ಸಾಧಕರೇ, ಸ್ವಯಂಸೂಚನೆ ಸತ್ರ ಮಾಡುವಾಗ ಮನಸ್ಸಿನಲ್ಲಿ ಅನಾವಶ್ಯಕ ವಿಚಾರ ಬರುತ್ತಿದ್ದರೆ ದೊಡ್ಡ ಸ್ವರದಲ್ಲಿ (ಗುಣುಗುಟ್ಟುವಂತೆ) ಸತ್ರ ಮಾಡಿ ಶೀಘ್ರವಾಗಿ ಆಂತರಿಕ ಶುದ್ಧ ಮಾಡಿಕೊಳ್ಳಿ !
ಸ್ವಯಂಸೂಚನೆಯ ಸತ್ರ ಮಾಡುತ್ತಿರುವಾಗ ಮನಸ್ಸಿನಲ್ಲಿ ನಿರರ್ಥಕ ವಿಚಾರದಿಂದ ಸತ್ರ ಏಕಾಗ್ರತೆಯಿಂದ ಆಗುತ್ತಿಲ್ಲ, ಎಂದು ಅನೇಕ ಸಾಧಕರು ಹೇಳುತ್ತಾರೆ. ಅದರಿಂದ ಸೂಚನೆಯು ಅಂತರ್ಮನಸ್ಸಿನಲ್ಲಿ ಸಂಸ್ಕಾರವಾಗದಿರುವುದರಿಂದ ಸ್ವಭಾವದೋಷ ಮತ್ತು ಅಹಂನ ತೀವ್ರತೆ ಕಡಿಮೆಯಾಗುವುದಿಲ್ಲ ಹಾಗೂ ಸಾಧನೆಯ ಅಮೂಲ್ಯ ಸಮಯ ವ್ಯರ್ಥವಾಗುತ್ತಿದೆ. ಇದನ್ನು ತಪ್ಪಿಸಲು ಮನಸ್ಸಿನಲ್ಲಿ ಅನಾವಶ್ಯಕ ವಿಚಾರ ಬರುತ್ತಿದ್ದರೆ ಸ್ವಯಂಸೂಚನೆ ಸತ್ರವನ್ನು ಸ್ವಲ್ಪ ದೊಡ್ಡ ಸ್ವರದಲ್ಲಿ (ಗುಣುಗುಟ್ಟುವಂತೆ) ಮಾಡಬಹುದು. ಇದರಿಂದ ವಿಚಾರದೆಡೆಗೆ ಗಮನ ಹೋಗದೆ ವಿಚಾರಗಳು ತನ್ನಿಂದ ತಾನೇ ಕಡಿಮೆಯಾಗುತ್ತದೆ ಮತ್ತು ಸ್ವಯಂಸೂಚನೆ ಸತ್ರ ಪರಿಣಾಮಕಾರಿಯಾಗುತ್ತದೆ. ದೊಡ್ಡ ಸ್ವರದಲ್ಲಿ ಸತ್ರ ಮಾಡುತ್ತಿರುವಾಗ ಇತರರಿಗೆ ಅಡಚಣೆಯಾಗದಂತೆ ಕಾಳಜಿವಹಿಸಿ.
– (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೧.೧೧.೨೦೨೭)