ಇಂತಹ ಅನಿಷ್ಟ ವಿಷಯಗಳನ್ನು ತಡೆಗಟ್ಟಿರಿ !
ನಗ್ನರಾಗಿ ಸ್ನಾನ ಮಾಡಬಾರದು
ನಗ್ನತೆಯು ದೇಹದಲ್ಲಿನ ರಂಧ್ರಗಳಿಂದ ಸೂಕ್ಷ್ಮ ರಜ-ತಮಾತ್ಮಕ ವಾಯುವನ್ನು ಹೊರಗೆ ಹಾಕುವುದಕ್ಕೆ ಪೂರಕವಾಗಿರುವ ಸ್ಥಿತಿಯಾಗಿರುತ್ತದೆ. ಈ ಸ್ಥಿತಿಯು ವಾತಾವರಣದಲ್ಲಿ ತನ್ನ ಒಂದು ರಜ – ತಮಾತ್ಮಕ ವಾಯುಭರಿತ ಮಂಡಲವನ್ನು ತಯಾರಿಸುತ್ತದೆ. ಯೋನಿ ಮಾರ್ಗದಿಂದ ಅಥವಾ ಗುದದ್ವಾರದ ಮಾರ್ಗದಿಂದಾಗುವ ನಿರುಪಯುಕ್ತ ವಾಯುವಿಗೆ ಬಾಹ್ಯ ವಾಯುಮಂಡಲದಲ್ಲಿನ ರಜ-ತಮಾತ್ಮಕ ಲಹರಿಗಳ ಸ್ಪರ್ಶವಾಗುವುದರಿಂದ ಈ ಮಾರ್ಗಗಳ ಕಡೆಗೆ ಪಾತಾಳದಿಂದ ಪ್ರಕ್ಷೇಪಿತವಾಗುವ ತೊಂದರೆದಾಯಕ ಸ್ಪಂದನಗಳು ಆಕರ್ಷಿತವಾಗಿ ಸಂಪೂರ್ಣ ದೇಹವು ರಜ-ತಮದಿಂದ ತುಂಬುತ್ತದೆ. ಇಂತಹ ಸ್ಥಿತಿಯಲ್ಲಿ ಸ್ನಾನ ಮಾಡಿದರೆ ಸ್ನಾನದಿಂದ ವಿಶೇಷ ಲಾಭವಾಗುವುದಿಲ್ಲ.
ಇದಕ್ಕೆ ವಿರುದ್ಧವಾಗಿ ಅಂತರ್ವಸ್ತ್ರದಿಂದ ಸೊಂಟದಲ್ಲಿ ನಿರ್ಮಾಣವಾಗುವ ಒತ್ತಡದಿಂದಾಗಿ ಮಣಿಪುರಚಕ್ರವು ಜಾಗೃತಸ್ಥಿತಿಯಲ್ಲಿ ಉಳಿದುಕೊಂಡು ನಿರುಪಯುಕ್ತ ವಾಯುವನ್ನು ಒಳಗಿಂದೊಳಗೆ ಟೊಳ್ಳಿನಲ್ಲಿಯೇ ವಿಘಟನೆ ಮಾಡುತ್ತದೆ. ಮಣಿಪುರಚಕ್ರವು ಜಾಗೃತ ಸ್ಥಿತಿಗೆ ಬರುವುದರಿಂದ ಸ್ನಾನದಿಂದ ಸಿಗುವ ಸಾತ್ತ್ವಿಕ ಲಹರಿಗಳನ್ನು ಗ್ರಹಿಸಿಕೊಳ್ಳಲು ದೇಹವು ಸಂವೇದನಾಶೀಲ ವಾಗುತ್ತದೆ. ಇದರಿಂದ ಜೀವಕ್ಕೆ ಲಾಭವು ದೊರಕಿ ಸ್ನಾನದ ಆಚಾರವು ಮಂಗಲಕರವಾಗುತ್ತದೆ.
– ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳ ಇವರು ಓರ್ವ ವಿದ್ವಾಂಸ ಈ ಅಂಕಿತನಾಮದಿಂದ ಬರೆಯುತ್ತಾರೆ, ೨೫.೧೨.೨೦೦೭, ರಾತ್ರಿ ೮)
ಸನ್‌ಬಾತ್ (ಸೂರ್ಯಪ್ರಕಾಶದಿಂದ ಸ್ನಾನ) ಬೇಡ, ಅದಕ್ಕಿಂತ ನಾಮಜಪವನ್ನು ಮಾಡುತ್ತಾ ಬಿಸಿಲಿನಲ್ಲಿ ಕುಳಿತುಕೊಳ್ಳಿರಿ !
ಶಾಸ್ತ್ರ
ಸನ್‌ಬಾತ್ (ಸೂರ್ಯ ಪ್ರಕಾಶದಿಂದ ಸ್ನಾನ) ಮಾಡುವುದರಿಂದ ಕೇವಲ ಶಾರೀರಿಕ ಸ್ತರದಲ್ಲಿ ಲಾಭವಾಗುತ್ತದೆ ಮತ್ತು ನಾಮಸ್ಮರಣೆಯನ್ನು ಮಾಡುತ್ತಾ ಸೂರ್ಯನ ಪ್ರಕಾಶದಲ್ಲಿ ಕುಳಿತು ಕೊಳ್ಳುವುದರಿಂದ ಸೂರ್ಯನಿಂದ ಪ್ರಕ್ಷೇಪಿತವಾಗುವ ಸಾತ್ತ್ವಿಕತೆ ಮತ್ತು ಚೈತನ್ಯವು ಹೆಚ್ಚು ಪ್ರಮಾಣದಲ್ಲಿ ಗ್ರಹಿಸಲ್ಪಟ್ಟು ಶಾರೀರಿಕ ಮತ್ತು ಆಧ್ಯಾತ್ಮಿಕ ಹೀಗೆ ಎರಡೂ ಸ್ತರಗಳಲ್ಲಿ ಲಾಭವಾಗುತ್ತದೆ : ಎಳೆ ಬಿಸಿಲು ಶರೀರಕ್ಕೆ ಪುಷ್ಟಿದಾಯಕ ಮತ್ತು ಲಾಭದಾಯಕವಾಗಿರುತ್ತದೆ. ಆದರೆ ಎಳೆಬಿಸಿಲಿನಲ್ಲಿ ವಿವಸ್ತ್ರರಾಗಿ ಸ್ನಾನ (ಸನ್ ಬಾತ್) ಮಾಡುವ ಜೀವದೆಡೆಗೆ ಕೆಟ್ಟ ಶಕ್ತಿಗಳ ಲಿಂಗದೇಹಗಳು ಆಕರ್ಷಿತವಾಗಿ ಅದಕ್ಕೆ ತೊಂದರೆ ಕೊಡುವ ಸಾಧ್ಯತೆ ಇರುತ್ತದೆ. ಸೂರ್ಯನಿಂದ ಪ್ರಕ್ಷೇಪಿತವಾಗುವ ಸಾತ್ತ್ವಿಕತೆ ಮತ್ತು ಚೈತನ್ಯವು ಸೂಕ್ಷ್ಮವಾಗಿರುವುದರಿಂದ ಅದನ್ನು ಕೇವಲ ಸೂರ್ಯಪ್ರಕಾಶದಲ್ಲಿ ಕುಳಿತುಕೊಂಡು ಗ್ರಹಿಸಿಕೊಳ್ಳಲು ಆಗುವುದಿಲ್ಲ. ಆದುದರಿಂದ ಸನ್‌ಬಾತ್ ಮಾಡಿದರೆ ಕೇವಲ ಶಾರೀರಿಕ ಲಾಭವಾಗುತ್ತದೆ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಏನೂ ಲಾಭವಾಗುವುದಿಲ್ಲ.
ಇದಕ್ಕೆ ವಿರುದ್ಧವಾಗಿ ನಾಮಸ್ಮರಣೆಯನ್ನು ಮಾಡುತ್ತಾ ಸೂರ್ಯ ಪ್ರಕಾಶದಲ್ಲಿ ಕುಳಿತುಕೊಳ್ಳುವುದರಿಂದ ಸೂರ್ಯನಿಂದ ಪ್ರಕ್ಷೇಪಿತವಾಗುವ ಸಾತ್ತ್ವಿಕತೆ ಮತ್ತು ಚೈತನ್ಯವು ಹೆಚ್ಚು ಪ್ರಮಾಣದಲ್ಲಿ ಗ್ರಹಿಸಲ್ಪಟ್ಟು ನಮಗೆ ಶಾರೀರಿಕ ಮತ್ತು ಆಧ್ಯಾತ್ಮಿಕ ಹೀಗೆ ಎರಡೂ ಸ್ತರಗಳಲ್ಲಿ ಲಾಭವಾಗುತ್ತದೆ.
– ಈಶ್ವರ (ಕು. ಮಧುರಾ ಭೋಸಲೆ ಇವರು ಈಶ್ವರ ಈ ಅಂಕಿತನಾಮದಿಂದ ಬರೆಯುತ್ತಾರೆ, ೨೮.೧೧.೨೦೦೭, ರಾತ್ರಿ ೧೧.೩೦)
ಸ್ನಾನಗೃಹ ಮತ್ತು ಶೌಚಾಲಯದಲ್ಲಿ ಹೆಚ್ಚು ಸಮಯ ಇರಬೇಡಿರಿ
ಶಾಸ್ತ್ರ
ಸ್ನಾನಗೃಹ ಮತ್ತು ಶೌಚಾಲಯ ಇವುಗಳ ವಾತಾವರಣವು ರಜ-ತಮ ಪ್ರಧಾನವಾಗಿರುವುದರಿಂದ ಅಲ್ಲಿ ಹೆಚ್ಚು ಹೊತ್ತು ಇರುವುದರಿಂದ ವ್ಯಕ್ತಿಯ ಸೂಕ್ಷ ದೇಹದಲ್ಲಿನ ರಜ-ತಮಗಳು ಹೆಚ್ಚಾಗಿ ಅವರಿಗೆ ತೊಂದರೆಯಾಗುವುದು : ಸ್ನಾನಗೃಹ ಎಂದರೆ ದೇಹಶುದ್ಧಿಯ ಒಂದು ಸ್ಥಳವೇ ಆಗಿದೆ. ಸ್ನಾನಗೃಹದಲ್ಲಿ ದೇಹದ ಶುದ್ಧಿಯಾಗಿ ದೇಹದ ಮೇಲಿನ ರಜ-ತಮ ಪ್ರಧಾನ ಕಲ್ಮಶವು ಸ್ನಾನದ ನೀರಿನಿಂದ ಹೊರಗೆ ಹೋಗುತ್ತದೆ. ಇದರಿಂದ ಸ್ನಾನಗೃಹದಲ್ಲಿನ ವಾತಾವರಣವು ರಜ-ತಮ ಪ್ರಧಾನವಾಗಿರುತ್ತದೆ. ಈ ಸ್ಥಳದಲ್ಲಿ ಹೆಚ್ಚು ಹೊತ್ತು ಉಳಿಯುವುದರಿಂದ ವ್ಯಕ್ತಿಯ ಸೂಕ್ಷ ದೇಹದಲ್ಲಿನ ರಜ-ತಮಗಳು ಹೆಚ್ಚಾಗಿ ಅವರಿಗೆ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ಈ ಅಂಶಗಳು ಶೌಚಾಲಯಕ್ಕೂ ಅನ್ವಯವಾಗುತ್ತವೆ. ಆದುದರಿಂದ ಸ್ನಾನಗೃಹ ಮತ್ತು ಶೌಚಾಲಯಗಳಲ್ಲಿ ಹೆಚ್ಚು ಹೊತ್ತು ಇರಬಾರದು.
– ಈಶ್ವರ (ಕು. ಮಧುರಾ ಭೋಸಲೆ ಇವರು ಈಶ್ವರ ಈ ಅಂಕಿತನಾಮದಿಂದ ಬರೆಯುತ್ತಾರೆ, ೨೮.೧೧.೨೦೦೭, ರಾತ್ರಿ ೧೧.೧೪)
(ಆಧಾರ : ಸನಾತನದ ಗ್ರಂಥ ಸ್ನಾನದಿಂದ ಮುಸ್ಸಂಜೆಯವರೆಗಿನ ಆಚಾರಗಳ ಹಿಂದಿನ ಶಾಸ್ತ್ರ)