‘ಕೆಲವೊಮ್ಮೆ ಇತರ ವ್ಯಕ್ತಿಗಳ ತಪ್ಪುಗಳಿಂದಾಗಿ ಮನಸ್ಸಿಗೆ ಒತ್ತಡವಾಗುವುದು ಅಥವಾ ಚಿಂತೆಯಾಗುವುದು ಇತ್ಯಾದಿ ರೀತಿಯ ಅಯೋಗ್ಯ ಪ್ರತಿಕ್ರಿಯೆ ಮನಸ್ಸಿನಲ್ಲಿ ಬರುತ್ತದೆ. ಈ ಅಯೋಗ್ಯ ಪ್ರತಿಕ್ರಿಯೆಯನ್ನು ಎದುರಿಸಲು ಸ್ವತಃ ಯೋಗ್ಯ ದೃಷ್ಟಿಕೋನ ತೆಗೆದುಕೊಳ್ಳುವುದರೊಂದಿಗೆ ಎದುರಿನ ವ್ಯಕ್ತಿಯಲ್ಲಿಯೂ ಸುಧಾರಣೆಯಾಗುವುದು ಆವಶ್ಯಕವಿರುತ್ತದೆ. ಇಂತಹ ಸಮಯದಲ್ಲಿ ಅಧಿಕಾರಿ ವ್ಯಕ್ತಿ (ಅಂದರೆ ಪಾಲಕರು, ಶಿಕ್ಷಕರು, ಪ್ರಾಧ್ಯಾಪಕರು, ಕಾರ್ಯಾಲಯದ ಪ್ರಮುಖರು (ಮಾಲೀಕರು), ಜವಾಬ್ದಾರ ಸಾಧಕರು) ಅವರ ಅಧಿಕಾರ ಕ್ಷೇತ್ರದಲ್ಲಿರುವ ವ್ಯಕ್ತಿಗಳ ವಿಷಯದಲ್ಲಿ ಆ ೧ ಈ ಸ್ವಯಂಸೂಚನೆ ಪದ್ಧತಿಯನ್ನು ಉಪಯೋಗಿಸಿ ಸ್ವಯಂಸೂಚನೆಯನ್ನು ತಯಾರಿಸ ಬಹುದಾಗಿದೆ.
ತಂದೆ-ತಾಯಂದಿರು ಮಕ್ಕಳ ವಿಷಯದಲ್ಲಿ, ಶಿಕ್ಷಕರು ಮತ್ತು ಪ್ರಾಧ್ಯಾಪಕರು ವಿದ್ಯಾರ್ಥಿಗಳ ವಿಷಯದಲ್ಲಿ, ಕಾರ್ಯಾಲಯದ ಪ್ರಮುಖರು ಸಿಬ್ಬಂದಿಗಳ ವಿಷಯದಲ್ಲಿ ಹಾಗೆಯೇ ಜವಾಬ್ದಾರ ಸಾಧಕರು ತಮಗೆ ಸಂಬಂಧಿಸಿರುವ ಸಾಧಕರ ವಿಷಯದಲ್ಲಿ ಈ ಸ್ವಯಂಸೂಚನೆ ಪದ್ಧತಿಯಿಂದ ಸ್ವಯಂಸೂಚನೆಯನ್ನು ತೆಗೆದುಕೊಂಡಲ್ಲಿ ಅವರ ಒತ್ತಡ-ನಿರ್ಮೂಲನೆಯಾಗಲು ಸಹಾಯವಾಗುವುದು.
ಅಧಿಕಾರಿ ವ್ಯಕ್ತಿ ಸಾಮ, ದಾಮ, ದಂಡ ಮತ್ತು ಭೇದ ಈ ಹಂತಗಳಿಗನುಸಾರ ಮಕ್ಕಳು, ವಿದ್ಯಾರ್ಥಿಗಳು, ಸಿಬ್ಬಂದಿಗಳು
ಹಾಗೆಯೇ ಸಾಧಕರಲ್ಲಿ ಅರಿವು ಮೂಡಿಸಿ ತಮ್ಮ ಮನಸ್ಸಿನ ಮೇಲಿನ ಒತ್ತಡವನ್ನು ದೂರಗೊಳಿಸಬಹುದಾಗಿದೆ
ಮಕ್ಕಳು, ವಿದ್ಯಾರ್ಥಿಗಳು, ಸಿಬ್ಬಂದಿಗಳು ಇವರಿಂದ ಅಯೋಗ್ಯ ವರ್ತನೆಯಾಗುತ್ತಿದ್ದರೆ ಅಧಿಕಾರಿ ವ್ಯಕ್ತಿ ಅವರಿಗೆ ಸಾಮ, ದಾಮ, ದಂಡ ಮತ್ತು ಭೇದ ಈ ಹಂತಗಳಿಗನುಸಾರ ಅರಿವು ಮಾಡಿಸಬಹುದಾಗಿದೆ. ವ್ಯಕ್ತಿ ಮತ್ತು ಪರಿಸ್ಥಿತಿಗನುಸಾರ ವಿವಿಧ ಉಪಾಯಯೋಜನೆಯನ್ನು ತೆಗೆದು, ಅಂದರೆ ಮೊದಲ ಹಂತದಲ್ಲಿ ತಿಳಿಸಿ ಹೇಳುವುದು, ತಪ್ಪಿಗಾಗಿ ಆರ್ಥಿಕ ಹಾನಿಯನ್ನು ಭರಿಸಿಕೊಳ್ಳುವುದು, ಆದರೂ ಸುಧಾರಣೆಯಾಗದಿದ್ದಲ್ಲಿ ಕಠಿಣ ಶಬ್ದದಲ್ಲಿ ಕೋಪದಿಂದ ಮತ್ತು ತದನಂತರವೂ ಅಪೇಕ್ಷಿತವಿರುವ ಬದಲಾವಣೆಗಳಾಗದಿದ್ದಲ್ಲಿ, ಶಿಕ್ಷೆಯನ್ನು ಅವಲಂಬಿಸಿ ಅಧಿಕಾರಕ್ಷೇತ್ರದಲ್ಲಿರುವ ವ್ಯಕ್ತಿಯು ಅರಿವು ಮಾಡಿಸಬಹುದಾಗಿದೆ. ‘ಈ ಸ್ವಯಂಸೂಚನೆ ಪದ್ಧತಿಯಿಂದ ಸ್ವಯಂಸೂಚನೆಯನ್ನು ಹೇಗೆ ತಯಾರಿಸುವುದು ? ಈ ಮಾಹಿತಿಯನ್ನು ಮುಂದೆ ನೀಡಲಾಗಿದೆ.
ಸಾಧಕ-ಪೋಷಕರು ತೆಗೆದುಕೊಳ್ಳಬೇಕಾದ ಸ್ವಯಂಸೂಚನೆ
ಅ. ಪ್ರಸಂಗ : ಸಾಗರನು ಶಾಲಾ ವಿದ್ಯಾರ್ಥಿಯಾಗಿದ್ದು, ಅವನು ಪ್ರತಿದಿನ ಸಂಪೂರ್ಣ ಸಮಯ ಆಟವಾಡುವುದರಲ್ಲಿ ಕಳೆಯುತ್ತಾನೆ ಮತ್ತು ಏನೂ ಅಧ್ಯಯನ ಮಾಡುವುದಿಲ್ಲ.
ಆ. ಸ್ವಯಂಸೂಚನೆ : ಯಾವಾಗ ಸಾಗರನು ಶಾಲಾ ಅಧ್ಯಯನವನ್ನು ಮಾಡದೇ ದಿನವಿಡೀ ಆಟವಾಡುವುದರಲ್ಲಿ ಸಮಯ ಕಳೆಯುತ್ತಾನೆಯೋ, ಆಗ ಅವನ ಮೇಲೆ ಅಧ್ಯಯನದ ಮಹತ್ವವನ್ನು ಬಿಂಬಿಸಲು ನಾನು ಅವನಿಗೆ ಸ್ವಯಂಸೂಚನೆಯನ್ನು ತಯಾರಿಸಿ ಕೊಡುವೆನು ಮತ್ತು ಈ ಸ್ವಯಂಸೂಚನೆಯನ್ನು ನಿಯಮಿತವಾಗಿ ತೆಗೆದುಕೊಳ್ಳುವಲ್ಲಿ ಸಹಾಯ ಮಾಡುವೆನು
ಇಂತಹ ಪ್ರಸಂಗದಲ್ಲಿ ಸ್ವಯಂಸೂಚನೆಯಲ್ಲಿ ‘ಅಧ್ಯಯನ ಮಾಡದಿದ್ದರೆ ಅವನು ಅನುತ್ತೀರ್ಣನಾಗುವನು ಮತ್ತು ಅವನ ಎಲ್ಲ ಸಹಪಾಠಿಗಳು ಮುಂದಿನ ತರಗತಿಗೆ ಹೋಗುವರು ಇಂತಹ ದೃಷ್ಟಿಕೋನವಿರುವ ಸ್ವಯಂಸೂಚನೆಯನ್ನು ಸಾಗರನಿಗೆ ತಯಾರಿಸಿ ನೀಡುವೆನು’, ಎಂದೂ ತೆಗೆದುಕೊಳ್ಳಬಹುದು. (ಇಲ್ಲಿ ‘ಅಧ್ಯಯನ ಮಾಡದಿದ್ದರೆ ಅನುತ್ತೀರ್ಣನಾಗುವನು ಮತ್ತು ಅವನ ಎಲ್ಲ ಸಹಪಾಠಿಗಳು ಮುಂದಿನ ತರಗತಿಗೆ ಹೋಗುವರು, ಈ ದೃಷ್ಟಿಕೋನವನ್ನು ಮಕ್ಕಳಲ್ಲಿ ಅಧ್ಯಯನದ ಕುರಿತು ಹೆದರಿಕೆ ನಿರ್ಮಾಣವಾಗಲು ನೀಡದೆ ಅವರಲ್ಲಿ ಅಧ್ಯಯನದ ಮಹತ್ವವನ್ನು ಬಿಂಬಿಸಲು ನೀಡಲಾಗಿದೆ.)
ಇ. ಪೋಷಕರು ತೆಗೆದುಕೊಳ್ಳಬೇಕಾದ ಸ್ವಯಂಸೂಚನೆಯಲ್ಲಿ ಸಮಾವೇಶಗೊಳಿಸಬೇಕಾದ ದೃಷ್ಟಿಕೋನವು ಮಕ್ಕಳನ್ನು ಬದಲಾಯಿಸುವಂತಿರಬೇಕು ! : ಪೋಷಕರು ಮೇಲಿನ ರೀತಿಯಲ್ಲಿ ಸ್ವಯಂಸೂಚನೆಯನ್ನು ತಯಾರಿಸುವಾಗ ಮಕ್ಕಳ ಅಯೋಗ್ಯ ವರ್ತನೆಯ ವಿಷಯದಲ್ಲಿ ‘ಯಾವ ದೃಷ್ಟಿಕೋನವನ್ನು ನೀಡಿದರೆ, ಅವನು ಒಪ್ಪುತ್ತಾನೆ ?’ ಎನ್ನುವುದನ್ನು ಅವನೊಂದಿಗೆ ಸಂವಾದ ನಡೆಸಿ ತಿಳಿದುಕೊಳ್ಳಬೇಕು ಮತ್ತು ಸ್ವಯಂಸೂಚನೆಯಲ್ಲಿ ಆ ದೃಷ್ಟಿಕೋನವನ್ನು ಸೇರಿಸಬೇಕು. ಮಕ್ಕಳು ಮಾತುಕತೆ ನಡೆಸುವಷ್ಟು ದೊಡ್ಡವರಾಗಿದ್ದರೆ ಈ ಪರ್ಯಾಯವು ಉಪಯುಕ್ತವಾಗಿದೆ; ಆದರೆ ವಯಸ್ಸಿನಿಂದ ಚಿಕ್ಕವರಾಗಿರುವ ಮಕ್ಕಳ ವಿಷಯದಲ್ಲಿ ‘ಯೋಗ್ಯ ದೃಷ್ಟಿಕೋನ ಹೇಗಿರಬೇಕು ?’ ಎಂಬ ಬಗ್ಗೆ ಪೋಷಕರು ಸ್ವತಃ ನಿರ್ಧರಿಸಬಹುದು.
ಜವಾಬ್ದಾರ ಸಾಧಕರು ತೆಗೆದುಕೊಳ್ಳಬೇಕಾದ ಸ್ವಯಂಸೂಚನೆ
ಅನೇಕ ಸಲ ತಿಳಿಸಿ ಹೇಳಿದ್ದರೂ ಸಾಧನೆಯ ದೃಷ್ಟಿಯಿಂದ ಅಪೇಕ್ಷಿತ ಪ್ರಯತ್ನ ಮಾಡದಿರುವ ಅಥವಾ ಸೇವೆಯಲ್ಲಿ ಪದೇ ಪದೇ ತಪ್ಪುಗಳನ್ನು ಮಾಡುವ ಸಾಧಕರ ಜವಾಬ್ದಾರ ಸಾಧಕರು ಮುಂದಿನಂತೆ ಸ್ವಯಂಸೂಚನೆಯನ್ನು ತೆಗೆದುಕೊಳ್ಳಬೇಕು. ಇದರಿಂದ ಸಾಧಕರಿಗೆ ಯೋಗ್ಯ ರೀತಿಯಲ್ಲಿ ತಿಳಿಸಲು ಸಾಧ್ಯವಾಗಿ ಕಾರ್ಯ ಮತ್ತು ಸಾಧನೆಯ ಫಲನಿಷ್ಪತ್ತಿ ವೃದ್ಧಿಸುವುದು.
ಅ. ಮೊದಲ ಉದಾಹರಣೆ
ಅ ೧. ಪ್ರಸಂಗ : ಅಮೋಲನು ಸೇವೆಯನ್ನು ತಡವಾಗಿ ಮಾಡುತ್ತಾನೆ. ಇದರಿಂದ ಕಾರ್ಯದಲ್ಲಿ ಅನೇಕ ಅಡಚಣೆಗಳು ಬರುತ್ತದೆ. ಇದನ್ನು ತಿಳಿಸಿ ಹೇಳಿದರೂ ಅವನಿಂದ ಮೇಲಿಂದ ಮೇಲೆ ಅದೇ ತಪ್ಪುಗಳಾಗುತ್ತವೆ.
ಅ ೨ ಸ್ವಯಂಸೂಚನೆ : ‘ಯಾವಾಗ ಅಮೋಲನಿಂದ ಸೇವೆಯು ನಿಗದಿತ ಸಮಯದಲ್ಲಿ ಪೂರ್ಣವಾಗಲು ತಡವಾಗುತ್ತಿದೆಯೋ, ಆಗ ‘ಅವನಿಂದ ಸೇವೆಯಲ್ಲಿ ಏಕೆ ತಡವಾಗುತ್ತಿದೆ ?’, ಎನ್ನುವುದನ್ನು ನಾನು ತಿಳಿದುಕೊಳ್ಳುವೆನು ಮತ್ತು ಅದಕ್ಕನುಸಾರ ಸಹಾಯಕವಾಗುವ ಉಪಾಯಯೋಜನೆಯನ್ನು ಮಾಡುವೆನು.
(ಇಲ್ಲಿ ‘ಸೇವೆಯ ನಿಗದಿತ ಸಮಯಕ್ಕಿಂತ ಮೊದಲು ನಾನು ಅಮೋಲನ ಬೆಂಬತ್ತುವಿಕೆ ಮಾಡುವೆನು ಮತ್ತು ಅವನಿಗೆ ಆಗಾಗ ವರದಿಯನ್ನು ನೀಡುವಂತೆ ಹೇಳುವೆನು’ ಅಥವಾ ‘ಸೇವೆಯು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಲು ಅವನಿಗೆ ಸಹ ಸಾಧಕರ ಸಹಾಯವನ್ನು ಪಡೆದುಕೊಳ್ಳಲು ಹೇಳಿ ಸೇವೆಯನ್ನು ಸಮಯಮಿತಿಯಲ್ಲಿ ಪೂರ್ಣಗೊಳಿಸಲು ಹೇಳುವೆನು’, ಇಂತಹ ವಿಶಿಷ್ಟ ಉಪಾಯೋಜನೆಗಳಿರುವ ದೃಷ್ಟಿಕೋನವನ್ನು ಸಹ ಇಟ್ಟುಕೊಳ್ಳಬಹುದಾಗಿದೆ)
ಆ. ಎರಡನೇ ಉದಾಹರಣೆ
ಆ ೧. ಪ್ರಸಂಗ : ಸಂಧ್ಯಾಳಿಗೆ ಆಧ್ಯಾತ್ಮಿಕ ತೊಂದರೆಯಿಂದ ೫ ಗಂಟೆ ನಾಮಜಪ ಮಾಡಲು ಸಂತರು ಹೇಳಿದ್ದಾರೆ. ಆದರೂ ಅವಳು ನಿಯಮಿತವಾಗಿ ನಾಮಜಪವನ್ನು ಮಾಡುವುದಿಲ್ಲ.
ಆ ೨. ಸ್ವಯಂಸೂಚನೆ (‘ಒಂದೇ ಪ್ರಸಂಗದಲ್ಲಿ ೩ ಪ್ರತ್ಯೇಕ ಪದ್ಧತಿಯಿಂದ ಸ್ವಯಂಸೂಚನೆಯನ್ನು ಹೇಗೆ ನೀಡಬಹುದು ?’ ಈ ವಿಷಯದ ಮಾಹಿತಿಯನ್ನು ಮುಂದೆ ನೀಡಲಾಗಿದೆ.)
ಅ. ಯಾವಾಗ ಸಂಧ್ಯಾ ಪ್ರತಿದಿನ ೫ ಗಂಟೆ ನಾಮಜಪ ಮಾಡುವ ಬದಲು ಸೇವೆಗೆ ಪ್ರಾಮುಖ್ಯತೆಯನ್ನು ನೀಡುವಳೋ, ಆಗ ನಾನು ಅವಳ ಮನಸ್ಸಿನಲ್ಲಿ ನಾಮಜಪದ ಮಹತ್ವವನ್ನು ಬಿಂಬಿಸಲು ಅವಳಿಗೆ ಸ್ವಯಂಸೂಚನೆಯ ಸತ್ರವನ್ನು ಮಾಡಲು ಹೇಳುವೆನು.
ಆ. ಯಾವಾಗ ಸಂಧ್ಯಾಳು ೫ ಗಂಟೆ ನಾಮಜಪ ಪೂರ್ಣಗೊಳಿಸದೇ ಸೇವೆಗೆ ಪ್ರಾಮುಖ್ಯತೆ ನೀಡುತ್ತಿರುವುದು ತಿಳಿಯುವುದೋ, ಆಗ ನಾನು ನಾಮಜಪ ಪೂರ್ಣಗೊಳ್ಳಲು ಆಗಾಗ ಅವಳ ವರದಿಯನ್ನು ತೆಗೆದುಕೊಳ್ಳುವೆನು.
೩ ಇ. ಜವಾಬ್ದಾರ ಸಾಧಕರು ಮಾಡಬೇಕಾದ ಪ್ರಾರ್ಥನೆ : ಜವಾಬ್ದಾರ ಸಾಧಕರಿಗೆ ವಿವಿಧ ಪ್ರಕೃತಿಯ ಸಾಧಕರು ಸಂಪರ್ಕಕ್ಕೆ ಬರುತ್ತಿರುತ್ತಾರೆ. ಅವರೆಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸುಲಭವಾಗಬೇಕೆಂದು ಅವರು ಮುಂದಿನಂತೆ ಪ್ರಾರ್ಥನೆಯನ್ನು ಮಾಡಬಹುದು. ‘ಹೇ ಭಗವಂತಾ, ಎಲ್ಲ ಸಾಧಕರ ಪ್ರಕೃತಿಯನ್ನು ನೀನೇ ತಿಳಿದಿರುವಿ. ಈ ಸಾಧಕರಿಂದ ಸಾಧನೆ ಮತ್ತು ಸೇವೆಯನ್ನು ಹೇಗೆ ಮಾಡಿಸಿಕೊಳ್ಳಬೇಕು ?, ಅವರಿಗಾಗಿ ಉಪಯುಕ್ತ ಉಪಾಯೋಜನೆಯನ್ನು ಹೇಗೆ ಕಂಡುಹಿಡಿಯುವುದು ?, ಇದನ್ನು ನೀನೆ ನನಗೆ ಕಲಿಸು, ಇದನ್ನೇ ಪ್ರಾರ್ಥಿಸುತ್ತಿದ್ದೇನೆ’
ಅಧಿಕಾರಿವ್ಯಕ್ತಿಯ ಗುಣಸಂವರ್ಧನೆ ಯಾಗಲು ಆ ೧ ಈ ಪದ್ಧತಿ ಸಹಾಯಕಾರಿ !
ಅಧಿಕಾರಿ ವ್ಯಕ್ತಿಯು ಪ್ರತಿ ಸಲ ಶಿಕ್ಷಾಪದ್ಧತಿಯನ್ನು ಅವಲಂಬಿಸಬೇಕು, ಎಂದೇನಿಲ್ಲ. ಕೆಲವೊಮ್ಮೆ ಪ್ರೀತಿಯಿಂದ ತಿಳಿಸಿ ಹೇಳಿ, ಕೆಲವೊಮ್ಮೆ ಕಠಿಣ ಶಬ್ದಗಳಲ್ಲಿ ಅರಿವು ಮೂಡಿಸಿ, ಅವರಿಗೆ ಯೋಗ್ಯ ಕೃತಿಯ ಅರಿವು ಮೂಡಿಸುವುದು ಮತ್ತು ಪ್ರತಿಯೊಬ್ಬರ ಪ್ರಕೃತಿಗನುಸಾರ ಅವರಲ್ಲಿ ಬದಲಾವಣೆಯಾಗಲು ಏನು ಆವಶ್ಯಕತೆಯಿದೆಯೋ, ಅದನ್ನು ಮಾಡುವುದು ಅಪೇಕ್ಷಿತವಿದೆ. ಇದರಿಂದ ಅಧಿಕಾರಿ ವ್ಯಕ್ತಿಯ ಗುಣಸಂವರ್ಧನೆಯಾಗಲು ಸಹಾಯವಾಗುವುದು.
ಆ ೧ ಈ ಸ್ವಯಂಸೂಚನೆ ಪದ್ಧತಿಯಿಂದ ಸ್ವಯಂಸೂಚನೆಯನ್ನು ನೀಡಿದಲ್ಲಿ ಪೋಷಕರು, ಜವಾಬ್ದಾರ ಸಾಧಕರು, ಮಾಲೀಕರು ಮುಂತಾದವರ ಒತ್ತಡ ಶೀಘ್ರವಾಗಿ ನಿರ್ಮೂಲನೆಯಾಗುತ್ತದೆ; ಅವರೊಂದಿಗೆ ಮಕ್ಕಳು, ಸಾಧಕರು, ಹಾಗೆಯೇ ನೌಕರರು ಇವರಿಂದಲೂ ಯೋಗ್ಯ ಕೃತಿಯಾಗಲು ಪ್ರಾರಂಭವಾಗುವುದು.
ಕೆಲವು ಸಲ ಅಧಿಕಾರಿ ವ್ಯಕ್ತಿಯ ಮಕ್ಕಳು, ಸಿಬ್ಬಂದಿಗಳು ಮತ್ತು ಇತರ ಸಾಧಕರಿಂದ ಅವಾಸ್ತವ ಅಪೇಕ್ಷೆಗಳಿರುತ್ತದೆ. ಇಂತಹ ಸಮಯದಲ್ಲಿ ಅಪೇಕ್ಷೆ ಕಡಿಮೆಯಾಗಲು ಪೋಷಕರು, ಮಾಲೀಕರು, ಜವಾಬ್ದಾರ ಸಾಧಕರು ‘ಅ ೧’ ಅಥವಾ ‘ಅ ೨’ ಈ ಸ್ವಯಂಸೂಚನೆಯ ಪದ್ಧತಿಯನ್ನು ಉಪಯೋಗಿಸಿ ಸ್ವಯಂಸೂಚನೆಯನ್ನು ನೀಡಬೇಕು.
(ಈ ವಿಷಯದ ಹೆಚ್ಚಿನ ಮಾಹಿತಿ ‘ಸ್ವಭಾವದೋಷ-ನಿರ್ಮೂಲನ ಪ್ರಕ್ರಿಯೆ (ಭಾಗ ೨) ಈ ಗ್ರಂಥದಲ್ಲಿದೆ)
– (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨.೧.೨೦೧೮)