ್ನಲ್ಲಿ ವಿಸರ್ಜಿಸಿಕೊಳ್ಳುತ್ತದೆ. ಹಾಗಾಗಿ ಉಪ್ಪಿನ ನೀರು ಆಧ್ಯಾತ್ಮಿಕ ಉಪಾಯಕ್ಕೆ ಉಪಯುಕ್ತವಾಗಿದೆ. ಇದರಲ್ಲಿ ಶೇ.೩೦ರಷ್ಟು ಪ್ರಮಾಣದಲ್ಲಿ ಕಲ್ಲುಪ್ಪು ರಜ-ತಮವನ್ನು ಸೆಳೆದುಕೊಳ್ಳುವ ಕಾರ್ಯವನ್ನು ಮಾಡುತ್ತದೆ ಮತ್ತು ಶೇ.೭೦ರಷ್ಟು ನೀರು ಈ ಸ್ಪಂದನಗಳನ್ನು ತನ್ನಲ್ಲಿ ವಿಸರ್ಜಿಸಿಕೊಳ್ಳುವ ಕಾರ್ಯವನ್ನು ಮಾಡಿ ವ್ಯಕ್ತಿಯನ್ನು ಪೃಥ್ವಿತತ್ತ್ವಜನ್ಯ ತ್ರಾಸದಾಯಕ ಜಡತ್ವದಿಂದ ಮುಕ್ತಗೊಳಿಸುತ್ತದೆ.
– ಓರ್ವ ವಿದ್ವಾಂಸರು (ಪೂ. (ಸೌ.) ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧.೧.೨೦೧೨, ಬೆಳಗ್ಗೆ ೮.೩೨)

ಓದಿ – ಉಪ್ಪು ನೀರಿನಲ್ಲಿ ಕಾಲಿಟ್ಟು ನಾಮಜಪ ಮಾಡುವುದು

ನಾಮಜಪ ಮಾಡುತ್ತಾ ಅಥವಾ ಶ್ಲೋಕವನ್ನು ಹೇಳುತ್ತಾ ಸ್ನಾನ ಮಾಡುವುದರ ಮಹತ್ವ

ಶಾಸ್ತ್ರ: ನಾಮಜಪ ಮಾಡುತ್ತಾ ಅಥವಾ ಶ್ಲೋಕವನ್ನು ಹೇಳುತ್ತಾ ಸ್ನಾನವನ್ನು ಮಾಡುವುದರಿಂದ ನೀರಿನಲ್ಲಿರುವ ಚೈತನ್ಯವು ಜಾಗೃತವಾಗಿ ದೇಹಕ್ಕೆ ಅದರ ಸ್ಪರ್ಶವಾಗಿ ಚೈತನ್ಯವು ಅಣುರೇಣುಗಳಲ್ಲಿ ಸಂಕ್ರಮಣವಾಗುತ್ತದೆ ಮತ್ತು ಇದರಿಂದ ದೇಹಕ್ಕೆ ದೇವತ್ವವು ಪ್ರಾಪ್ತವಾಗಿ ದಿನವಿಡೀ ಮಾಡುವ ಕೃತಿಗಳನ್ನು ಚೈತನ್ಯದ ಸ್ತರದಲ್ಲಿ ಮಾಡಲು ದೇಹವು ಸಕ್ಷಮವಾಗುತ್ತದೆ.
– ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೩೦.೧೦.೨೦೦೭, ಮಧ್ಯಾಹ್ನ ೧.೨೩)

(ಆಧಾರ – ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ದಿನಚರಿಗೆ ಸಂಬಂಧಿತ ಆಚಾರಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ’)

Leave a Comment