ಈಗಿನ ಗುಲಾಲು ಪಾರಂಪರಿಕ ಪದ್ದತಿಯಿಂದ ತಯಾರಿಸಿರದ ಕಾರಣ
ಅದು ಅಪಾಯಕಾರಿಯಾಗಿರುತ್ತದೆ !
ಕೆಂಪು ಹೊನ್ನೆ ಮರದ ಕಟ್ಟಿಗೆಯನ್ನು ನೀರಿನಲ್ಲಿ ಹಾಕಿದಾಗ ನೀರಿಗೆ ಕೆಂಪುಬಣ್ಣ ಬರುತ್ತದೆ. ರವೆ ಅಥವಾ ಅಕ್ಕಿಯನ್ನು ಸಣ್ಣಗೆ ಪುಡಿ ಮಾಡಿ ಆ ನೀರಿನಲ್ಲಿ ರವೆ ಹಿಟ್ಟಿನ ಪುಡಿಯನ್ನು ಹಾಕಿದಾಗ ಅದಕ್ಕೆ ಗಾಢ ಕೆಂಪುಬಣ್ಣ ಬರುತ್ತದೆ. ಅದನ್ನು ತೆಗೆದು ಒಣಗಿಸಿದ ಮೇಲೆ ಅದರಿಂದ ಗುಲಾಲನ್ನು ತಯಾರಿಸುತ್ತಾರೆ. ಅಕ್ಕಿ, ರಂಗೋಲಿ ಪುಡಿ, ಆವೆ ಮಣ್ಣು ಇತ್ಯಾದಿಗಳ ಪರ್ಯಾಯವಾಗಿ ಅಗ್ಗವಾದ ಪದಾರ್ಥಗಳು ಉಪಯೋಗಿಸುತ್ತಾರೆ. ಇತ್ತೀಚೆಗೆ ಆರ್ಸೆನಿಕ್‌ನಂತಹ ರಾಸಾಯನಿಕ ದ್ರವ್ಯ ಮತ್ತು ಸೀಸ, ತಾಮ್ರ, ಹಿತ್ತಾಳೆಯಂತಹ ಜಡಧಾತುಗಳನ್ನೂ ಇದಕ್ಕಾಗಿ ಉಪಯೋಗಿಸುತ್ತಾರೆ.
ರಾಸಾಯನಿಕ ಗುಲಾಲಿನ ದುಷ್ಪರಿಣಾಮಗಳು
ಅ. ರಾಸಾಯನಿಕ ದ್ರವ್ಯ ಅಥವಾ ಯಾವುದೇ ಜಡಧಾತುವಿನ ಅತ್ಯಂತ ಸಣ್ಣ ಕಣವು ಗುಲಾಲಿನಲ್ಲಿದ್ದರೆ ಅದರಿಂದ ಅಲರ್ಜಿಯಾಗಿ ಮೈಯಲ್ಲಿ ಗುಳ್ಳೆಗಳು ಬರುತ್ತದೆ.
ಆ. ಕಿವಿಯ ಹಿಂದೆ ಗುಲಾಲು ಉಳಿದಿದ್ದರೆ ಅಲ್ಲಿ ಬುರುಸು ಬಂದು ಕಿವಿಯ ಹಿಂದೆ ಗುಳ್ಳೆ ಬರುತ್ತದೆ.
ಇ. ಕೂದಲಿನಲ್ಲಿ ಗುಲಾಲು ಉಳಿದುಕೊಂಡರೆ ಕೂದಲುಗಳಲ್ಲಿ ಹೊಟ್ಟಾಗಿ ಕೂದಲು ಉದುರಲು ಆರಂಭವಾಗುತ್ತದೆ ಮತ್ತು ಕೂದಲಿಗೆ ಹೊಟ್ಟಾಗುವುದು ಇದು ಒಂದು ರೀತಿಯ ಚರ್ಮರೋಗವೇ ಆಗಿದೆ.
ಈ. ಗುಲಾಲು ಮೂಗಿನೊಳಗೆ ಹೋದರೆ ಮೂಗಿನಿಂದ ಸತತವಾಗಿ ನೀರು ಬರುತ್ತದೆ.
ಉ. ಮಕ್ಕಳು ಹೆಚ್ಚಾಗಿ ಗುಲಾಲಿನಿಂದ ಆಡುವುದರಿಂದ ಆ ಮಕ್ಕಳು ಸ್ವಚ್ಛವಾಗಿ ಸ್ನಾನವನ್ನು ಮಾಡುವುದಿಲ್ಲ ಮತ್ತು ಗುಲಾಲು ಮೈ ಮೇಲೆ ಸೂಕ್ಷ್ಮದ ರೀತಿಯಲ್ಲಿ ಅಂಟಿಕೊಂಡಿರುತ್ತದೆ. ಅದು ವಿಶೇಷವಾಗಿ ಕೂದಲು ಗಳಲ್ಲಿ ಅಂಟಿಕೊಂಡಿರುತ್ತದೆ. ಅದರಿಂದಾಗಿ ಕೂದಲುಗಳಲ್ಲಿ ಬುರುಸು ನಿರ್ಮಾಣವಾಗುತ್ತದೆ.
-ಡಾ.ರೇಖಾ ಲಾಂಜೆವಾರ, ಚರ್ಮರೋಗತಜ್ಞೆ
ಊ. ಕಣ್ಣಿನೊಳಗೆ ಗುಲಾಲು ಹೋದರೆ ಕಣ್ಣುಗುಡ್ಡೆಯಲ್ಲಿ ಗೆರೆ ಅಥವಾ ಬಿಳಿ ಕಲೆ ನಿರ್ಮಾಣವಾಗಿ ಅದರಿಂದ ಕಣ್ಣಿಗೆ ಅಪಾಯವಾಗುತ್ತದೆ.
ಎ. ಗುಲಾಲಿನಲ್ಲಿ ರಂಗೋಲಿ ಮತ್ತು ಮಿಣುಕು ಬರುವುದಕ್ಕಾಗಿ ಅನೇಕ ಬಾರಿ ಗಾಜಿನ ತುಂಡುಗಳನ್ನು ಉಪಯೋಗಿಸುತ್ತಾರೆ. ಇದರಿಂದ ಕಣ್ಣಿಗೆ ತೊಂದರೆ ಆಗುತ್ತದೆ.
-ಡಾ.ಯೋಗೇಶ ಶಾಹ, ನೇತ್ರರೋಗತಜ್ಞ
ಏ. ಗುಲಾಲು ಹೊಟ್ಟೆಯಲ್ಲಿ ಹೋದರೆ ವಾಂತಿ ಮತ್ತು ಬೇಧಿಯಾಗುವ ಸಾಧ್ಯತೆ ಇರುತ್ತದೆ.
ಐ. ಗುಲಾಲು ಫುಫ್ಪುಸಕ್ಕೆ ಹೋದರೆ ಕಾಲಾಂತರದಲ್ಲಿ ಉಸಿರಾಟಕ್ಕೆ ಸಂಬಂಧಿತ ರೋಗಗಳು ಆಗುತ್ತವೆ.
-ಡಾ.ಕಿರಣ ಆಂಬೇಕರ್
ಕಣ್ಣಿನೊಳಗೆ ಗುಲಾಲು ಹೋದಾಗ ಮಾಡಬೇಕಾದ ಉಪಾಯೋಜನೆಗಳು
ಅ.ಕಣ್ಣುಗಳನ್ನು ಸ್ವಚ್ಛ ನೀರಿನಿಂದ ತೊಳೆಯಬೇಕು. ಸಾಧ್ಯವಿದ್ದಲ್ಲಿ ನೀರು ಜಂತು ಮುಕ್ತವಾಗಿರಬೇಕು (ಕುದಿಸಿ ಆರಿಸಿದ ನೀರು).
ಆ.ಯಾವುದೇ ಪರಿಸ್ಥಿತಿಯಲ್ಲಿ ಕಣ್ಣು ಗಳನ್ನು ಉಜ್ಜಬಾರದು ಮತ್ತು ಕೂಡಲೇ ಕಣ್ಣಿನ ವೈದ್ಯರ ಬಳಿ ಹೋಗಬೇಕು.
ರಾಸಾಯನಿಕ ಗುಲಾಲು ನಮ್ಮ ಮಕ್ಕಳಿಗಾಗಿ ಖರೀದಿಸಬೇಕಾ? ಇದರ ಬಗ್ಗೆ ಜಾಗರೂಕ ಗ್ರಾಹಕರೇ ವಿಚಾರ ಮಾಡಿ. – ಸೌ.ಮಾಲತಿ ಆಠವಲೆ, ಮುಂಬೈ ಗ್ರಾಹಕ ಪಂಚಾಯತ, ಗ್ರಾಹಕ ಭವನ, ವಿಲೆಪಾರ್ಲೆ(ಪಶ್ಚಿಮ), ಮುಂಬೈ (ದೈನಿಕ ಲೋಕಸತ್ತಾ, ೧೩.೩.೧೯೯೯)
(ಆಧಾರ : ಸಾಪ್ತಾಹಿಕ ಸನಾತನ ಪ್ರಭಾತ ಪತ್ರಿಕೆ)