ಒಂದು ಚಿಕ್ಕ ಕಿಡಿಯಿಂದ ಉದ್ಭವಿಸಿದ ಬೆಂಕಿಯು ಚಿಕ್ಕದಾಗಿಯೇ ಕೊನೆಗೊಳ್ಳುತ್ತದೆ ಎಂದೇನಿಲ್ಲ’ ಎಂಬ ಒಂದು ಆಂಗ್ಲ ನುಡಿಯಿದೆ. ಕೇವಲ ಈ ನುಡಿಯಿಂದ ಬೆಂಕಿಯ ದಾಹಕತೆ, ಸಂಹಾರಕತೆ ಅಥವಾ ಅದರ ಭೀಕರ ಪರಿಣಾಮದ ಗಾಂಭೀರ್ಯತೆ ಗಮನಕ್ಕೆ ಬರುವುದಿಲ್ಲ; ಬೆಂಕಿಯ ಪ್ರತ್ಯಕ್ಷ ಅನುಭವ ಪಡೆದವರಿಗೆ ಮಾತ್ರ ಅದರ ಕಲ್ಪನೆಯಿರುತ್ತದೆ. ‘ಬೆಂಕಿ’ಯು ದೈನಂದಿನ ಜೀವನದಲ್ಲಿನ ಒಂದು ಅತ್ಯಾವಶ್ಯಕ ಘಟಕವಾಗಿದ್ದರೂ ಅದರ ಬಗೆಗಿನ ನಿಯಂತ್ರಿತ ಮತ್ತು ಅನಿಯಂತ್ರಿತ ಬೆಂಕಿ ಇವುಗಳ ನಡುವಿನ ಲಕ್ಷ್ಮಣ ರೇಖೆಯು ಬಹಳ ಮಹತ್ವದ್ದಾಗಿದೆ. ಸಾಮಾನ್ಯವಾಗಿ ಮನುಷ್ಯನು ಉಪಯೋಗಿಸುವ ಎಲ್ಲ ಬೆಂಕಿಗಳೂ ನಿಯಂತ್ರಿತವಾಗಿರುತ್ತವೆ; ಆದರೆ ಯಾವುದಾದರೊಂದು ಪ್ರಸಂಗದಲ್ಲಿ ಬೆಂಕಿ ನಿಯಂತ್ರಣದ ಲಕ್ಷ್ಮ್ಮಣರೇಖೆಯನ್ನು ದಾಟಬಹುದು. ಹೀಗಾದರೆ ಅದಕ್ಕೇನು ಪರಿಹಾರೋಪಾಯಗಳನ್ನು ಮಾಡಬೇಕು ಎಂಬುದು ಆ ಬೆಂಕಿಯನ್ನು ಉಪಯೋಗಿಸುವವರಿಗೆ ಗೊತ್ತಿರುವುದು ಮಹತ್ವದ್ದಾಗಿರುತ್ತದೆ. ದೊಡ್ಡ ದೊಡ್ಡ ಕಾರ್ಖಾನೆ, ಸಾರಿಗೆ ಹಡಗು, ವಿಮಾನ ಇತ್ಯಾದಿಗಳಲ್ಲಿ ಅಗ್ನಿಶಮನದ ತರಬೇತಿಯನ್ನು ಕೊಡಲಾಗುತ್ತದೆ; ಆದರೆ ಖೇದವೆಂದರೆ ಸಾಮಾನ್ಯ ಮನುಷ್ಯ, ಹಾಗೆಯೇ ದಿನದಲ್ಲಿ ೫-೬ ಗಂಟೆ ಬೆಂಕಿಯ ಮೇಲೆ ಅಡುಗೆ ಮಾಡುವ ಗೃಹಿಣಿಯು ಬೆಂಕಿಯ ಶಾಸ್ತ್ರ ಮತ್ತು ಅಗ್ನಿಶಮನದ ಉಪಾಯಗಳ ಬಗ್ಗೆ ಸಂಪೂರ್ಣ ಅನಭಿಜ್ಞಳಾಗಿರುತ್ತಾಳೆ. ಈ ಅಜ್ಞಾನದಿಂದ ಅನೇಕ ಅಪಘಾತಗಳು ಘಟಿಸುತ್ತವೆ.
ಅಗ್ನಿಶಮನ ತರಬೇತಿಯ ಜ್ಞಾನವನ್ನು ಮೈಗೂಡಿಸಿಕೊಂಡು ಸಮಯ ಬಂದಾಗ ಅದನ್ನು ಸಮಾಜಕ್ಕಾಗಿ ಉಪಯೋಗಿಸಿ ಸಮಾಜಋಣವನ್ನು ತೀರಿಸಬಹುದು.
ವ್ಯಕ್ತಿ ಉಳಿದರೆ ಮಾತ್ರ ಸಾಧನೆಯನ್ನು ಮಾಡಬಲ್ಲನು. ಆ ದೃಷ್ಟಿಯಿಂದ ‘ಅಗ್ನಿಶಮನ ತರಬೇತಿ’ ತೆಗೆದುಕೊಂಡು ಸಮಾಜ ಬಾಂಧವರಿಗಾಗಿಅದನ್ನು ಬಳಸುವುದು ಕಾಲಾನುಸಾರ ಆವಶ್ಯಕ ಶ್ರೇಷ್ಠ ಸಾಧನೆಯೇ ಆಗಿದೆ. ಈ ಸಾಧನೆಯನ್ನು ಮಾಡಿ ಮತ್ತು ಹೆಚ್ಚೆಚ್ಚು ಈಶ್ವರನ ಕೃಪೆಯ ಲಾಭ ಪಡೆಯಿರಿ !