ಅಯೋಗ್ಯ ವಿಚಾರ, ಕೃತಿ, ಭಾವನೆ ಅಥವಾ ಪ್ರತಿಕ್ರಿಯೆಗಳಿಗೆ ೧ ತಿಂಗಳು ಸ್ವಯಂಸೂಚನೆಯನ್ನು ನೀಡಿದರೂ ಅದರಲ್ಲಿ ಅಪೇಕ್ಷಿತ ಬದಲಾವಣೆ ಆಗದಿದ್ದರೆ, ಚಿವುಟಿಕೊಳ್ಳುವ ಪದ್ಧತಿಯನ್ನು’ ಅಂದರೆ ‘ಇ ೨’ ಈ ಸ್ವಯಂಸೂಚನೆ ಪದ್ಧತಿಯನ್ನು ಉಪಯೋಗಿಸುವುದು ಆವಶ್ಯಕವಾಗಿದೆ.
ಧೂಮ್ರಪಾನ ಮಾಡುವುದು (ಸಿಗರೇಟು ಸೇದುವುದು), ಮದ್ಯ ಸೇವನೆ ಇತ್ಯಾದಿ ವ್ಯಸನಗಳು, ಉಗುರು ಕಚ್ಚುವ ಚಟ, ತೊದಲುವಿಕೆ, ೮ ವರ್ಷದ ನಂತರವೂ ಹಾಸಿಗೆಯಲ್ಲಿ ಮೂತ್ರ ಮಾಡುವುದು ಇತ್ಯಾದಿಗಳಲ್ಲಿ ಬದಲಾವಣೆಯಾಗದಿದ್ದರೂ ಈ ಸ್ವಯಂಸೂಚನೆ ಪದ್ಧತಿಯನ್ನು ಉಪಯೋಗಿಸಬಹುದು.
ಈ ಸ್ವಯಂಸೂಚನೆ ಪದ್ಧತಿಯಿಂದ ಯಾವ, ಯಾವ ಲಕ್ಷಣಗಳಿಗೆ ಸ್ವಯಂಸೂಚನೆಗಳನ್ನು ಕೊಡಬಹುದು ?
ನಿರರ್ಥಕ ವಿಚಾರಧ್ಯಾಸ (Obsession), ನಿರರ್ಥಕ ಕೃತಿ (Compulsions), ಇತರರ ಬಗ್ಗೆ ಮನಸ್ಸಿನಲ್ಲಿ ತೀವ್ರ ಸಂಶಯ (Suspiciousness) ಅಥವಾ ಭ್ರಮಿಸುವುದು (Delusions), ಭಾಸವಾಗುವುದು (Hallucinations) (ವಿಚಿತ್ರ ಧ್ವನಿ ಕೇಳಿಸುವುದು, ಪಕ್ಕದಲ್ಲಿ ಯಾರೂ ಇಲ್ಲದಿದ್ದರೂ ‘ಯಾರಾದರೂ ಇದ್ದಾರೆ ಎಂದು ಭಾಸವಾಗುವುದು), ಆತ್ಮಹತ್ಯೆಯ ವಿಚಾರ ಬರುವುದು (Suicidal thoughts) ಇಂತಹ ಲಕ್ಷಣಗಳಿಗೂ ಈ ಸ್ವಯಂಸೂಚನೆ ಪದ್ಧತಿಯಿಂದ ಸ್ವಯಂ ಸೂಚನೆಯನ್ನು ನೀಡಬಹುದಾಗಿದೆ.
ಈ ಸ್ವಯಂಸೂಚನೆ ಪದ್ಧತಿಗನುಸಾರ ತಯಾರಿಸಿದ ಸ್ವಯಂಸೂಚನೆಗಳ ಉದಾಹರಣೆಗಳು
ಅ. ಮನೋರಾಜ್ಯದಲ್ಲಿ ವಿಹರಿಸುವುದು : ಯಾವಾಗ ‘ನಾನು ಮನೆಗೆ ಹೋಗಿ ಮೋಜು-ಮಜಾ ಮಾಡುವೆನು ? ಈ ವಿಷಯದ ಬಗ್ಗೆ ಮನೋರಾಜ್ಯದಲ್ಲಿ ವಿಹರಿಸುವೆನೋ, ಆಗ ನನಗೆ ನಾನೇ ಚಿವುಟಿಕೊಳ್ಳುವೆನು.
ಆ. ಅನಾವಶ್ಯಕ ವಿಚಾರ ಮಾಡುವುದು : ಯಾವಾಗ ನಾನು ಆರತಿ ನಡೆಯುತ್ತಿರುವಾಗ ಆರತಿ ನಂತರ ಮಾಡಬೇಕಾದ ಸೇವೆಯ ಬಗ್ಗೆ ವಿಚಾರ ಮಾಡುತ್ತಿರುವೆನೋ, ಆಗ ನನಗೆ ನಾನೇ ಜೋರಾಗಿ ಚಿವುಟಿಕೊಳ್ಳುವೆನು.
ಇ. ನಿರರ್ಥಕ ಕೃತಿ ಮಾಡುವುದು : ಯಾವಾಗ ನಾನು ಸಭೆಯಲ್ಲಿ ಮಾತನಾಡುತ್ತಿರುವಾಗ ಕುರ್ಚಿಯಲ್ಲಿ ಕುಳಿತು ಕಾಲು ಅಲ್ಲಾಡಿಸುತ್ತಿರುವೆನೋ, ಆಗ ನನಗೆ ನಾನೇ ಜೋರಾಗಿ ಚಿವುಟಿಕೊಳ್ಳುವೆನು.
ಈ. ಸಂಶಯಿಸುವುದು : ಯಾವಾಗ ಇಬ್ಬರು ಸಾಧಕರು ಮಾತನಾಡುತ್ತಿರುವಾಗ, ‘ಅವರು ನನ್ನ ಬಗ್ಗೆ ಮಾತನಾಡುತ್ತಿರಬಹುದು ಎಂಬ ವಿಚಾರ ನನ್ನ ಮನಸ್ಸಿನಲ್ಲಿ ಬರುವುದೋ’, ಆಗ ನನಗೆ ನಾನೇ ಚಿವುಟಿಕೊಳ್ಳುವೆನು.
ಉ. ಭಾಸವಾಗುವುದು : ಯಾವಾಗ ನಾನು ಕೋಣೆಯಲ್ಲಿ ಒಬ್ಬಳೇ ಇದ್ದರೂ ‘ನನ್ನ ಅಕ್ಕಪಕ್ಕದಲ್ಲಿ ಯಾರೋ ಇದ್ದಾರೆ ಎಂದು ನನಗೆ ಭಾಸವಾಗುವುದೋ’, ಆಗ ನನಗೆ ನಾನೇ ಚಿವುಟಿಕೊಳ್ಳುವೆನು.
ಊ. ನಕಾರಾತ್ಮಕ ವಿಚಾರ ಮಾಡುವುದು : ಯಾವಾಗ ‘ಪರಾತ್ಪರ ಗುರುದೇವರು ನನಗಾಗಿ ಇಷ್ಟು ಮಾಡುತ್ತಿದ್ದಾರೆ; ಆದರೆ ನನಗೆ ಯೋಗ್ಯತೆ ಇಲ್ಲ’, ಎನ್ನುವ ನಕಾರಾತ್ಮಕ ವಿಚಾರ ನನ್ನ ಮನಸ್ಸಿನಲ್ಲಿ ಬರುವುದೋ, ಆಗ ನನಗೆ ನಾನೇ ಜೋರಾಗಿ ಚಿವುಟಿಕೊಳ್ಳುವೆನು.
ಎ. ಇತರರೊಂದಿಗೆ ತುಲನೆ ಮಾಡಿ ತನ್ನ ಬಗ್ಗೆ ಕೀಳರಿಮೆ ಅನಿಸುವುದು : ಯಾವಾಗ ‘… ಈ ಸಾಧಕನಲ್ಲಿ ಎಷ್ಟು ಗುಣಗಳಿವೆ, ನನ್ನಲ್ಲಿ ಮಾತ್ರ ಯಾವುದೇ ಗುಣಗಳಿಲ್ಲ’, ಎಂಬ ತುಲನೆಯ ವಿಚಾರ ನನ್ನ ಮನಸ್ಸಿನಲ್ಲಿ ಬರುವುದೋ, ಆಗ ನನಗೆ ನಾನೇ ಚಿವುಟಿಕೊಳ್ಳುವೆನು.
ಏ. ಸಾಧಕರ ಬಗ್ಗೆ ಮನಸ್ಸಿನಲ್ಲಿ ವಿಕಲ್ಪ ಬರುವುದು : ಯಾವಾಗ ಒಂದು ಸೇವೆಯಲ್ಲಿ ನನ್ನ ತಪ್ಪು ಇಲ್ಲದಿದ್ದರೂ ಸಹಸಾಧಕರು ‘ಅದು ನನ್ನ ತಪ್ಪಾಗಿದೆ ಎಂದು ಸುಳ್ಳು ಹೇಳಿದ್ದಾರೆ’ ಎಂದು ನನಗೆ ಅನಿಸುವುದೋ, ಆಗ ನನಗೆ ನಾನೇ ಚಿವುಟಿಕೊಳ್ಳುವೆನು.
ಓ. ಎಲ್ಲಿಯಾದರೂ ಓಡಿ ಹೋಗಬೇಕು, ಎನ್ನುವ ವಿಚಾರ ಮನಸ್ಸಿನಲ್ಲಿ ಬರುವುದು : ಯಾವಾಗ ನನ್ನ ಮನಸ್ಸಿನಲ್ಲಿ ಈ ಜಗತ್ತಿನಲ್ಲಿ ನನಗೆ ಯಾರೂ ಇಲ್ಲ. ನಾನು ಯಾರಿಗೂ ಇಷ್ಟವಾಗುವುದಿಲ್ಲ, ಎಲ್ಲಿಯಾದರೂ ಓಡಿ ಹೋಗಬೇಕು, ಎಂದು ಅಸಹಾಯಕತೆಯ ವಿಚಾರ ಬರುವುದೋ, ಆಗ ನನಗೆ ನಾನೇ ಚಿವುಟಿಕೊಳ್ಳುವೆನು.
ಔ. ಆತ್ಮಹತ್ಯೆಯ ವಿಚಾರ ಮನಸ್ಸಿನಲ್ಲಿ ಬರುವುದು : ಯಾವಾಗ ‘ನನಗೆ ಜೀವನದಲ್ಲಿ ಏನೂ ಮಾಡಲು ಆಗುವುದಿಲ್ಲ’ ಈ ನಕಾರಾತ್ಮಕ ವಿಚಾರದಿಂದ ನನಗೆ ಆತ್ಮಹತ್ಯೆ ಮಾಡುವ ವಿಚಾರ ಮಾಡುವೆನೋ, ಆಗ ನನಗೆ ನಾನೇ ಜೋರಾಗಿ ಚಿವುಟಿಕೊಳ್ಳುವೆನು.
ಅಂ. ಕಾಮವಾಸನೆಯ ವಿಚಾರ ಮನಸ್ಸಿನಲ್ಲಿ ಬರುವುದು : ಯಾವಾಗ ನನ್ನ ಮನಸ್ಸಿನಲ್ಲಿ ಅಯೋಗ್ಯ ಸಮಯದಲ್ಲಿ ಕಾಮ ವಾಸನೆಯ ವಿಚಾರ ಬರುವುದೋ, ಆಗ ನನಗೆ ನಾನೇ ಜೋರಾಗಿ ಚಿವುಟಿಕೊಳ್ಳುವೆನು.
ಈ ಸ್ವಯಂಸೂಚನೆಯ ಪದ್ಧತಿಗನುಸಾರ ಪ್ರತ್ಯಕ್ಷ ಮಾಡಬೇಕಾದ ಪ್ರಯತ್ನ
ಅ. ಈ ಸ್ವಯಂಸೂಚನೆ ಪದ್ಧತಿಗನುಸಾರ ಪ್ರಯತ್ನಿಸುವಾಗ ನಮ್ಮಿಂದಲೇ ಅಯೋಗ್ಯ ಕೃತಿ ಘಟಿಸುತ್ತಿದ್ದರೆ ಅಥವಾ ಮನಸ್ಸಿನಲ್ಲಿ ಅಯೋಗ್ಯ ವಿಚಾರ ಬಂದ ಕೂಡಲೇ ಚಿವುಟಿಕೊಳ್ಳಬೇಕು, ಅಂದರೆ ನಿಮ್ಮನ್ನು ನೀವೇ ಶಿಕ್ಷಿಸಿಕೊಳ್ಳಬೇಕು. ಅಯೋಗ್ಯ ಕೃತಿ ನಡೆಯುತ್ತಿದ್ದರೆ ಅಥವಾ ಅಯೋಗ್ಯ ವಿಚಾರ ಮನಸ್ಸಿನಲ್ಲಿ ಬಂದರೆ ಪ್ರತಿ ಬಾರಿ ಚಿವುಟಿಕೊಂಡರೆ ಮಾತ್ರ ಲಾಭವಾಗುತ್ತದೆ.
ಆ. ಸದ್ಯ ತೆಗೆದುಕೊಳ್ಳುತ್ತಿರುವ ಸ್ವಭಾವದೋಷ ಮತ್ತು ಅಹಂನ ಲಕ್ಷಣಗಳಿಗೆ ಸ್ವಯಂ ಸೂಚನೆಯಲ್ಲಿ ಒಂದು ಸ್ವಯಂಸೂಚನೆಯನ್ನು ಕಡಿಮೆ ಮಾಡಿ ಅದರ ಬದಲಾಗಿ ಈ ಸ್ವಯಂ ಸೂಚನೆಯನ್ನು ತೆಗೆದುಕೊಳ್ಳಬೇಕು.
ಇ. ಕಡಿಮೆಯೆಂದರೆ ೮ ದಿನಗಳವರೆಗೆ ಈ ಸ್ವಯಂಸೂಚನೆಯನ್ನು ನೀಡುವುದು ಅವಶ್ಯಕವಿದೆ. ನಂತರ ಎಷ್ಟು ದಿನಗಳವರೆಗೆ ಸ್ವಯಂಸೂಚನೆ ನೀಡಬೇಕು ಎಂಬುದನ್ನು ವ್ಯಷ್ಟಿ ಸಾಧನೆಯ ವರದಿ ನೀಡುವ ಸೇವಕರನ್ನು ವಿಚಾರಿಸಬೇಕು.
ಮೇಲಿನ ಪ್ರಯತ್ನ ಗಾಂಭೀರ್ಯದಿಂದ ಮಾಡುತ್ತಿದ್ದರೆ ಸಾಮಾನ್ಯವಾಗಿ ೮ ದಿನಗಳಲ್ಲಿ ಸಂಬಂಧಿಸಿದ ಸ್ವಭಾವದೋಷ ಮತ್ತು ಅಹಂಗಳಲ್ಲಿ ಗಮನಾರ್ಹ ಬದಲಾವಣೆಗಳು ಕಂಡು ಬರುತ್ತವೆ.
ಈ ಸ್ವಯಂ ಸೂಚನೆ ಪದ್ಧತಿಯಿಂದ ಅಲ್ಪಾವಧಿಯಲ್ಲಿ ಅಯೋಗ್ಯ ವಿಚಾರ ಪ್ರಕ್ರಿಯೆ ಅಥವಾ
ಅಯೋಗ್ಯ ವರ್ತನೆಗಳಲ್ಲಿ ಗಮನಾರ್ಹ ಸುಧಾರಣೆಗಳು ಕಂಡು ಬರುವ ಕಾರಣಗಳು
ಈ ಪದ್ಧತಿಯು ನಮ್ಮಿಂದ ಯಾವಾಗ ಅಯೋಗ್ಯ ವಿಚಾರ ಪ್ರಕ್ರಿಯೆ ನಡೆಯುವುದೋ ಅಥವಾ ಅಯೋಗ್ಯ ವರ್ತನೆ ನಡೆಯುವುದೋ, ಆಗ ಪ್ರತಿಯೊಂದು ಸಲವೂ ಕೂಡಲೇ ಚಿವುಟಿಕೊಳ್ಳುವ ಮಾಧ್ಯಮದಿಂದ ಶರೀರಕ್ಕೆ ವೇದನೆಯನ್ನು ನೀಡಲಾಗುತ್ತದೆ. ಆ ವೇದನೆಯಿಂದ ತಪ್ಪಿಸಿಕೊಳ್ಳಲು ಮನಸ್ಸು ಆ ಅಯೋಗ್ಯ ವರ್ತನೆ ಅಥವಾ ಅಯೋಗ್ಯ ವಿಚಾರಪ್ರಕ್ರಿಯೆಯನ್ನು ಮಾಡುವುದನ್ನು ನಿವಾರಿಸುತ್ತದೆ. ಅಯೋಗ್ಯ ವರ್ತನೆ ಅಥವಾ ಅಯೋಗ್ಯ ವಿಚಾರಪ್ರಕ್ರಿಯೆ ವೇದನೆ ಈ ರೀತಿ ಸಮೀಕರಣ ಮನಸ್ಸಿನಲ್ಲಿ ನಿರ್ಮಾಣವಾಗುವುದರಿಂದ ಯೋಗ್ಯ ಕೃತಿ ಅಥವಾ ಯೋಗ್ಯ ವಿಚಾರ ಪ್ರಕ್ರಿಯೆಗಳಾಗಲು ಪ್ರಾರಂಭವಾಗುತ್ತವೆ ಮತ್ತು ಸ್ವಭಾವದಲ್ಲಿ ಬದಲಾವಣೆಗಳಾಗತೊಡಗುತ್ತದೆ. ಇದನ್ನೇ ‘ಲಾ ಆಫ್ ಅಸೋಸಿಯೇಷನ್ ಎಂದು ಹೇಳುತ್ತಾರೆ.
(ಈ ವಿಷಯದ ಹೆಚ್ಚಿನ ಮಾಹಿತಿಯು ‘ಸ್ವಭಾವದೋಷ- ನಿರ್ಮೂಲನ ಪ್ರಕ್ರಿಯೆ(ಭಾಗ ೨) ಈ ಗ್ರಂಥದಲ್ಲಿದೆ)