೧. ಪೃಥ್ವಿಯ ಮೇಲಿನ ಅಸಂಖ್ಯಾತ ಜನರ ಒಳ್ಳೆಯ-ಕೆಟ್ಟ ವಿಚಾರಗಳ ಸ್ಪಂದನಗಳು ಉಚ್ಛ್ವಾಸದ ಮೂಲಕ ವಾತಾವರಣದಲ್ಲಿ ಸೇರುತ್ತದೆ ಹಾಗೂ ಆ ವಿಚಾರಗಳ ಪ್ರಾಬಲ್ಯಕ್ಕನುಸಾರ ಕಾರ್ಯವಾಗುವುದು
ಪ್ರತಿದಿನ ಬೆಳಗಾದಾಗ ಮನುಷ್ಯನ ಮುಂದೆ ಹೊಸ ಸಮಸ್ಯೆಗಳಿರುತ್ತವೆ. ಈ ಸಮಸ್ಯೆಗಳು ನಮ್ಮಿಂದಾದ ಕೃತಿಗಳ ಪರಿಣಾಮದ ಫಲಸ್ವರೂಪವಾಗಿದೆ.ಇಂತಹ ಸಮಸ್ಯೆಗಳು ಪುನಃ ವಾತಾವರಣದಲ್ಲಿ ಸೇರಿ ಅದರಿಂದ ಪುನಃ ಹೊಸ ಸಮಸ್ಯೆಗಳು ನಿರ್ಮಾಣವಾಗುತ್ತವೆ. ಯಾವುದೇ ಪ್ರಸಂಗವು ನಡೆಯುತ್ತಿರುವಾಗ ಒಂದಲ್ಲ ಒಂದು ಮಾಧ್ಯಮದಿಂದ ಪ್ರತಿಯೊಬ್ಬರ ಸಹಭಾಗವು ಅದರಲ್ಲಿ ಇದ್ದೇ ಇರುತ್ತದೆ. ಸಹಭಾಗವೆಂದರೆ ತಮ್ಮ ಮನಸ್ಸಿನ ವಿಚಾರಗಳ ಉಚ್ಛ್ವಾಸವಾಗಿದೆ. ನಮ್ಮ ವಿಚಾರಗಳಿಂದ ಹೊರಬೀಳುವ ಸ್ಪಂದನಗಳು ವಾತಾವರಣದಲ್ಲಿ ಸೇರುತ್ತವೆ. ಇಂತಹ ವಾತಾವರಣದ ಪರಿಣಾಮವು ಪ್ರತಿಯೊಬ್ಬರ ಮೇಲೆಯೂ ಆಗುತ್ತದೆ. ವಾತಾವರಣದಲ್ಲಿನ ಈ ವಿಚಾರಗಳು ಒಟ್ಟಾಗಿ ಕಾರ್ಯ ಮಾಡುತ್ತವೆ, ಅಂದರೆ ಈ ಪೃಥ್ವಿಯ ಮೇಲಿನ ಅಸಂಖ್ಯಾತ ಜನರ ವಿಚಾರಗಳಲ್ಲಿ ಯಾವ ವಿಚಾರಗಳು ಹೆಚ್ಚು ಪ್ರಬಲವಾಗಿರುತ್ತದೆಯೋ, ಆ ವಿಚಾರಗಳು ಉಚ್ಛ್ವಾಸದ ಮೂಲಕ ವಾತಾವರಣದಲ್ಲಿ ಸೇರುತ್ತದೆ ಹಾಗೂ ಆ ವಿಚಾರಗಳ ಪ್ರಾಬಲ್ಯಕ್ಕನುಸಾರ ಕಾರ್ಯವಾಗುತ್ತದೆ. ಅಂದರೆ ವಾತಾವರಣದಲ್ಲಿ ಇಂತಹ ಒಳ್ಳೆಯ ಮತ್ತು ಕೆಟ್ಟ ವಿಚಾರಗಳ ಸ್ಪಂದನಗಳು ಮೊದಲೇ ಇರುತ್ತದೆ. ಇದು ವಿಜ್ಞಾನವಾಗಿದೆ. ವಾತಾವರಣದಲ್ಲಿನ ಈ ವಿಚಾರಗಳ ಸ್ಪಂದನಗಳು ವಾತಾವರಣದ ಮೇಲಿನ ಸ್ತರದಲ್ಲಿ ಒಟ್ಟಾಗುತ್ತವೆ, ಅವುಗಳ ಸಂಘರ್ಷವಾಗುತ್ತದೆ ಹಾಗೂ ಅದರ ಪರಿಣಾಮವು ಸಗುಣದಲ್ಲಿ ವಾತಾವರಣದಲ್ಲಿನ ಕೆಳಗಿನ ಸ್ತರದಲ್ಲಿ ಕಂಡುಬರುತ್ತದೆ. ಆ ವಿಚಾರಗಳೊಂದಿಗೆ ಆಯಾಯ ಪದ್ಧತಿಯಲ್ಲಿ ಅಂದರೆ ಪ್ರಬಲ ವಿಚಾರಗಳಿಗೆ ಪ್ರಬಲ ವಿಚಾರದಿಂದ ಉತ್ತೇಜನವನ್ನು ನೀಡಿ, ದುರ್ಬಲ ವಿಚಾರಗಳನ್ನು ನಿಸ್ತೇಜಗೊಳಿಸಿ ಕಾರ್ಯ ನಡೆಯುತ್ತಿರುತ್ತದೆ. ಇದಕ್ಕೆ ಶ್ರೀಮದ್ಭಗವದ್ಗೀತೆಯಲ್ಲಿ ‘ವಾತಾವರಣದಲ್ಲಿ ದೈವೀ ಹಾಗೂ ಆಸುರೀ ಶಕ್ತಿಗಳು ಮೊದಲಿನಿಂದಲೂ ಕಾರ್ಯನಿರತವಾಗಿರುತ್ತವೆ. ಇದರಲ್ಲಿನ ದೈವೀ ಶಕ್ತಿಯನ್ನು ಆವಾಹನಿಸಿದರೆ, ಆ ಶಕ್ತಿಯು ನಮ್ಮ ಸಹಾಯಕ್ಕೆ ಬರುತ್ತದೆ ಎಂದು ಹೇಳಲಾಗಿದೆ.
೨. ವಾತಾವರಣದಲ್ಲಿನ ವಿಚಾರಗಳ ಕೆಳಗಿನ ಸ್ತರದಲ್ಲಿನ ಪರಿಣಾಮವು ಪ್ರತ್ಯಕ್ಷ ಕೃತಿಯಿಂದ ಕಾಣಿಸುವುದು
ಒಂದು ವೇಳೆ ಜನರು ‘ಹಿಂದೂ ರಾಷ್ಟ್ರ ಬರಬೇಕು ಎಂಬ ವಿಚಾರವನ್ನು ವಾತಾವರಣದಲ್ಲಿ ಹರಡಿಸಿ, ಅದಕ್ಕೆ ಸಂಘಟಿತವಾಗಿ ಪ್ರಾಬಲ್ಯ ನೀಡಿ, ಅದನ್ನು ಸಹಕರಿಸಿದರೆ, ಅದರಿಂದ ವಾತಾವರಣದ ಮೇಲೆ ಪರಿಣಾಮವಾಗಿ ಆ ವಿಚಾರದ ಪ್ರಾಬಲ್ಯವು ಹೆಚ್ಚಾಗುವುದು ಹಾಗೂ ಸೂಕ್ಷ್ಮದಿಂದ ಈ ವಿಚಾರಗಳು ದುಷ್ಟಶಕ್ತಿಗಳೊಂದಿಗೆ ಯುದ್ಧವಾಗಿ ಅವುಗಳು ದುರ್ಬಲವಾಗುವವು. ಇದು ನಿಜವಾದ ಯುದ್ಧವಾಗಿದೆ. ಇದರ ಪರಿಣಾಮವು ವಾತಾವರಣದ ಕೆಳಗಿನ ಸ್ತರದಲ್ಲಿ ಕಂಡು ಬರುತ್ತದೆ. ವಾತಾವರಣದಲ್ಲಿನ ಈ ವಿಚಾರಗಳ ಪರಿಣಾಮವು ಕೆಳಗಿನ ಸ್ತರದಲ್ಲಿನ ವಾತಾವರಣದಲ್ಲಿ ಕಂಡುಬಂದು ಆ ವಿಚಾರವು ಪ್ರತ್ಯಕ್ಷ ಕೃತಿಯ ರೂಪದಲ್ಲಿ ಕಾಣಿಸುತ್ತದೆ, ಈ ರೀತಿ ಕೃತಿ ರೂಪದಲ್ಲಿ ಕಾಣುವ ವಿಷಯಗಳನ್ನು ನಾವು ಸತ್ಯವೆಂದು ತಿಳಿಯುತ್ತೇವೆ.
೩. ಮಾನಸಿಕ ವಿಚಾರಗಳನ್ನು ಶಾರೀರಿಕ ಕೃತಿಯೊಂದಿಗೆ ಜೋಡಿಸಿದಾಗ ಅದು ಸ್ಥೂಲದಲ್ಲಿ ಕಾಣುವುದು; ಆದರೆ ಮಾನಸಿಕ ವಿಚಾರಗಳನ್ನು ಆಧ್ಯಾತ್ಮಿಕ ವಿಚಾರಗಳೊಂದಿಗೆ ಜೋಡಿಸುವುದೇನಿಜವಾದ ಕಾರ್ಯವಾಗಿರುತ್ತದೆ
ಮಾನಸಿಕ ವಿಚಾರಗಳನ್ನು ಶಾರೀರಿಕ ಕೃತಿಗಳೊಂದಿಗೆ ಜೋಡಿಸಿದಾಗ ಅದು ಅದರಲ್ಲಿನ ಶಾರೀರಿಕ ಕ್ಷಮತೆಗನುಸಾರ ಸ್ಥೂಲದಲ್ಲಿ ಗೋಚರವಾಗುತ್ತದೆ. ಆದರೆ, ಮಾನಸಿಕ ವಿಚಾರಗಳನ್ನು ಆಧ್ಯಾತ್ಮಿಕ ವಿಚಾರಗಳೊಂದಿಗೆ ಜೋಡಿಸಿದಾಗ ಅವುಗಳು ಹೆಚ್ಚು ಪ್ರಭಾವಶಾಲಿಯಾಗುತ್ತವೆ. ಇದುವೇ ನಿಜವಾದ ಕಾರ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಮನಸ್ಸಿನಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯ ವಿಚಾರವನ್ನು ಮಾಡಬೇಕು. ಅದನ್ನು ಕೇವಲ ಮನಸ್ಸಿನಲ್ಲಿಟ್ಟುಕೊಳ್ಳದೇ, ಅದನ್ನು ಪ್ರಬಲ ಮಾಡಬೇಕು. ಅದನ್ನು ಅಂತಃಕರಣಕ್ಕೆ ಜೋಡಿಸಬೇಕು. ಆಂತರಿಕ ಹಾಗೂ ಮಾನಸಿಕ ಇವೆರಡು ವಿಚಾರಗಳಲ್ಲಿಯೂ ಪುನಃ ವ್ಯತ್ಯಾಸವಿದೆ. ಮಾನಸಿಕವೆಂದರೆ ತಾತ್ಕಾಲಿಕವಾಗಿರುತ್ತದೆ. ಆಂತರಿಕ ಇದು ‘ಇಂಟರ್‌ನೆಟ್ ಆಗಿದೆ. ಇದು ವಾತಾವರಣದೊಂದಿಗೆ, ಶಾಶ್ವತವಾದ ಚೈತನ್ಯದೊಂದಿಗೆ, ನಿಸರ್ಗದೊಂದಿಗೆ ಜೋಡಿಸಲ್ಪಟ್ಟಿದೆ. ಅದು ಶ್ರೇಷ್ಠ ಹಾಗೂ ಪ್ರಾಭಾವಶಾಲಿಯಾಗಿದ್ದು ಇನ್ನಷ್ಟು ಹೆಚ್ಚು ಪರಿಣಾಮಕಾರಿಯಾಗಿದೆ.
೩ ಅ. ಮಾನವನ ವೃತ್ತಿಗನುಸಾರ ಘಟಿಸುವ ಮಾನಸಿಕ ಪ್ರಕ್ರಿಯೆಯನ್ನು ಶಾರೀರಿಕ ಸ್ತರಕ್ಕೆ ಜೋಡಿಸಿದಾಗ ವೃತ್ತಿಗನುಸಾರ ಅಷ್ಟೇ ಪ್ರಮಾಣದಲ್ಲಿ ಕಾರ್ಯವಾಗಿ ನಂತರ ಕಾರ್ಯದಲ್ಲಿನ ಉತ್ಸಾಹವು ಕಡಿಮೆಯಾಗುವುದು ಹಾಗೂ ವಿಘ್ನಸಂತುಷ್ಟತೆ ಬರುವುದು : ಮಾನವನ ಸಹಜ ವೃತ್ತಿಗನುಸಾರ ಘಟಿಸುವ ಮಾನಸಿಕ ಪ್ರಕ್ರಿಯೆಯನ್ನು ಶಾರೀರಿಕ ಸ್ತರಕ್ಕೆ ಜೋಡಿಸಿದರೆ ವೃತ್ತಿಗನುಸಾರ ಅಷ್ಟೇ ಪ್ರಮಾಣದಲ್ಲಿ ಕಾರ್ಯವಾಗಿ ನಂತರ ಕಾರ್ಯದಲ್ಲಿನ ಉತ್ಸಾಹವು ತಣ್ಣಗಾಗುತ್ತದೆ. ಇದರಲ್ಲಿ ವಿಘ್ನಸಂತುಷ್ಟತೆ ಇರುತ್ತದೆ. ಮಾನವ ಮತ್ತು ರಾಷ್ಟ್ರಕ್ಕೆ ಇದು ಆಘಾತಕಾರಿಯಾಗಬಹುದು; ಆದ್ದರಿಂದ ಮಾನಸಿಕ ಪ್ರಕ್ರಿಯೆಯನ್ನು ಆಧ್ಯಾತ್ಮಿಕ ಸ್ತರದಲ್ಲಿ ಜೋಡಿಸುವುದು ಅಂದರೆ, ಅಂತಃಕರಣದಲ್ಲಿ ಮನಸ್ಸನ್ನು ಹೃದಯದೊಂದಿಗೆ (ಭಗವಂತನೊಂದಿಗೆ) ಜೋಡಿಸಿ ವಿಚಾರಧಾರೆಯನ್ನು ಪ್ರವೃತ್ತಗೊಳಿಸುವುದೇ ನಮ್ಮ ಕಾರ್ಯವಾಗಿದೆ.
೩ ಆ. ಮಾನಸಿಕ ಪ್ರಕ್ರಿಯೆಯು ಆಧ್ಯಾತ್ಮಿಕ ಸ್ತರದಲ್ಲಿ ಆಗುವುದರ ಮಹತ್ವ : ಹೀಗೆ ಕಾರ್ಯವಾಗುವಾಗ ಸಮಾಜ ಮತ್ತು ರಾಷ್ಟ್ರದಲ್ಲಿ ಘಟಿಸುವ ಸಾಮೂಹಿಕ ಪ್ರಕ್ರಿಯೆಗಳು ಶಾರೀರಿಕ, ಮಾನಸಿಕ, ಹಾಗೂ ಆಧ್ಯಾತ್ಮಿಕ ಸ್ತರದಲ್ಲಿ ಆಗುತ್ತವೆ. ಇದರಲ್ಲಿ ಮಾನಸಿಕ ಪ್ರಕ್ರಿಯೆಯು ಶಾರೀರಿಕ ಸ್ತರದಲ್ಲಿ ಆಗುವ ಬದಲು ಅದು ಆಧ್ಯಾತ್ಮಿಕ ಸ್ತರದಲ್ಲಿ ಆಗುವುದು ಮಹತ್ವದ್ದಾಗಿದೆ.
೩ ಇ. ಮಾನಸಿಕ ಪ್ರಕ್ರಿಯೆಯನ್ನು ಆಧ್ಯಾತ್ಮಿಕ ಸ್ತರದಲ್ಲಿ ಜೋಡಿಸುವುದರಿಂದ ಪ್ರತಿಯೊಬ್ಬರ ಆತ್ಮದಲ್ಲಿನ ಭಗವಂತನ ಮೂಲಕ ಹಾಗೂ ದೃಢ ನಿಶ್ಚಯದ ಮೂಲಕ ಸಂಪೂರ್ಣ ತ್ರಿಭುವನದಲ್ಲಿ ಕಾರ್ಯ ಮಾಡಲು ಆರಂಭಿಸುವುದು ಹಾಗೂ ಪ್ರತಿಯೊಬ್ಬನ ಮನಸ್ಸಿನಲ್ಲಿ ಆ ದೃಷ್ಟಿಯಿಂದ ಜಾಜ್ವಲ್ಯತೆ ನಿರ್ಮಾಣವಾಗುವುದು : ಇದರಲ್ಲಿ ಮಾನಸಿಕ ಪ್ರಕ್ರಿಯೆಯನ್ನು ಆಧ್ಯಾತ್ಮಿಕ ಸ್ತರದಲ್ಲಿ ಜೋಡಿಸುವುದಕ್ಕಾಗಿ, ‘ಹಿಂದೂ ರಾಷ್ಟ್ರ ಬರಲು ಮಾಡುವ ಕಾರ್ಯವನ್ನು ಎಲ್ಲ ಹಿಂದೂಗಳ ಹೃದಯದೊಂದಿಗೆ ಜೋಡಿಸಿ ಅದು ಉತ್ಸಾಹಪೂರ್ವಕ ಹಾಗೂ ನಿಶ್ಚಯಪೂರ್ವಕವಾಗಿ ಆಗಲು ಅವರನ್ನು ಪ್ರವೃತ್ತಗೊಳಿಸಬೇಕು; ಏಕೆಂದರೆ ಪ್ರತಿಯೊಬ್ಬರ ಆತ್ಮದಲ್ಲಿ ಭಗವಂತನಿದ್ದಾನೆ. ಹೀಗಾದರೆ ಮಾತ್ರ ಈ ದೃಢನಿಶ್ಚಯವು ಸಂಪೂರ್ಣ ತ್ರಿಭುವನದಲ್ಲಿ ಕಾರ್ಯಮಾಡಲು ಆರಂಭಿಸುವುದು ಹಾಗೂ ಪ್ರತಿಯೊಬ್ಬರ ಮನಸ್ಸಿನಲ್ಲಿ ಆ ದೃಷ್ಟಿಯಿಂದ ಜಾಜ್ವಲ್ಯವು ನಿರ್ಮಾಣವಾಗುವುದು.
೪. ಕಾರ್ಯವೆಂದರೇನು ?
ಕಾರ್ಯವೆಂದರೆ ಮೊದಲು ವಿಚಾರದಲ್ಲಿ ಪ್ರಕಟವಾಗುವುದು, ಮನಸ್ಸಿನ ಮೂಲಕ ವಿಚಾರ ಗಳಿಂದ ಇಂದ್ರಿಯಗಳಿಗೆ ಸಂವೇದನೆ ತಲುಪುವುದು ಹಾಗೂ ಸಂವೇದನೆಗಳ ಮೂಲಕ ಕೃತಿಯಿಂದ ಸಾಕಾರವಾಗುವುದೇ ಕಾರ್ಯ ! ವಿಚಾರಧಾರೆ ಹೇಗಿರುವುದೋ, ಅಂತಹ ಸಂವೇದನೆ ಬರುತ್ತದೆ. ಸಂವೇದನೆಯ ಆವೇಶದಿಂದ ಪ್ರಕ್ರಿಯೆ ಆಗುವಂತೆ ಶರೀರದ ಮೂಲಕ ಕಾರ್ಯವಾಗುತ್ತದೆ, ಉದಾ. ಮುಷ್ಕರದಲ್ಲಿ ಕಲ್ಲು ತೂರಾಟ ಮಾಡುವುದು, ವಾಹನಗಳನ್ನು ಪುಡಿ ಮಾಡುವುದು ಇತ್ಯಾದಿ. ಇವು ವಿಕೃತಿ ಮೂಲಕ ಆಗುವ ಆವೇಶವಾಗಿದೆ.
೫. ‘ವೈಜ್ಞಾನಿಕ ವಿಚಾರಗಳಿಂದ ಕಾರ್ಯ ಹೇಗೆ ಮಾಡುವುದು ?’ ಎಂಬುದನ್ನು ತಿಳಿದು ಕಾರ್ಯ ಮಾಡಿರಿ !
‘ಪ್ರತ್ಯಕ್ಷ ಅನುಭೂತಿಜನ್ಯ ಭೌತಿಕ ಜ್ಞಾನವೆಂದರೆ ವಿಜ್ಞಾನ ಎಂದು ತಿಳಿಯಲಾಗುತ್ತದೆ. ಆಧ್ಯಾತ್ಮಿಕ ದೃಷ್ಟಿಯಿಂದ ಅನುಭೂತಿಜನ್ಯ ಜ್ಞಾನವೆಂದರೆ ನಿಜವಾದ ವಿಜ್ಞಾನ. ಇಲ್ಲಿ ನಮಗೆ ಆಧ್ಯಾತ್ಮಿಕ ದೃಷ್ಟಿಯಿಂದ ಅನುಭೂತಿಜನ್ಯ ಜ್ಞಾನವೆಂದು ಹೇಳಲಿಕ್ಕಿದೆ. ‘ವೈಜ್ಞಾನಿಕ ವಿಚಾರಗಳಿಂದ ಹೇಗೆ ಕಾರ್ಯ ಮಾಡುವುದು ?, ಎಂಬುದನ್ನು ತಿಳಿದು ಕಾರ್ಯ ಮಾಡಬೇಕು. ಯಾವಾಗ ಚೈತನ್ಯದ ಆವೇಶದಿಂದ ಯಾವುದಾದರೊಂದು ಪ್ರಸಂಗದ ಪ್ರತಿಕ್ರಿಯೆಯು ಮಾಡುತ್ತಿವೆಯೋ ಆಗ, ಮಾನವನ ಇಂದ್ರಿಯಗಳು ಆ ದೃಷ್ಟಿಯಿಂದ ಕಾರ್ಯ ಮಾಡುತ್ತವೆ. ಆಗ ಅದು ಪ್ರಭಾವಪೂರ್ಣ ಆಗುತ್ತದೆ. ಸಾಧನೆಯುಕ್ತ ಚೈತನ್ಯವಾಣಿಯಿಂದ ಯಾವಾಗ ಸಂಭಾಷಣೆಯಾಗುತ್ತದೆಯೋ, ಆಗ ಆ ಚೈತನ್ಯವು ಎದುರಿನ ವ್ಯಕ್ತಿಯ ಮನಸ್ಸಿನ ಮೇಲೆ ಕಾರ್ಯ ಮಾಡುತ್ತದೆ. ಆ ವಿಚಾರವು ಅವನ ಹೃದಯದೊಂದಿಗೆ ಸಂಬಂಧವನ್ನು ಜೋಡಿಸುತ್ತದೆ, ಉದಾ. ಬಾಜಿ ಪ್ರಭೂ ದೇಶಪಾಂಡೆ, ಸ್ವಾಮಿ ವಿವೇಕಾನಂದ, ಸುಭಾಷ್ಚಂದ್ರ ಬೋಸ್ ಮುಂತಾದವರ ವಾಣಿಯಲ್ಲಿ ಅಮೋಘವಾದ ಚೈತನ್ಯವಿತ್ತು. ಅವರು ಧ್ಯೇಯದಿಂದ ಪ್ರೇರಿತರಾಗಿದ್ದರು. ಅವರ ವಾಣಿಯಿಂದ ಅಪಾರ ಬದಲಾವಣೆಯಾಗಿರುವುದನ್ನು ನಾವು ನೋಡಿದ್ದೇವೆ. ‘ಹರ ಹರ ಮಹಾದೇವ ಎಂದು ಹೇಳುತ್ತಾ ಬಾಜಿಪ್ರಭು ದೇಶಪಾಂಡೆಯವರಂತಹ ಮಾವಳೆಗಳು ಧ್ಯೇಯದಿಂದ ತೀವ್ರ ಹೋರಾಟ ಮಾಡಿದರು. ಅವರ ಇಂತಹ ಪ್ರೇರಣಾದಾಯಕ ವಾಣಿಯಿಂದ ಮತ್ತು ಕೃತಿಯಿಂದ ಮೊಘಲರ ಸೈನ್ಯವು ಭಯಭೀತಗೊಂಡು ಕಂಗಾಲಾಯಿತು. ಸ್ವಾಮಿ ವಿವೇಕಾನಂದರು ‘ಬ್ರದರ್ಸ್ ಎಂಡ್ ಸಿಸ್ಟರ್ಸ್ ಎಂದು ಹೇಳಿದಾಗ ವಿದೇಶದಲ್ಲಿನ ಸಭಾಗೃಹದಲ್ಲಿದ್ದ ಜನರಲ್ಲಿ ಒಮ್ಮೆಲೆ ಪರಿವರ್ತನೆ ಯಾಯಿತು ಹಾಗೂ ಸುಭಾಷ್ಚಂದ್ರ ಬೋಸ್ ಇವರ ‘ತುಮ್ ಮುಝೆ ಖೂನ್ ದೊ, ಮೈ ತುಮೆ ಆಜಾದಿ ದೂಂಗಾ ಈ ಉತ್ತೇಜನಾದಾಯಕ ವಾಣಿಯಿಂದ ಸಮಾಜದಲ್ಲಿ ಅಪಾರ ಪರಿವರ್ತನೆ ಆಯಿತು ಮತ್ತು ಜನರಲ್ಲಿ ಸಮರ್ಪಣೆಯ ಭಾವನೆ ನಿರ್ಮಾಣವಾಯಿತು. ಇದು ವೈಜ್ಞಾನಿಕ ಭಾಷೆಯಾಯಿತು. ಇಂತಹ ವೈಜ್ಞಾನಿಕ ವಿಚಾರವನ್ನು ಸಮಾಜದಲ್ಲಿ ಮಂಡಿಸಬೇಕು ಆಗ ಅದರ ಪರಿಣಾಮವು ಹೆಚ್ಚಾಗುತ್ತದೆ. ಶಾರೀರಿಕ ವಿಚಾರಧಾರೆಯನ್ನು ಹಿಡಿದು ಸ್ವಾರ್ಥಿ ವೃತ್ತಿಯಿಂದ ಪರಿಣಾಮದ ವಿಚಾರ ಮಾಡದೆ ಧ್ವಂಸಗೈಯ್ಯುವ ಆಘಾತಕಾರಿ ಕಾರ್ಯ ಮಾಡಿದರೆ, ಅದು ವಿಘ್ನಸಂತೋಷಿ, ವಿನಾಶಕಾರಿ, ತನ್ನ ವಿನಾಶಕ್ಕೆ ಆ ಮೂಲಕ ರಾಷ್ಟ್ರದ ವಿನಾಶಕ್ಕೆ ಕಾರಣವಾಗುತ್ತದೆ.
೬. ಕೃತಿಯ ಸ್ತರದಲ್ಲಿ ಕಾರ್ಯ ಮಾಡುವಾಗ ಈ ಮುಂದಿನ ವಿಷಯಗಳನ್ನು ಗಮನದಲ್ಲಿಡಿ !
ಅ. ಮುಖ್ಯವಾಗಿ ಮಾನಸಿಕ ವಿಚಾರಧಾರೆಯ ಮೂಲಕ ಜನರ ವಿಚಾರಧಾರೆಯನ್ನು ಪ್ರಬಲಗೊಳಿಸುವುದು ಮಹತ್ವದ್ದಾಗಿದೆ. ವಿಚಾರಧಾರೆಯು ಎಷ್ಟು ಸಮೃದ್ಧವಾಗುವುದೋ, ಅಷ್ಟೇ ಪರಿಣಾಮವು ದೃಢ ವಾಗುವುದು. ಅದಕ್ಕಾಗಿ ಸ್ವತಃ ಸಾಧನೆ ಮಾಡಿ ಎಲ್ಲ ರೀತಿಯಿಂದ ಸಮೃದ್ಧವಾಗುವ ಅವಶ್ಯಕತೆಯಿದೆ.
ಆ. ಮೊದಲು ವಿಚಾರದಿಂದ ತಮ್ಮ ಉದ್ದೇಶವನ್ನು ನಿರ್ಧರಿಸಬೇಕು, ಪ್ರತಿಜ್ಞೆ ಮಾಡಬೇಕು, ದೃಢನಿಶ್ಚಯ ಮಾಡಬೇಕು, ಇದರಿಂದ ಆ ಕಾರ್ಯಕ್ಕೆ ಆ ದೃಷ್ಟಿಯಿಂದ ವೇಗ ಪ್ರಾಪ್ತಿಯಾಗು ವುದು; ಆದ್ದರಿಂದ ಭಗವಂತನು ಅರ್ಜುನನಿಗೆ ಗೀತೆಯಲ್ಲಿ ಹೀಗೆಂದಿದ್ದಾನೆ, ತಸ್ಮಾದುತ್ತಿಷ್ಠ ಕೌಂತೇಯ ಯುದ್ಧಾಯ ಕೃತನಿಶ್ಚಯಃ | (ಅರ್ಥ : ಹೇ ಕುಂತಿಪುತ್ರ ಅರ್ಜುನ, ನೀನು ಯುದ್ಧಕ್ಕೆ ಸಜ್ಜಾಗಿ ಎದ್ದು ನಿಲ್ಲು.) ಇದಕ್ಕಾಗಿ ನಮ್ಮ ವಿಚಾರಧಾರೆಯು ಎಲ್ಲ ರೀತಿಯಿಂದ ಭಗವಂತನ ಅಧಿಷ್ಠಾನದಲ್ಲಿದ್ದು, ಸಮೃದ್ಧಗೊಳಿಸುವುದು, ಅದನ್ನು ದೃಢಗೊಳಿಸುವುದು ಮಹತ್ವದ್ದಾಗಿದೆ, ಆಗ ಮಾತ್ರ ಕಾರ್ಯವು ಸಮೃದ್ಧವಾಗುತ್ತದೆ.
೭. ಜಗತ್ತಿನಾದ್ಯಂತ ಪ್ರತಿಯೊಬ್ಬ ಮಾನವನಲ್ಲಿ ‘ಹಿಂದೂ ರಾಷ್ಟ್ರದ ವಿಚಾರವನ್ನು ಬಿತ್ತುವುದು ಮತ್ತು ಅದು ಪ್ರತಿಯೊಂದು ಹಿಂದೂವಿನ ಹೃದಯದೊಂದಿಗೆ ಜೋಡಿಸಲ್ಪಟ್ಟು ವಾತಾವರಣದಲ್ಲಿ ಹರಡುವ ಕಾರ್ಯವನ್ನು ಮಾಡಲಿಕ್ಕಿರುವುದು
ಭಾರತದಲ್ಲಿ ಹಾಗೂ ವಿದೇಶದಲ್ಲಿರುವ ಪ್ರತಿಯೊಬ್ಬ ಹಿಂದೂವಿನಲ್ಲಿ ಅಲ್ಲ, ಪ್ರತಿಯೊಬ್ಬ ಮಾನವನಲ್ಲಿ ಹಿಂದೂ ರಾಷ್ಟ್ರವೆಂಬ ವಿಚಾರವನ್ನು ಬಿತ್ತುವುದೇ ನಮ್ಮ ಕಾರ್ಯವಾಗಿದೆ. ‘ಹಿಂದೂ ರಾಷ್ಟ್ರವು ಕೇವಲ ಹಿಂದೂಗಳಿಗಾಗಿ ಇರದೇ ಅದು ಅಖಿಲ ಮನುಕುಲದ ಪಾರಮಾರ್ಥಿಕ ಕಲ್ಯಾಣಕ್ಕಾಗಿ ಇದೆ, ಎಂಬ ವಿಚಾರವನ್ನು ಪ್ರತಿಯೊಬ್ಬ ಹಿಂದೂವಿನ ಹೃದಯದೊಂದಿಗೆ ಜೋಡಿಸಲ್ಪಟ್ಟು ಅದು ವಾತಾವರಣದಲ್ಲಿ ಹೊರಹೊಮ್ಮುವುದು, ಇದು ಕಾರ್ಯವಾಗಿದೆ. ಈ ವಿಚಾರ ಪ್ರತಿಯೊಂದು ಆತ್ಮದೊಂದಿಗೆ ಜೋಡಿಸುವುದರಿಂದ ಹಾಗೂ ಆತ್ಮಾ ‘ಇಂಟರ್‌ನೆಟ್ ಆಗಿರುವುದರಿಂದ ಅದು ಕಾರ್ಯ ಮಾಡುವುದು; ಏಕೆಂದರೆ ‘ ನಮೋ ಜೀ ಆದ್ಯಾ| ವೇದ ಪ್ರತಿಪಾದ್ಯಾ | ಜಯ ಜಯ ಸ್ವಸಂವೇದ್ಯಾ | ಆತ್ಮರೂಪಾ | (ಅರ್ಥ: ಆತ್ಮವು ಸ್ವಸಂವೇದ್ಯ, ಎಲ್ಲ ದೃಷ್ಟಿಯಿಂದ ಪರಿಪೂರ್ಣವಾಗಿದೆ. ಅದು ‘ಓಂಕಾರ ಸ್ವರೂಪದಿಂದ ವಾಣಿಯ ಮೂಲಕ ತ್ರಿಗುಣಗಳ ರೂಪದಲ್ಲಿ ಪ್ರಕಟವಾಗಿ ಆತ್ಮಶಕ್ತಿಯ ಮೂಲಕ ವಾಣಿಯಿಂದ ಕಾರ್ಯ ಮಾಡುತ್ತಿದೆ, ಎಂದು ವೇದಗಳಲ್ಲಿ ಹೇಳಲಾಗಿದೆ. ಇಂತಹ ಈ ಚೈತನ್ಯ ರೂಪದ ‘ಓಂಕಾರಕ್ಕೆ ನನ್ನ ನಮಸ್ಕಾರ.) ಆತ್ಮವು ‘ಇಂಟರ್‌ನೆಟ್ ಆಗಿರುವುದರಿಂದ ಒಬ್ಬನ ಹೃದಯದಲ್ಲಿ ವಿಚಾರವು ಬಿತ್ತಿದರೆ, ಆ ವಿಚಾರವು ತನ್ನಿಂತಾನೇ ಎಲ್ಲರ ಹೃದಯದಲ್ಲಿ ಬಿತ್ತಲ್ಪಡುತ್ತದೆ. ಇಂತಹ ಧಾರಣೆಯು ಪ್ರತಿಯೊಬ್ಬರ ಹೃದಯದಲ್ಲಿ ನಿರ್ಮಾಣವಾಗುವುದು ಆವಶ್ಯಕವಾಗಿದೆ. ಇಂದು ನಿರ್ಮಾಣವಾಗಿರುವ ಕೆಟ್ಟ ವಿಚಾರಗಳ ಧಾರೆಯು ಜನರ ಜೀವನದ ಬಾಲ್ಯಾವಸ್ಥೆಯಲ್ಲಿಯೇ ಅವರ ಮನಸ್ಸಿನಲ್ಲಿ ಬಿತ್ತಲಾಗಿದ್ದು ಅವರ ಮನಸ್ಸಿಗೆ ಆಮಿಷ ತೋರಿಸಿ ಅವರನ್ನು ಮರುಳು ಮಾಡಿದ್ದರಿಂದ ಅವರು ಅದರಲ್ಲಿಯೇ ಮುಳುಗಿದ್ದಾರೆ. ಅದರಿಂದಲೇ ಇಂತಹ ಭಯಾನಕ ಅಮಾನವೀಯ ಕೃತಿ ಮಾಡುವ ಸಮೂಹ ನಿರ್ಮಾಣವಾಗಿದೆ.
೮. ತಾತ್ಪರ್ಯ
ಇದಕ್ಕಾಗಿ ಮಾನವರೇ, (ಇಲ್ಲಿ ಹಿಂದೂ ಶಬ್ದವನ್ನು ಉದ್ದೇಶಪೂರ್ವಕ ವರ್ಜಿಸಲಾಗಿದೆ; ಏಕೆಂದರೆ ಹಿಂದೂ ಅಂದರೆ ದುರ್ಗುಣವನ್ನು ದೂರಗೊಳಿಸುವವನು, ಅಂದರೆ ದುರ್ಗುಣ (ಆವರಣ) ಹೋದರೆ ಮಾತ್ರ ಆತ್ಮಶಕ್ತಿ ಕಾರ್ಯ ಮಾಡುತ್ತದೆ, ಅಂದರೆ ಈಶ್ವರೇಚ್ಛೆಯಿಂದಲೇ ಕಾರ್ಯವಾಗಲು ಆರಂಭವಾಗುತ್ತದೆ. ಈ ಶಬ್ದವು ಎಲ್ಲ ಜೀವ ಪ್ರಾಣಿಗಳಿಗೆ ಅನ್ವಯವಾಗುತ್ತದೆ) ಜಾಗೃತರಾಗಿರಿ ಹಾಗೂ ಮಾನಸಿಕ ಪ್ರಕ್ರಿಯೆಯನ್ನು ಆಧ್ಯಾತ್ಮಿಕ ಸ್ತರದಲ್ಲಿ ಜೋಡಿಸಿ ‘ಹಿಂದೂ ರಾಷ್ಟ್ರ ಬರುವ ಸಲುವಾಗಿ ಎಲ್ಲರ ಹೃದಯದಲ್ಲಿ ಹಿಂದೂ ರಾಷ್ಟ್ರ ನಿರ್ಮಾಣದ ವಿಚಾರಧಾರೆಯನ್ನು ಬಿತ್ತಿರಿ ! ಈ ಕಾರ್ಯವು ಅವರಿಂದ ಉತ್ಸಾಹಪೂರ್ವಕ ಹಾಗೂ ನಿಶ್ಚಯ ಪೂರ್ವಕ ಆಗುವ ಸಲುವಾಗಿ ಅವರನ್ನು ಪ್ರವೃತ್ತಗೊಳಿಸಿರಿ, ಅದರಿಂದ ಎಲ್ಲೆಡೆ ಈ ಮುಂದಿನ ಶ್ಲೋಕದಂತೆ ಕಾಣಿಸುವುದು. ಸರ್ವೇತ್ರ ಸುಖಿನಃ ಸಂತು ಸರ್ವೇ ಸಂತು ನಿರಾಮಯಾಃ | ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿದ್ ದುಃಖಮಾಪ್ನುಯಾತ್ || (ಅರ್ಥ: ಎಲ್ಲ ಪ್ರಾಣಿಮಾತ್ರರು ಸುಖವಾಗಿರಲಿ. ಎಲ್ಲರಿಗೂ ಒಳ್ಳೆಯ ಆರೋಗ್ಯ ಲಭಿಸಲಿ. ಎಲ್ಲರೂ ಪರಸ್ಪರರ ಕಲ್ಯಾಣವನ್ನು ಕಾಪಾಡಲಿ. ಜೀವನದಲ್ಲಿ ಯಾರಿಗೂ ದುಃಖ ಬರದಿರಲಿ.)
|| ಜಯತು ಜಯತು ಹಿಂದೂರಾಷ್ಟ್ರಮ್ ||
– ಪ.ಪೂ. ಪಾಂಡೆ ಮಹಾರಾಜರು (೯.೬.೨೦೧೭)