ನಾಮಜಪದ ಮಹತ್ವ
ಯಾವುದು ಮನುಷ್ಯನ ಪಾಪಗಳನ್ನು ನಾಶಮಾಡಿ ಅವನನ್ನು ಜನ್ಮ-ಮೃತ್ಯುವಿನ ಚಕ್ರದಿಂದ ಬಿಡುಗಡೆಗೊಳಿಸುತ್ತದೆಯೋ, ಅದುವೇ ನಾಮಜಪ. (ಸಂದರ್ಭ: ಸನಾತನದ ಗ್ರಂಥ ‘ನಾಮಸಂಕೀರ್ತನ ಯೋಗ ಮತ್ತು ಮಂತ್ರಯೋಗ) ನಾಮಜಪವು ನಿಜವಾದ ತಪಸ್ಸಾಗಿದೆ. ಅದು ಪ್ರಾರಬ್ಧಭೋಗವನ್ನೂ ಕಡಿಮೆ ಮಾಡುತ್ತದೆ, ಎಂದು ಹೇಳಲಾಗುತ್ತದೆ’. ಅಷ್ಟಾಂಗ ಸಾಧನೆಯಲ್ಲಿಯೂ ನಾಮಜಪವು ಮಹತ್ವಪೂರ್ಣವಾಗಿದ್ದು, ಅದು ಸಾಧನೆಯ ಅಡಿಪಾಯವಾಗಿದೆ.
ನಾಮಜಪದಿಂದಾಗುವ ಲಾಭಗಳು
ನಾಮಜಪ ನಡೆಯುತ್ತಿರುವಾಗ ಚಿತ್ತದಲ್ಲಿ ಇತರ ವಿಷಯಗಳ ಸಂಸ್ಕಾರಗಳಾಗುವುದಿಲ್ಲ. ನಾಮಜಪದಿಂದ ಮನಸ್ಸು ಶಾಂತವಾಗುವುದರಿಂದ ಮಾನಸಿಕ ಒತ್ತಡದಿಂದಾಗುವ ಶಾರೀರಿಕ ರೋಗಗಳು ಆಗುವುದಿಲ್ಲ. ಅಖಂಡ ನಾಮಜಪ ನಡೆಯುತ್ತಿರುವುದರಿಂದ ಮನಸ್ಸಿನಲ್ಲಿ ನಿರರ್ಥಕ ವಿಚಾರಗಳು ಬರುವುದಿಲ್ಲ.
ಸಾಧಕರೇ, ನಾಮಜಪದ ಸ್ವಯಂಸೂಚನೆಯನ್ನು ನೀಡಿರಿ !
ನಿರಂತರವಾಗಿ ನಾಮಜಪ ಆಗಲು ಸಾಧಕರು ಮುಂದಿನಂತೆ ಸ್ವಯಂಸೂಚನೆಯನ್ನು ನೀಡಬಹುದು. ‘ಯಾವಾಗ ನಾನು ಯಾರೊಂದಿಗೂ ಮಾತನಾಡುತ್ತಿರುವುದಿಲ್ಲವೋ ಅಥವಾ ನನ್ನ ಮನಸ್ಸಿನಲ್ಲಿ ಉಪಯುಕ್ತ ವಿಚಾರಗಳು ಇರುವುದಿಲ್ಲವೋ, ಆಗ ನನಗೆ ಅಂತರ್ಮನದಲ್ಲಿರುವ ಅಯೋಗ್ಯ ಸಂಸ್ಕಾರಗಳನ್ನು ಅಳಿಸಿ ಹಾಗೂ ಯೋಗ್ಯ ಸಂಸ್ಕಾರಗಳು ನಿರ್ಮಾಣವಾಗಲು ಅಥವಾ ಅವುಗಳನ್ನು ದೃಢಗೊಳಿಸಲು ನಾಮಜಪವು ಸೂಕ್ಷ್ಮ ಸ್ತರದಲ್ಲಿ ಪರಿಣಾಮಕಾರಕವಾಗಿದೆ ಎಂದು ಅರಿವಾಗುವುದು ಮತ್ತು ನಾನು ………….. ಈ ನಾಮಜಪವನ್ನು ಮಾಡುವೆನು, (………. ಇಲ್ಲಿ ನಾಮಜಪವನ್ನು ಉಲ್ಲೇಖಿಸಬೇಕು. ಉದಾ. ‘ಓಂ ನಮೋ ಭಗವತೇ ವಾಸುದೇವಾಯ)
ಈ ಸ್ವಯಂಸೂಚನೆಯನ್ನು ಯಾರು ನೀಡಬೇಕು ?
ಸನಾತನ ಸಂಸ್ಥೆಯ ಸಂಪರ್ಕಕ್ಕೆ ಹೊಸದಾಗಿ ಬಂದಿರುವ ಜಿಜ್ಞಾಸುಗಳು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು, ಹಾಗೆಯೇ ಪೂರ್ಣವೇಳೆ ಸಾಧನೆಗೆ ಆರಂಭಿಸಿದ ಸಾಧಕರು ಪ್ರಾರಂಭದಲ್ಲಿ ಮೊದಲ ಮೂರು ತಿಂಗಳು ಪ್ರತಿದಿನ ಈ ಸ್ವಯಂಸೂಚನೆಯನ್ನು ಕೊಡಬೇಕು. ಪ್ರಸಾರದಲ್ಲಿರುವ ಮತ್ತು ಆಶ್ರಮದಲ್ಲಿರುವ ಇತರ ಸಾಧಕರು ಪ್ರತಿ ಮೂರು ತಿಂಗಳಿಗೆ ೮ ರಿಂದ ೧೫ ದಿನಗಳ ವರೆಗೆ ಪ್ರತಿದಿನ ಈ ಸ್ವಯಂಸೂಚನೆಯನ್ನು ಕೊಡಬೇಕು. ಸಾಧಕರು ಪ್ರಕ್ರಿಯೆಗಾಗಿ ಆರಿಸಿದ ಸ್ವಭಾವದೋಷ ಅಥವಾ ಅಹಂಗಾಗಿ ಆರಿಸಿದ ಒಂದು ಸ್ವಯಂಸೂಚನೆಯನ್ನು ಕಡಿಮೆ ಮಾಡಿ ಈ ಸ್ವಯಂಸೂಚನೆಯನ್ನು ಕೊಡಬೇಕು.
ಪೂರ್ಣವೇಳೆ ಸಾಧನೆಯನ್ನು ಮಾಡುವ ಸಾಧಕರ ಮನಸ್ಸಿನಲ್ಲಿ ನಾಮಜಪವನ್ನು ಬಿಟ್ಟು ಸಾಧನೆಯ ಯಾವುದಾದರೊಂದು ಘಟಕದ (ಪ್ರಾರ್ಥನೆ, ಕೃತಜ್ಞತೆ, ಸ್ವಯಂಸೂಚನೆ ಸತ್ರ ಇತ್ಯಾದಿಗಳ) ಸಂಸ್ಕಾರವನ್ನು ಮಾಡುವುದಿದ್ದಲ್ಲಿ ಮೇಲಿನ ಸ್ವಯಂಸೂಚನೆಯಲ್ಲಿ ಅದರ ಮಹತ್ವದ ಉಲ್ಲೇಖವನ್ನು ಮಾಡಿ ಸ್ವಯಂಸೂಚನೆಯನ್ನು ನೀಡಲು ಜವಾಬ್ದಾರ ಸಾಧಕರು ಸಂಬಂಧಪಟ್ಟ ಸಾಧಕರಿಗೆ ಹೇಳಬಹುದು.
(ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ‘ಸ್ವಭಾವದೋಷ-ನಿರ್ಮೂಲನ ಪ್ರಕ್ರಿಯೆ (ಭಾಗ ೨) ಈ ಗ್ರಂಥದಲ್ಲಿದೆ)
– (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ (೦೨.೦೧.೨೦೧೮)