ಮನಸ್ಸಿನಲ್ಲಿ ಬರುವ ವಿಚಾರ ಮತ್ತು ಪ್ರತಿಕ್ರಿಯೆ ಇವುಗಳ ವ್ಯತ್ಯಾಸವನ್ನು ಹೇಗೆ ಗುರುತಿಸುವುದು ?

ಹೆಚ್ಚಿನ ಸಾಧಕರಿಗೆ ಮನಸ್ಸಿನಲ್ಲಿರುವ ವಿಚಾರ ಮತ್ತು ಪ್ರತಿಕ್ರಿಯೆ ಇವುಗಳ ವ್ಯತ್ಯಾಸವು ತಿಳಿಯುವುದಿಲ್ಲ. ಇದರಿಂದ ಸ್ವಯಂಸೂಚನೆಯನ್ನು ತಯಾರಿಸಲು ಅವರಿಗೆ ಯೋಗ್ಯ ಸ್ವಯಂ ಸೂಚನೆಯ ಪದ್ಧತಿಯನ್ನು ಉಪಯೋಗಿಸಲು ಆಗುತ್ತಿಲ್ಲ. ಸಾಧಕರಿಗೆ ಇದರ ವ್ಯತ್ಯಾಸ ಗಮನಕ್ಕೆ ಬರಲು ಮಾರ್ಗದರ್ಶಕ ಅಂಶಗಳನ್ನು ಮುಂದೆ ನೀಡಲಾಗಿದೆ.

ವಿಚಾರ

ಅ. ವಿಚಾರ ಎಂದರೆ ಏನು ? : ವ್ಯಕ್ತಿಯ ಮನಸ್ಸಿನಲ್ಲಿ ದಿನವಿಡೀ ಅನೇಕ ವಿಚಾರಗಳು ಬರುತ್ತಿರುತ್ತದೆ. ಹೆಚ್ಚಾಗಿ ವ್ಯಕ್ತಿಯ ಚಿತ್ತದಲ್ಲಿನ ಅಯೋಗ್ಯ ಸಂಸ್ಕಾರದಿಂದಲೇ ಅಯೋಗ್ಯ ವಿಚಾರಗಳ ಉತ್ಪತ್ತಿಯಾಗುತ್ತದೆ.

ಆ. ಅಯೋಗ್ಯ ವಿಚಾರಗಳ ಉದಾಹರಣೆ

ಆ ೧. ಅಯೋಗ್ಯ ವಿಚಾರ : ವಿನಯ ಮತ್ತು ವಿವೇಕ ಪರಸ್ಪರರು ಮಾತನಾಡುವುದನ್ನು ನೋಡಿ ‘ನನ್ನ ಬಗ್ಗೆಯೇ ಮಾತನಾಡುತ್ತಿರಬಹುದು’ ಎಂದು ಮನಸ್ಸಿನಲ್ಲಿ ವಿಚಾರ ಬಂದಿತು.

ಆ ೨. ಸ್ವಯಂಸೂಚನೆ : ಯಾವಾಗ ವಿನಯ ಮತ್ತು ವಿವೇಕ ಪರಸ್ಪರರು ಮಾತನಾಡುತ್ತಿರುವುದನ್ನು ನೋಡಿ ‘ಅವರು ನನ್ನ ಬಗ್ಗೆ ಮಾತನಾಡುತ್ತಿರಬಹುದು’ ಎಂಬ ಸಂಶಯ ಬರುವುದೋ, ಆಗ ನನಗೆ ಅದರ ಅರಿವಾಗುವುದು ಮತ್ತು ವಿನಾಕಾರಣ ಸಂಶಯ ಪಡುವುದರಿಂದ ನನ್ನ ಮನಸ್ಸಿನಲ್ಲಿ ನಕಾರಾತ್ಮಕವು ಹೆಚ್ಚಾಗುವುದು ಮತ್ತು ಅದನ್ನು ತಡೆಯಲು ನಾನು ನನ್ನ ಸಾಧನೆಯ ಕಡೆಗೆ ಗಮನ ಕೊಡುವೆನು.

ಇಲ್ಲಿ ಪ್ರಸಾದನು ವಿನಯ ಮತ್ತು ವಿವೇಕ ಇವರಿಬ್ಬರು ಪರಸ್ಪರ ಮಾತನಾಡುತ್ತಿರುವುದನ್ನು ನೋಡಿದನು. ಅವರೊಂದಿಗೆ ಪ್ರತ್ಯಕ್ಷ ಸಂಪರ್ಕ ಇಲ್ಲದಿರುವಾಗಲೂ ಪ್ರಸಾದನ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರ ಬಂದಿತು. ಆದ್ದರಿಂದ ಈ ಪ್ರಸಂಗವು ಅಯೋಗ್ಯ ವಿಚಾರದ ಉದಾಹರಣೆಯಾಗಿದೆ ಎಂದು ಹೇಳಬಹುದು.

ಪ್ರತಿಕ್ರಿಯೆ

ಅ. ಪ್ರತಿಕ್ರಿಯೆ ಎಂದರೆ ಏನು ? : ಯಾವುದೇ ಪ್ರಸಂಗದಲ್ಲಿ ಪರಿಸ್ಥಿತಿ ಅಥವಾ ವ್ಯಕ್ತಿಯೊಂದಿಗೆ ಸ್ಪಂದಿಸುವುದನ್ನು ಪ್ರತಿಕ್ರಿಯೆ ಎನ್ನಬಹುದು. ಯಾವಾಗ ಈ ಸ್ಪಂದನೆಯು ಅಯೋಗ್ಯ ಪದ್ಧತಿಯಿಂದ ವ್ಯಕ್ತವಾಗುತ್ತದೆಯೋ ಅಥವಾ ಮನಸ್ಸಿನಲ್ಲಿ ವಿಚಾರವಾಗಿ ಮೂಡುತ್ತದೆಯೋ ಆಗ ಅದನ್ನು ‘ಅಯೋಗ್ಯ ಪ್ರತಿಕ್ರಿಯೆ ವ್ಯಕ್ತಪಡಿಸುವುದು ಅಥವಾ ಮನಸ್ಸಿನಲ್ಲಿ ಬರುವುದು’ ಎಂದು ಹೇಳಲಾಗುತ್ತದೆ. ಪ್ರತಿಕ್ರಿಯೆ ವ್ಯಕ್ತವಾಗುವುದು ಅಥವಾ ಮನಸ್ಸಿನಲ್ಲಿ ಮೂಡುವುದು ಇವು ಸ್ಥಳ, ಕಾಲ, ಪರಿಸ್ಥಿತಿ, ವ್ಯಕ್ತಿ ಮತ್ತು ಅವರ ವರ್ತನೆಗನುಸಾರ ಬದಲಾಗಬಹುದು. ಒಂದು ಪ್ರಸಂಗವು ಮನಸ್ಸಿನ ವಿರುದ್ಧ ಘಟಿಸಿದರೆ ಅಸ್ವಸ್ಥವಾಗುವುದು, ಸಿಟ್ಟು ಬಂದು ವಸ್ತುಗಳನ್ನು ಎಸೆಯುವುದು, ಚೆಲ್ಲಾಪಿಲ್ಲಿ ಮಾಡುವುದು, ಸಿಟ್ಟಿನಿಂದ ಮಾತನಾಡದಿರುವುದು ಅಥವಾ ಅವರಿಗೆ ಹೊಡೆಯುವುದು ಇದು ಸಹ ಅಯೋಗ್ಯ ಪ್ರತಿಕ್ರಿಯೆಯ ಉದಾಹರಣೆಯಾಗಿದೆ.

ಆ. ಅಯೋಗ್ಯ ಪ್ರತಿಕ್ರಿಯೆಯ ಉದಾಹರಣೆ

೨ ಆ ೧. ಪ್ರತಿಕ್ರಿಯೆ : ಅಕ್ಷತಾಳು ನನ್ನ ತಪ್ಪು ತೋರಿಸಿದಾಗ ಮನಸ್ಸು ಅಸ್ವಸ್ಥವಾಯಿತು.

೨ ಆ ೧. ಸ್ವಯಂಸೂಚನೆ : ಯಾವಾಗ ಅಕ್ಷತಾಳು ನನ್ನ ತಪ್ಪು ತೋರಿಸಿದಾಗ ಮನಸ್ಸು ಅಸ್ವಸ್ಥವಾಗುವುದೋ, ಆಗ ‘ತಪ್ಪು ಸಂಪೂರ್ಣವಾಗಿ ಸ್ವೀಕಾರವಾಗಲು ಅದರ ಚಿಂತನೆಗೆ ಸ್ವಲ್ಪ ಸಮಯ ಬೇಕಾಗುತ್ತದೆ’, ಎಂದು ನನಗೆ ಅರಿವಾಗುವುದು ಮತ್ತು ನಾನು ಮೊದಲು ತಪ್ಪನ್ನು ಸರಿಯಾಗಿ ಕೇಳಿಸಿಕೊಂಡು ಅನಂತರ ಅದರ ಚಿಂತನೆ ಮಾಡುವೆನು.

‘ಅಯೋಗ್ಯ ಪ್ರತಿಕ್ರಿಯೆ’ ಇದು ಪರಿಣಾಮವಾಗಿದೆ. ಅಯೋಗ್ಯ ಪ್ರತಿಕ್ರಿಯೆ ಬರುವುದರ ಹಿಂದೆ ಅಥವಾ ವ್ಯಕ್ತವಾಗುವುದರ ಹಿಂದೆ ಸ್ವಭಾವದೋಷ ಅಥವಾ ಅಹಂ ಕಾರ್ಯನಿರತವಾಗಿರುತ್ತದೆ. ಅಯೋಗ್ಯ ಪ್ರತಿಕ್ರಿಯೆ ಬರುವುದರ ಹಿಂದಿನ ಕಾರಣವನ್ನು ಹುಡುಕಿದಾಗ ಯಾವ ಸ್ವಭಾವದೋಷ ಅಥವಾ ಅಹಂ ಲಕ್ಷಣ ಗಮನಕ್ಕೆ ಬರುತ್ತದೆಯೋ, ಅದುವೇ ಮೂಲ ಸ್ವಭಾವದೋಷ ಅಥವಾ ಅಹಂನ ಲಕ್ಷಣವಾಗಿದೆ ಎಂದು ಹೇಳಬಹುದು.

ವಿಚಾರ ಮತ್ತು ಪ್ರತಿಕ್ರಿಯೆ ಇವುಗಳ ವ್ಯತ್ಯಾಸ

ಪ್ರಸಂಗ ಒಂದೇಯಾಗಿದ್ದರೂ, ಅದರಿಂದ ಮನಸ್ಸಿನಲ್ಲಿ ಬರುವ ಅಯೋಗ್ಯ ವಿಚಾರ ಮತ್ತು ಅಯೋಗ್ಯ ಪ್ರತಿಕ್ರಿಯೆಯನ್ನು ಹೇಗೆ ಗುರುತಿಸಬೇಕು ?, ಎಂಬುದು ಮುಂದೆ ತಿಳಿಸಿರುವ ಕೋಷ್ಟಕದಿಂದ ಗಮನಕ್ಕೆ ಬರುವುದು.

ಪ್ರಸಂಗ : ‘ಸೇವೆಯಲ್ಲಿ ಸಹಸಾಧಕಿಯು ಸಹಾಯ ಮಾಡಬೇಕು ಎಂದು ಅಪೇಕ್ಷಿಸುವುದು.

 

Leave a Comment