ಅರ್ಥ
ಅಭ್ಯಂಗಸ್ನಾನ ಎಂದರೆ ಬೆಳಗಿನ ಸಮಯದಲ್ಲಿ ಎದ್ದು, ತಲೆಗೆ ಮತ್ತು ಶರೀರಕ್ಕೆ ಎಣ್ಣೆಯನ್ನು ಹಚ್ಚಿಕೊಂಡು ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು. ಪಿಂಡದ ಉತ್ಕರ್ಷಕ್ಕಾಗಿ ಮಾಡಿದ ಸ್ನಾನ ವೆಂದರೆ ಅಭ್ಯಂಗಸ್ನಾನ.
ಅಭ್ಯಂಗಸ್ನಾನಕ್ಕಾಗಿ ಎಣ್ಣೆಯನ್ನು ಹಚ್ಚಿಕೊಳ್ಳುವುದರ ಮಹತ್ವ
ಅಭ್ಯಂಗದಿಂದ, ಅಂದರೆ ಸ್ನಾನಕ್ಕಿಂತ ಮೊದಲು ದೇಹಕ್ಕೆ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ಪಿಂಡದಲ್ಲಿನ ಚೇತನದ ಪ್ರವಾಹಕ್ಕೆ ಅಭಂಗತ್ವ, ಅಂದರೆ ಅಖಂಡತೆಯು ಪ್ರಾಪ್ತವಾಗುತ್ತದೆ. ಸ್ನಾನಕ್ಕಿಂತ ಮೊದಲು ದೇಹಕ್ಕೆ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ಅಣುರೇಣು, ಸ್ನಾಯು ಮತ್ತು ದೇಹದಲ್ಲಿರುವ ಟೊಳ್ಳುಗಳು ಜಾಗೃತವಾಗಿ ಪಂಚಪ್ರಾಣಗಳನ್ನು ಕಾರ್ಯನಿರತ ಗೊಳಿಸುತ್ತವೆ. ಜಾಗೃತಗೊಂಡ ಪಂಚಪ್ರಾಣಗಳಿಂದಾಗಿ ದೇಹದಲ್ಲಿರುವ ನಿರುಪಯುಕ್ತ ವಾಯುವು ತೇಗು, ಆಕಳಿಕೆ ಮುಂತಾದವುಗಳ ಮೂಲಕ ಹೊರಬೀಳುತ್ತದೆ. ಇದರಿಂದ ದೇಹದಲ್ಲಿರುವ ಅಣುರೇಣು, ಸ್ನಾಯು ಮತ್ತು ಆಂತರಿಕ ಟೊಳ್ಳುಗಳು ಚೈತನ್ಯವನ್ನು ಗ್ರಹಿಸಲು ಸಂವೇದನಾಶೀಲವಾಗುತ್ತವೆ. ಈ ನಿರುಪಯುಕ್ತ ವಾಯು ಅಥವಾ ದೇಹದಲ್ಲಿ ಘನೀಕೃತವಾಗಿರುವ ಉಷ್ಣ ನಿರುಪಯುಕ್ತ ಶಕ್ತಿಯು ಕೆಲವೊಮ್ಮೆ ಲಹರಿಗಳ ರೂಪದಲ್ಲಿ ತಲೆ, ಮೂಗು, ಕಿವಿ ಮತ್ತು ಚರ್ಮದ ರಂಧ್ರಗಳಿಂದ ಹೊರಬೀಳುತ್ತದೆ. ಆದುದರಿಂದ ದೇಹಕ್ಕೆ ಎಣ್ಣೆಯನ್ನು ಹಚ್ಚಿದ ನಂತರ ಕೆಲವೊಮ್ಮೆ ಮುಖ ಮತ್ತು ಕಣ್ಣುಗಳು ಕೆಂಪಾಗುತ್ತವೆ.
– ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳ ಇವರು ಓರ್ವ ವಿದ್ವಾಂಸ ಈ ಅಂಕಿತ ನಾಮದಿಂದ ಬರೆಯುತ್ತಾರೆ, ೧೨.೯.೨೦೦೭, ಮಧ್ಯಾಹ್ನ ೨.೦೮)
ಅನುಭೂತಿ
ಸ್ನಾನಕ್ಕಿಂತ ಮೊದಲು ಶರೀರಕ್ಕೆ ಎಣ್ಣೆಯನ್ನು ಹಚ್ಚಿಕೊಂಡಿದ್ದರಿಂದ ಆಯಾಸ ವಾಗುವುದು ಮತ್ತು ಸ್ನಾನದ ನಂತರ ಉತ್ಸಾಹದ ಅರಿವಾಗುವುದು ಮತ್ತು ಭಾರತೀಯ ಆಚಾರ ಧರ್ಮಗಳ ಶ್ರೇಷ್ಠತೆಯು ಗಮನಕ್ಕೆ ಬರುವುದು : ೧೧.೯.೨೦೦೭ ರಂದು ಬೆಳಗ್ಗೆ ನನ್ನ ಮನಸ್ಸಿನಲ್ಲಿ ಇಂದು ಶರೀರಕ್ಕೆ ಎಣ್ಣೆಯನ್ನು ಹಚ್ಚಬೇಕು, ಬಳಿಕ ಸ್ನಾನ ಮಾಡಬೇಕು ಎಂಬ ವಿಚಾರವು ಬಂದಿತು. ಅದೇ ರೀತಿ ನಾನು ತಲೆಗೆ ಮತ್ತು ಕೈಕಾಲುಗಳಿಗೆ ಎಣ್ಣೆಯನ್ನು ಹಚ್ಚಿಕೊಂಡ ಮೊದಲ ಐದು ನಿಮಿಷಗಳಲ್ಲಿ ನನಗೆ ಶಕ್ತಿಯೆಲ್ಲ ಸೋರಿಹೋದಂತಾಯಿತು. ಅನಂತರ ಶರೀರಕ್ಕೆ ಎಣ್ಣೆಯನ್ನು ಹಚ್ಚಿದ ನಂತರ ಇನ್ನೂ ಹೆಚ್ಚು ಆಯಾಸವಾಯಿತು. ಅನಂತರ ಉಗುರುಬೆಚ್ಚಗಿನ ನೀರಿನಿಂದ ಸ್ನಾನ ಮಾಡಿದೆ. ಆಮೇಲೆ ನನ್ನ ಉತ್ಸಾಹ ಹೆಚ್ಚಾಗತೊಡಗಿತು. ಸ್ನಾನಕ್ಕಿಂತ ಮೊದಲು ಶರೀರಕ್ಕೆ ಎಣ್ಣೆಯನ್ನು ಹಚ್ಚಿದುದರಿಂದ ಶರೀರದಲ್ಲಿದ್ದ ತ್ರಾಸದಾಯಕ ಶಕ್ತಿಯು ಕಡಿಮೆಯಾಗಿ ಆಯಾಸವಾಗಿತ್ತು ಎಂದು ನನ್ನ ಗಮನಕ್ಕೆ ಬಂದಿತು. ಈ ಅನುಭವದಿಂದ ಭಾರತೀಯ ಸಂಸ್ಕೃತಿಯಲ್ಲಿ ಹೇಳಲಾಗಿರುವ ಆಚಾರಧರ್ಮದಲ್ಲಿ ಅಭ್ಯಂಗಸ್ನಾನವನ್ನು ಏಕೆ ಹೇಳಲಾಗಿದೆ ಎನ್ನುವುದರ ಕಾರಣಗಳು ತಿಳಿದವು ಮತ್ತು ಆಚಾರಧರ್ಮದ ಶ್ರೇಷ್ಠತೆಯು ಗಮನಕ್ಕೆ ಬಂದಿತು.
– ನ್ಯಾಯವಾದಿ ಯೋಗೇಶ ಜಲತಾರೆ, ಸನಾತನ ಆಮ, ರಾಮನಾಥಿ, ಗೋವಾ.
ಅಭ್ಯಂಗಸ್ನಾನವನ್ನು ಮಾಡುವುದರಿಂದಾಗುವ ಲಾಭಗಳು
೧. ಚರ್ಮದ ಮೇಲೆ ಎಣ್ಣೆಯನ್ನು ಹಚ್ಚಿ ತಿಕ್ಕುವುದರಿಂದ ಜೀವದ ಸೂರ್ಯನಾಡಿಯು ಜಾಗೃತವಾಗಿ ಪಿಂಡದಲ್ಲಿನ ಚೇತನವನ್ನು (ಚೈತನ್ಯವನ್ನು) ತೇಜಮಯಗೊಳಿಸುತ್ತದೆ. ಈ ತೇಜಮಯ ಚೇತನವು ದೇಹದಲ್ಲಿನ ರಜ-ತಮಾತ್ಮಕ ಲಹರಿಗಳ ವಿಘಟನೆ ಮಾಡುತ್ತದೆ. ಇದು ಒಂದು ರೀತಿಯಲ್ಲಿ ಶುದ್ಧೀಕರಣ ಪ್ರಕ್ರಿಯೆಯೇ ಆಗಿದೆ. ಚೈತನ್ಯದ ಸ್ತರದಲ್ಲಿ ನಡೆದ ಶುದ್ಧೀಕರಣದಿಂದಾಗಿ ಪಿಂಡದಲ್ಲಿನ ಚೇತನದ ಪ್ರವಾಹಕ್ಕೆ ಅಖಂಡತೆಯು ಪ್ರಾಪ್ತವಾಗುವುದರಿಂದ ಜೀವದ ಪ್ರತಿಯೊಂದು ಕರ್ಮವು ಸಾಧನೆಯಾಗುತ್ತದೆ.
೨. ಈ ಕರ್ಮದಿಂದ ಜೀವದ ದೇಹದಲ್ಲಿ ಸತ್ತ್ವಗುಣದ ಸಂವರ್ಧನೆಯಾಗುವುದರಿಂದ ಜೀವದ ಅಭ್ಯುದಯವಾಗುತ್ತದೆ. ಅಭ್ಯುದಯ ಎಂದರೆ ಉತ್ಕರ್ಷ. ಜೀವದ ಸತ್ತ್ವಗುಣ ಸಂವರ್ಧನೆಯ ಕಡೆಗೆ ಆಗುತ್ತಿರುವ ನಿತ್ಯದ ಪ್ರವಾಸವೆಂದರೆ ಅದರ ಅಭ್ಯುದಯವೇ ಆಗಿದೆ. ಆದುದರಿಂದ ಅಭ್ಯಂಗಸ್ನಾನಕ್ಕೆ ಬಹಳ ಮಹತ್ವವಿದೆ.
೩. ಅಭ್ಯಂಗಸ್ನಾನದಿಂದ ನಿರ್ಮಾಣವಾದ ಚೈತನ್ಯದಿಂದ ಪ್ರತಿಯೊಂದು ಕೃತಿಯು ಜೀವದಿಂದ ಸಾಧನೆಯೆಂದು ಆಗುವುದರಿಂದ ಈ ಕೃತಿಯಿಂದ ವಾಯುಮಂಡಲದ ಶುದ್ಧಿಯಾಗುತ್ತದೆ.
– ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳ ಇವರು ಓರ್ವ ವಿದ್ವಾಂಸ ಈ ಅಂಕಿತ ನಾಮದಿಂದ ಬರೆಯುತ್ತಾರೆ, ೧೨.೯.೨೦೦೭ ಮಧ್ಯಾಹ್ನ ೨.೦೮)
ನೈಮಿತ್ತಿಕ ಸಚೈಲ (ಮೈಮೇಲಿನ ಬಟ್ಟೆಯೊಂದಿಗೆ) ಸ್ನಾನ
ಅಜೀರ್ಣ, ವಾಂತಿ, ಶ್ಮಶ್ರೂಕರ್ಮ (ತಲೆಕೂದಲು ತೆಗೆಯುವುದು) ಮೈಥುನ ಸೇವನ, ಶವಸ್ಪರ್ಶ, ರಜಸ್ವಲಾಸ್ಪರ್ಶ, ದುಃಸ್ವಪ್ನ, ದುರ್ಜನ, ಶ್ವಾನ, ಚಾಂಡಾಲ ಮತ್ತು ಶವವಾಹಕ ಇವರನ್ನು ಸ್ಪರ್ಶಿಸಿದ ನಂತರ ಸಚೈಲಸ್ನಾನ ಮಾಡಬೇಕು. ನೀರಿನಲ್ಲಿ ಮುಳುಗಿ ಏಳಬೇಕು.
ಪುಣ್ಯಪ್ರದ ಮತ್ತು ಪಾಪಕ್ಷಯ ಸ್ನಾನ
ಅ. ಗುರುವಾರ ಅಶ್ವತ್ಥವೃಕ್ಷದಡಿಯಲ್ಲಿ ಮತ್ತು ಅಮಾವಾಸ್ಯೆಯಂದು ಜಲಾಶಯದಲ್ಲಿ (ನದಿಯಲ್ಲಿ) ಸ್ನಾನ ಮಾಡಿದರೆ ಪ್ರಯಾಗ ಸ್ನಾನದ ಪುಣ್ಯವು ಸಿಗುತ್ತದೆ ಮತ್ತು ಸಮಸ್ತ ಪಾತಕಗಳ ನಾಶವಾಗುತ್ತದೆ.
ಆ. ಪುಷ್ಯ ನಕ್ಷತ್ರ, ಜನ್ಮ ನಕ್ಷತ್ರ ಮತ್ತು ವೈಧೃತಿ ಯೋಗ ಇವುಗಳ ಸಮಯದ ನದಿಯ ಸ್ನಾನ ಮಾಡಿದರೆ ಎಲ್ಲ ಪಾಪಗಳ ಕ್ಷಯವಾಗುತ್ತದೆ.
(ಆಧಾರ : ಸನಾತನದ ಗ್ರಂಥ ‘ಸ್ನಾನದಿಂದ ಮುಸಂಜೆಯವರೆಗಿನ ಆಚಾರಗಳ ಹಿಂದಿನ ಶಾಸ್ತ್ರ)
ಕಾಮ್ಯಸ್ನಾನ
‘ಧನಪ್ರಾಪ್ತಿ, ರೋಗಗಳ ಪರಿಹಾರ ಮುಂತಾದ ಕಾಮ್ಯಕರ್ಮಗಳಿಗಾಗಿ, ಅಂದರೆ ಕೆಲವು ಅಪೇಕ್ಷೆಗಳನ್ನಿಟ್ಟುಕೊಂಡು ಮಾಡಿದ ಧರ್ಮಕಾರ್ಯದಲ್ಲಿನ ಸ್ನಾನಗಳಿಗೆ ಕಾಮ್ಯಸ್ನಾನವೆನ್ನುತ್ತಾರೆ. – ಗುರುದೇವ ಡಾ. ಕಾಟೇಸ್ವಾಮೀಜಿ
Useful information 🙏🙏