ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಾಂಪ್ರದಾಯಿಕ ಐಕ್ಯತೆಯ ಆವಶ್ಯಕತೆ
೧. ಎಲ್ಲ ಸಂಪ್ರದಾಯಗಳಲ್ಲಿರುವ ನಿಃಸ್ವಾರ್ಥ ಮತ್ತು ಅಹಂಭಾವಶೂನ್ಯ ಅನುಯಾಯಿಗಳಿಂದ ಹಿಂದೂ ರಾಷ್ಟ್ರದ ಸ್ಥಾಪನೆ ಸಾಧ್ಯವಿದೆ !
ಸ್ವಾರ್ಥಿ ಮತ್ತು ಅಹಂಕಾರಿ ರಾಜಕೀಯ ಪಕ್ಷಗಳು ಇತರ ಪಕ್ಷಗಳೊಂದಿಗೆ ಕೂಡಿಕೊಂಡು ಆಡಳಿತ ನಡೆಸಬಲ್ಲವು, ಹಾಗೆಯೇ ಎಲ್ಲ ಸಂಪ್ರದಾಯಗಳಲ್ಲಿರುವ ಈಶ್ವರಪ್ರಾಪ್ತಿಯ ತಳಮಳವಿರುವವರು, ನಿಃಸ್ವಾರ್ಥ ಮತ್ತು ಅಹಂಭಾವಶೂನ್ಯ ಅನುಯಾಯಿಗಳು ಒಂದಾದರೆ ಅವರು ಖಂಡಿತವಾಗಿಯೂ ಹಿಂದೂ ರಾಷ್ಟ್ರವನ್ನು ಸ್ಥಾಪಿಸಬಲ್ಲರು !
೨. ಹಿಂದೂ ರಾಷ್ಟ್ರದ ಸ್ಥಾಪನೆಯ ದೃಷ್ಟಿಯಿಂದ ಸಂತರ ಮತ್ತು ಸಂಪ್ರದಾಯಗಳ ಮಹತ್ವ !
ಸ್ವಾರ್ಥಿ ಜಾತ್ಯತೀತ ರಾಜಕೀಯ ಪಕ್ಷಗಳಲ್ಲ, ನಿಃಸ್ವಾರ್ಥ ಸಂತರು ಮತ್ತು ಸಂಪ್ರದಾಯಗಳೇ ಈಶ್ವರನ ಆಶೀರ್ವಾದದ ಬಲದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಬಲ್ಲವು.
೩. ವಿವಿಧ ಸಂಪ್ರದಾಯಗಳಿಗನುಸಾರ ಸಾಧನೆ ಮಾಡುವವರೇ, ಗುರುತತ್ತ್ವಕ್ಕೆ ಅಪೇಕ್ಷಿತವಿರುವ ಧರ್ಮಸಂಸ್ಥಾಪನೆಯ,
ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯವನ್ನು ಮಾಡಿ !
ಗುರು ಎಂಬುದು ಒಂದು ತತ್ತ್ವವಾಗಿದ್ದು ಅದು ಸಂತರು ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಉನ್ನತರಾಗಿರುವ ವ್ಯಕ್ತಿಗಳ ಮಾಧ್ಯಮದಿಂದ ಕಾರ್ಯನಿರತವಾಗಿರುತ್ತದೆ. ಶಿಷ್ಯನ ಆಧ್ಯಾತ್ಮಿಕ ಪ್ರಗತಿ ಮಾಡಿಸಿಕೊಳ್ಳುವುದು, ಹಾಗೆಯೇ ಧರ್ಮಕ್ಕೆ ಗ್ಲಾನಿ ಬಂದಾಗ ಧರ್ಮವನ್ನು ಪುನರ್‌ಸ್ಥಾಪನೆ ಮಾಡುವುದು ಗುರುತತ್ತ್ವದ ಕಾರ್ಯವಾಗಿರುತ್ತದೆ.
* ಆದಿಗುರು ಮಹರ್ಷಿ ವ್ಯಾಸರು ಕಲಿಯುಗ ಪ್ರಾರಂಭವಾಗುವ ಮೊದಲು ವೇದಗಳನ್ನು ೪ ಭಾಗಗಳಲ್ಲಿ ವಿಭಾಗಿಸಿ ಧರ್ಮವನ್ನು ವ್ಯವಸ್ಥಿತಗೊಳಿಸಿದರು.
* ಜಗದ್ಗುರು ಭಗವಾನ್ ಶ್ರೀಕೃಷ್ಣನು ಕೌರವರನ್ನು ನಾಶ ಮಾಡಿ ಯುಧಿಷ್ಠಿರನ ನೇತೃತ್ವದಲ್ಲಿ ಧರ್ಮರಾಜ್ಯವನ್ನು ಸ್ಥಾಪಿಸಿದನು.
* ಜಗದ್ಗುರು ಆದಿಶಂಕರಾಚಾರ್ಯರು ಅವೈದಿಕ ಪಂಥಗಳ ಖಂಡನೆಯನ್ನು ಮಾಡಲು ಶಂಕರ ದಿಗ್ವಿಜಯವನ್ನು ಕೈಗೊಂಡು ನಾಲ್ಕು ಶಂಕರಪೀಠಗಳನ್ನು ಸ್ಥಾಪಿಸಿ ಸನಾತನ ಧರ್ಮವನ್ನು ಪುನರುಜ್ಜೀವನಗೊಳಿಸಿದರು.
* ಚಾಣಕ್ಯನು ದುರಾಚಾರಿ ನಂದವಂಶವನ್ನು ನಾಶಗೊಳಿಸಿ ಸಾಮ್ರಾಟ ಚಂದ್ರಗುಪ್ತನ ಧ್ವಜದಡಿಯಲ್ಲಿ ಭಾರತವನ್ನು ಏಕತ್ರೀಕರಣಗೊಳಿಸಿ ರಾಷ್ಟ್ರಸಂಸ್ಥಾಪನೆ ಮಾಡಿದನು.
* ಘಜ್ನಿ ಮಹಮ್ಮದ್‌ನು ಸಿಂಧ್‌ನಲ್ಲಿನ ಹಿಂದೂಗಳನ್ನು ಮತಾಂತರಿಸಿದ ನಂತರ ಮತಾಂತರಗೊಂಡವರ ಶುದ್ಧೀಕರಣಕ್ಕಾಗಿ ದೇವಲ ಋಷಿಗಳು ಶಾಸ್ತ್ರಸಮ್ಮತಿ ನೀಡುವ ಸ್ಮೃತಿಯನ್ನು ಬರೆದು ಧರ್ಮಸಂಸ್ಥಾಪನೆ ಮಾಡಿದರು.
* ಜಗತ್ತಿನಾದ್ಯಂತ ಹಿಂದೂ ಧರ್ಮದ ಬಗ್ಗೆ ಗಾಳಿ ಸುದ್ದಿ ಹಬ್ಬುತ್ತಿದ್ದಾಗ ಸ್ವಾಮಿ ವಿವೇಕಾನಂದರು ಏಳು ಸಮುದ್ರಗಳನ್ನು ದಾಟಿ ಹಿಂದೂ ಧರ್ಮವನ್ನು ಪುನರ್‌ಸ್ಥಾಪನೆಗೊಳಿಸಲು ಪ್ರಯತ್ನಿಸಿದರು.
ಗುರುಪರಂಪರೆಯು ಧರ್ಮಸಂಸ್ಥಾಪನೆಗಾಗಿ ನೀಡಿದ ಈ ಯೋಗದಾನವು ಅಪೂರ್ವವಾಗಿದೆ.
ಸದ್ಯ ಭಾರತದಲ್ಲಿ ಜಾತ್ಯತೀತ (ಧರ್ಮನಿರಪೇಕ್ಷ) ರಾಜ್ಯವ್ಯವಸ್ಥೆಯಿದೆ.
ನಿರ್ಗತಃ ಧರ್ಮಃ ಯಸ್ಮಾತ್ ತತ್ ರಾಜ್ಯಂ ನಿಧರ್ಮೀ | ಅಂದರೆ ಯಾವುದರಿಂದ ಧರ್ಮ ಹೊರಟುಹೋಗಿರುತ್ತದೆಯೋ, ಅಂತಹ ರಾಜ್ಯ ನಿಧರ್ಮಿ ರಾಜ್ಯವಾಗಿರುತ್ತದೆ. ಈ ತತ್ತ್ವಕ್ಕನುಸಾರ ಪ್ರಸ್ತುತ ಕಾಲದಲ್ಲಿ ಭಾರತಭೂಮಿಯಲ್ಲಿ ಸನಾತನ ಧರ್ಮ ಕಣ್ಮರೆಯ ಹಾದಿಯಲ್ಲಿದೆ. ಇದರ ಪರಿಣಾಮದಿಂದ ಅಧರ್ಮಾಚರಣಿ ಮತ್ತು ಹಿಂದೂ ವಿರೋಧಿಗಳ ಪ್ರಾಬಲ್ಯ ಹೆಚ್ಚಾಗಿದೆ. ಈ ಪರಿಸ್ಥಿತಿಯಲ್ಲಿ ಭಾರತದಲ್ಲಿ ಸನಾತನ ಧರ್ಮವನ್ನು ಪುನರ್‌ಸ್ಥಾಪಿಸಲು ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು ಕಾಲಾನುಸಾರ ಗುರುತತ್ತ್ವಕ್ಕೆ ಅಪೇಕ್ಷಿತ ಕಾರ್ಯವಾಗಿದೆ. ಈ ಧರ್ಮಸಂಸ್ಥಾಪನೆಯ ಕಾರ್ಯಕ್ಕಾಗಿ ಸದ್ಯದ ಗುರು-ಶಿಷ್ಯ ಪರಂಪರೆಯವರು, ವಿವಿಧ ಸಂಪ್ರದಾಯದವರು, ಸಾಧಕರು ಮತ್ತು ಧರ್ಮಪ್ರೇಮಿ ಹಿಂದೂಗಳು ತನು-ಮನ-ಧನದ ಮೂಲಕ ಯೋಗದಾನ ನೀಡುವುದೇ ಗುರುಪೂರ್ಣಿಮೆಯ ನಿಜವಾದ ಗುರುದಕ್ಷಿಣೆಯಾಗಿದೆ !
(ಆಧಾರ : ಸನಾತನ ನಿರ್ಮಿತ ಗ್ರಂಥ ಹಿಂದೂ ರಾಷ್ಟ್ರ ಸ್ಥಾಪನೆಯ ದಿಶೆ)