೧. ಯಾವ ರಾಸಾಯನಿಕ ಕ್ರಿಯೆಯಲ್ಲಿ ಇಂಧನವು (ಜ್ವಲನಶೀಲ ಪದಾರ್ಥ) ಆಮ್ಲಜನಕದೊಂದಿಗೆ ಸಂಯೋಗಗೊಂಡು ಇಂಧನದಲ್ಲಿ ಸ್ಥಿತಿರೂಪದಲ್ಲಿರುವ ಇಂಧನವು ಮುಕ್ತವಾಗುತ್ತದೆಯೋ, ಆ ಕ್ರಿಯೆಗೆ ‘ಬೆಂಕಿ’ ಎನ್ನುತ್ತಾರೆ.
೨. ಯಾವ ಇಂಧನದಲ್ಲಿರುವ ಆಮ್ಲಜನಕದೊಂದಿಗಿನ ಸಂಯೋಗದ ಪರಿವರ್ತನೆಯ ಪರಿಣಾಮವು ಉಷ್ಣತೆ ಮತ್ತು ಬೆಳಕಿನ ನಿರ್ಮಿತಿಯಲ್ಲಾಗುತ್ತದೆಯೋ, ಅದಕ್ಕೆ ‘ಬೆಂಕಿ’ ಎನ್ನುತ್ತಾರೆ.
ಬೆಂಕಿಯ ಘಟಕಗಳು
ಬೆಂಕಿ ನಿರ್ಮಾಣವಾಗಲು ಇಂಧನ, ಆಮ್ಲಜನಕ ಮತ್ತು ಉಷ್ಣತೆ ಈ ಮೂರು ಪ್ರಮುಖ ಘಟಕಗಳು ಒಟ್ಟಿಗೆ ಬರುವುದು ಆವಶ್ಯಕವಾಗಿರುತ್ತದೆ. ಈ ಮೂರೂ ಘಟಕಗಳು ಯೋಗ್ಯ ಪ್ರಮಾಣದಲ್ಲಿ ಒಟ್ಟಾಗಿ ಬಂದರೆ ಮಾತ್ರ ಬೆಂಕಿ ನಿರ್ಮಾಣವಾಗುತ್ತದೆ. ಇದನ್ನೇ ‘ಬೆಂಕಿಯ ತ್ರಿಕೋನ’ (ಫೈಯರ್ ಟ್ರಯಾಂಗಲ್) ಎನ್ನುತ್ತಾರೆ.
ಬೆಂಕಿ ತಗಲುವುದರ ಸಾಮಾನ್ಯ ಕಾರಣಗಳು
೧. ನೈಸರ್ಗಿಕ : ಬಿರುಗಾಳಿ, ಭೂಕಂಪ, ಜ್ವಾಲಾಮುಖಿ ಇತ್ಯಾದಿ.
೨. ಅನೈಸರ್ಗಿಕ : ಈ ಬೆಂಕಿಗಳಿಗೆ ಮನುಷ್ಯನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಜವಾಬ್ದಾರನಾಗಿರುತ್ತಾನೆ. ಅನೈಸರ್ಗಿಕ ಬೆಂಕಿಗಳಿಗೂ ಇತರ ಉಪ ಕಾರಣಗಳಿರುತ್ತವೆ, ಉದಾ. ಅಜ್ಞಾನ, ನಿಷ್ಕಾಳಜಿತನ, ಅಪಘಾತ, ಭಯೋತ್ಪಾದಕ ಕೃತಿಗಳು, ಯುದ್ಧ ಇತ್ಯಾದಿ. ವಿದ್ಯುತ್‌ನ ಶಾರ್ಟ್ ಸರ್ಕಿಟ್, ಇಸ್ತ್ರಿ ಪೆಟ್ಟಿಗೆ ಅಥವಾ ವಿದ್ಯುತ್ತಿನ ಇತರ ಉಪಕರಣಗಳು ಅತಿಯಾಗಿ ಬಿಸಿಯಾಗುವುದು, ಪಟಾಕಿಗಳಂತಹ ಸ್ಫೋಟಕಗಳನ್ನು ಮನೆಯಲ್ಲಿಡುವುದು ಅಥವಾ ಸಿಡಿಸುವುದು, ರಾಸಾಯನಿಕ/ಅಣುಕ್ರಿಯೆ, ಘರ್ಷಣೆ, ನಿಷ್ಕಾಳಜಿಯಿಂದ ಎಸೆದ ಉರಿಯುವ ಸಿಗರೇಟ್/ ಬೀಡಿಯ ತುಂಡು ಅಥವಾ ಉರಿಯುವ ಕಡ್ಡಿ, ವೆಲ್ಡಿಂಗ್ ಮಾಡುವಾಗ ಸಿಡಿದ ಕಿಡಿ, ಸ್ಥಾಯಿ (ಸ್ಟ್ಯಾಟಿಕ್) ವಿದ್ಯುತ್ ಈ ಕಾರಣಗಳು ಅನೈಸರ್ಗಿಕ ವಿಧದಲ್ಲಿ ಬರುತ್ತವೆ.