ಅ. ಸ್ನಾನಕ್ಕಾಗಿ ತಾಮ್ರದ ಹಂಡೆಯಲ್ಲಿ ಸಂಗ್ರಹಿಸಿದ ನೀರನ್ನು ಒಲೆಯ ಮೇಲೆ ಬಿಸಿ ಮಾಡಬೇಕು ಮತ್ತು ಗಂಗಾಳ (ನೀರು ತುಂಬುವ ದುಂಡನೆಯ ತಾಮ್ರದ ಪಾತ್ರೆ)ದಲ್ಲಿ ತೆಗೆಯಬೇಕು.
ಅ ೧. ಶಾಸ್ತ್ರ : ಗಂಗಾಳದ ವಿಶಿಷ್ಟ ಆಕಾರದಿಂದಾಗಿ ಅದರಲ್ಲಿರುವ ಬಿಸಿ ನೀರಿನಿಂದ ನಿರ್ಮಾಣವಾಗುವ ಸೂಕ್ಷ್ಮ ವಾಯುತತ್ತ್ವದ ಉಷ್ಣ ಇಂಧನದಿಂದಾಗಿ ಗಂಗಾಳದಲ್ಲಿನ ನೀರು ಕೆಟ್ಟ ಶಕ್ತಿಗಳ ಹಲ್ಲೆಯಿಂದ ರಕ್ಷಿಸಲ್ಪಡುತ್ತದೆ : ಸ್ನಾನವನ್ನು ಮಾಡುವಾಗ ತಾಮ್ರದ ಹಂಡೆಯಲ್ಲಿ ಸಂಗ್ರಹಿಸಿದ ಶುದ್ಧ ಮತ್ತು ಸಾತ್ತ್ವಿಕ ನೀರನ್ನು ಒಲೆಯ ಮೇಲೆ ಬಿಸಿ ಮಾಡಿ ಗಂಗಾಳದಲ್ಲಿ ತೆಗೆಯಲಾಗುತ್ತದೆ. ಗಂಗಾಳದ ಆಕಾರವು ಮೇಲೆ ವಿಶಾಲ ಮತ್ತು ಕೆಳಗೆ ಕೋನದಂತೆ ಇರುವುದರಿಂದ ಮೇಲಿನ ಭಾಗದಲ್ಲಿ ಬಿಸಿ ನೀರಿನಲ್ಲಿರುವ ಸೂಕ್ಷ್ಮ ವಾಯುತತ್ತ್ವದ ಉಷ್ಣ ಇಂಧನವು ಸಾವಕಾಶವಾಗಿ ಕಾರ್ಯನಿರತ ಸ್ಥಿತಿಯಲ್ಲಿರಲು ಸಹಾಯವಾಗುತ್ತದೆ. ಆದರೆ ಅದೇ ಉಷ್ಣ ಇಂಧನವು ಗಂಗಾಳದ ಕೆಳಗಿನ ಕೋನಾಕಾರದಲ್ಲಿ ಘನೀಕೃತವಾಗುವುದರಿಂದ ಅದು ಪಾತಾಳಕ್ಕೆ ಸಂಬಂಧಿಸಿದ ಜಡತ್ವ ತೊಂದರೆದಾಯಕ ಇಂಧನದೊಂದಿಗೆ ಹೋರಾಡಬಲ್ಲದು. ಇದರಿಂದ ಗಂಗಾಳದಲ್ಲಿನ ನೀರು ಕೆಟ್ಟ ಶಕ್ತಿಗಳ ಹಲ್ಲೆಯಿಂದ ರಕ್ಷಿಸಲ್ಪಡುತ್ತದೆ.
– ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳ ಇವರು ಓರ್ವ ವಿದ್ವಾಂಸ ಈ ಅಂಕಿತ ನಾಮದಿಂದ ಬರೆಯುತ್ತಾರೆ, ೨೯.೧೦.೨೦೦೭, ಬೆಳಗ್ಗೆ ೯.೪೬)
ಆ. ಸ್ನಾನದ ನೀರಿನಲ್ಲಿ ಒಂದು ಚಮಚದಷ್ಟು ಕಲ್ಲುಪ್ಪನ್ನು ಹಾಕಬೇಕು
ಆ ೧. ಶಾಸ್ತ್ರ : ಉಪ್ಪಿನ ನೀರಿನಿಂದ ಸ್ನಾನವನ್ನು ಮಾಡುವುದರಿಂದ ಶರೀರದಲ್ಲಿರುವ ತ್ರಾಸದಾಯಕ ಶಕ್ತಿಯ ಸಂಗ್ರಹವು ಬಹಳಷ್ಟು ಪ್ರಮಾಣದಲ್ಲಿ ನಾಶವಾಗುತ್ತದೆ: ಉಪ್ಪಿನ ನೀರಿನಿಂದ ಸ್ನಾನ ಮಾಡುವುದರಿಂದ ಸಂಪೂರ್ಣ ಶರೀರದಲ್ಲಿರುವ ೧೦೬ ದೇಹವನ್ನು ಶುದ್ಧಮಾಡುವ ಚಕ್ರಗಳ ಮೇಲೆ ಬಂದಿರುವ ತ್ರಾಸದಾಯಕ ಶಕ್ತಿಯ ಸಂಗ್ರಹವು ನಾಶವಾಗಿ ದೇಹವನ್ನು ಶುದ್ಧ ಮಾಡುವ ಚಕ್ರಗಳು ಶೇ. ೨-೩ ರಷ್ಟು ಪ್ರಮಾಣದಲ್ಲಿ ಜಾಗೃತವಾಗಿ ತ್ರಾಸದಾಯಕ ಶಕ್ತಿಯು ಶರೀರದಿಂದ ಹೊರ ಬೀಳುತ್ತದೆ. ಹಾಗೆಯೇ ಉಪ್ಪಿನ ನೀರಿಗೆ ಆಪತತ್ತ್ವದಿಂದ ಶೇ. ೧೦೦ ರಷ್ಟು ಸಹಾಯವು ಸಿಗುವುದರಿಂದ ಶರೀರದಲ್ಲಿರುವ ತ್ರಾಸದಾಯಕ ಶಕ್ತಿಯ ಸಂಗ್ರಹವು ಬಹಳಷ್ಟು ಪ್ರಮಾಣದಲ್ಲಿ ನಾಶವಾಗುತ್ತದೆ.
– ಶ್ರೀ ಗುರುತತ್ತ್ವ (ಶ್ರೀ. ನಿಷಾದ ದೇಶಮುಖರ ಮಾಧ್ಯಮದಿಂದ, ೧೬.೪.೨೦೦೬, ರಾತ್ರಿ ೯.೩೩)
ಆ ೨. ಅನುಭೂತಿ – ಕುತ್ತಿಗೆಯ ಮೇಲಿನ ಬೊಕ್ಕೆಗಳು ತುರಿಸುತ್ತಿದ್ದಾಗ ಅವು ಯಾವುದೇ ಔಷಧೋಪಚಾರಗಳಿಂದ ಗುಣವಾಗದಿರುವುದು ಮತ್ತು ಉಪ್ಪಿನ ನೀರಿನಿಂದ ಸ್ನಾನ ಮಾಡಿದ ನಂತರ ಗುಣಮುಖವಾಗುವುದು : ನನ್ನ ಕುತ್ತಿಗೆಯ ಮೇಲೆ ಬೊಕ್ಕೆಗಳು ಬಂದು ಬಹಳ ತುರಿಕೆಯಾಗುತ್ತಿತ್ತು. ಔಷಧೋಪಚಾರಗಳನ್ನು ಮಾಡಿದರೂ ತುರಿಕೆಯು ಕಡಿಮೆಯಾಗಲೇ ಇಲ್ಲ. ಅನಂತರ ದೈನಿಕ ಸನಾತನ ಪ್ರಭಾತದಲ್ಲಿ ಬಂದಿದ್ದ ಕೆಟ್ಟ ಶಕ್ತಿಗಳಿಂದ ತೊಂದರೆಯಿರುವ ಸಾಧಕರು ಉಪ್ಪು ನೀರಿನಿಂದ ಸ್ನಾನ ಮಾಡಬೇಕು ಎಂಬ ಸೂಚನೆಯನ್ನು ಓದಿದೆ. ಅನಂತರ ೫-೬ ದಿನಗಳವರೆಗೆ ಈ ಪ್ರಯೋಗವನ್ನು ಮಾಡಿದ ನಂತರ ಕುತ್ತಿಗೆಯ ಮೇಲೆ ತುರಿಕೆಯಾಗುವುದು ಕಡಿಮೆ ಯಾಯಿತು. – ಶ್ರೀಮತಿ ನೀಲಿಮಾ ಅನಂತಬಾಣೆ, ರತ್ನಾಗಿರಿ ಜಿಲ್ಲೆ.
(ಆಧಾರ : ಸನಾತನದ ಗ್ರಂಥ ‘ಸ್ನಾನದಿಂದ ಮುಸ್ಸಂಜೆ ವರೆಗಿನ ಆಚಾರಗಳ ಹಿಂದಿನ ಶಾಸ್ತ್ರ’)