ದೇವಸ್ಥಾನದಲ್ಲಿ ದೇವರಿಗೆ ಪ್ರದಕ್ಷಿಣೆಗಳನ್ನು ಹಾಕುವುದರ ಮಹತ್ವ

೧. ಪ್ರದಕ್ಷಿಣೆಗಳನ್ನು ಹಾಕುವುದರಿಂದ ದೇವತೆಯ ಎಲ್ಲ ಅಂಗಗಳಿಂದ ಹೊರ ಬೀಳುವ ವಿವಿಧ ರೀತಿಯ ಸ್ಪಂದನಗಳನ್ನು ಭಕ್ತನು ಗ್ರಹಿಸಬಲ್ಲನು.

೨. ಪ್ರದಕ್ಷಿಣೆಗಳನ್ನು ಹಾಕುವುದರಿಂದ ಜೀವಗಳಿಗೆ ಗರ್ಭಗುಡಿಯಲ್ಲಿನ ಸತ್ತ್ವ ಲಹರಿಗಳ ಲಾಭವು ಹೆಚ್ಚಿಗೆ ಆಗುವುದು : ‘ದೇವಸ್ಥಾನದ ಗರ್ಭಗುಡಿಯಲ್ಲಿರುವ ಸತ್ತ್ವಲಹರಿಗಳು ಗರ್ಭಗುಡಿಯಲ್ಲಿ ಮತ್ತು ಗರ್ಭಗುಡಿಯ ಸುತ್ತಲೂ ಗೋಲಾಕಾರವಾಗಿ ತಿರುಗುತ್ತಿರುತ್ತವೆ. ದೇವಸ್ಥಾನವನ್ನು ಪ್ರವೇಶಿಸಿದ ಬಳಿಕ ಈ ಲಹರಿಗಳಿಂದ ಜೀವದ ಮೇಲೆ ಸೂಕ್ಷ್ಮದಿಂದ ಪರಿಣಾಮವಾಗತೊಡಗುತ್ತದೆ. ದೇವತೆಯ ದರ್ಶನ ಪಡೆದ ನಂತರ ಜೀವದ ಸುಷುಮ್ನಾನಾಡಿಯು ಜಾಗೃತವಾಗತೊಡಗುತ್ತದೆ. ದೇವತೆಯ ಸುತ್ತಲೂ ಪ್ರದಕ್ಷಿಣೆಗಳನ್ನು ಹಾಕಿದಾಗ ಈ ಲಹರಿಗಳ ಪ್ರಭಾವವು ಪ್ರದಕ್ಷಿಣೆ ಹಾಕುವವರ ಮೇಲಾಗುತ್ತದೆ ಮತ್ತು ಅವರಿಗೆ ಅತಿ ಹೆಚ್ಚು ಪ್ರಮಾಣದಲ್ಲಿ ಈ ಸತ್ತ್ವಲಹರಿಗಳ ಲಾಭವಾಗುತ್ತದೆ.’

೩. ಪ್ರದಕ್ಷಿಣೆಗಳನ್ನು ಹಾಕುವುದರಿಂದ ಮಾಂತ್ರಿಕರು ಜೀವದ ಸುತ್ತಲೂ ನಿರ್ಮಿಸಿದ ಕಪ್ಪು ಆವರಣವು ನಾಶವಾಗುವುದು : ಸಾಮಾನ್ಯವಾಗಿ ಮಾಂತ್ರಿಕರು (ಬಲಾಢ್ಯ ಅಸುರೀ ಶಕ್ತಿಗಳು) ಜೀವದ ಮನಸ್ಸು ಮತ್ತು ಬುದ್ಧಿಯನ್ನು ಕೇಂದ್ರವನ್ನಾಗಿಸಿ ಅವುಗಳ ಸುತ್ತಲೂ ಅಚಕ್ರಾಕಾರ ಪದ್ಧತಿಯಲ್ಲಿ (ಪ್ರದಕ್ಷಿಣೆಯ ವಿರುದ್ಧ ದಿಕ್ಕಿನಲ್ಲಿ) ಕಪ್ಪು ಆವರಣವನ್ನು ನಿರ್ಮಿಸುತ್ತಾರೆ ಮತ್ತು ಆ ಆವರಣವನ್ನು ಹೆಚ್ಚಿಸುತ್ತಾ ಹೋಗುತ್ತಾರೆ. ಇದರಿಂದ ಜೀವಕ್ಕೆ ಈಶ್ವರೀ ಶಕ್ತಿಯು ಸಿಗುವುದು ನಿಂತುಹೋಗುತ್ತದೆ.

ಜೀವವು ಚಕ್ರಾಕಾರ ಪದ್ಧತಿಯಿಂದ ಪ್ರದಕ್ಷಿಣೆಗಳನ್ನು ಹಾಕುವುದರಿಂದ ದೇವತೆಯ ಸುತ್ತಲಿರುವ ಇಂಧನವು (ಶಕ್ತಿಯು) ಜೀವದ ಸುತ್ತಲೂ ಚಕ್ರಾಕಾರ ದಿಕ್ಕಿನಲ್ಲಿ ಗತಿಮಾನವಾಗಲು ಪ್ರಾರಂಭವಾಗುತ್ತದೆ. ಇದರಿಂದ ಜೀವದ ಸುತ್ತಲೂ ಇರುವ ಕಪ್ಪು ಆವರಣ ಮತ್ತು ಈಶ್ವರೀ ಶಕ್ತಿ ಇವುಗಳ ನಡುವೆ ಯುದ್ಧವಾಗುತ್ತದೆ ಮತ್ತು ಕಪ್ಪು ಶಕ್ತಿಯು ವಿಘಟನೆಯಾಗಿ ಜೀವದ ಸುತ್ತಲಿರುವ ಇರುವ ಕಪ್ಪು ಆವರಣವು ನಾಶವಾಗುತ್ತದೆ. – ಒಂದು ಅಜ್ಞಾತ ಶಕ್ತಿ (ಸೌ. ಕ್ಷಿಪ್ರಾ ದೇಶಮುಖರವರ ಮಾಧ್ಯಮದಿಂದ, ೨೧.೯.೨೦೦೬, ಬೆಳಗ್ಗೆ ೭.೪೦)

೪. ಪ್ರದಕ್ಷಿಣೆಗಳನ್ನು ಹಾಕುವುದರಿಂದ ಜೀವದ ಸುತ್ತಲೂ ಸಾತ್ತ್ವಿಕ ಕ್ಷೇತ್ರವು ನಿರ್ಮಾಣವಾಗುವುದರಿಂದ ಜೀವದ ಸಪ್ತಚಕ್ರಗಳಲ್ಲಿನ ಅಡಚಣೆಗಳು ದೂರವಾಗಿ ಅವುಗಳ ಜಾಗೃತಿಯಾಗಲು ಸಹಾಯವಾಗುವುದು : ಜೀವವು ಚಕ್ರಾಕಾರ ಪದ್ಧತಿಯಲ್ಲಿ ಪ್ರದಕ್ಷಿಣೆಗಳನ್ನು ಹಾಕುವುದರಿಂದ ಜೀವದ ಕಡೆಗೆ ಊರ್ಧ್ವದಿಕ್ಕಿನಿಂದ ಈಶ್ವರೀ ಚೈತನ್ಯವು ಬರುತ್ತದೆ. ಪ್ರದಕ್ಷಿಣೆಗಳನ್ನು ಹಾಕುವುದರಿಂದ ಜೀವಕ್ಕೆ ದೇವತೆಯ ಚಿತ್ರ ಅಥವಾ ಮೂರ್ತಿಯಿಂದ ಪ್ರಕ್ಷೇಪಿತವಾಗುವ ಶಕ್ತಿಯು ಸಿಗುತ್ತದೆ. ಇದರಿಂದಾಗಿ ಜೀವದ ಸುತ್ತಲೂ ಸಾತ್ತ್ವಿಕ ಕ್ಷೇತ್ರ ನಿರ್ಮಾಣವಾಗುತ್ತದೆ. ಇದರಿಂದ ಜೀವದ ಸಪ್ತಚಕ್ರಗಳಲ್ಲಿರುವ ಅಡಚಣೆಗಳು ದೂರವಾಗಿ ಅವುಗಳ ಜಾಗೃತಿಯಾಗಲು ಸಹಾಯವಾಗುತ್ತದೆ.’ – ಒಂದು ಅಜ್ಞಾತ ಶಕ್ತಿ (ಸೌ. ಕ್ಷಿಪ್ರಾ ದೇಶಮುಖರವರ ಮಾಧ್ಯಮದಿಂದ, ೨೧.೯.೨೦೦೬, ಬೆಳಗ್ಗೆ ೭.೪೦)

೫. ಪ್ರದಕ್ಷಿಣೆಗಳಿಂದ ಜೀವದ ಸುತ್ತಲೂ ರಕ್ಷಾಕವಚ ನಿರ್ಮಾಣವಾಗುವುದು : ‘ದೇವಸ್ಥಾನದಲ್ಲಿ ದೇವತೆಯ ದರ್ಶನವನ್ನು ಪಡೆದುಕೊಳ್ಳುವುದರಿಂದ ದೇವತೆಯ ಸಗುಣ ಚೈತನ್ಯದಿಂದ ಜೀವದ ದೇಹದ ಶುದ್ಧಿಯಾಗುತ್ತದೆ; ಆಮೇಲೆ ಪ್ರದಕ್ಷಿಣೆಗಳನ್ನು ಹಾಕುವುದರಿಂದ ಜೀವದ ಸುತ್ತಲೂ ರಕ್ಷಾಕವಚ ನಿರ್ಮಾಣವಾಗಿ ಜೀವದ ದೇಹದಲ್ಲಿರುವ ಚೈತನ್ಯವು ದೀರ್ಘಕಾಲ ಉಳಿದುಕೊಳ್ಳುತ್ತದೆ ಮತ್ತು ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗಲು ಸಹಾಯವಾಗುತ್ತದೆ’ – ಓರ್ವ ವಿದ್ವಾಂಸ [(ಪೂ.) ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೫.೨.೨೦೦೭, ರಾತ್ರಿ ೯.೧೯]

ದೇವತೆಗೆ ಪ್ರದಕ್ಷಿಣೆಗಳನ್ನು ಹಾಕುವ ವ್ಯವಸ್ಥೆ ಇರುವುದು ಅಥವಾ ಇಲ್ಲದಿರುವುದು

೧. ಪ್ರದಕ್ಷಿಣಾಪ್ರಧಾನ ದೇವತೆಗಳು : ವಿಶೇಷವಾಗಿ ದತ್ತಕ್ಷೇತ್ರಗಳಲ್ಲಿ ಪ್ರದಕ್ಷಿಣೆಗಳನ್ನು ಹಾಕಿ ಉಪಾಸನೆಯನ್ನು ಮಾಡುವ ಪರಂಪರೆಯಿದೆ.

೨. ದರ್ಶನಪ್ರಧಾನ ದೇವತೆಗಳು : ತಿರುಮಲೈ, ಗುರುವಾಯೂರು, ರಾಮೇಶ್ವರ, ವಾರಾಣಸಿ, ಪಂಢರಪುರ, ಪುರಿ ಮುಂತಾದ ಕ್ಷೇತ್ರಗಳಲ್ಲಿರುವ ದೇವತೆಗಳ ದರ್ಶನವನ್ನು ಒಂದು ಸಲ ಪಡೆದುಕೊಂಡ ನಂತರ ಪುನಃ ದರ್ಶನವನ್ನು ಪಡೆಯುವ ಅಥವಾ ಪ್ರದಕ್ಷಿಣೆಗಳನ್ನು ಹಾಕುವ ವ್ಯವಸ್ಥೆಯಿರುವುದಿಲ್ಲ. ಇಂತಹ ಕ್ಷೇತ್ರಗಳಲ್ಲಿ ನಾಮಸಂಕೀರ್ತನೆಯಿಂದ ಉಪಾಸನೆಯನ್ನು ಮಾಡಲಾಗುತ್ತದೆ.

(ಪ್ರದಕ್ಷಿಣೆಗಳನ್ನು ಹೇಗೆ ಹಾಕಬೇಕು? ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆಗಳನ್ನು ಹಾಕಬೇಕು? ಅದರ ಕಾರಣವೇನು? ಅದರಿಂದಾಗುವ ಲಾಭಗಳೇನು? ಪ್ರದಕ್ಷಿಣೆಗಳನ್ನು ಹಾಕುವಾಗ ಗರ್ಭಗುಡಿಯನ್ನು ಏಕೆ ಮುಟ್ಟಬಾರದು? ಮುಂತಾದ ಪ್ರಶ್ನೆಗಳಿಗೆ ವಿವರವಾದ ಉತ್ತರಗಳನ್ನು ಗ್ರಂಥದಲ್ಲಿ ಓದಿ.)

ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ? ತಿಳಿದುಕೊಳ್ಳಲು ಕ್ಲಿಕ್ ಮಾಡಿ !

(ಆಧಾರ : ಸನಾತನದ ಗ್ರಂಥ ‘ದೇವಸ್ಥಾನದಲ್ಲಿ ದರ್ಶನ ಹೇಗೆ ಪಡೆಯಬೇಕು? (ಭಾಗ ೨)’)

2 thoughts on “ದೇವಸ್ಥಾನದಲ್ಲಿ ದೇವರಿಗೆ ಪ್ರದಕ್ಷಿಣೆಗಳನ್ನು ಹಾಕುವುದರ ಮಹತ್ವ”

Leave a Comment