ಅ. ಶ್ವಾಸವಿಲ್ಲದೇ ಜೀವನವಿಲ್ಲ, ಅದರಂತೆಯೇ ಧರ್ಮವಿಲ್ಲದ ಜೀವನವು ನಿಜವಾದ ಜೀವನವಲ್ಲ, ಅದು ಪ್ರಾಣಿಗಳಂತಹ ಕೇವಲ ಅಸ್ತಿತ್ವವಿರುತ್ತದೆ.
ಆ. ಧರ್ಮವು ಬುದ್ಧಿವಂತನಾಗಲು ಅಲ್ಲ, ಶೀಲವಂತನಾಗಲು ಇದೆ.
ಇ. ಆಗಮಾನಾಂ ಹಿ ಸರ್ವೇಷಾಮ್ ಆಚಾರಃ ಶ್ರೇಷ್ಠ ಉಚ್ಯತೇ |
ಆಚಾರಪ್ರಭವೋ ಧರ್ಮೋ ಧರ್ಮಾದಾಯುರ್ವಿವರ್ಧತೆ ||
– ಮಹಾಭಾರತ, ಅನುಶಾಸನಪರ್ವ, ಅಧ್ಯಾಯ 107, ಶ್ಲೋಕ 147
ಅರ್ಥ : ಎಲ್ಲಾ ವಿದ್ಯೆಗಳಿಗಿಂತ ಪ್ರತ್ಯಕ್ಷ ಸದಾಚರಣೆಯು ಶ್ರೇಷ್ಠವಾಗಿದೆ; ಏಕೆಂದರೆ ಧರ್ಮವು ಆಚಾರಗಳ ಮೂಲಕವಿದೆ. ಈ ಆಚಾರಗಳ ಮೂಲಕ ಧರ್ಮದಿಂದ ವರ್ತಿಸಿದರೆ ಮನುಷ್ಯನ ಆಯುಷ್ಯದ ವೃದ್ಧಿಯಾಗುತ್ತದೆ.
ಈ. ಧರ್ಮಾದರ್ಥಃ ಪ್ರಭವತಿ ಧರ್ಮಾತ್ಪ್ರಭವತೇ ಸುಖಮ್ |
ಧರ್ಮೇಣ ಲಭತೇ ಸರ್ವಂ ಧರ್ಮಸಾರಮಿದಂ ಜಗತ್ ||
– ವಾಲ್ಮಿಕಿರಾಮಾಯಣ, ಅರಣ್ಯಕಾಂಡ, ಸರ್ಗ 8, ಶ್ಲೋಕ 26
ಅರ್ಥ : ಧರ್ಮದಿಂದಲೇ ಅರ್ಥಲಾಭವಾಗುತ್ತದೆ, ಧರ್ಮದಿಂದಲೇ ಸುಖ ಸಿಗುತ್ತದೆ. ಧರ್ಮದಿಂದ ಎಲ್ಲವೂ ಪ್ರಾಪ್ತವಾಗುತ್ತದೆ. ಈ ಜಗತ್ತು ಧರ್ಮದ ಆಶ್ರಯದಲ್ಲಿದೆ.
ಉ. ಊಧ್ರ್ವಬಾಹುರ್ವಿರೌಮ್ಯೇಷ ನ ಚ ಕಶ್ಚಿಚ್ಛೃಣೋತಿ ಮೇ |
ಧರ್ಮಾದರ್ಥಶ್ಚ ಕಾಮಶ್ಚ ಸ ಕಿಮರ್ಥ ನ ಸೇವ್ಯತೇ ||
-ಮಹಾಭಾರತ, ಸ್ವರ್ಗಾರೋಹಣಪರ್ವ, ಅಧ್ಯಾಯ 5 ,ಶ್ಲೋಕ 46
ಅರ್ಥ : (ಮಹರ್ಷಿ ವೇದವ್ಯಾಸರು ಹೇಳುತ್ತಾರೆ) ‘ನಾನು ಎರಡೂ ಕೈಗಳನ್ನೆತ್ತಿ ಆಕ್ರೋಶ ಮಾಡುತ್ತಿದ್ದೇನೆ; ಆದರೆ ಯಾರೂ ನನ್ನ ಮಾತುಗಳನ್ನು ಕೇಳುವುದಿಲ್ಲ. (ಎಲೈ ಮಾನವರೇ) ಧರ್ಮದಿಂದ ಅರ್ಥ ಮತ್ತು ಕಾಮ ಇವೆರಡೂ (ಪರುಷಾರ್ಥ) ಸಾಧ್ಯವಾಗುತ್ತವೆ. ಹೀಗಿರುವಾಗ ನೀವು ಧರ್ಮವನ್ನೇಕೆ ಅನುಸರಿಸುವುದಿಲ್ಲ ?’
ಊ. ವಾಗ್ಭಟ್ (ಅಷ್ಟಾಂಗಹ್ರದಯ, ಸೂತ್ರಸ್ಥಾನ, ಅಧ್ಯಾಯ 2, ಶ್ಲೋಕ 19) – ಸುಖಕ್ಕಾಗಿಯೇ ಎಲ್ಲ ಪ್ರಾಣಿಮಾತ್ರರ ಎಲ್ಲ ಕ್ರಿಯೆಗಳೂ ನಡೆದಿರುತ್ತವೆ. (ಅಧರ್ಮವನ್ನೂ ಸುಖಕ್ಕಾಗಿಯೇ ಮಾಡುತ್ತಾರೆ); ಆದರೆ ಧರ್ಮದ ಹೊರತು ಸುಖವಿಲ್ಲ; ಆದ್ದರಿಂದ ಸದಾ ಧರ್ಮದ ಆಚರಣೆಯನ್ನು ಮಾಡಬೇಕು.
ಎ. ‘ಐಹಿಕ ಸುಖವು ವಾಸ್ತವದಲ್ಲಿ ಸುಳ್ಳಾಗಿದೆ, ಕಾಲ್ಪನಿಕವಾಗಿದೆ, ಆದರೂ ಅಜ್ಞಾನದಿಂದಾಗಿ ಜೀವಕ್ಕೆ ಅದು ಬೇಕೆಂದು ಅನಿಸುತ್ತದೆ. ಧರ್ಮದ ರಚನೆಯು ಇಂತಹ ಅಜ್ಞಾನಿಗಳಿಗಾಗಿಯೇ ಇದೆ. ಸುಳ್ಳಾಗಿದ್ದರೂ, ಆ ಸುಖವು ಸಿಗುತ್ತಾ ಸಿಗುತ್ತಾ ಅದರ ಬಗ್ಗೆ ಜೀವಕ್ಕೆ ವೈರಾಗ್ಯಪ್ರಾಪ್ತವಾಗಿ ನಿಜವಾದ ಸುಖದ ಪ್ರಾಪ್ತಿಯಾಗಲು ಧರ್ಮವಿದೆ. ಆತ್ಮಲಾಭವಾಗಿರುವ ಮನುಷ್ಯನು ಅಜ್ಞಾನಿಗಳಿಗಾಗಿಯೇ ಧರ್ಮಾಚರಣೆಯನ್ನು ಮಾಡುತ್ತಿರುತ್ತಾನೆ’.
– ಪ.ಪೂ. ಕಾಣೆ ಮಹಾರಾಜರು ನಾರಾಯಣಗಾಂವ, ಪುಣೆ ಜಿಲ್ಲೆ, ಮಹಾರಾಷ್ಟ್ರ.
ಏ. ‘ಸುಖಸ್ಯ ಮೂಲಂ ಧರ್ಮಃ| ಧರ್ಮಸ್ಯ ಮೂಲಂ ಅರ್ಥಃ | ಅರ್ಥಸ್ಯ ಮೂಲಂ ರಾಜ್ಯಮ್|
ರಾಜ್ಯಮೂಲಂ ಇಂದ್ರಿಯಜಯಃ| ಇಂದ್ರಿಯಜಯಸ್ಯ ಮೂಲಂ ವಿನಯಃ |
ವಿನಯಸ್ಯ ಮೂಲಂ ವೃದ್ದೋಪಸೇವಾ | ವೃದ್ದೋಪಸೇವಾಯ ವಿಜ್ಞಾನಮ್|
ವಿಜ್ಞಾನೇನ ಆತ್ಮಾನಂ ಸಮ್ಪಾದಯೇತ್ | ಸಮ್ಪಾದಿತಾಮ್ಯ ಜಿತಾತ್ಮಾ ಭವತಿ||‘
– ಚಾಣಕ್ಯಸೂತ್ರಗಳು, ಅಧ್ಯಾಯ 1, ಅಂಶ 1 ರಿಂದ 9
ಅರ್ಥ : ಸುಖದ ಮೂಲವು ಧರ್ಮವೇ (ಧರ್ಮಾಚರಣೆ) ಆಗಿದೆ. ಧರ್ಮದ ಮೂಲವು ಸನ್ಮಾರ್ಗದಿಂದ ಹಣವನ್ನು ಸಂಪಾದನೆ ಮಾಡುವುದಾಗಿದೆ. ಅರ್ಥದ ಮೂಲವು ರಾಜ್ಯವನ್ನು ಗಳಿಸುವುದಾಗಿದೆ. ರಾಜ್ಯವನ್ನು ಯೋಗ್ಯ ರೀತಿಯಲ್ಲಿ ನಡೆಸಲು ಇಂದ್ರಿಯಗಳು ಮತ್ತು ಮನಸ್ಸಿನ ಮೇಲೆ ನಿಯಂತ್ರಣವಿರುವುದು ಆವಶ್ಯಕವಾಗಿದೆ. ಇಂದ್ರಿಯಗಳ ಮತ್ತು ಮನಸ್ಸಿನ ಮೇಲೆ ನಿಯಂತಣ ಪಡೆಯಲು ನಮ್ರತೆ ಇರುವುದು ಅವಶ್ಯಕವಾಗಿದೆ. ನಮ್ರತೆಯನ್ನು ಪಡೆಯಲು ಜ್ಞಾನವೃದ್ಧರ (ಸಂತರ) ಸೇವೆ ಮಾಡುವುದು ಅವಶ್ಯಕವಾಗಿದೆ. ಜ್ಞಾನವೃದ್ಧರ ಸೇವೆಯಿಂದ ಆತ್ಮಜ್ಞಾನವು ಪ್ರಾಪ್ತವಾಗುತ್ತದೆ ಮತ್ತು ಈ ಆತ್ಮಜ್ಞಾನದಿಂದ ಆತ್ಮಪ್ರಾಪ್ತಿ ಆಗುತ್ತದೆ. ಆತ್ಮಪ್ರಾಪ್ತಿ ಆಗಿರುವ ಮನುಷ್ಯನು ಜಿತಾತ್ಮನಾಗುತ್ತಾನೆ.
ಐ. ಲೋಕಯಾತ್ರಾರ್ಥಮೆವೆಹ ಧರ್ಮಸ್ಯ ನಿಯಮಃ ಕೃತಃ||
-ಮಹಾಭಾರತ, ಶಾಂತಿಪರ್ವ, ಅಧ್ಯಾಯ 259, ಶ್ಲೋಕ 5
ಅರ್ಥ : ಲೋಕವ್ಯವಹಾರಗಳು ವ್ಯವಸ್ಥಿತವಾಗಿ ನಡೆಯಬೇಕು ಎನ್ನುವುದಕ್ಕಾಗಿಯೇ ಧರ್ಮಾಚರಣೆಯ ನಿಯಮಗಳನ್ನು ಹಾಕಿಕೊಡಲಾಗಿದೆ.
ಓ. ಧರ್ಮ ಏವ ಹತೋ ಹಂತಿ ಧರ್ಮೋ ರಕ್ಷತಿ ರಕ್ಷಿತಃ |
– ಮಹಾಭಾರತ, ವನಪರ್ವ, ಅಧ್ಯಾಯ 314, ಶ್ಲೋಕ 128
ಅರ್ಥ : ಧರ್ಮದ ಪಾಲನೆ ಮಾಡದಿರುವವನು ನಾಶವಾಗುತ್ತಾನೆ ಮತ್ತು ಯಾವನು ಧರ್ಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾನೆಯೋ, ಅವನ ರಕ್ಷಣೆಯನ್ನು ಧರ್ಮವು (ಅಂದರೆ ಈಶ್ವರನು) ಮಾಡುತ್ತದೆ.
ಔ. ಸ್ವಲ್ಪಮ್ಪ್ಯಸ್ಯ ಧರ್ಮಸ್ಯ ತ್ರಾಯತೆ ಮಹತೋ ಭಯಾತ್ |
– ಶ್ರೀಮದ್ಭಗವದ್ಗೀತೆ, ಅಧ್ಯಾಯ 2, ಶ್ಲೋಕ 40
ಅರ್ಥ : ಧರ್ಮವನ್ನು ಸ್ವಲ್ಪ ಪಾಲಿಸಿದರೂ, ಅದು ದೊಡ್ಡ ಭಯದಿಂದ ರಕ್ಷಿಸುತ್ತದೆ.
ಅಂ. ಧರ್ಮೇಣೈವ ಜಗತ್ಸುರಕ್ಷಿತಮಿದಂ ಧರ್ಮೋ ಧರಾಧಾರಕಃ |
ಧರ್ಮಾದ್ವಸ್ತು ನ ಕಿಂಚಿತ್ದಸ್ತಿ ಭುವನೇ ಧರ್ಮಾಯ ತಸ್ಮೈ ನಮಃ ||
ಅರ್ಥ : ಧರ್ಮದಂತೆ ವರ್ತಿಸುವುದರಿಂದಲೇ ಜಗತ್ತು ಸುರಕ್ಷಿತವಾಗಿರುತ್ತದೆ; ಆದುದರಿಂದ ಧರ್ಮಕ್ಕೆ ಪೃಥ್ವಿಯ ಧಾರಣಕರ್ತ ಎನ್ನಲಾಗಿದೆ. ಈ ಜಗತ್ತಿನಲ್ಲಿ ಧರ್ಮದಷ್ಟು ಯೋಗ್ಯ ಬೇರೊಂದಿಲ್ಲ; ಆದ್ದರಿಂದ ಈ ಧರ್ಮಕ್ಕೆ ನನ್ನ ನಮಸ್ಕಾರಗಳು.
ಕ. ಅಧರ್ಮ ಏವ ಮೂಲಂ ಸರ್ವರೋಗಾಣಾಮ್ |
ಅರ್ಥ : ಅಧರ್ಮವೇ ಎಲ್ಲ ರೋಗಗಳ ಮೂಲವಾಗಿದೆ. ಆಧಿಭೌತಿಕ, ಆಧಿಧೈವಿಕ ಮತ್ತು ಆಧ್ಯಾತ್ಮಿಕ ಸ್ವರೂಪದ ರೋಗ (ತೊಂದರೆ) ಗಳನ್ನು ಒಪ್ಪಲಾಗಿದೆ. ಆಧಿಭೌತಿಕ ರೋಗಗಳೆಂದರೆ ಭೌತಿಕ ಕಾರಣಗಳಿಂದ ಉದ್ಭವಿಸುವ ರೋಗಗಳು, ಉದಾ. ಭೂಕಂಪ, ಕ್ಷಾಮ ಇತ್ಯಾದಿ ಸಂಕಟಗಳು. ಆಧಿದೈವಿಕ ರೋಗಗಳೆಂದರೆ ಗ್ರಹಬಾಧೆ, ಋಷಿಮುನಿಗಳ ಶಾಪ, ದೇವತೆಗಳ ಕೋಪ ಇತ್ಯಾದಿ. ಆಧ್ಯಾತ್ಮಿಕ ರೋಗಗಳೆಂದರೆ ಭೂತ-ಪಿಶಾಚಾದಿ ಕೆಟ್ಟ ಶಕ್ತಿಗಳ ತೊಂದರೆ, ಪ್ರಾರಬ್ಧ ಇತ್ಯಾದಿಗಳು. (ಒಂದು ವಿಚಾರಸರಣಿಗನುಸಾರ ಆಧಿದೈವಿಕ ತೊಂದರೆಗಳಲ್ಲಿ ಮೇಲೆ ಉಲ್ಲೇಖಿಸಲಾದ ‘ಆಧ್ಯಾತ್ಮಿಕ’ ತೊಂದರೆಗಳೂ ಬರುತ್ತವೆ ಮತ್ತು ‘ಆಧ್ಯಾತ್ಮಿಕ’ ತೊಂದರೆಗಳೆಂದರೆ ವಾತ, ಪಿತ್ತ ಮತ್ತು ಕಫ ಇವುಗಳಿಂದ ಉಂಟಾಗುವ ಶಾರೀರಿಕ ಮತ್ತು ಮಾನಸಿಕ ತೊಂದರೆಗಳು.)
ಖ. ಧರ್ಮದ ಪ್ರತಿಜ್ಞೆ : ‘ಧರ್ಮವು ಮನುಷ್ಯನ ಮನಸ್ಸಿನ ಮೇಲೆ ಅಸೀಮಿತ ಸ್ವಾಮಿತ್ವವನ್ನು ಚಲಾಯಿಸಿದೆ. ಇದಕ್ಕೆ ಕಾರಣ ಧರ್ಮದ ಪ್ರತಿಜ್ಞೆ, ಇಡೀ ಜೀವನದ ಮತ್ತು ಈಶ್ವರನ ಅರ್ಥವನ್ನು ನಾನು ನಿನಗೆ ತಿಳಿಸಿ ಹೇಳುವೆನು ಮತ್ತು ನಾನೇ ನಿನಗೆ ಪರಮಕಲ್ಯಾಣವನ್ನು ಪ್ರಾಪ್ತಮಾಡಿಕೊಡುವೆನು,’ ಎಂದು ಧರ್ಮವು ಮನುಷ್ಯನಿಗೆ ಆಶ್ವಾಸನೆಯನ್ನು ಕೊಡುತ್ತದೆ
ಗ. ಧರ್ಮ ಏಕೋ ಮನುಷ್ಯಾಣಾಂ ಸಹಾಯಃ ಪಾರಲೌಕಿಕಃ ||
– ಮಹಾಭಾರತ, ಅನುಶಾಸನಪರ್ವ, ಅಧ್ಯಾಯ 111, ಶ್ಲೋಕ 17
ಅರ್ಥ : ಧರ್ಮ ಒಂದೇ ಮನುಷ್ಯನ ಪರಲೋಕದಲ್ಲಿನ ಸಂಗಾತಿಯಾಗಿದೆ.
ಘ. ಪ್ರಭವಾರ್ಥಾಯ ಭೂತಾನಾಂ ಧರ್ಮಪ್ರವಚನಂ ಕೃತಮ್ |
ಯಃ ಸ್ಯಾತ್ಪ್ರಭವಸಂಯುಕ್ತಃ ಸ ಧರ್ಮ ಇತಿ ನಿಶ್ಚಯಃ ||
– ಮಹಾಭಾರತ, ಶಾಂತಿಪರ್ವ, ಅಧ್ಯಾಯ 109, ಶ್ಲೋಕ 10
ಅರ್ಥ : ಜೀವಗಳ ಉತ್ಕರ್ಷವಾಗಬೇಕು ಎನ್ನುವುದಕ್ಕಾಗಿಯೇ ಧರ್ಮವನ್ನು ಹೇಳಲಾಗಿದೆ. ‘ಯಾವುದು ಉತ್ಕರ್ಷದಿಂದ ಯುಕ್ತವಾಗಿದೆಯೋ, ಅದುವೇ ಧರ್ಮ’, ಎಂಬ ಸಿದ್ಧಾಂತವಿದೆ.
ಚ. ನ ಜಾತು ಕಾಮಾನ್ನ ಭಯಾನ್ನ ಲೋಭಾದ್ ಧರ್ಮ ತ್ಯಜೇಜ್ಜೀವಿತಸ್ಯಾಪಿ ಹೇತೋಃ|
ನಿತ್ಯೋ ಧರ್ಮಃ ಸುಖದುಃಖೇ ತ್ವನಿತ್ಯೇ ನಿತ್ಯೋ ಜೀವೋ ಧಾತುರಸ್ಯ ತ್ವನಿತ್ಯಃ||
-ಮಹಾಭಾರತ, ಸ್ವಗರ್ಾರೋಹಣಪರ್ವ, ಅಧ್ಯಾಯ 5, ಶ್ಲೋಕ 47
ಅರ್ಥ : ಕಾಮದಿಂದ, ಭಯದಿಂದ, ಲೋಭದಿಂದ ಅಥವಾ ಜೀವದ ಆಸೆಯಿಂದ ಧರ್ಮವನ್ನು ಬಿಡಬಾರದು; ಏಕೆಂದರೆ ಧರ್ಮವು ನಿತ್ಯವಾಗಿದೆ ಮತ್ತು ಸುಖ-ದುಃಖಗಳು ಕ್ಷಣಿಕವಾಗಿವೆ. ಜೀವವು ನಿತ್ಯವಾಗಿದೆ ಮತ್ತು ಶರೀರವು ಅನಿತ್ಯವಾಗಿದೆ.
ಛ. ಅತ್ಯಂತ ಸುಖಿ, ಹಾಗೆಯೇ ಅತ್ಯಂತ ದುಃಖಿ ಮನುಷ್ಯನು ಮೋಕ್ಷಪ್ರಾಪ್ತಿ ಮಾಡಿಕೊಳ್ಳಲಾರನು. ಆದ್ದರಿಂದಲೇ ‘ಧರ್ಮ’ವಿದೆ.
ಜ. ಯತೋ ಧರ್ಮಸ್ತತೋ ಜಯಃ |
– ಮಹಾಭಾರತ, ಉದ್ದೋಗಪರ್ವ, ಅಧ್ಯಾಯ 39, ಶ್ಲೋಕ 7
ಅರ್ಥ : ಎಲ್ಲಿ ಧರ್ಮವಿದೆಯೋ ಅಲ್ಲಿ ಜಯ ನಿಶ್ಚಿತವಾಗಿದೆ.
ಝ. ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ |
ತತ್ರ ಶ್ರೀರ್ವಿಜಯೋ ಭೂತಿರ್ಧ್ರುವಾ ನೀತಿರ್ಮತಿರ್ಮಮ ||
– ಶ್ರೀಮದ್ಭಗವದ್ಗೀತಾ, ಅಧ್ಯಾಯ 18, ಶ್ಲೋಕ 78
ಅರ್ಥ : (ಸಂಜಯನು ಧೃತರಾಷ್ಟ್ರನಿಗೆ ಹೇಳುತ್ತಾನೆ,) ಎಲ್ಲಿ ಯೋಗೇಶ್ವರ ಕೃಷ್ಣ ಮತ್ತು ಧನುರ್ಧರಅರ್ಜುನನಿದ್ದಾನೆಯೋ, ಅಲ್ಲಿಯೇ ಲಕ್ಷ್ಮೀ (ಐಶ್ವರ್ಯ), ವಿಜಯ, ಅಸಾಮಾನ್ಯ ಸಾಮಥ್ರ್ಯ, ಅಖಂಡ ವೈಭವ ಮತ್ತು ನೀತಿಯು ನೆಲೆಸುತ್ತದೆ ಎಂಬುದು ನನ್ನ ಅಭಿಮತವಾಗಿದೆ.” (ಶ್ರೀಕೃಷ್ಣನು ಈಶ್ವರನ ಪೂರ್ಣಾವತಾರ, ಅಂದರೆ ಸ್ವತಃ ಈಶ್ವರನೇ (ಧರ್ಮವೇ) ಆಗಿರುವುದರಿಂದ ಇದು ಸಹಜವಾಗಿದೆ.)
ಠ. ‘ಹಿಂದೂ ಧರ್ಮದಂತೆ ಆಚರಣೆಯನ್ನು ಮಾಡದಿರುವುದರಿಂದ ಸದ್ಯ ಎಲ್ಲ ಕಡೆಗಳಲ್ಲಿ ಚಂಡಮಾರುತ, ಭೂಕಂಪ, ಅಪಘಾತ, ಅತೀವೃಷ್ಟಿ, ಅನಾವೃಷ್ಟಿ, ಸ್ವಚಕ್ರ (ಸ್ವಜನರಲ್ಲಿ ಜಗಳಗಳು) ಪರಚಕ್ರ (ಹೊರಗಿನ ಜನರಿಂದ ತೊಂದರೆಗಳು ಆಗುವುದು) ಇತ್ಯಾದಿ ಸಂಕಟಗಳು ಘಟಿಸುತ್ತಿವೆ.’
– ಪ.ಪೂ. ಕಾಣೆ ಮಹಾರಾಜರು, ನಾರಾಯಣಗಾವ, ಪುಣೆ ಜಿಲ್ಲೆ, ಮಹಾರಾಷ್ಟ್ರ.
ಡ. ‘ಪ್ರತಿಯೊಬ್ಬರೂ ಧರ್ಮದಿಂದ ನಡೆದುಕೊಂಡರೆ ನಿಸರ್ಗವು ಮಾನವನ ಸುಖಕ್ಕೆ ಅನುಕೂಲವಾಗುತ್ತದೆ. ಜ್ಞಾನೇಶ್ವರ ಮಹಾರಾಜರು ‘ಜೊ ಜೆ ವಾಂಛಿಲ ತೋ ತೆ ಲಾಹೋ | ಪ್ರಾಣಿಜಾತ ||’ ಈ ಪಂಕ್ತಿಯಿಂದ ಇದನ್ನೇ ಹೇಳಿದ್ದಾರೆ. ಇಲ್ಲಿ ಪ್ರಾಣಿಜಾತ ಅಂದರೆ ಕೇವಲ ಮನುಷ್ಯರಲ್ಲ, ಇದರಲ್ಲಿ ಇತರ ಪ್ರಾಣಿಗಳೂ ಬರುತ್ತವೆ. ಇಷ್ಟೇ ಅಲ್ಲ, ಇದರಲ್ಲಿ ಅಚರ ಸೃಷ್ಟಿಯೂ ಬರುತ್ತದೆ; ಏಕೆಂದರೆ ನಮ್ಮ ಕರ್ಮದಂತೆ ನಮಗೆ ಅಚಲ ಜನ್ಮವೂ ಸಿಗಬಹುದು. ಮನುಷ್ಯನು ಸುಧಾರಿಸಿದರೆ ಮಾತ್ರ ಇತರ ಚರ ಮತ್ತು ಅಚರ ಸೃಷ್ಟಿಯು ಸುಖಿಯಾಗಬಹುದು ಮತ್ತು ಸುಧಾರಿಸದಿದ್ದರೆ ಚರಾಚರ ಸೃಷ್ಟಿಗೆ ದುಃಖವನ್ನು ನೀಡುವ ಪಾಪ ಅವನಿಗೆ ತಗುಲುತ್ತದೆ.’
-ಪ.ಪೂ. ಕಾಣೆ ಮಹಾರಾಜರು, ನಾರಾಯಣಗಾವ, ಪುಣೆ ಜಿಲ್ಲೆ, ಮಹಾರಾಷ್ಟ್ರ