ವ್ಯುತ್ಪತ್ತಿ ಮತ್ತು ಅರ್ಥ
ಅ. ಮೇರುತಂತ್ರ ಗ್ರಂಥದಲ್ಲಿ, ಹಿಂದೂ ಶಬ್ದದ ವ್ಯುತ್ಪತ್ತಿಯನ್ನು ‘ಹೀನಾನ ಗುಣಾನ ದೂಷಯತಿ ಇತಿ ಹಿಂದೂ |‘ ಎಂದು ಕೊಡಲಾಗಿದೆ. ‘ಹೀನಾನ ಗುಣಾನ’ ಅಂದರೆ ಹೀನ, ಕನಿಷ್ಠ ರಜೋಗುಣ ಮತ್ತು ತಮೋಗುಣವನ್ನು, ‘ದೂಷಯತಿ’ ಅಂದರೆ ನಾಶಮಾಡುವವನು. ಆದುದರಿಂದ ರಜ-ತಮಾತ್ಮಕ ಹೀನ ಗುಣಗಳನ್ನು ಮತ್ತು ಅದರಿಂದಾಗುವ ಕಾಯಿಕ, ವಾಚಿಕ ಮತ್ತು ಮಾನಸಿಕ ಹೀನ ಕೃತಿಗಳನ್ನು ಯಾವನು ತಿರಸ್ಕರಿಸುತ್ತಾನೆಯೋ, ಅವನನ್ನು ಮತ್ತು ಅಖಂಡ ಸತ್ತ್ವಪ್ರಧಾನ ಪ್ರವೃತ್ತಿಯಲ್ಲಿ ತಲ್ಲೀನನಾಗಿರುವುದರಿಂದ ಯಾವನು ಈಶಭಜನೆಯೇ (ಸಾಧನೆಯೇ) ತನ್ನ ಜೀವನದ ಸಾರವಾಗಿದೆ ಎಂದು ಭಾವಿಸಿ ಈಶ್ವರಪ್ರಾಪ್ತಿ ಮಾಡಿಕೊಳ್ಳುತ್ತಾನೆಯೋ ಮತ್ತು ಸಮಾಜಕ್ಕೆ ಮಾರ್ಗದರ್ಶನ ದೊರಕಬೇಕೆಂದು ಯಾವನು ಸರಿಸಾಟಿಯಿಲ್ಲದ ಕರ್ಮಯೋಗವನ್ನು ಆಮರಣ ಆಚರಣೆ ಮಾಡುತ್ತಾನೆಯೋ, ಆತನನ್ನು ‘ಹಿಂದೂ’ ಎನ್ನಬೇಕು ಎಂಬುದು ಹಿಂದೂ ಶಬ್ದದ ವಿಸ್ತೃತ ವ್ಯುತ್ಪತ್ತಿಯಾಗಿದೆ.
ಹಿಂದೂ ಎನ್ನುವುದು ಒಂದು (ಸತ್ತ್ವಪ್ರಧಾನ) ವೃತ್ತಿಯಾಗಿದೆ. ಅದರ ಅರ್ಥ ಸಾಧಕವಾಗಿದೆ. ಯಾವುದೇ ಒಬ್ಬ ವ್ಯಕ್ತಿಯು ಬಾಹ್ಯತಃ ಮುಸಲ್ಮಾನ್, ಕ್ರ್ಯಸ್ತ, ಯಹೂದಿ, ಪಾರಸಿ ಇತ್ಯಾದಿ ಯಾರೇ ಆಗಿದ್ದರೂ, ರಜ-ತಮ ಪ್ರವೃತ್ತಿಗಳನ್ನು ನಾಶ ಮಾಡುವ ಸತ್ತ್ವಪ್ರಧಾನ ಸಾಧಕನಾಗಿದ್ದರೆ ಅವನು ಹಿಂದೂವೇ ಆಗಿರುತ್ತಾನೆ. ಆದ್ದರಿಂದ ಹಿಂದೂ ಧರ್ಮವೇ ನಿಜವಾದ ಅರ್ಥದಲ್ಲಿ ಸರ್ವಧರ್ಮ (ಪಂಥ) ಸಮಭಾವವನ್ನು ಒಪ್ಪುವ ಧರ್ಮವಾಗಿದೆ.
– ಪ.ಪೂ.ಕಾಣೆ ಮಹಾರಾಜರು, ನಾರಾಯಣಗಾಂವ, ಪುಣೆ ಜಿಲ್ಲೆ, ಮಹಾರಾಷ್ಟ್ರ
ವೈಶಿಷ್ಟ್ಯಗಳು
ಅ. ‘ಮಾನವನಲ್ಲಿರುವ ಈಶ್ವರನ ದರ್ಶನ ಮಾಡಿಸುವುದು, ಮಾನವನಲ್ಲಿನ ಈಶ್ವರನನ್ನು ಪ್ರಕಟಿಸುವುದು, ಎಂಬುದು ಹಿಂದೂ ಅಧ್ಯಾತ್ಮದ ಏಕಮೇವ ಶಾಶ್ವತ ಧ್ಯೇಯವಾಗಿದೆ. ಭಾರತೀಯ ಜನತೆಯ ಆರ್ಥಿಕ ಜೀವನದ ಪುನರ್ರಚನೆ ಮಾಡುವ ಪ್ರಯಾಸವಾಗಿರಲಿ ಅಥವಾ ಪಾರತಂತ್ರದಲ್ಲಿರುವ ಭಾರತೀಯ ಜನತೆಯ ಮುಕ್ತಿಗಾಗಿ ಮಾಡಬೇಕಾದ ಹೋರಾಟಗಳೇ ಆಗಿರಲಿ, ಇವೆರಡೂ ಸಂದರ್ಭಗಳಲ್ಲಿ ಮೇಲೆ ಉಲ್ಲೇಖಿಸಿರುವ ನಮ್ಮ ಶಾಶ್ವತ ಧ್ಯೇಯವನ್ನು ಸಿದ್ಧಪಡಿಸುವುದಕ್ಕಾಗಿಯೇ ಹಿಂದೂ ಅಧ್ಯಾತ್ಮವು ಪ್ರಯತ್ನಿಸುತ್ತಿದೆ.’
– ಶ್ರೀಅರವಿಂದರು (ವಂದೇಮಾತರಮ್, 24 ಜೂನ್ 1908)
ಆ. ಎಲ್ಲರನ್ನು ಪ್ರೀತಿಸುವ ಶಿಕ್ಷಣ ಮತ್ತು ಬಹಳಷ್ಟು ವಿಚಾರ ಸ್ವಾತಂತ್ರ್ಯವನ್ನು ನೀಡುವ ಧರ್ಮ : ಇತರರ ಮೇಲೆ ಪ್ರೀತಿಯನ್ನು ಮಾಡುವ ಕಲೆಯ ಶಿಕ್ಷಣವನ್ನು ನಮ್ಮ ಧರ್ಮ ನೀಡುತ್ತದೆ. ‘ಇತರರನ್ನು ಪ್ರೀತಿಸುವುದು ಕಠಿಣ ಮತ್ತು ಒಂದು ರೀತಿಯಲ್ಲಿ ಅಸಾಧ್ಯವೇ ಆಗಿದೆ’, ಎಂದು ಬಹಳಷ್ಟು ಜನರು ಹೇಳುತ್ತಾರೆ. ಇಂತವರಿಗೆ ನಮ್ಮ ಧರ್ಮಶಿಕ್ಷಣದ ಪರಿಚಯವಾಗಿಲ್ಲ ಎಂದು ದುಃಖದಿಂದ ಹೇಳಬೇಕಾಗುತ್ತದೆ; ಏಕೆಂದರೆ ಇತರರನ್ನು ಪ್ರೀತಿಸುವಾಗ ಅವರು ಅಸಂತುಷ್ಟರಾದರೆ ಪ್ರೀತಿಸುವ ವ್ಯಕ್ತಿಗೆ ದುಃಖವಾಗುತ್ತದೆ; ಏಕೆಂದರೆ ಅವನಿಗೆ ಇತರರ ಅಸಂತುಷ್ಟತತೆಯ ಕಾರಣ ‘ನನ್ನ ಅವರ ಮೇಲಿನ ಪ್ರೀತಿಯ ಕೊರತೆಯಾಗಿದೆ’ ಎಂದು ಅನಿಸುತ್ತದೆ. ಇದರ ಉತ್ತಮ ಉದಾಹರಣೆಯನ್ನು ರಾಮರಾಜ್ಯದಲ್ಲಿನ ರಜಕನ (ಅಗಸನ) ಪ್ರಸಂಗದಿಂದ ಹೇಳಬಹುದು.
ರಾಮರಾಜ್ಯದಲ್ಲಿ ಒಬ್ಬ ರಜಕನಿಗೆ ಭೂಮಂಡಲದ ಒಬ್ಬ ಲೋಕಮಾನ್ಯ, ರಾಜಮಾನ್ಯ ಮತ್ತು ಧರ್ಮಮಾನ್ಯನಿರುವ, ಹಾಗೆಯೇ ಏಕಪತ್ನಿ, ಏಕವಾಣಿ ಮತ್ತು ಏಕವಚನದ ಅಖಂಡ ವ್ರತವನ್ನು ಆಮರಣ ಪಾಲಿಸುವ ರಾಜನ ಪರಮಸಾಧ್ವಿ ಧರ್ಮಪತ್ನಿಯ ವಿರುದ್ಧ ವಿಚಾರ ಮತ್ತು ಭಾಷಣ ಮಾಡಲು ನಿರ್ಬಂಧಿಸಲಾಗಿರಲಿಲ್ಲ. ಲೌಕಿಕ ಮನುಷ್ಯ, ವಾನರರು, ಕರಡಿ, ರಾಕ್ಷಸರಂತೆಯೇ ಅಲೌಕಿಕ ಮಹರ್ಷಿ, ದೇವತೆಗಳ ಸಾಕ್ಷಿಯಲ್ಲಿ ಸೀತಾಮಾತೆಯ ಅಗ್ನಿಪರೀಕ್ಷೆ ಆಗಿತ್ತು. ಹೀಗಿರುವಾಗಲೂ ಓರ್ವ ಅಗಸನು ರಾಜನ ವಿರುದ್ಧ ತನ್ನ ವಿಚಾರಗಳನ್ನು ಮಂಡಿಸಿದನು. ರಾಮನಿಗೆ ಆ ಅಗಸನ ವರ್ತನೆಯು ಅಯೋಗ್ಯವಾಗಿರುವುದು ತಿಳಿದಿತ್ತು, ರಾಮನು ‘ಆ ಅಗಸನಿಗೆ ಶಿಕ್ಷೆಯನ್ನು ನೀಡಿ ಆ ಒಬ್ಬನ ಬಾಯಿಯನ್ನು ಮುಚ್ಚಿಸಬಹುದಾಗಿತ್ತು; ಆದರೆ ಸಾವಿರಾರು ಬಾಯಿಗಳಿಂದ ಅವನ ವಿಚಾರ ಹೊರಬರಬಹುದು ಮತ್ತು ಅನಂತರ ಅವರೆಲ್ಲರ ಪ್ರತಿಕಾರ ಮಾಡುವಾಗ ರಾಜ್ಯದಲ್ಲಿ ಅರಾಜಕತೆಯು ಹಬ್ಬಬಹುದು. ಹೀಗಿರುವಾಗ ವ್ಯವಹಾರದಿಂದ ತಾನು ಜನತೆಯ ವಿಚಾರವನ್ನು ಪರಿವರ್ತಿಸಬಲ್ಲೆ ಹೊರತು ಶಿಕ್ಷೆಯಿಂದಲ್ಲ’ ಎಂದು ವಿಚಾರ ಮಾಡಿದನು.
ವಿಚಾರ ಮತ್ತು ಭಾಷಣದ ಸ್ವಾತಂತ್ರ್ಯವು ಪರಮಾವಶ್ಯಕವಾಗಿದೆ. ವಾಸ್ತವದಲ್ಲಿ ಅದು ಸ್ವತಂತ್ರ ರಾಷ್ಟ್ರದ ಭೂಷಣವೇ ಆಗಿದೆ ಮತ್ತು ಭಾರತೀಯ ಸಂಸ್ಕೃತಿಯು ಅದನ್ನು ಯಾವಾಗಲೂ ಆದರಿಸಿದೆ. ಈ ದೇಶದಲ್ಲಿ ಚಾರ್ವಾಕ್, ಶೂನ್ಯವಾದಿ, ದ್ವೈತಿ, ಅದ್ವೈತಿ ಹೀಗೆ ಅನೇಕ ರೀತಿಯ ದಾರ್ಶನಿಕರು ಆಗಿ ಹೋಗಿದ್ದಾರೆ. ಅವರ ಮತಗಳು ಪರಸ್ಪರ ವಿರುದ್ಧವಾಗಿದ್ದವು ಮತ್ತು ಅವರ ನಡುವೆ ಯಾವಾಗಲೂ ವಿಚಾರ ಸಂಘರ್ಷವು ನಡೆಯುತ್ತಿತ್ತು. ಅವರಲ್ಲಿ ಎಂದಿಗೂ ಒಮ್ಮತವಾಗಲಿಲ್ಲ; ಆದರೆ ಈ ರಾಷ್ಟ್ರವು ಎಂದಿಗೂ ಅವರ ಭಾಷಣ ಅಥವಾ ವಿಚಾರಗಳ ಮೇಲೆ ನಿರ್ಬಂಧವನ್ನು ಹೇರಲಿಲ್ಲ. ವಿಚಾರಸರಣಿಯ ವ್ಯತ್ಯಾಸದಿಂದ ವಿದೇಶಗಳಂತೆ ಅವರನ್ನು ಎಂದಿಗೂ ಗಲ್ಲಿಗೇರಿಸಲಿಲ್ಲ.’
– ಪ.ಪೂ. ಕಾಣೆ ಮಹಾರಾಜರು, ನಾರಾಯಣಗಾವ, ಪುಣೆ ಜಿಲ್ಲೆ, ಮಹಾರಾಷ್ಟ್ರ.
ಇ. ವಿರೋಧಕರಿಗೂ ಋಷಿಪದವಿ ಮತ್ತು ಅವತಾರತ್ವವನ್ನು ನೀಡುವುದು : ಪುನರ್ಜನ್ಮ ಮತ್ತು ಈಶ್ವರ ಇವೆರಡರ ಮೇಲೆ ವಿಶ್ವಾಸವನ್ನಿಡದ ಚಾರ್ವಾಕನಿಗೆ ತೊಂದರೆಯಂತೂ ಆಗುವುದಿರಲಿ ಅವನಿಗೆ ಋಷಿಪದವನ್ನು ನೀಡಲಾಯಿತು! ಈಶ್ವರನ ಅಸ್ತಿತ್ವವನ್ನು ನಿರಾಕರಿಸಿದ ಮತ್ತು ಪ್ರಚಲಿತ ಯಜ್ಞಯಾಗಗಳನ್ನೂ ಟೀಕಿಸಿದ ಸಿದ್ಧಾರ್ಥ ಗೌತಮನಿಗೆ ದೇವಪದವಿಯನ್ನು ನೀಡಲಾಯಿತು! ನಿರೀಶ್ವರವಾದಿ ಮಹಾವೀರರಿಗೂ ದೇವಪದವಿಯು ದೊರಕಿತು.