ಕೆಲವು ಸಾಧಕರು ‘ನಾನು ಸಾಧನೆ ಮಾಡಬೇಕೇ ಅಥವಾ ಬೇಡವೇ ?’, ಎಂಬ ವಿಷಯದ ಬಗ್ಗೆ ಗೊಂದಲದಲ್ಲಿರುತ್ತಾರೆ. ತುಂಬಾ ಸಾಧಕರಿಗೆ ವ್ಯಷ್ಟಿ ಸಾಧನೆಯ ಮಹತ್ವ ತಿಳಿದಿದ್ದರೂ ಪ್ರತಿದಿನ ಅಪೇಕ್ಷಿತ ರೀತಿಯಲ್ಲಿ ಪ್ರಯತ್ನ ಮಾಡುವುದಿಲ್ಲ. ಸಾಧಕರ ಮನಸ್ಸಿನಲ್ಲಿ ಸಾಧನೆಯ ಮಹತ್ವವು ಬಿಂಬಿತವಾಗದ್ದರಿಂದ ಈ ರೀತಿಯ ಪರಿಸ್ಥಿತಿ ಉಂಟಾಗುತ್ತದೆ.
ಮನಸ್ಸಿನ ಮೇಲೆ ಸಾಧನೆಯ ಮಹತ್ವವು ಬಿಂಬಿತವಾಗಲು ಸಾಧಕರು ಪ್ರತಿದಿನ ಮುಂದಿನಂತೆ ಸ್ವಯಂಸೂಚನೆ ನೀಡಬೇಕು !
ಗುರುಕೃಪೆಯಿಂದ ದೊರಕಿದ ಈ ಮನುಷ್ಯಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕು. ನನ್ನ ಅನುಭವದಲ್ಲಿ ಇಂದಿನವರೆಗೆ ಏನೆಲ್ಲ ಮಾಡಿರುವೆನೋ, ಅವೆಲ್ಲವುಗಳಿಗಿಂತ ಸಾಧನೆ/ ಸತ್ಸೇವೆಯಿಂದ ನನಗೆ ಹೆಚ್ಚು ಸಮಾಧಾನ ದೊರೆತಿದೆ. ನನಗೆ ಈಗ ಹೆಜ್ಜೆ-ಹೆಜ್ಜೆಗೂ ಶ್ರೀ ಗುರುದೇವರ/ಭಗಂತನ/ಶ್ರೀಕೃಷ್ಣನ ಸಹಾಯ ಸಿಗುತ್ತಿದೆ. ಸಾಧನೆಯಲ್ಲಿ ಮುಂದೆಮುಂದೆ ಪ್ರಗತಿಯಾಗಲು ಸಾಕ್ಷಾತ್ ಭಗವಂತನೇ ನನಗೆ ಶಕ್ತಿ ನೀಡುತ್ತಿದ್ದಾನೆ. ಸಾಧನೆಯಲ್ಲಿ ಬರುವ ಎಲ್ಲ ತೊಂದರೆಗಳೂ ದೂರವಾಗಲು ‘ನಾನು ಯಾವ ರೀತಿಯಲ್ಲಿ ಪ್ರಯತ್ನಿಸಲಿ ?’, ಎಂಬ ವಿಷಯದ ಬಗ್ಗೆ ಜವಾಬ್ದಾರ ಸಾಧಕರ ಮಾರ್ಗದರ್ಶನ ಪಡೆದುಕೊಂಡು ತಳಮಳದಿಂದ ಸಾಧನೆ ಮಾಡುವೆನು.
ಪ್ರತಿದಿನ ಸ್ವಯಂಸೂಚನೆಯನ್ನು ಎಷ್ಟು ಬಾರಿ ನೀಡುವುದು ?
ಮನಸ್ಸಿನಲ್ಲಿ ಅನಾವಶ್ಯಕ ವಿಚಾರಗಳ ತೀವ್ರತೆ ಹೆಚ್ಚಿದ್ದರೆ ಅಥವಾ ಮನಸ್ಸಿನಲ್ಲಿ ಗೊಂದಲವಿದ್ದರೆ ೮ ರಿಂದ ೧೫ ದಿನಗಳವರೆಗೆ ಸ್ವಯಂಸೂಚನೆಯನ್ನು ನೀಡಬೇಕು ಮತ್ತು ಪ್ರತಿದಿನ ೧೦ ಬಾರಿ ಸೂಚನಾಸತ್ರ ಮಾಡಬೇಕು. (ಆ ಸಮಯದಲ್ಲಿ ಬೇರೆ ಸ್ವಭಾವದೋಷ ಹಾಗೂ ಅಹಂನ ಬಗ್ಗೆ ಸೂಚನಾಸತ್ರ ಮಾಡುವ ಅವಶ್ಯಕತೆಯಿಲ್ಲ.) ಅನಂತರ ವಿಚಾರ ಕಡಿಮೆಯಾದ ನಂತರ ಪ್ರತಿಯೊಂದು ಸತ್ರದ ಸಮಯದಲ್ಲಿ ಒಂದು ಸಲ ಅಥವಾ ದಿನದಲ್ಲಿ ಯಾವುದೇ ಸತ್ರದ ಸಮಯದಲ್ಲಿ ಒಂದು ಸಲ ಈ ಸೂಚನೆಯನ್ನು ನೀಡಿರಿ. ‘ಈ ಸೂಚನೆಯನ್ನು ಎಷ್ಟು ದಿನಗಳ ವರೆಗೆ ತೆಗೆದುಕೊಳ್ಳಬೇಕು ? ಎಂಬ ವಿಷಯದ ಬಗ್ಗೆ ಹಾಗೂ ಸೂಚನೆಯ ಬಗ್ಗೆ ಬೇರೇನಾದರೂ ಸಂದೇಹಗಳಿದ್ದಲ್ಲಿ ವ್ಯಷ್ಟಿ ಸಾಧನೆಯ ವರದಿ ತೆಗೆದುಕೊಳ್ಳುವ ಸಾಧಕರಲ್ಲಿ ಕೇಳಿಕೊಳ್ಳಬಹುದು.
– (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ (೬.೯.೨೦೧೭)