ಹಿಂದುತ್ವವಾದಿ ಸಂಘಟನೆಗಳು ತಮ್ಮ ಕಾರ್ಯಕರ್ತರಿಗೂ ಸಾಧನೆಯನ್ನು ಮಾಡಲು ಪ್ರವೃತ್ತಗೊಳಿಸುವುದು ಆವಶ್ಯಕ !
ಇದರ ಕಾರಣವೇನೆಂದರೆ ಈಶ್ವರ ಮತ್ತು ಗುರುಗಳ ಮೇಲೆ ಅವರಿಗಿರುವ ಶ್ರದ್ಧೆ ! ಆದ್ದರಿಂದ ಕಳೆದ ಕೆಲವು ವರ್ಷಗಳಿಂದ ಅವರು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸತತವಾಗಿ ಮತ್ತು ಹಂತಹಂತವಾಗಿ ಆತ್ಮವಿಶ್ವಾಸದೊಂದಿಗೆ ಪ್ರಯತ್ನಿಸುತ್ತಿದ್ದಾರೆ. ವಿಶೇಷವೆಂದರೆ ಇದನ್ನು ಮಾಡುವಾಗ ಅವರಲ್ಲಿ ಎಲ್ಲಿಯೂ ಒತ್ತಡವಿರುವುದಿಲ್ಲ, ಬದಲಿಗೆ ದಿನೇದಿನೇ ಅವರಲ್ಲಿನ ಆನಂದ ಹೆಚ್ಚುತ್ತಿದೆ. ಇದು ಅವರು ಮಾಡಿದ ಸಾಧನೆಯಿಂದ ಅವರಲ್ಲಿ ನಿರ್ಮಾಣವಾದ ಬ್ರಾಹ್ಮತೇಜದ ಪ್ರತೀಕವಾಗಿದೆ. ತಮ್ಮ ಸಂಘಟನೆಯ ಸಾಧಕರಿಗೂ ಸಾಧನೆ ಮಾಡಲು ಪ್ರವೃತ್ತಗೊಳಿಸಿ. ಅದಕ್ಕಾಗಿ ಸಂಘಟನೆಯ ಸ್ತರದಲ್ಲಿ ನೀವು ಮುಂದಿನಂತೆ ಪ್ರಯತ್ನಿಸಬಹುದು.
ಅ. ಸಂಘಟನೆಯಲ್ಲಿನ ಕಾರ್ಯಕರ್ತರಿಗೆ ನಾಮಜಪ ಸಾಧನೆ ಮಾಡಲು ಹೇಳಿ !
ಆ. ಸಂಘಟನೆಯ ಸಭೆಗಳಲ್ಲಿ ಯಾವ ರೀತಿ ಉಪಕ್ರಮಗಳ ವರದಿಯನ್ನು ಪಡೆಯಲಾಗುತ್ತದೆಯೋ, ಹಾಗೆಯೇ ಸ್ವಲ್ಪ ಸಮಯವನ್ನು ಮೀಸಲಿಟ್ಟು ಪ್ರತಿಯೊಬ್ಬ ಕಾರ್ಯಕರ್ತನು ಈ ವಾರದಲ್ಲಿ ಸಾಧನೆಯೆಂದು ಯಾವ ಪ್ರಯತ್ನಗಳನ್ನು ಮಾಡಿದ್ದಾನೆ ಎಂಬುದರ ವರದಿಯನ್ನು ತೆಗೆದುಕೊಳ್ಳಿ !
ಇ. ಕಾರ್ಯಕರ್ತರಿಗೆ ಹಿಂದೂಸಂಘಟನೆಗೆ ಹಾನಿಕರವಾಗಿರುವ ದೋಷಗಳ ಅರಿವು ಮಾಡಿಕೊಡಿ ಮತ್ತು ಅವುಗಳನ್ನು ಹೋಗಲಾಡಿಸಲು ಅವರಿಗೆ ಸಹಾಯ ಮಾಡಿ!
ಆದ್ದರಿಂದ ಕಾರ್ಯಕರ್ತರು ಸಾಧನೆಯನ್ನು ಪ್ರಾರಂಭ ಮಾಡಿದರೆ, ಅವರಲ್ಲಿದ್ದ ವ್ಯಸನಾಧೀನತೆ, ಉದ್ಧಟತನದಂತಹ ದೋಷ, ಮತ್ತು ಅಹಂಕಾರವಿದ್ದರೆ ಅವೆಲ್ಲವೂ ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತವೆ. ಸಾಧನೆಯಿಂದ ಅವರ ವೈಯಕ್ತಿಕ ಆಧ್ಯಾತ್ಮಿಕ ಉನ್ನತಿಯೂ ಆಗುತ್ತದೆ. ಕಾರ್ಯಕರ್ತರು ಸಾಧನೆ ಮಾಡಿದರೆ ಸಂಘಟನೆಯ ಕಾರ್ಯವೂ ಗುಣಾತ್ಮಕ ಸ್ತರದಲ್ಲಿ ಹೆಚ್ಚು ಒಳ್ಳೆಯದಾಗುತ್ತದೆ ಮತ್ತು ಕಾರ್ಯಕರ್ತರ ವೃತ್ತಿ ಬದಲಾಗುತ್ತಿದೆ ಎಂಬುದನ್ನು ನೀವು ಅನುಭವಿಸಬಲ್ಲಿರಿ. (೨೩.೪.೨೦೧೨)