೩. ಬ್ರಾಹ್ಮತೇಜದ ಮೂಲಕ ಕಾರ್ಯ ಹೇಗಾಗುತ್ತದೆ ?
೩ ಎ. ಸಂಕಲ್ಪದ ಕಾರ್ಯವೆಂದರೆ ಬ್ರಾಹ್ಮತೇಜದಿಂದಾಗುವ ಕಾರ್ಯ ! : ಸಂಕಲ್ಪದಿಂದ ಕಾರ್ಯಸಿದ್ಧವಾಗಲು ಆಧ್ಯಾತ್ಮಿಕ ಮಟ್ಟ ಕನಿಷ್ಟ ಶೇ. ೭೦ ರಷ್ಟಾದರೂ ಇರಬೇಕಾಗುತ್ತದೆ. ಸಂಕಲ್ಪವು ಹೇಗೆ ಕಾರ್ಯ ಮಾಡುತ್ತದೆ ಎಂಬುದು ಮುಂದಿನ ಉದಾಹರಣೆಯಿಂದ ಗಮನಕ್ಕೆ ಬರುತ್ತದೆ.
ಮನುಷ್ಯಮಾತ್ರರ ಮನಸ್ಸಿನ ಶಕ್ತಿ ೧೦೦ ಯೂನಿಟ್ಸ್ ಎಂದು ತಿಳಿದುಕೊಳ್ಳೋಣ. ಪ್ರತಿಯೊಬ್ಬರ ಮನಸ್ಸಿನಲ್ಲಿ ದಿನವಿಡೀ ಬಹಳಷ್ಟು ವಿಚಾರಗಳು ಬರುತ್ತಲೇ ಇರುತ್ತವೆ. ಅದಕ್ಕಾಗಿ ಕೆಲವು ಶಕ್ತಿ ಖರ್ಚಾಗುತ್ತದೆ. ಯಾರಾದರೊಬ್ಬನ ಮನಸ್ಸಿನಲ್ಲಿ ಹೀಗೆ ದಿನದಲ್ಲಿ ೧೦೦ ವಿಚಾರಗಳು ಬಂದರೆ, ಅವನ ಆ ದಿನದ ಹೆಚ್ಚಿನ ಶಕ್ತಿ ಖಾಲಿಯಾಗಬಹುದು; ಆದರೆ ಅವನ ಮನಸ್ಸಿನಲ್ಲಿ ವಿಚಾರಗಳೇ ಬರದಿದ್ದರೆ, ಮನಸ್ಸು ನಿರ್ವಿಚಾರವಾಗಿದ್ದರೆ ಮತ್ತು ಆ ಸಮಯದಲ್ಲಿ ‘ಇಂತಹದೊಂದು ಘಟನೆ ಘಟಿಸಲಿ ಎಂಬಂತಹ ಒಂದು ವಿಚಾರ ಮನಸ್ಸಿನಲ್ಲಿ ಬಂದರೂ ಆ ವಿಚಾರದ ಹಿಂದೆ ಅವನ ಸಂಪೂರ್ಣ ೧೦೦ ಯೂನಿಟ್ಸ್ ಶಕ್ತಿಯಿರುತ್ತದೆ; ಆದ್ದರಿಂದ ಆ ವಿಚಾರ (ಸಂಕಲ್ಪ) ಸಿದ್ಧವಾಗುತ್ತದೆ, ಇದನ್ನೇ ಬ್ರಾಹ್ಮತೇಜ ಎನ್ನುತ್ತಾರೆ. ಆ ವಿಚಾರ ಸತ್‌ನ ವಿಚಾರವಾಗಿದ್ದರೆ ನಮ್ಮ ಸಾಧನೆ ವ್ಯಯ ವಾಗುವುದಿಲ್ಲ. ಈಶ್ವರನೇ ಆ ಕಾರ್ಯವನ್ನು ಪೂರ್ಣಗೊಳಿಸುತ್ತಾನೆ; ಏಕೆಂದರೆ ಅದು ಸತ್‌ನ, ಅಂದರೆ ಈಶ್ವರನ ಕಾರ್ಯವೇ ಆಗಿರುತ್ತದೆ. ಇದನ್ನು ಸಾಧ್ಯಗೊಳಿಸಲು ನಾಮಸ್ಮರಣೆ, ಸತ್ಸಂಗ, ಸತ್ಸೇವೆ, ಸತ್ ಗಾಗಿ ತ್ಯಾಗ ಈ ಮಾರ್ಗದಿಂದ ಸಾಧನೆ ಮಾಡಿ ಅಸತ್‌ನ ವಿಚಾರಗಳೇ ಮನಸ್ಸಿನಲ್ಲಿ ಬರದಂತಹ ಸ್ಥಿತಿಯನ್ನು ಸಾಧಕರು ಪ್ರಾಪ್ತಮಾಡಿಕೊಳ್ಳಬೇಕು. ಈಗ ಕೆಲವರಿಗೆ ನಿಜವಾಗಿಯೂ ಸಂಕಲ್ಪದಿಂದ ಹೀಗೇನಾದರೂ ಆಗಲು ಸಾಧ್ಯವೇ ಎಂದೆನಿಸಬಹುದು.
ನಾವು ಪುರಾಣಕಾಲದ ಕಥೆಗಳಲ್ಲಿ ಋಷಿಮುನಿಗಳು ಶಾಪ ಕೊಡುವುದರ ಉದಾಹರಣೆಗಳನ್ನು ಕೇಳುತ್ತೇವೆ. ಆ ಶಾಪವೆಂದರೆ ಸಂಕಲ್ಪದ ಸಾಮರ್ಥ್ಯ. ಈ ಸಂಕಲ್ಪದ ಸಾಮರ್ಥ್ಯವು ಋಷಿಮುನಿಗಳಿಗೆ ಸಾಧನೆಯ ಬಲದಿಂದ ಪ್ರಾಪ್ತವಾಗಿರುತ್ತದೆ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕೇವಲ ಶಾರೀರಿಕ ಮಟ್ಟದಲ್ಲಿ ಪ್ರಯತ್ನ ಮಾಡಿದರೆ ಸಾಕಾಗುವುದಿಲ್ಲ, ಸಾಧನೆಯಿಂದ ಸಂಕಲ್ಪದ ಸಾಮರ್ಥ್ಯವನ್ನು ಪ್ರಾಪ್ತ ಮಾಡಿಕೊಂಡು ಕಾರ್ಯವನ್ನು ಮಾಡುವುದು ಆವಶ್ಯಕವಾಗಿದೆ.
(ಆಧಾರ : ಸನಾತನದ ಗ್ರಂಥ ‘ಹಿಂದೂ ರಾಷ್ಟ್ರದ ಸ್ಥಾಪನೆಯ ದಿಶೆ’)
ಇದು ನಿಜಕ್ಕೂ ಅತ್ಯಂತ ಉಪಯುಕ್ತ ಬರವಣಿಗೆ, ಹೃದಯಪೂರ್ವಕ ಧನ್ಯವಾದಗಳು