೨೦೨೩ ರಲ್ಲಿ ‘ಹಿಂದೂ ರಾಷ್ಟ್ರ (ಸನಾತನ ಧರ್ಮ ರಾಜ್ಯ)ದ’ ಸ್ಥಾಪನೆಯಾಗುತ್ತದೆ, ಎಂದು ಪರಾತ್ಪರ ಗುರುಗಳು ಡಾ. ಜಯಂತ ಆಠವಲೆ ಹಾಗೂ ಇತರ ಸಂತರು ಹೇಳಿದ್ದಾರೆ. ಆಗ ಕಲಿಯುಗದಲ್ಲಿನ ಕಲಿಯುಗದಲ್ಲಿನ ಚಿಕ್ಕ ಕಲಿಯುಗ ಮುಗಿದು ಸತ್ಯಯುಗ ಪ್ರಾರಂಭವಾಗುತ್ತದೆ. ಆಗ ‘ಹಿಂದೂ ರಾಷ್ಟ್ರದ’ ಎಂದರೆ ‘ಸನಾತನ ಧರ್ಮ ರಾಜ್ಯದ’ ಸ್ಥಾಪನೆಯಾಗುತ್ತದೆ.
‘ಸನಾತನ ಧರ್ಮರಾಜ್ಯ’ ಎಂದರೆ ವಿಶ್ವಕಲ್ಯಾಣಕ್ಕಾಗಿ ಸಾತ್ತ್ವಿಕ ಜನರು ನಡೆಸಿದ ರಾಷ್ಟ್ರ ! ಅದು ರಾಮರಾಜ್ಯದಂತೆ ಇರುತ್ತದೆ. ಈ ರೀತಿಯ ರಾಜ್ಯ ನಡೆಸಲು ಸಕ್ಷಮ ವ್ಯಕ್ತಿಗಳು ಇರಬೇಕಾಗುತ್ತವೆ. ಈಶ್ವರನು ಸನಾತನಕ್ಕೆ ಸಾಮಾನ್ಯರಿಗಿಂತ ಉಚ್ಚ ಆಧ್ಯಾತ್ಮಿಕ ಮಟ್ಟ ಇರುವ, ಎಂದರೆ ಕಳೆದ ಜನ್ಮದ ಸಾಧನೆಯಿರುವ ನೂರಾರು ಬಾಲ ಸಾಧಕರ ಪರಿಚಯವನ್ನು ಮಾಡಿಕೊಟ್ಟಿದ್ದಾನೆ. ಇಲ್ಲಿಯವರೆಗೆ ಉಚ್ಚ ಸ್ವರ್ಗ ಮತ್ತು ಮಹರ್ ಲೋಕದಿಂದ ಪೃಥ್ವಿಯಲ್ಲಿ ಜನಿಸಿದ ೬೦೦ ಕ್ಕಿಂತಲೂ ಅಧಿಕ ಬಾಲ ಮತ್ತು ಯುವ ವಯಸ್ಸಿನ ಸಾಧಕರನ್ನು ಸನಾತನವು ಗುರುತಿಸಿದೆ. ಇದರಲ್ಲಿ ೯೬ ಜನರ ಮಟ್ಟವು ಶೇ. ೬೧ ಮತ್ತು ಅದಕ್ಕಿಂತಲೂ ಅಧಿಕವಿದೆ.
ಸಂಪೂರ್ಣ ಜಗತ್ತನ್ನು ಪ್ರಕಾಶಮಯಗೊಳಿಸುವ ಸೂರ್ಯನು ಯಾವ ದಿಕ್ಕಿನಲ್ಲಿ ಸುತ್ತುತ್ತಾನೆಯೋ, ಅದೇ ದಿಕ್ಕಿನಲ್ಲಿ ಸೂರ್ಯಕಾಂತಿ ಹೂವು ಸಹ ತಿರುಗುತ್ತದೆ. ಅದರಂತೆ ಇಡೀ ವಿಶ್ವವನ್ನು ವಿಹಂಗಮ ಮಾರ್ಗದಿಂದ ಈಶ್ವರಪ್ರಾಪ್ತಿಯೆಡೆಗೆ ಕರೆದೊಯ್ಯುವ ಏಕಮೇವಾದ್ವಿತೀಯರಾದ ಪ.ಪೂ. ಡಾಕ್ಟರರ ಕಡೆಗೆ ಉಚ್ಚ ಲೋಕದ ಸಾತ್ತ್ವಿಕ ಮಕ್ಕಳು ಸಹ ಆಕರ್ಷಿತರಾಗುತ್ತಾರೆ, ಎಂದು ಹೇಳಿದರೆ ಅದರಲ್ಲಿ ಆಶ್ಚರ್ಯವೇನು ! – ಸದ್ಗುರು (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೬.೧೧.೨೦೧೪)
೧. ಹಿಂದೂ ರಾಷ್ಟ್ರ (ಸನಾತನ ಧರ್ಮ ರಾಜ್ಯ)ವನ್ನು ನಡೆಸಲು ಸಾಧಕರೇ ಸಕ್ಷಮರಿರುವುದು !
ಹಿಂದೂ ರಾಷ್ಟ್ರ ನಡೆಸಲು ಸಾಧಕರೇ ಸಕ್ಷಮರಾಗಿದ್ದಾರೆ; ಏಕೆಂದರೆ ಅವರಲ್ಲಿ ಸರ್ವಸಾಮಾನ್ಯರ ತುಲನೆಯಲ್ಲಿ ಸತ್ತ್ವ ಗುಣ ಹೆಚ್ಚಿರುತ್ತದೆ. ‘ಆಧ್ಯಾತ್ಮಿಕ ದೃಷ್ಟಿಯಲ್ಲಿ ಜನರ ಕಲ್ಯಾಣವಾಗಬೇಕು ಎಂಬುದಕ್ಕಾಗಿ ಸಾಧಕರೇ ಪ್ರಯತ್ನಿಸಬಹುದು. ಅವರಲ್ಲಿ ಭಾವ, ತಳಮಳ, ತ್ಯಾಗ, ಪ್ರೇಮಭಾವ ಇತ್ಯಾದಿ ಗುಣಗಳಿರುತ್ತವೆ. ಅವರು ನಿಷ್ಕಾಮ ಭಾವದಿಂದ ತಮ್ಮ ಸಾಧನೆಗಾಗಿ ಅಂದರೆ ಈಶ್ವರಪ್ರಾಪ್ತಿಗಾಗಿಯೇ ಹಿಂದೂ ರಾಷ್ಟ್ರವನ್ನು ನಡೆಸುವರು.
೨. ಈಶ್ವರನು ಸನಾತನಕ್ಕೆ ಹಿಂದೂ ರಾಷ್ಟ್ರ ನಡೆಸಲು ಉಚ್ಚಲೋಕದಿಂದ ಪೃಥ್ವಿಯಲ್ಲಿ ಜನಿಸಿದ ನೂರಾರು ಬಾಲಸಾಧಕರ ಪರಿಚಯ ಮಾಡಿರುವುದು
ಈಶ್ವರನು ಸನಾತನಕ್ಕೆ ಸಾಮಾನ್ಯರಿಗಿಂತ ಉಚ್ಚ ಆಧ್ಯಾತ್ಮಿಕ ಮಟ್ಟ ಇರುವ ಅಂದರೆ ಕಳೆದ ಜನ್ಮದ ಸಾಧನೆಯಿರುವ ನೂರಾರು ಬಾಲಸಾಧಕರ ಗುರುತು ನೀಡಿದ್ದಾನೆ. (ಸದ್ಯ ಕಲಿಯುಗದಲ್ಲಿ ಸಾಧನೆ ಮಾಡದಿರುವ ಸಾಮಾನ್ಯ ಜನರ ಆಧ್ಯಾತ್ಮಿಕ ಮಟ್ಟ ಶೇ. ೨೦ ರಷ್ಟು ಇರುತ್ತದೆ, ಸಾಧನೆ ಮಾಡಿ ಸಂತಪದವಿ ಪ್ರಾಪ್ತವಾದಾಗ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಶೇ. ೭೦ ರಷ್ಟಾಗುತ್ತದೆ ಮತ್ತು ಮೋಕ್ಷಪ್ರಾಪ್ತಿಯಾದ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟವು ಶೇ. ೧೦೦ ರಷ್ಟಿರುತ್ತದೆ.) ಅವರು ಹಿಂದಿನ ಜನ್ಮದಲ್ಲಿ ಮಾಡಿದ ಯೋಗ್ಯ ಸಾಧನೆಯಿಂದಲೇ ಉಚ್ಚ ಲೋಕದಲ್ಲಿ ಸ್ಥಾನಗಳಿಸಿದ್ದಾರೆ. ಈ ಬಾಲಸಾಧಕರ ಪೀಳಿಗೆಯೇ ಮುಂದೆ ಹಿಂದೂ ರಾಷ್ಟ್ರ ನಡೆಸುವುದು.
೩. ಬಾಲಸಾಧಕರ ಅಧ್ಯಾತ್ಮದಲ್ಲಿನ ಅಸಾಮಾನ್ಯತೆ ಕಿರಿಯ ವಯಸ್ಸಿನಲ್ಲೇ ವ್ಯವಹಾರದ ವಿವಿಧ ಕ್ಷೇತ್ರಗಳಲ್ಲಿ ನಿಪುಣರಾಗಿರುವ ಅನೇಕ ಮಕ್ಕಳ ಉದಾಹರಣೆಗಳು ನಮಗೆ ತಿಳಿದಿವೆ
ಅಲ್ಪ ವಯಸ್ಸಿನಲ್ಲಿ ಕೆಲವರು ಪಠ್ಯಕ್ರಮದಲ್ಲಿನ ಯಾವುದಾದರೊಂದು ವಿಷಯದಲ್ಲಿ ನಿಪುಣರಿದ್ದರೆ ಕೆಲವರು ಯಾವುದಾದರೊಂದು ಆಟದಲ್ಲಿ ಮತ್ತು ಕೆಲವರು ಯಾವುದಾದರೊಂದು ಕಲೆಯಲ್ಲಿ ನಿಪುಣರಿರುತ್ತಾರೆ. ವ್ಯವಹಾರದಲ್ಲಿನ ಈ ಅಸಾಮಾನ್ಯತ್ವಕ್ಕಿಂತ ಅಧ್ಯಾತ್ಮದಲ್ಲಿನ ಅಸಾಮಾನ್ಯತ್ವ ಎಷ್ಟೋ ಪಟ್ಟು ಉಚ್ಚವಿರುತ್ತದೆ. ಭಾರತದಲ್ಲಿ ಆದಿಶಂಕರಾಚಾರ್ಯ, ಸಂತ ಜ್ಞಾನೇಶ್ವರ ಇವರಂತಹ ಚಿಕ್ಕಂದಿನಲ್ಲಿಯೇ ಸಂತರಾಗಿರುವ, ಅನೇಕ ಚಮತ್ಕಾರ ಮಾಡುವ ಕ್ಷಮತೆಯಿರುವ ಮತ್ತು ಜಗತ್ತಿಗೆ ಮಾರ್ಗದರ್ಶನ ಮಾಡುವವರ ಎಷ್ಟೋ ಉದಾಹರಣೆಗಳನ್ನು ನೀಡಬಹುದು. ಆದ್ದರಿಂದ ಇವರಿಗೆ ‘ಆಧ್ಯಾತ್ಮಿಕ ದೃಷ್ಟಿಯಲ್ಲಿ ಅಸಾಮಾನ್ಯ ಬಾಲಕರು ಅಂದರೆ ‘ಸ್ಪಿರಿಚ್ಯುವಲ್ ಚೈಲ್ಡ್ ಪ್ರೊಡಿಜೀ ಎಂದು ಹೇಳಬಹುದು.
ಉಚ್ಚಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಬಾಲಸಾಧಕರು ಸಹ ಹೆಚ್ಚುಕಡಿಮೆ ಪ್ರಮಾಣದಲ್ಲಿ ಆಧ್ಯಾತ್ಮಿಕ ದೃಷ್ಟಿಯಲ್ಲಿ ಅಸಾಮಾನ್ಯರೇ ಆಗಿದ್ದಾರೆ; ಏಕೆಂದರೆ ಅವರು ಚಿಕ್ಕಂದಿನಲ್ಲಿಯೇ ಅಧ್ಯಾತ್ಮದಲ್ಲಿನ ಶೇ. ೫೦ ರಿಂದ ೬೧ ಮಟ್ಟ ಅಥವಾ ೬೧ ಕ್ಕಿಂತ ಹೆಚ್ಚು ಮಟ್ಟ ತಲುಪಿದ್ದಾರೆ. ಇವರ ವಿಚಾರಗಳು ಪ್ರಗಲ್ಭವಿವೆ ಮತ್ತು ಆ ವಿಚಾರಗಳು ಎಲ್ಲರಿಗಾಗಿ ಮಾರ್ಗದರ್ಶಕವಾಗಿವೆ. ಈ ಜೀವಗಳು ಸಾತ್ತ್ವಿಕವಿದ್ದು ಅವರಿಗೆ ಜನ್ಮದಿಂದಲೇ ದೇವರ ಬಗ್ಗೆ ಆಕರ್ಷಣೆಯಿದೆ; ಆದ್ದರಿಂದ ಅವರು ‘ದೈವೀ ಬಾಲಕರಾಗಿದ್ದಾರೆ. ಭಾರತದಲ್ಲಿರುವ ಸಮಾಜಕ್ಕೆ ‘ಬಾಲ ಕೀರ್ತನಕಾರರು ತಿಳಿದಿದೆ. ಈ ಬಾಲಕರು ಅವರಿಗಿಂತಲೂ ಶ್ರೇಷ್ಠರಾಗಿದ್ದಾರೆ. ಈ ಬಾಲಕರಲ್ಲಿನ ಅನೇಕ ಮಕ್ಕಳು ಈಗ ಯುವ ವಯಸ್ಸಿಗೆ ಬಂದಿದ್ದು ಅವರಲ್ಲಿನ ಕೆಲವರು ಪೂರ್ಣವೇಳೆ ಸಾಧನೆ ಮಾಡಲು ರಾಮನಾಥಿ ಆಶ್ರಮದಲ್ಲಿದ್ದಾರೆ. ಇಲ್ಲಿಯ ವರೆಗೆ ಉಚ್ಚ ಸ್ವರ್ಗ ಮತ್ತು ಮಹರ್ ಲೋಕದಿಂದ ಪೃಥ್ವಿಯಲ್ಲಿ ಜನಿಸಿದ ೬೦೦ ಕ್ಕಿಂತಲೂ ಅಧಿಕ ಬಾಲ ಮತ್ತು ಕುಮಾರ ವಯಸ್ಸಿನ ಸಾಧಕರನ್ನು ಸನಾತನವು ಗುರುತಿಸಿದೆ ಮತ್ತು ಈ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ.
೪. ಪಾಲಕರೇ, ತಮ್ಮ ಮಕ್ಕಳ ಮೇಲೆ ಸಾಧನೆಯ ಸಂಸ್ಕಾರ ಮಾಡಿ ಅವರನ್ನು ಹಿಂದೂ ರಾಷ್ಟ್ರಕ್ಕಾಗಿ (ಸನಾತನ ಧರ್ಮ ರಾಜ್ಯಕ್ಕಾಗಿ) ಆಧ್ಯಾತ್ಮಿಕ ದೃಷ್ಟಿಯಲ್ಲಿ ಸಕ್ಷಮಗೊಳಿಸಿ !
ಈ ಬಾಲಸಾಧಕರು ಜನ್ಮದಿಂದಲೇ ಸಾತ್ತ್ವಿಕರಾಗಿದ್ದಾರೆ. ಇನ್ನು ಮುಂದೆ ಅವರು ಮುಂದಿನ ಹಿಂದೂ ರಾಷ್ಟ್ರ (ಸನಾತನ ಧರ್ಮ ರಾಜ್ಯ) ನಡೆಸಲು ಸಕ್ಷಮರಾಗಬೇಕೆಂದು ಅದರ ನಿಜವಾದ ಜವಾಬ್ದಾರಿ ಈಗ ಅವರ ಪಾಲಕರ ಮೇಲಿದೆ. ಈ ಬಾಲಸಾಧಕರ ತಂದೆತಾಯಿಯರು ಅವರ ಮುಂದಿನ ಸಾಧನೆಗಾಗಿ ಪೂರಕ ವಾತಾವರಣ ನೀಡಬೇಕು. ಅವರಿಂದ ಸಾಧನೆ ಮಾಡಿಸಿಕೊಳ್ಳಬೇಕು. ಅವರಿಗೆ ಧರ್ಮಾಚರಣೆ ಮಾಡಲು ಕಲಿಸಿ ಅವರ ಮೇಲೆ ಸುಸಂಸ್ಕಾರ ಮಾಡಬೇಕು. ‘ಯೋಗ್ಯ-ಆಯೋಗ್ಯ’ ಹಾಗೂ ‘ಸಾತ್ತ್ವಿಕ-ಅಸಾತ್ತ್ವಿಕ ಆಚರಣೆ ಯಾವುದು ?’ ಎಂಬುದನ್ನು ಹೇಳಬೇಕು. ಅವರಿಗೆ ರಾಷ್ಟ್ರ ಮತ್ತು ಧರ್ಮದ ವಿಚಾರ ಮಾಡಲು ಕಲಿಸಬೇಕು. ಅವರಲ್ಲಿ ಸಮಾಜದಲ್ಲಿನ ಅನ್ಯಾಯ, ಅತ್ಯಾಚಾರಗಳನ್ನು ದೂರಗೊಳಿಸುವ ಸಂಸ್ಕಾರವನ್ನು ನೀಡಬೇಕು. ಈ ಎಲ್ಲ ಸುಸಂಸ್ಕಾರಗಳನ್ನು ಪಾಲಕರು ಮಕ್ಕಳ ಸಂಸ್ಕಾರದ ‘ಸ್ಲೇಟ್’ ಖಾಲಿ ಇದ್ದಾಗಲೇ ಮಾಡಬೇಕು; ಏಕೆಂದರೆ ಒಮ್ಮೆ ಈ ಕಲಿಯುಗದ ಮಾಯೆಯ ಸಂಸ್ಕಾರ ಅವರ ಮೇಲಾದರೆ ಅದನ್ನು ಅಳಿಸುವುದು ತುಂಬ ಕಠಿಣವಾಗುತ್ತದೆ.
ಆದ್ದರಿಂದ ಮಕ್ಕಳು ಸಣ್ಣವರಿರುವಾಗಲೇ ಅವರಿಗೆ ಯೋಗ್ಯ ಸಂಸ್ಕಾರ ನೀಡಿರಿ. ಪಾಲಕರು ಈ ರೀತಿ ಮಾಡದಿದ್ದರೆ ದೇವರು ನೀಡಿದ ಈ ಬಾಲಸಾಧಕರ ದೇಣಿಗೆಯು ವ್ಯರ್ಥವಾಗುತ್ತದೆ ಹಾಗೂ ಈ ಬಾಲಸಾಧಕರ ಮೇಲೆ ಅಸುರೀ ಶಕ್ತಿಗಳ ಆಕ್ರಮಣಗಳಾಗಿ ಅವರಿಗೆ ತೊಂದರೆಗಳಾಗಬಹುದು ಇದನ್ನು ತಪ್ಪಿಸಲು ಈ ದೈವೀ ಬಾಲಕರ ಪಾಲಕರೇ, ಈ ದೈವೀ ಬಾಲಕರಲ್ಲಿ ಆಧ್ಯಾತ್ಮಿಕ ಸಾಧನೆಯ ಸಂಸ್ಕಾರವನ್ನು ಮಾಡಿರಿ, ಅವರನ್ನು ಸದಾ ಸತ್‌ನಲ್ಲಿರಿಸಿ, ಅವರಿಗಾಗಿ ಪ್ರಯತ್ನಪೂರ್ವಕ ಸತ್‌ನ ವಾತಾವರಣ ನಿರ್ಮಿಸಿ ಮತ್ತು ಅವರನ್ನು ಹಿಂದೂ ರಾಷ್ಟ್ರಕ್ಕಾಗಿ ಆಧ್ಯಾತ್ಮಿಕ ದೃಷ್ಟಿಯಲ್ಲಿ ಸಕ್ಷಮಗೊಳಿಸಿ !