ರಸ್ತೆಯ ಮೇಲೆ ನಡೆದಾಡುವಾಗ ನಮ್ಮ ಕಾಲುಗಳಿಗೆ ಧೂಳಿನ ಕಣಗಳು ಅಂಟಿಕೊಳ್ಳುತ್ತವೆ. ಕಾಲುಗಳನ್ನು ತೊಳೆದುಕೊಳ್ಳದೇ ದೇವಸ್ಥಾನವನ್ನು ಪ್ರವೇಶಿಸಿದರೆ ನಮ್ಮ ಕಾಲುಗಳಿಗೆ ಅಂಟಿಕೊಂಡಿರುವ ಧೂಳಿನ ಕಣಗಳಿಂದ ರಜ-ತಮಾತ್ಮಕ ಲಹರಿಗಳು ಪ್ರಕ್ಷೇಪಿತವಾಗುತ್ತವೆ. ಇದರಿಂದ ದೇವಸ್ಥಾನದಲ್ಲಿ ಸಿಗುವ ಸಾತ್ತ್ವಿಕ ಲಹರಿಗಳನ್ನು ನಾವು ಕಡಿಮೆ ಪ್ರಮಾಣದಲ್ಲಿ ಗ್ರಹಿಸಬಹುದು. ಅದೇ ರೀತಿ ಆ ರಜ-ತಮಾತ್ಮಕ ಲಹರಿಗಳು ವಾತಾವರಣದಲ್ಲಿ ಪ್ರಕ್ಷೇಪಿಸುವುದರಿಂದ ದೇವಸ್ಥಾನದ ಸಾತ್ತ್ವಿಕತೆಯೂ ಕಡಿಮೆಯಾಗುತ್ತದೆ. ಇದರ ಬದಲು ನಾವು ಕಾಲುಗಳನ್ನು ತೊಳೆದುಕೊಂಡಾಗ ನಮ್ಮ ಕಾಲಿಗೆ ಅಂಟಿಕೊಂಡಿರುವ ಧೂಳಿನ ಕಣಗಳು ದೂರವಾಗುತ್ತವೆ. ಇದರಿಂದ ನಾವು ಸಾತ್ತ್ವಿಕ ಲಹರಿಗಳನ್ನು ಸುಲಭವಾಗಿ ಗ್ರಹಿಸಬಹುದು ಮತ್ತು ರಜ-ತಮಾತ್ಮಕ ಲಹರಿಗಳ ಪ್ರಕ್ಷೇಪಣೆಯೂ ಕಡಿಮೆಯಾಗುವುದರಿಂದ ದೇವಸ್ಥಾನದ ಸಾತ್ತ್ವಿಕತೆಯೂ ಕಡಿಮೆಯಾಗುವುದಿಲ್ಲ.
(ವಿವರವಾಗಿ ಓದಿ : ಸನಾತನ ಸಂಸ್ಥೆಯು ನಿರ್ಮಿಸಿದ ಗ್ರಂಥ ‘ದೇವಸ್ಥಾನದಲ್ಲಿ ದರ್ಶನವನ್ನು ಹೇಗೆ ಪಡೆಯಬೇಕು ?’)