ಧರ್ಮದ ವ್ಯುತ್ಪತ್ತಿ, ವ್ಯಾಖ್ಯೆ ಮತ್ತು ಅರ್ಥಗಳು

‘ಧರ್ಮ’ ಎಂದರೆ ‘ರಿಲಿಜನ್’ ಅಲ್ಲ !

ಆಂಗ್ಲ ಭಾಷೆಯಲ್ಲಿ ಧರ್ಮಕ್ಕೆ ಯೋಗ್ಯ ಶಬ್ದವೇ ಇಲ್ಲ. ‘ಯಾವುದರಿಂದಾಗಿ ನಾವು ಮೇಲಿನ ಮಟ್ಟಕ್ಕೆ ಹೋಗುತ್ತೇವೆಯೋ’, ಅದೆಂದರೆ ಧರ್ಮ. ಈ ರೀತಿಯ ಉನ್ನತ ಧ್ಯೇಯವನ್ನು ನೀಡುವ ‘ಧರ್ಮ’ದ ಸಮಾನಾರ್ಥಕ ಶಬ್ದವು ಆಂಗ್ಲದಲ್ಲಿಲ್ಲ. ಧರ್ಮ ಶಬ್ದವನ್ನು ಬೇರೆಬೇರೆ ಧರ್ಮಗ್ರಂಥಗಳಲ್ಲಿ ಬೇರೆಬೇರೆ ಅರ್ಥಗಳನ್ನು ಸೂಚಿಸಲು ಉಪಯೋಗಿಸಲಾಗಿದೆ. ಧರ್ಮ ಶಬ್ದದ ಅರ್ಥದ ವ್ಯಾಪ್ತಿಯು ತಿಳಿಯಬೇಕೆಂದು ಅದರ ಕೆಲವು ಪ್ರಮುಖ ವ್ಯುತ್ಪತ್ತಿ, ವ್ಯಾಖ್ಯೆ ಮತ್ತು ಅರ್ಥಗಳನ್ನು ಮುಂದೆ ಕೊಡಲಾಗಿದೆ.

ಸಮಾಜದ ಸಂದರ್ಭದಲ್ಲಿ ‘ಧರ್ಮ’

1. ‘ಧೃ ಧಾರಯತೀ‘ ಅಂದರೆ ಧರಿಸುವುದು, ಆಧಾರ ಕೊಡುವುದು. ಧರ್ಮ ಶಬ್ದವು ‘ಧೃ’ ಎನ್ನುವ ಧಾತುವಿನಿಂದ ಉಂಟಾಗಿದೆ.

ಧರತಿ ಲೋಕಾನ್ ಧ್ರಿಯತೇ ಪುಣ್ಯಾತ್ಮಭಿಃ ಇತಿ ವಾ ಧರ್ಮಃ|‘ – ಯಾವುದು ಜನರನ್ನು ಧರಿಸುತ್ತದೆಯೋ ಅಥವಾ ಯಾವುದು ಪುಣ್ಯಾತ್ಮರಿಂದ ಧರಿಸಲ್ಪಡುತ್ತದೆಯೋ ಅದುವೇ ಧರ್ಮ.

2. ಧಾರಣಾದ್ಧರ್ಮಮಿತ್ಯಾಃ ಧರ್ಮೋ ಧಾರಯತೀ ಪ್ರಜಾಃ|
-ಮಹಾಭಾರತ, ಕರ್ಣಪರ್ವ, ಅಧ್ಯಾಯ 49, ಶ್ಲೋಕ 50

ಅರ್ಥ:ಯಾವುದು ಪ್ರಜೆಗಳನ್ನು, ಪರಿಣಾಮವಾಗಿ ಸಮಾಜವನ್ನು ಧರಿಸುತ್ತದೆಯೋ ಅದುವೇ ಧರ್ಮ.

3. ಧಾರಣಾದ್ಧರ್ಮ ಇತ್ಯಾಹುಃ ಧರ್ಮೇಣ ವಿಧೃತಾಃ ಪ್ರಜಾಃ|
ಯಸ್ಮಾದ್ಧಾರಯತೇ ಸರ್ವಂ ತ್ರೈಲೋಕ್ಯಂ ಸಚರಾಚರಮ್||

ಅರ್ಥ: ಧಾರಣೆಯಿಂದಾಗಿ ‘ಧರ್ಮ’ ಎಂಬ ಹೆಸರು ಪ್ರಾಪ್ತವಾಗಿದೆ. ಧರ್ಮವು ಪ್ರಜೆಗಳನ್ನು ಧರಿಸುತ್ತದೆ. ಈ ಕಾರಣಕ್ಕಾಗಿಯೇ ಧರ್ಮವು ಇಡೀ ಸ್ಥಾವರ-ಜಂಗಮ ತ್ರಯ್ಯಲೋಕ್ಯವನ್ನು ಧರಿಸುತ್ತದೆ.

4. ಧಾರಣಾದ್ವಿದ್ವಿಷಾಂ ಚೈವ ಧರ್ಮೇಣಾರಂಜಯನ್ಪ್ರಜಾಃ |
ತಸ್ಮಾದ್ಧಾರಣಮಿತ್ಯುಕ್ತಂ ಸ ಧರ್ಮ ಇತಿ ನಿಶ್ಟಯಃ ||

ಅರ್ಥ : ಧರ್ಮವು ಶತ್ರುಗಳ (ಅಧರ್ಮದ) ನಿಗ್ರಹವನ್ನು ಮಾಡಿ, ನ್ಯಾಯವನ್ನನುಸರಿಸಿ, ಪ್ರಜೆಗಳ ಪಾಲನೆ ಮಾಡುತ್ತದೆ. ಈ ವಿಧದಲ್ಲಿ ಅದು ಪ್ರಜೆಗಳ, ಅಂದರೆ ಸಮಾಜವನ್ನು ಧರಿಸುತ್ತದೆ; ಆದ್ದರಿಂದ ಅದಕ್ಕೆ ಧರ್ಮ ಎನ್ನುತ್ತಾರೆ.

5. ಆರ್ಯರು ಸಮಾಜವನ್ನು ಸುಸ್ಥಿತಿಯಲ್ಲಿಡಲು ಚಾತುರ್ವಣ್ರ್ಯವ್ಯವಸ್ಥೆ, ಆಶ್ರಮಕರ್ತವ್ಯಗಳು, ವಿವಾಹವ್ಯವಸ್ಥೆ, ದಾಯವಿಭಾಗ (ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲುದಾರಿಕೆ) ಇತ್ಯಾದಿ ವಿಷಯಗಳನ್ನು ನಿರ್ಧರಿಸಿದರೋ, ಅವೆಲ್ಲವುಗಳನ್ನು ಕೂಡಿ ಧರ್ಮ ಎನ್ನುತ್ತಾರೆ.

ವ್ಯಕ್ತಿಯ ಸಂದರ್ಭದಲ್ಲಿ

1.
ಯತೋಭ್ಯುದಯನಿಃಶ್ರೇಯಸಸಿದ್ಧ ಸ ಧರ್ಮಃ |
– ಕಣಾದಋಷಿ (ವೈಶೇಷಿಕದರ್ಶನ, ಅಧ್ಯಾಯ 1, ಆಹ್ರಿಕ 1, ಅಂಶ 2)

ಅರ್ಥ : ಯಾವುದರಿಂದ ಅಭ್ಯುದಯ (ಅಂದರೆ ಐಹಿಕ ಉನ್ನತಿ. ಇದರಲ್ಲಿ ಆರೋಗ್ಯ, ವಿದ್ಯೆ, ಸಂಪತ್ತಿ, ಸಂತತಿ ಮತ್ತು ಐಕ್ಯ ಇವೆಲ್ಲವುಗಳು ಬರುತ್ತವೆ) ಸಾಧ್ಯವಾಗುತ್ತದೆಯೋ; ಅಂದರೆ ‘ಲೌಕಿಕ ಮತ್ತು ಪಾರಮಾರ್ಥಿಕ ಜೀವನವು ಉತ್ತಮವಾಗುತ್ತದೆಯೋ ಮತ್ತು ‘ನಿಃಶ್ರೇಯಸ್ಸು’ ಅಂದರೆ ‘ಮೋಕ್ಷಪ್ರಾಪ್ತಿ’ ಆಗುತ್ತದೆಯೋ ಅದಕ್ಕೆ ಧರ್ಮ ಎನ್ನುತ್ತಾರೆ.

2. ಪ್ರಭವಾರ್ಥಾಯ ಭೂತಾನಾಂ ಧರ್ಮಪ್ರವಚನಂ ಕೃತಮ್|
ಯಃ ಸ್ಯಾತ್ಪ್ರಭವಸಂಯುಕ್ತಃ ಸ ಧರ್ಮ ಇತಿ ನಿಶ್ಚಯಃ||
-ಮಹಾಭಾರತ, ಶಾಂತಿಪರ್ವ, ಅಧ್ಯಾಯ 109, ಶ್ಲೋಕ 10

ಅರ್ಥ : ಜೀವಗಳ ಉತ್ಕರ್ಷವಾಗಬೇಕೆಂದೇ ಧರ್ಮವನ್ನು ಹೇಳಲಾಗಿದೆ. ‘ಯಾವುದು ಉತ್ಕರ್ಷದಿಂದ ಯುಕ್ತವಾಗಿದೆಯೋ ಅದುವೇ ಧರ್ಮ’, ಎನ್ನುವ ಸಿದ್ಧಾಂತವಿದೆ.

ಐಹಿಕ ಉತ್ಕರ್ಷ, ಪಾರಲೌಕಿಕ ಸುಖ ಮತ್ತು ಅದರ ಸಾಧನಗಳು, ಇವೆಲ್ಲವುಗಳು ಸೇರಿ ಅಭ್ಯುದಯವಾಗುತ್ತದೆ. ಯಾವ ಸ್ಥಿತಿಯಲ್ಲಿ ಅನಿಷ್ಟಕ್ಕಿಂತಲೂ ಇಷ್ಟವೇ ಹೆಚ್ಚಿರುತ್ತದೆಯೋ, ಇಂತಹ ಸ್ಥಿತಿ ಅಂದರೆ ಅಭ್ಯುದಯ. ಮೋಕ್ಷ, ಅಂದರೆ ಶಾಶ್ವತ ಅಥವಾ ಸರ್ವೋಚ್ಚ ಸಾಧ್ಯಕ್ಕೆ ನಿಃಶ್ರೇಯಸ್ಸು ಎನ್ನುತ್ತಾರೆ. ಯಾವ ಸ್ಥಿತಿಯಲ್ಲಿ ಯಾವುದರ ಅಪೇಕ್ಷೆಯೂ ಇರುವುದಿಲ್ಲವೋ ಮತ್ತು ಸಂಪೂರ್ಣ ಸಮಾಧಾನವಾಗುತ್ತದೆಯೋ, ಅಂತಹ ಸ್ಥಿತಿಗೆ ನಿಃಶ್ರೇಯಸ್ಸು ಎನ್ನಬೇಕು. ಇವೆರಡು ಧ್ಯೇಯಗಳು ಯಾವ ಸಾಧನದಿಂದ ಪ್ರಾಪ್ತವಾಗುತ್ತವೆಯೋ, ಆ ಸಾಧನವನ್ನೇ ಧರ್ಮ ಎಂದು ತಿಳಿಯಬೇಕು.

3. ಮನುಷ್ಯನು ಧರ್ಮಾಚರಣೆಯನ್ನು ಮಾಡಿದರೆ ವರ್ತಮಾನ ಜನ್ಮದಲ್ಲಿ ಅವನ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ಧರ್ಮಾಚರಣೆನ್ನು ಮಾಡುವ ಮನುಷ್ಯನಿಗೆ ಮೃತ್ಯುವಿನ ನಂತರವೂ ಒಳ್ಳೆಯ ಗತಿ ಪ್ರಾಪ್ತವಾಗುತ್ತದೆ, ಅಂದರೆ ಅವನಿಗೆ ಮಹಾ, ಜನ, ತಪ ಇಂತಹ ಉಚ್ಛ ಲೋಕಗಳಲ್ಲಿ ಸ್ಥಾನ ದೊರೆಯುತ್ತದೆ.

4. ‘ನಾವು ಯಾವ ಅಜ್ಞಾನದಲ್ಲಿ (ರಜ-ತಮ ಗುಣಗಳ ಭ್ರಮೆಯಲ್ಲಿ) ಸಿಲುಕಿಕೊಂಡಿದ್ದೇವೆಯೋ, ಆ ಅಜ್ಞಾನದ (ಸತ್ತ್ವಗುಣದ) ಆಧಾರವನ್ನು ಕೊಟ್ಟು ನಮ್ಮನ್ನು ಅಜ್ಞಾನದಿಂದ ಬಿಡುಗಡೆ ಮಾಡುವ ನಿಶ್ಚಿತವಾದ ಯುಕ್ತಿ ಎಂದರೆ ಧರ್ಮ.’
-ಪ.ಪೂ.ಕಾಣೇ ಮಹಾರಾಜರು, ನಾರಾಯಣಗಾಂವ, ಪುಣೆ ಜಿಲ್ಲೆ, ಮಹಾರಾಷ್ಟ್ರ.

5. ‘ಬ್ರಾಹ್ಮಣಗ್ರಂಥಗಳಲ್ಲಿ ಧರ್ಮ ಶಬ್ದದ ಅರ್ಥವು ಆಶ್ರಮಧರ್ಮ ಎಂದಾಗಿದ್ದು ಅದು ‘ತ್ರಯೋ ಧರ್ಮಸ್ಕಂಧಾಃ……’ ಎಂಬ ಉಪನಿಷದ್ವಾಕ್ಯದಿಂದ ತಿಳಿಯುತ್ತದೆ. ಧರ್ಮ ಶಬ್ದದ ಅರ್ಥವು ‘ವರ್ಣಾಶ್ರಮಕ್ಕನುಸಾರ ವ್ಯಕ್ತಿಯ ಕಡೆ ಬಂದಿರುವ ಅಥವಾ ವ್ಯಕ್ತಿಯು ಅಂಗೀರಿಸಿರುವ ಕರ್ತವ್ಯ’ ಎಂಬ ಅರ್ಥವೂ ಇದೆ.’

6. ಧರ್ಮೋ ಮದ್ಭಕ್ತಿಕೃತ್ಪೋಕ್ತಃ |
– ಶೀಮದ್ಭಾಗವತ, ಸೃಂಧ 11, ಅಧ್ಯಾಯ 19, ಶ್ಲೋಕ 27

ಅರ್ಥ : ನನ್ನ (ಭಗವಂತನ) ಭಕ್ತಿಯನ್ನು ಮಾಡುವುದೆಂದರೆ ಧರ್ಮ.

7. ‘ಧರ್ಮ ಎಂದರೆ ಪ್ರತ್ಯಕ್ಷ ಆತ್ಮಾನುಭೂತಿ.’ -ಸ್ವಾಮಿ ವಿವೇಕಾನಂದರು

ಸಮಾಜ ಮತ್ತು ವ್ಯಕ್ತಿ ಇವರಿಬ್ಬರ ಸಂದರ್ಭದಲ್ಲಿ ಧರ್ಮ

1. ಜಗತಃ ಸ್ಥಿತಿಕಾರಣಂ ಪ್ರಾಣಿನಾಂ ಸಾಕ್ಷಾತ್
ಅಭ್ಯುದಯನಿಃ ಶ್ರೇಯಸಹೇತುರ್ಯಃ ಸ ಧರ್ಮಃ |
– ಆದಿ ಶಂಕರಾಚಾರ್ಯರು
(ಶ್ರೀಮದ್ಭಗವದ್ಗೀತಾಭಾಷ್ಯಯ ಉಪೊದ್ಘಾತ)

ಅರ್ಥ : ಜಗತ್ತಿನ ಸ್ಥಿತಿ ಮತ್ತು ವ್ಯವಸ್ಥೆ ಉತ್ತಮವಾಗಿರುವುದು, ಪ್ರತಿಯೊಬ್ಬ ಪ್ರಾಣಿಮಾತ್ರರ ಐಹಿಕ ಉನ್ನತಿ, ಅಂದರೆ ಅಭ್ಯುದಯವಾಗುವುದು ಮತ್ತು ಪಾರಲೌಕಿಕ ಉನ್ನತಿಯೂ ಆಗುವುದು (ಅಂದರೆ ಮೋಕ್ಷ ಪ್ರಾಪ್ತಿಯಾಗುವುದು) ಎನ್ನುವ ಮೂರು ಧ್ಯೇಯಗಳನ್ನು ಯಾವುದು ಸಾಧಿಸುವುತ್ತದೆಯೋ ಅದಕ್ಕೆ ಧರ್ಮ ಎನ್ನುತ್ತಾರೆ.

2. ‘ಧರ್ಮಶಾಸ್ತ್ರಕಾರರ ಅಭಿಪ್ರಾಯಕ್ಕ್ಕನುಸಾರ ‘ಧರ್ಮ’ ಶಬ್ದದ ವ್ಯಾಪ್ತಿಯು ಒಂದು ಉಪಾಸನೆಯ ಪಂಥವಷ್ಟೇ ಆಗಿರದೆ, ಆ ಶಬ್ದದಲ್ಲಿ, ಪ್ರತಿಯೊಬ್ಬ ಮನುಷ್ಯನು ವ್ಯಕ್ತಿ ಎಂಬ ಸಂಬಂಧದಿಂದ ವ್ಯಕ್ತಿಯ, ಅಂದರೆ ತನ್ನ ವಿಕಾಸವನ್ನು ಮಾಡಿಕೊಳ್ಳಲು ಮತ್ತು ಸಮಾಜದ ಒಂದು ಘಟಕ ಎಂಬ ಸಂಬಂಧದಿಂದ ಮನುಕುಲದ ವಿಕಾಸವನ್ನು ಮಾಡಲು ಮಾಡಬೇಕಾಗಿರುವ ಕೃತಿಗಳ ಹಾಗೂ ಪಾಲಿಸಬೇಕಾಗಿರುವ ನಿರ್ಬಂಧಗಳ ಸಮಾವೇಶವಾಗುತ್ತದೆ.’

(ಸನಾತನ ನಿರ್ಮಿಸಿದ ‘ಧರ್ಮದ ಆಚರಣೆ ಮತ್ತು ರಕ್ಷಣೆ’ ಮತ್ತು ‘ಧರ್ಮದ ಮೂಲಭೂತ ವಿವೇಚನ’ ಗ್ರಂಥಗಳು)

Leave a Comment