‘ಇಷ್ಟು ವರ್ಷಗಳವರೆಗೆ ಸಾಧನೆಯನ್ನು ಮಾಡಿಯೂ ಏಕೆ ಉನ್ನತಿಯಾಗುತ್ತಿಲ್ಲ ಎಂದು ಅನೇಕ ಸಾಧಕರಿಗೆ ಅನಿಸುತ್ತಿರುತ್ತದೆ. ಇಂತಹ ಸಾಧಕರು ಮುಂದೆ ತಿಳಿಸಿರುವಂತೆ ತಮ್ಮ ವಿಚಾರವನ್ನು ಬದಲಾಯಿಸಿಕೊಂಡು ಸಕಾರಾತ್ಮಕವಾಗಿರಬೇಕು.
೧. ‘ನಾವು ದೇವರ ಕೃಪೆಯಿಂದ ಸತ್‌ನಲ್ಲಿ, ಸತ್ಸೇವೆಯಲ್ಲಿ ಮತ್ತು ಸತ್ಸಂಗದಲ್ಲಿದ್ದೇವೆ.
೨. ಹೊರಗಿನ ಜಗತ್ತಿನ ಭೀಕರ ಪರಿಸ್ಥಿತಿಯು ಎಲ್ಲರಿಗೂ ತಿಳಿದಿದೆ, ಆದರೂ ಗುರುದೇವರು ನಮಗೆ ಎಷ್ಟು ಸುರಕ್ಷಿತವಾಗಿಟ್ಟಿದ್ದಾರೆ ಎಂಬುದರ ಬಗ್ಗೆ ಕೃತಜ್ಞರಾಗಿರಬೇಕು.
೩. ಹೇಗೆ ವ್ಯವಹಾರಿಕ ಜಗತ್ತಿನಲ್ಲಿ ಎಲ್ಲರೂ ಅಧಿಕಾರಿಗಳಾಗಲು ಅಥವಾ ಉನ್ನತ ಹುದ್ದೆಯಲ್ಲಿರಲು ಸಾಧ್ಯವಿಲ್ಲವೋ ಇಲ್ಲಿಯೂ ಅದೇರೀತಿಯಾಗಿದೆ. ಎಲ್ಲರೂ ಅಧಿಕಾರಿಗಳಾದರೆ, ಇತರ ಕೆಲಸಗಳನ್ನು ಮಾಡುವವರು ಯಾರು ? ಆದುದರಿಂದ ಒಂದೇ ಸಮಯಕ್ಕೆ ಎಲ್ಲರ ಉನ್ನತಿಯಾಗುವುದಿಲ್ಲ. ಇದು ಭಗವಂತನ ಆಯೋಜನೆಯಾಗಿದೆ.
೪. ಸ್ವತಃ ಶ್ರೀಕೃಷ್ಣನು ಅವತಾರಿಯಾಗಿದ್ದರೂ ಅವನು ಶ್ರೀಖಂಡ್ಯಾನಾದನು. ಅವನೇ ಎಂಜಲೆಲೆಯನ್ನು ಎತ್ತಿದನು. ಶ್ರೀಮದ್ಭಾಗವದ್ಗೀತೆಯನ್ನು ಹೇಳಿದನು. ಅರ್ಜುನನಿಗೆ ಉಪದೇಶ ಮಾಡಿದನು. ದುರ್ಜನರ ನಾಶ ಮಾಡಿದನು. ಈ ರೀತಿ ಅವನು ಎಲ್ಲ ವರ್ಣದ ಕೃತಿಯನ್ನು ಮಾಡಿ ಅವನ ‘ಶ್ರೀಕೃಷ್ಣತ್ವವನ್ನು ಇತರರಿಗೆ ತೋರಿಸಿದನು. ಸಾಧನೆಯ ವಿಷಯದಲ್ಲಿ ಕೂಡ ಹೀಗೆಯೇ ಇದೆ.
೫. ಮಹರ್ಲೋಕದ ಜೀವಗಳು ಪುನಃ ಇಲ್ಲಿಯೇ ಬರುತ್ತಿದ್ದಾರೆ. ಇತರ ಉಚ್ಚ ಲೋಕದ ಜೀವಗಳೂ ಪುನಃ ಇಲ್ಲಿಯೇ ಬರುತ್ತಿದ್ದಾರೆ. ಕೆಲವರಿಗೆ ಕಾರ್ಯಕ್ಕಾಗಿ ಪುನರ್ಜನ್ಮವನ್ನು ಕೂಡ ಪಡೆದುಕೊಳ್ಳಬೇಕಾಗುತ್ತದೆ.
೬. ನಾವು ನಮ್ಮ ದೃಷ್ಟಿಯನ್ನು ಬದಲಾಯಿಸಬೇಕು. ಈ ದೃಷ್ಟಿ ಬದಲಾಯಿಸುವ ಕೆಲಸವು ಸನಾತನ ಸಂಸ್ಥೆಯ ಮಾಧ್ಯಮದಿಂದ ನಡೆಯುತ್ತಿದೆ. ದೃಷ್ಟಿಯನ್ನು ಬದಲಾಯಿಸಿದರೆ ನಾವೆಲ್ಲರೂ ಭಗವಂತನ ಅಂಶವೇ ಆಗಿದ್ದೇವೆ. ನಾವೆಲ್ಲರೂ ಭಗವಂತರಾಗಿದ್ದೇವೆ, ಎನ್ನುವುದು ಎಲ್ಲರಿಗೂ ಅರಿವಾಗುವುದು. ನಾವು ಯಾವ ಸ್ಥಿತಿಯಲ್ಲಿದ್ದೇವೆಯೋ, ಆ ಸ್ಥಿತಿಯಲ್ಲಿ ಆನಂದದಲ್ಲಿದ್ದು, ಎಲ್ಲ ಭಾರವನ್ನೂ ಭಗವಂತನ ಮೇಲೆ ಹಾಕಿ ನಿಶ್ಚಿಂತ ತೆಯಿಂದ ಕೆಲಸ ಮಾಡಬೇಕು. ಇದಕ್ಕಾಗಿಯೇ ಭಗವಂತನು ಹೇಳುತ್ತಾನೆ,
ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್|
ಯತ್ತಪಸ್ಯಸಿ ಕೌನ್ತೇಯ ತತ್ಕುರುಷ್ವ ಮದಾರ್ಪಣಮ್ ||
(ಶ್ರೀಮದ್ಭಗವದ್ಗೀತೆ ಅಧ್ಯಾಯ ೯, ಶ್ಲೋಕ ೨೭)
ಅರ್ಥ: ಹೇ ಕೌಂತೇಯ(ಅರ್ಥಾತ್ ಕುಂತೀಪುತ್ರ ಅರ್ಜುನಾ) ನೀನು ಯಾವ ಕರ್ಮಗಳನ್ನು ಮಾಡುತ್ತೀಯೋ, ಏನು ತಿನ್ನುತ್ತೀಯೋ, ಯಾವ ಹವನವನ್ನು ಮಾಡುತ್ತೀಯೋ, ಯಾವ ದಾನವನ್ನು ಮಾಡುತ್ತೀಯೋ ಮತ್ತು ಯಾವ ತಪಸ್ಸನ್ನು ಮಾಡುತ್ತೀಯೋ ಅವೆಲ್ಲವೂ ನನಗೆ ಅರ್ಪಿಸು.
ಹೀಗೆ ಮಾಡಿದರೆ ಮನುಷ್ಯ ಚಿಂತೆಯಿಂದ ಮುಕ್ತನಾಗಿ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ ಮತ್ತು ಆನಂದದಲ್ಲಿ ಜೀವಿಸಬಹುದು, ಇಲ್ಲವಾದರೆ ಅವನು ತನ್ನ ದೋಷ ಮತ್ತು ಅಹಂಕಾರಗಳಿಂದ ಅದರಲ್ಲಿಯೇ ಸಿಲುಕಿಕೊಳ್ಳುತ್ತಾನೆ ಮತ್ತು ಜೀವನವನ್ನು ದುಃಖದಲ್ಲಿ ಕಳೆಯುತ್ತಾನೆ. – (ಪರಾತ್ಪರ ಗುರು) ಪರಶುರಾಮ ಪಾಂಡೆ, ಸನಾತನ ಆಶ್ರಮ, ದೇವದ, ಪನವೇಲ (೩.೬.೨೦೧೭)