ಅನೇಕ ಸಾಧಕರಿಗೆ ನಾಮಜಪ ಮಾಡುವಾಗ ಅಥವಾ ಇತರ ಸಮಯದಲ್ಲಿ ‘ನನ್ನ ಮೃತ್ಯುವಾಗುತ್ತದೆ’, ಈ ರೀತಿಯ ದೃಶ್ಯ ಕಾಣಿಸುತ್ತದೆ ಅಥವಾ ಮನಸ್ಸಿನಲ್ಲಿ ಆ ರೀತಿಯ ವಿಚಾರ ಬರುತ್ತದೆ. ಕೆಲವರಿಗೆ ‘ನನ್ನ ಮೃತ್ಯುವಿನ ಮೊದಲು ಅಪೇಕ್ಷಿತ ರೀತಿಯಲ್ಲಿ ಸಾಧನೆಯಲ್ಲಿ ನನ್ನ ಪ್ರಗತಿ ಆಗದಿದ್ದರೆ ನನ್ನ ಜನ್ಮ ವ್ಯರ್ಥವಾಗಬಹುದು’, ಎಂದೆನಿಸುತ್ತದೆ ಮತ್ತು ಈ ವಿಚಾರದಿಂದ ಅಸ್ವಸ್ಥರಾಗುತ್ತಾರೆ.
‘ಈ ರೀತಿಯ ದೃಶ್ಯ ಕಾಣಿಸುವುದು ಅಥವಾ ಮನಸ್ಸಿನಲ್ಲಿ ವಿಚಾರ ಬರುವುದು’, ಇದು ಆಧ್ಯಾತ್ಮಿಕ ತೊಂದರೆಯ ಲಕ್ಷಣವಾಗಿದೆ. ಈ ವಿಚಾರದ ತೀವ್ರತೆ ಹೆಚ್ಚಾಗಿದ್ದರೆ, ದಿನದಲ್ಲಿ ಹೆಚ್ಚು ಸಮಯ ಮುಂದೆ ನೀಡಿದ ಸ್ವಯಂಸೂಚನೆಯನ್ನು ಕೊಡಿ,
ಯಾವಾಗ ನನಗೆ ನನ್ನ ಮೃತ್ಯುವಿನ ಬಗ್ಗೆ ದೃಶ್ಯ ಕಾಣಿಸುವುದೋ ಅಥವಾ ನನ್ನ ಮನಸ್ಸಿನಲ್ಲಿ ಇದರ ಬಗ್ಗೆ ವಿಚಾರ ಬರುವುದೋ ಅಥವಾ ‘ನನ್ನಿಂದ ಅಪೇಕ್ಷಿತ ರೀತಿಯಲ್ಲಿ ಸಾಧನೆಯಾಗದೇ ಈ ಜನ್ಮ ವ್ಯರ್ಥವಾಗುವುದು, ಎಂದೆನಿಸುವುದೋ, ಆಗ ಇವೆಲ್ಲವು ಆಧ್ಯಾತ್ಮಿಕ ತೊಂದರೆಯ ಲಕ್ಷಣವಾಗಿದೆ ಎಂದು ನನಗೆ ಅರಿವಾಗುವುದು; ಅದಕ್ಕಾಗಿ ನಾನು ಅಧ್ಯಾತ್ಮಿಕ ಉಪಾಯದ ಕಡೆ ಹೆಚ್ಚು ಒತ್ತು ಕೊಡುವೆನು ಅಥವಾ ಇದರ ಬಗ್ಗೆ ಕೂಡಲೇ ಜವಾಬ್ದಾರ ಸಾಧಕರಲ್ಲಿ ಮಾತನಾಡುವೆನು.
ಈ ಸೂಚನೆಯೊಂದಿಗೆ ಸಾಧಕರು ಆಧ್ಯಾತ್ಮಿಕ ಉಪಾಯವನ್ನೂ ಹೆಚ್ಚಿಸಿರಿ, ಇಷ್ಟು ಮಾಡಿಯೂ ವಿಚಾರ ಕಡಿಮೆ ಆಗದೇ ಇದ್ದರೆ, ಆಗ ಜವಾಬ್ದಾರ ಸಾಧಕರಿಗೆ ವಿಚಾರಿಸಿರಿ. ಮೃತ್ಯುವಿನ ವಿಚಾರ ಅಥವಾ ದೃಶ್ಯದಲ್ಲಿ ಸಿಲುಕದೇ ಸಾಧನೆಯಲ್ಲಿನ ಪ್ರಯತ್ನವನ್ನು ಮುಂದುವರಿಸಿರಿ. ಈ ವಿಚಾರಗಳು ಕಡಿಮೆಯಾದ ನಂತರ ಪ್ರಕ್ರಿಯೆಗಾಗಿ ಆರಿಸಿದ ಸ್ವಭಾವದೋಷ ಅಥವಾ ಅಹಂವ ಲಕ್ಷಣದ ಮೇಲೆ ಸ್ವಯಂಸೂಚನೆಯನ್ನು ಆರಂಭಿಸಿರಿ.
ಸಾಧಕರೇ, ‘ನಮಗೆ ಕೇವಲ ಈ ಜನ್ಮದಲ್ಲಿ ಮಾತ್ರವಲ್ಲ ಜನ್ಮ-ಜನ್ಮಾಂತರದ ಹಾಗೂ ಮೃತ್ಯುವಿನ ನಂತರವೂ ಸಾಧಕರ ಅಧ್ಯಾತ್ಮಿಕ ಉನ್ನತಿಯನ್ನು ಮಾಡಿಸಿಕೊಳ್ಳುವ ಮಹಾನ್ ಗುರುಗಳು ಲಭಿಸಿದ್ದಾರೆ’, ಇದನ್ನು ಗಮನದಲ್ಲಿಟ್ಟು ಗುರುಗಳ ಬಗ್ಗೆ ಅಪಾರ ಶ್ರದ್ಧೆಯನ್ನಿಟ್ಟು ಸಾಧನೆಯ ಪ್ರಯತ್ನವನ್ನು ಮಾಡಿರಿ !
– (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ.(೧೭.೧೧.೨೦೧೭)