ಮುಂಬರುವ ಕಾಲದಲ್ಲಿ ಹಿಂದೂ ಸಮಾಜಕ್ಕೆ ಭಾರತ ಭೂಮಿಯಲ್ಲಿ ರಾಮರಾಜ್ಯದ ಅನುಭೂತಿ ನೀಡುವ ‘ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಅಳಿಲು ಸೇವೆಯಲ್ಲ, ಶ್ರೀ ಹನುಮಂತನಂತೆ ಸೇವೆ ಮಾಡುವ ಪ್ರೇರಣೆ ಸಿಗಲೆಂದು ಈಶ್ವರನ ಚರಣಗಳಲ್ಲಿ ಪ್ರಾರ್ಥನೆ.
ಹಿಂದೂ ರಾಷ್ಟ್ರದ ಸ್ಥಾಪನೆಯ ಸೂಕ್ಷ್ಮದಲ್ಲಿನ ಮತ್ತು ಸ್ಥೂಲದಲ್ಲಿನ ಪ್ರಕ್ರಿಯೆಯನ್ನು ತಿಳಿದುಕೊಳ್ಳಿ!
೬ ಅ. ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗುವುದರ ಹಿಂದಿನ ಆಧ್ಯಾತ್ಮಿಕ ಕಾರಣಗಳು : ಸ್ಥೂಲದಲ್ಲಿ ಘಟಿಸುವ ಘಟನೆಗಳ ಹಿಂದೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಕಾರಣಗಳಿರುತ್ತವೆ. ಅವುಗಳ ಪೈಕಿ ಶಾರೀರಿಕ ಮತ್ತು ಮಾನಸಿಕ ಕಾರಣಗಳ ಬಗ್ಗೆ ಆ ಘಟನೆಗಳು ಘಟಿಸಿದ ಬಳಿಕ ಪ್ರಸಾರಮಾಧ್ಯಮಗಳಲ್ಲಿನ ವಿಚಾರವಂತರಿಂದ ಚರ್ಚೆಗಳಾಗುತ್ತಿರುತ್ತವೆ. ಆಧ್ಯಾತ್ಮಿಕ ಕಾರಣಗಳು ಬುದ್ಧಿಅಗಮ್ಯ ವಾಗಿದ್ದರಿಂದ ಬುದ್ಧಿಪ್ರಾಮಾಣ್ಯವಾದಿ ಜನರಿಗೆ ಅವುಗಳ ಬಗ್ಗೆ ಚರ್ಚಿಸುವಲ್ಲಿ ಮಿತಿಯುಂಟಾಗುತ್ತದೆ. ಬುದ್ಧಿಪ್ರಾಮಾಣ್ಯವಾದಿಗಳು ಬುದ್ಧಿಯನ್ನು ಬಳಸಿ ಪ್ರಮಾಣವನ್ನು ನಿರ್ಧರಿಸುವುದರಿಂದ ಅವರು ಸ್ಥೂಲದಲ್ಲಿನ ಕಾರಣಗಳ ಬಗ್ಗೆ ಯೋಚಿಸಬಲ್ಲರು. ಬದಲಾಗಿ ಉತ್ತಮ ಸಾಧನೆ ಮಾಡುವವರು ಅಥವಾ ಅಧ್ಯಾತ್ಮದಲ್ಲಿ ಪ್ರಗತಿ ಹೊಂದಿದ ಉನ್ನತ ಸಾಧಕರು ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಯ ವಿಚಾರಗಳನ್ನು ಗ್ರಹಿಸಬಲ್ಲರು. ಇದನ್ನೇ ಸೂಕ್ಷ್ಮದಲ್ಲಿನ ವಿಷಯಗಳು ತಿಳಿಯುವುದು ಎನ್ನುತ್ತಾರೆ. ಈ ಲೇಖನದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯ ಸಂದರ್ಭದಲ್ಲಿ ಮುಖ್ಯವಾಗಿ ಬುದ್ಧಿಅಗಮ್ಯ ಆಧ್ಯಾತ್ಮಿಕ ಕಾರಣಗಳ ವಿಚಾರ ಮಾಡಲಾಗಿದೆ.
೬ ಅ ೧. ಕಾಲಮಹಾತ್ಮೆ : ಯಾವುದೇ ವಿಷಯಕ್ಕೆ ಯೋಗ್ಯ ಕಾಲ ಬರುವುದು ಅಗತ್ಯ. ದ್ರಷ್ಟಾರರಿಗೆ ಮತ್ತು ತ್ರಿಕಾಲಜ್ಞಾನಿ ಸಂತರಿಗೆ ಯೋಗ್ಯ ಸಮಯದಲ್ಲಿ ಏನು ಮಾಡಬೇಕು ಎಂಬುದರ ಜ್ಞಾನವಿರುತ್ತದೆ; ಆದುದರಿಂದಲೇ ಅವರು ಕಾಲಗತಿಗನುಸಾರ ಯಾವುದಾದರೊಂದು ವಿಷಯವನ್ನು ಈಗ ಮಾಡಬಾರದು ಅಥವಾ ಮುಂದೆ ಮಾಡಬೇಕು ಎಂದು ಹೇಳುತ್ತಾರೆ. ಇಂದು ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗುವುದು ಎಂಬ ಆಸೆ ಹುಟ್ಟಿಸುವಂತಹ ಯಾವುದೇ ಘಟನೆಗಳು ಸ್ಥೂಲದಲ್ಲಿ ಘಟಿಸದಿರುವಾಗ ಹಿಂದೂ ರಾಷ್ಟ್ರದ ಬಗ್ಗೆ ಇಷ್ಟೊಂದು ದೃಢವಾಗಿ ಹೇಳುವುದು ಕೆಲವರಿಗೆ ಅತಿಶಯೋಕ್ತಿಯೆನಿಸಬಹುದು; ಆದರೆ ಕಾಲದ ಹೆಜ್ಜೆಗಳನ್ನು ಗುರುತಿಸಬಲ್ಲ ಸಂತರಿಗೆ ೨೦೨೩ ರಲ್ಲಿ ಸ್ಥಾಪನೆಯಾಗಲಿರುವ ‘ಹಿಂದೂ ರಾಷ್ಟ್ರದ ಮುನ್ಸೂಚನೆ ಸಿಕ್ಕಿದೆ !
ಮುಂದಿನ ವಿಷಯಗಳನ್ನು ಗಮನಕ್ಕೆ ತೆಗೆದುಕೊಂಡರೆ ಎಲ್ಲರಿಗೂ ಕಾಲಮಹಾತ್ಮೆ ಗಮನಕ್ಕೆ ಬರಬಹುದು.
ಅ. ಬೇಸಿಗೆಯಲ್ಲಿ ಹೊಲದಲ್ಲಿ ಬಿತ್ತನೆಯನ್ನು ಮಾಡುವುದಿಲ್ಲ, ಅದಕ್ಕಾಗಿ ಮಳೆಗಾಲ ಬರುವವರೆಗೆ ಕಾಯುತ್ತಾರೆ.
ಆ. ಶ್ರೀರಾಮನು ೧೪ ವರ್ಷಗಳವರೆಗೆ ವನವಾಸ ಮಾಡಿದನು ಮತ್ತು ನಂತರವೇ ಅಯೋಧ್ಯೆಯ ರಾಜನಾದನು.
ಇ. ರಾಜಸಭೆಯಲ್ಲಿ ದ್ರೌಪದಿಯ ಅವಮಾನವಾದರೂ ಶ್ರೀಕೃಷ್ಣನು ಕೌರವರನ್ನು ನಾಶಗೊಳಿಸಲಿಲ್ಲ, ೧೩ ವರ್ಷಗಳ ನಂತರ ನಾಶ ಮಾಡಿದನು.
ಈ. ಶಿಶುಪಾಲನ ೧೦೦ ಅಪರಾಧಗಳು ಪೂರ್ಣವಾದ ಬಳಿಕವೇ ಶ್ರೀಕೃಷ್ಣನು ಅವನನ್ನು ವಧಿಸಿದನು.
ಉ. ಕ್ರಾಂತಿಕಾರರು ಕಾಲಮಹಾತ್ಮೆಯನ್ನು ಗಮನಕ್ಕೆ ತೆಗೆದುಕೊಳ್ಳದೇ ಭಾವನೆಯಿಂದ ಕೃತಿಗಳನ್ನು ಮಾಡುತ್ತಾರೆ. ಆದ್ದರಿಂದ ಹೆಚ್ಚಿನವರಿಗೆ ಯಶಸ್ಸು ಸಿಗದೆ ಮೃತರಾಗುತ್ತಾರೆ. ಅವರ ಕೃತಿಯಿಂದ ಪ್ರಾಣವನ್ನು ಅರ್ಪಿಸುವ ವ್ಯಷ್ಟಿ ಸಾಧನೆಯಾಗುತ್ತದೆ; ಆದರೆ ಅದರಿಂದ ಸಮಷ್ಟಿಗೆ ವಿಶೇಷ ಲಾಭವಾಗುವುದಿಲ್ಲ. ತದ್ವಿರುದ್ಧವಾಗಿ ಕ್ರಾಂತಿಕಾರಿ ಅರವಿಂದ ಘೋಷರು ಸಾಧನೆಯಲ್ಲಿ ಪ್ರಗತಿ ಸಾಧಿಸಿದ್ದರಿಂದ ಅವರಿಗೆ ೧೯೪೭ ರಲ್ಲಿ ಭಾರತ ಸ್ವತಂತ್ರವಾಗುವುದು ಎಂಬುದು ಮೊದಲೇ ಸೂಕ್ಷ್ಮದಿಂದ ತಿಳಿದಿತ್ತು. ಆದ್ದರಿಂದ ಅವರು ಕ್ರಾಂತಿಯ ವಿಚಾರವನ್ನು ಮನಸ್ಸಿನಿಂದ ತೆಗೆದರು. ಅವರು ಮಹರ್ಷಿಗಳಾದರು ಮತ್ತು ಲಕ್ಷಗಟ್ಟಲೆ ಜೀವಗಳಿಗೆ ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡಿದರು.
(ಆಧಾರ : ಸನಾತನದ ಗ್ರಂಥ ‘ಹಿಂದೂ ರಾಷ್ಟ್ರದ ಸ್ಥಾಪನೆಯ ದಿಶೆ)