ನಮ್ಮ ಪೂರ್ವ ಪುಣ್ಯದಿಂದಲೇ ನಾವು ಭಾರತ ದೇಶದಲ್ಲಿದ್ದೇವೆ. ವಿದೇಶದಲ್ಲಿರುವ ಸಾಧಕರಿಗೆ ಔಷಧಿ ವೃಕ್ಷಗಳನ್ನು ಬೆಳೆಸಲು ಸಾಧ್ಯವಿಲ್ಲದಿದ್ದರೂ, ನಮಗೆ ದೈವಿ ಔಷಧಿ ವೃಕ್ಷಗಳನ್ನು ಬೆಳೆಸಲು ಸಹಜವಾಗಿ ಸಾಧ್ಯವಿದೆ.
೧. ಮುಂಬರುವ ಆಪತ್ಕಾಲದಲ್ಲಿ ನಮಗೆ ಔಷಧಿಗಳು ದೊರೆಯುವುದು ಅಸಾಧ್ಯವಾಗಬಹುದು. ಆಗ ನಮಗೆ ಈ ದೈವಿ ವೃಕ್ಷಗಳೇ ಆಧಾರವಾಗುವವು.
೨. ದೈವಿ ವನಸ್ಪತಿಗಳನ್ನು ‘ಸೊಪ್ಪು ಎಲೆ’ ಎಂದು ಹೀಯಾಳಿಸುವವರು ಮುಂದೆ ದೈವಿ ವನಸ್ಪತಿಗಳಿಗೇ ಶರಣಾಗಬೇಕಾಗುವುದು.
೩. ಯಾವುದಾದರೊಂದು ದೇವತೆಯ ಉಪಾಸನೆಯನ್ನು ಮಾಡುತ್ತಿದ್ದೇವೆ ಎಂಬ ಭಾವದಿಂದ ದೈವಿ ವೃಕ್ಷಗಳ ಉಪಾಸನೆ ಅಂದರೆ ಜೋಪಾಸನೆ ಮಾಡಿರಿ ! ನಿಮ್ಮಲ್ಲಿರುವ ಭಾವದಿಂದ ವೃಕ್ಷಗಳಲ್ಲಿನ ದೈವಿ ತತ್ತ್ವದ ಪ್ರಮಾಣ ಹೆಚ್ಚಾಗಲು ಸಹಾಯವಾಗುವುದು.
೪. ವೃಕ್ಷಗಳಿಗೆ ಬೆಳೆಯಲು ಸಮಯ ಬೇಕಾಗುತ್ತದೆ, ಇದನ್ನು ಗಮನದಲ್ಲಿಟ್ಟು ಕೊಂಡು ಸಾಧಕರು ಈಗಿನಿಂದಲೇ ಹೆಚ್ಚೆಚ್ಚು ಪ್ರಮಾಣದಲ್ಲಿ ವೃಕ್ಷಗಳನ್ನು ಬೆಳೆಸಬೇಕು, ಇದರಿಂದ ನಗರಗಳಲ್ಲಿರುವ ಮತ್ತು ವೃಕ್ಷಗಳನ್ನು ಬೆಳೆಯಲು ಜಾಗವಿಲ್ಲದಿರುವ ಸಾಧಕರಿಗೆ ಮುಂದೆ ಸಹಾಯ ಮಾಡಬಹುದು.
– (ಪರಾತ್ಪರ ಗುರು) ಡಾ. ಆಠವಲೆ